ರಾಯಚೂರು | ಜಾತಿ ನಿಂದನೆ, ದೌರ್ಜನ್ಯ; ಸಚಿವ ಡಿ. ಸುಧಾಕರ್ ವಜಾಕ್ಕೆ ಸೆ.15ರಂದು ಪ್ರತಿಭಟನೆ

Date:

ಚಳ್ಳಕೆರೆ ಶಾಸಕ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ. ಸುಧಾಕರ್ ಅವರು ಪರಿಶಿಷ್ಟ ಸಮುದಾಯದವರ ವಿರುದ್ಧ ದೌರ್ಜನ್ಯ ನಡೆಸಿ ಜಾತಿ ನಿಂದನೆ ಮಾಡಿರುವುದರಿಂದ ಕೂಡಲೇ ಬಂಧಿಸಿ ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ 15ರಂದು ಜೆಡಿಎಸ್ ರಾಯಚೂರು ಜಿಲ್ಲಾ ಘಟಕದಿಂದ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವಿರೂಪಾಕ್ಷಿ ಹೇಳಿದರು.

“ನಗರದಲ್ಲಿ ನಡೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು. “ಬೆಂಗಳೂರಿನ ಯಲಹಂಕ ಬಳಿ ಬೆಲೆ ಬಾಳುವ ಭೂಮಿಯನ್ನು ಹೊಂದಿರುವ ಸುಬ್ಬಮ್ಮ ಎಂಬುವವರ ಕುಟುಂಬದ ಮೇಲೆ ಸುಧಾಕರ ಬೆಂಬಲಿಗರು ಗುಂಡಾಗಿರಿ ಪ್ರದರ್ಶಿಸಿ ಅತಿಕ್ರಮಿಸಲು ಹುನ್ನಾರ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಕೃಪಾ ಕಟಾಕ್ಷದಿಂದ ಘಟನೆ ನಡೆಯಲು ಕಾರಣವಾಗಿದೆ. ಸಚಿವರು ಸೇರಿದಂತೆ ಸಂಬಂಧಿಸಿದವರ ವಿರುದ್ದ ಜಾತಿ ನಿಂಧನೆ, ದೌರ್ಜನ್ಯ ಪ್ರಕರಣ ದಾಖಲಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ” ಎಂದು ಆರೋಪಿಸಿದರು.

“ಇತ್ತೀಚಿಗೆ ಸುಪ್ರಿಕೋರ್ಟ್‌ ಪರಿಶಿಷ್ಟ ಜಾತಿ ಜನರ ಮೇಲೆ ದೌರ್ಜನ್ಯ ಪ್ರಕರಣಗಳಲ್ಲಿ ಮೊದಲ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿ ನಂತರ ವಿಚಾರಣೆ ನಡೆಸುವಂತೆ ಆದೇಶಿಸಿದೆ. ಆದರೆ ರಾಜ್ಯದ ಸಂಪುಟ ದರ್ಜೆ ಸಚಿವರೊಬ್ಬರ ವಿರುದ್ದ ಕೇಸ್ ದಾಖಲಾದರೂ ಬಂಧಿಸಿಲ್ಲ. ಶೆವನ್ ಹಿಲ್‌ನ ಎಲ್ಲ ಟ್ರಸ್ಟಿಗಳ ವಿರುದ್ದವೂ ಪ್ರಕರಣ ದಾಖಲಿಸಬೇಕು. ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು” ಎಂದು ಆಗ್ರಹಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಉಪ ಮುಖ್ಯಮಂತ್ರಿ ಡಿ ಕೆ ಶಿವುಕುಮಾರ್ ಸೇರಿದಂತೆ ಎಚ್‌ ಆಂಜಿನಯ್ಯ ಇವರು ಪಕ್ಷದ ಸಚಿವರನ್ನು ರಕ್ಷಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ. ಅನ್ಯಾಯವಾದ ಮಹಿಳೆಗೆ ನ್ಯಾಯ ಒದಗಿಸುವ ಬದಲು ಸಚಿವರ ರಕ್ಷಣೆಗೆ ನಿಂತಿರುವುದು ಖಂಡನೀಯ. ದಲಿತರ ರಕ್ಷಣೆ ಮಾಡಲು ನಿಜವಾದ ಕಳಕಳಿ ಸರ್ಕಾರಕ್ಕೆ ಇದ್ದರೆ ಕೂಡಲೇ ಆರೋಪಿಗಳನ್ನು ಬಂಧಿಸಿ ಸುಬ್ಬಮ್ಮ ಎಂಬುವವರಿಗೆ ರಕ್ಷಣೆ ನೀಡಿ, ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಸಚಿವ ಡಿ.ಸುಧಾಕರ್‌ ವಜಾಗೆ ಮುಖ್ಯಮಂತ್ರಿ ಚಂದ್ರು ಆಗ್ರಹ

ಜಿಲ್ಲೆಯಲ್ಲಿಯೂ ದಲಿತರ ಮೇಲೆ ದೌರ್ಜನ್ಯ, ಹಲ್ಲೆ ಪ್ರಕರಣಗಳು ಹೆಚ್ಚಳವಾಗುತ್ತಿವೆ. ರಾಯಚೂರು ತಾಲೂಕಿನ ಮರ್ಚಟ್ಹಾಳ, ದೇವದುರ್ಗ ತಾಲೂಕಿ ಹಿರೇಕೂಡ್ಲಗಿ ದಲಿತರ ಮೇಲೆ ಹಲ್ಲೆ ನಡೆದಿದೆ. ದಲಿತ ಸಂಘಟನೆಗಳೊಂದಿಗೆ ಸೇರಿ ಪಕ್ಷ ಹೋರಾಟ ನಡೆಸಲಿದೆ” ಎಂದರು.

ಈ ಸಂದರ್ಭದಲ್ಲಿ ನರಸಪ್ಪ ಆಶಾಪುರು, ಮಹೇಶ ಕುಮಾರ, ವಿಶ್ವನಾಥ ಪಟ್ಟಿ ಇದ್ದರು.

 ರಾಯಚೂರು ಜಿಲ್ಲಾ ಸಿಟಿಜನ್ ಜರ್ನಲಿಸ್ಟ್ ಹಫೀಜುಲ್ಲ ಮಾಹಿತಿ ಆಧರಿಸಿದ ವರದಿ
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಏಮ್ಸ್ ಮಂಜೂರು ಮಾಡದಿದ್ದರೆ ಚುನಾವಣೆ ಬಹಿಷ್ಕಾರ; ಎಚ್ಚರಿಕೆ

ಕಳೆದ ಎರಡು ವರ್ಷಗಳಿಂದ ಏಮ್ಸ್ ಮಂಜೂರಾತಿಗೆ ಸತತ ಹೋರಾಟ ನಡೆಸುತ್ತಿದ್ದರೂ ಕೇಂದ್ರ...

ರಾಯಚೂರು | ನೇಹಾ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಬೇಡ ಜಂಗಮ ಸಮಾಜ ಆಗ್ರಹ

ವಿದ್ಯಾರ್ಥಿನಿ ನೇಹಾ ಹಿರೇಮಠರನ್ನು ಚಾಕುವಿನಿಂದ ತಿವಿದು ಕೊಲೆಗೈದಿರುವ ಆರೋಪಿ ಫಯಾಜ್‌ಗೆ ಕಠಿಣ...

ರಾಯಚೂರು | ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

ದೇಶದ ಅಭಿವೃದ್ಧಿ ರಕ್ಷಣೆಗೆ 140 ಕೋಟಿ ಮಂದಿ ನರೇಂದ್ರ ಮೋದಿ ಮತ್ತೆ...

ರಾಯಚೂರು | ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ ನಾಯಕರನ್ನು ಭಾರೀ ಅಂತರದಿಂದ ಗೆಲ್ಲಿಸಿ: ಸಚಿವ ಬೋಸರಾಜು

ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ ನಾಯಕ ಅವರನ್ನು ಭಾರೀ ಅಂತರದಿಂದ...