ರಾಯಚೂರು | ರಾಜ್ಯಾದ್ಯಂತ ಬರಗಾಲ ಪೀಡಿತ ಘೋಷಣೆಗೆ ಸಿಪಿಐಎಂ ಆಗ್ರಹ

Date:

ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಪಿಐ(ಎಂ) ಕಾರ್ಯಕರ್ತರು ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

“ಬರ ಪೀಡಿತ ಕೂಲಿಕಾರರು, ಬಡ ರೈತರು ಗುಳೆ ಹೋಗದಂತೆ ತಡೆಯಲು ಉದ್ಯೋಗ ಖಾತ್ರಿ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ 150 ದಿನಗಳವರೆಗೆ ಕಡ್ಡಾಯವಾಗಿ ಕೆಲಸ ನೀಡಲು ಅಗತ್ಯ ಕ್ರಮ ವಹಿಸಬೇಕು. ಬೆಳೆ ನಷ್ಟಕ್ಕೆ ಬೆಳೆವಿಮೆ ದೊರಕುವಂತೆ ವ್ಯವಸ್ಥೆ ಮಾಡಬೇಕು. ಬಡ ರೈತರು, ಕೂಲಿಕಾರರು ಮತ್ತು ಸ್ತ್ರೀಶಕ್ತಿ ಸಂಘಗಳ ಮಹಿಳೆಯರ ಎಲ್ಲ ಸಾಲ ಮನ್ನಾ ಮಾಡಬೇಕು. ಶ್ರೀಮಂತ ರೈತರ ಸಾಲವನ್ನು ದೀರ್ಘಾವಧಿ ಸಾಲವಾಗಿ ಪರಿವರ್ತಿಸಬೇಕು. ಬಡ್ಡಿ ಮನ್ನಾ ಮಾಡಬೇಕು” ಎಂದು ಒತ್ತಾಯಿಸಿದರು.

“ಬೆಳೆನಷ್ಟ ಪರಿಹಾರವನ್ನು ಒದಗಿಸಬೇಕು. ಮುಂದಿನ ಸಾಲಿಗೆ ಉಚಿತ ಬೀಜ, ಗೊಬ್ಬರ, ಕೀಟ ನಾಶಕಗಳನ್ನು ಒದಗಿಸಬೇಕು. ಬಿತ್ತನೆಯ ಹಾಗೂ ಕೊಯ್ಲು ಕೆಲಸಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ತರಬೇಕು. ಬರಗಾಲದ ಕಾರಣದಿಂದ ಬರ ಬಾಧಿತರ ಶೈಕ್ಷಣಿಕ ಶುಲ್ಕಗಳನ್ನು ಮನ್ನಾ ಮಾಡಬೇಕು. ಆಹಾರ ಧಾನ್ಯಗಳ ಕೃತಕ ಅಭಾವ ಸೃಷ್ಟಿಸಿ ಕಾಳ ಸಂತೆಯಲ್ಲಿ ಗ್ರಾಹಕರನ್ನು ಸುಲಿಗೆಗೊಳಪಡಿಸುವ ಕಾಳ ಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ತಾಲೂಕಗಳಲ್ಲಿ ಕೃಷಿ ಕೂಲಿಕಾರರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತಕ್ಷಣ ಕೆಲಸ ನೀಡಬೇಕು. ಸಂಕಷ್ಟದಲ್ಲಿರುವ ರೈತರಿಗೆ ಬೆಳೆನಷ್ಟ ಪರಿಹಾರ ಎಕರೆಗೆ ₹25,000 ಪರಿಹಾರ ನೀಡಬೇಕು. ಮೇವಿನ ಅಭಾವ ಮತ್ತು ಕುಡಿಯುವ ನೀರಿನ ತೊಂದರೆ ಉಂಟಾದ ಕಡೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು” ಎಂದು ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ಹಾಸನ | ಬರಪೀಡಿತ ತಾಲೂಕುಗಳ ಪಟ್ಟಿ; ಅರಸೀಕೆರೆ ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್‌ ಶಾಸಕ ಕಿಡಿ

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ ಜಿ ವಿರೇಶ, ತಾಲೂಕು ಕಾರ್ಯದರ್ಶಿ ಡಿ ಎಸ್ ಶರಣಬಸವ, ಮುಖಂಡರುಗಳಾದ ಕರಿಯಪ್ಪ ಅಚ್ಚೊಳಿ, ಪ್ರವೀಣ ರೆಡ್ಡಿ ಗುಂಜಳ್ಳಿ, ವರಲಕ್ಷ್ಮಿ, ನಾಗೇಂದ್ರ, ಜಿಲಾನಿ ಪಾಷ, ರಾಘವೇಂದ್ರ, ಖಾಸಿಂ, ಬಂದೇನವಾಜ, ಮಹೆಬೂಬ್ ಸೇರಿದಂತೆ ಬಹುತೇಕರು ಇದ್ದರು.

ಸಿಟಿಜನ್ ಜರ್ನಲಿಸ್ಟ್ : ಹಫೀಜುಲ್ಲ ರಾಯಚೂರು

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಅಂಜಲಿ ಹತ್ಯೆಗೈದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

ಹುಬ್ಬಳ್ಳಿಯಲ್ಲಿ ಪ್ರೇಮದ ಹೆಸರಿನಲ್ಲಿ ಯುವತಿ ಅಂಜಲಿ ಆಂಬೀಗೇರ ಅವರನ್ನು ಕೊಲೆ ಮಾಡಿರುವ...

ರಾಯಚೂರು | ನೀರು ಪೂರೈಕೆಗೆ ಮೀನಾಮೇಷ; ಅತ್ತನೂರು ಗ್ರಾ. ಪಂಚಾಯಿತಿಗೆ ಮಹಿಳೆಯರಿಂದ ಮುತ್ತಿಗೆ

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಮ ಪಂಚಾಯಿತಿ ಆಡಳಿತ ಮತ್ತು...

ರಾಯಚೂರು | ರಾತ್ರಿಯಿಡೀ ಸುರಿದ ಮಳೆಯಿಂದ ತೋಯ್ದ ಭತ್ತ; ಜನಜೀವನ ಅಸ್ತವ್ಯಸ್ತ

ರಾಯಚೂರು ನಗರದ ಎಪಿಎಂಸಿಯಲ್ಲಿ ಮಾರಾಟಕ್ಕೆ ತಂದ ಭತ್ತ ಮಳೆಯ ನೀರಿನಿಂದ ತೋಯ್ದು...

ರಾಯಚೂರು | ಸಿಡಿಲು ಬಡಿದು ಐದು ಮೇಕೆ ಸಾವು; ರೈತನಿಗೆ ಗಾಯ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಶನಿವಾರ ಸಾಧಾರಣ ಮಳೆಯಾಗಿದೆ. ತಾಲೂಕಿನ ಜಂಗೀರಾಂಪೂರ...