ರಾಜಪ್ಪ ದಳವಾಯಿಯವರು ಸಾಂಸ್ಕೃತಿಕ ಶ್ರಮಜೀವಿ: ಬರಗೂರು ರಾಮಚಂದ್ರಪ್ಪ

Date:

Advertisements

ಅಧ್ಯಾಪಕ ಡಾ.ರಾಜಪ್ಪ ದಳವಾಯಿ ಅವರು ಅಂದು-ಇಂದುಗಳ ಬಂಧು, ಸಾಂಸ್ಕೃತಿಕ ಶ್ರಮಜೀವಿ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಬಣ್ಣಿಸಿದರು.

ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯದ ಆವರಣದ ಡಾ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಡಾ.ರಾಜಪ್ಪ ದಳವಾಯಿಯವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

“ನಾನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದ ಅವಧಿಯಲ್ಲಿ 125 ಪುಸ್ತಕಗಳನ್ನು ಏಕಕಾಲಕ್ಕೆ ಮುದ್ರಿಸಿ ಬಿಡುಗಡೆಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದೆ. ಆ ಸಮಯದಲ್ಲಿ ಹಗಲು, ರಾತ್ರಿ ಎನ್ನದೆ ಒಪ್ಪಿಕೊಂಡ ಕೆಲಸವನ್ನು ನಿರಂತರವಾಗಿ ನಿರ್ವಹಿಸಿದರು. ಎಷ್ಟೋ ಸಂದರ್ಭದಲ್ಲಿ ಪ್ರಿಂಟಿಂಗ್ ಪ್ರೆಸ್‌ನಲ್ಲಿ ರಾತ್ರಿಯವರೆಗೆ ಕೆಲಸ ಮಾಡಿ, ಪೇಪರ್ ಮೇಲೆ ಮಲಗಿ, ಬೆಳಿಗ್ಗೆ ಮತ್ತೆ ಎದ್ದು ಪ್ರೂಫ್ ರೀಡಿಂಗ್ ಕೆಲಸವನ್ನು ನಿರ್ವಹಿಸಿ ಯೋಜನೆ ಯಶಸ್ಸಾಗಲು ಕಾರಣರಾದರು” ಎಂದು ನೆನಪಿಸಿಕೊಂಡರು.

Advertisements

“ರಾಜಪ್ಪ ದಳವಾಯಿಯವರಿಗೆ ಸಿಗಬೇಕಾದ ಸ್ಥಾನಮಾನಗಳು ಸಿಗಲಿಲ್ಲ. ಅವರದು ನಿರಂತರವಾಗಿ ಅಲೆಮಾರಿತನವಾಗಿತ್ತು. ಬಹಳ ಸಂದರ್ಭಗಳಲ್ಲಿ ರಾಜಪ್ಪ ದಳವಾಯಿಯವರು ತಮ್ಮ ಕೆಲಸಕ್ಕಿಂತ ಬೇರೆಯವರ ಕೆಲಸಗಳಿಗೆ ಒತ್ತು ಕೊಟ್ಟು ನನ್ನ ಬಳಿ ಬರುತ್ತಿದ್ದರು” ಎಂದರು.

“ನನಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬೀಳ್ಕೊಡುಗೆಯನ್ನೇ ಮಾಡಲಿಲ್ಲ. ಆದರೆ ರಾಜಪ್ಪ ದಳವಾಯಿ ಅವರಿಗೆ ಬೀಳ್ಕೊಡುಗೆ ನೀಡಿರುವುದು ನನಗೆ ಸಂತಸ ತಂದಿದೆ. ಇಂತಹ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿರುವುದಕ್ಕೆ ಕನ್ನಡ ಅಧ್ಯಯನ ಕೇಂದ್ರಕ್ಕೆ ಅಭಿನಂದನೆ” ಎಂದರು.

“ರಾಜಪ್ಪ ದಳವಾಯಿಯವರು ಪುರಾಣ ಮತ್ತು ಐತಿಹಾಸಿಕ ವಿಷಯಗಳನ್ನು ಸಮಕಾಲೀನಗೊಳಿಸುವ ಮಾದರಿಯಲ್ಲಿ ನಾಟಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕುಲಂ, ಸುಯೋಧನ, ಒಂದು ಬೊಗಸೆ ನೀರು, ಪ್ರೀತಿಯ ಹುಡುಕುತ್ತಾ, ಮುಖ್ಯಮಂತ್ರಿ ಅರಸು ನಾಟಕಗಳು ಇದಕ್ಕೆ ಉದಾಹರಣೆಗಳು” ಎಂದರು.

ಕರ್ನಾಟಕ ಲೇಖಕಿಯ ಸಂಘದ ಅಧ್ಯಕ್ಷೆ ಮತ್ತು ಕವಿ, ನಾಟಕಕಾರ್ತಿ ಡಾ ಎಚ್ ಎಲ್ ಪುಷ್ಪ ಮಾತನಾಡಿ, “ಕನ್ನಡದ ಮಹತ್ವದ ನಾಟಕಕಾರರ ಸಾಲಿನಲ್ಲಿ ರಾಜಪ್ಪ ದಳವಾಯಿ ಅವರಿಗೆ ಸ್ಥಾನವಿದೆ. ಅವರು ಸಂಘಟನೆಯಲ್ಲಿ ತೊಡಗಿಕೊಂಡೇ ಮಹತ್ವದ ನಾಟಕಗಳನ್ನು ರಚಿಸಿದ್ದಾರೆ. ಅವುಗಳು ಯಶಸ್ವಿ ನಾಟಕಗಳು” ಎಂದರು.

“ಬಂಡಾಯ ಸಂಘಟನೆಯ ಒಡನಾಡಿಯಾಗಿ ನಾನು ಅವರೊಂದಿಗೆ ಕಾಲ ಕಳೆದಿದ್ದೇನೆ. ಪಂಪನ ಕುರಿತ ನಾಟಕಗಳ ರಚನಾ ಶಿಬಿರದಲ್ಲಿ ನಾವಿಬ್ಬರೂ ಒಟ್ಟಿಗೆ ನಾಟಕ ರಚಿಸಿದೆವು. ಅನಂತರ ಕೂಡ ರಾಜಪ್ಪ ದಳವಾಯಿಯವರು ನಾಟಕ ರಚನೆಯನ್ನು ಗಂಭೀರವಾಗಿ ಪರಿಗಣಿಸಿದರು. ಅವರದು ವಿಶಿಷ್ಟ ವ್ಯಕ್ತಿತ್ವ ಮತ್ತು ಮನೋಧರ್ಮ. ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡೇ ಸಂಘಟನೆಯಲ್ಲಿ ಸಕ್ರಿಯರಾಗಿರುವುದು ಮಹತ್ವದ ಸಂಗತಿ” ಎಂದರು.

ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಡೊಮಿನಿಕ್ ಮಾತನಾಡಿ, “ವಿದ್ಯಾರ್ಥಿಗಳೊಡನೆ ಸಹಜವಾಗಿ ಬೆರೆಯುವ ಮತ್ತು ಅವರ ಬದುಕನ್ನು ಕಟ್ಟಿಕೊಡುವಲ್ಲಿ ರಾಜಪ್ಪ ದಳವಾಯಿ ಅವರ ಪಾತ್ರ ಬಹುದೊಡ್ಡದು” ಎಂದರು.

ರಾಜಪ್ಪ ದಳವಾಯಿಯವರ ಪತ್ನಿ ಮಂಜುಳಾ ಬಿ ಸಿ ಮಾತಾಡಿ, “ನಮ್ಮಿಬ್ಬರ ಬದುಕಿನಲ್ಲಿ ಪರಸ್ಪರ ಗೌರವಿಸಿಕೊಂಡು ಬಂದಿದ್ದೇವೆ. ಅವರು ಮಾಡುವ ಕೆಲಸಕ್ಕೆ ನಾನು, ನನ್ನ ಕೆಲಸಕ್ಕೆ ಅವರು ಎಂದಿಗೂ ಅಡ್ಡಗಾಲು ಹಾಕಿಲ್ಲ” ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ರಾಜಪ್ಪ ದಳವಾಯಿ ಅವರು, “ನಾನು ಇಂದು ಏನಾಗಿದ್ದೇನೆಯೋ ಅದರಲ್ಲಿ ವಿದ್ಯಾರ್ಥಿಗಳು ಮತ್ತು ನನ್ನ ಒಡನಾಡಿಗಳ ಪಾತ್ರ ಮಹತ್ವವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ, ಒಡನಾಡಿಯಿಂದಲೂ ನಾನು ಬಹಳಷ್ಟು ಕಲಿತಿದ್ದೇನೆ” ಎಂದರು.

“ಪ್ರತಿ ತಿಂಗಳು ನನಗೆ ಸಂಬಳ ಬಂದಾಗ ನಾನು ಈ ತಿಂಗಳು ನನ್ನ ವಿದ್ಯಾರ್ಥಿಗಳಿಗೆ ಎಷ್ಟು ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ಬೋಧಿಸಿದ್ದೇನೆಂದು ಯೋಚಿಸುತ್ತೇನೆ. ನಾನು ಬೋಧಿಸುವ ವೇಳೆ ವಿದ್ಯಾರ್ಥಿ ನನ್ನ ಮಾತುಗಳನ್ನು ಕೇಳಿ ಬೇರೆಡೆ ಮುಖ ತಿರುಗಿಸಿದರೆ ನಾನು ಅವನಿಗೆ ನ್ಯಾಯ ಒದಗಿಸಿಲ್ಲವೆಂದು ಅರ್ಥವಾಗಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ತರಗತಿಗಳಲ್ಲೂ ಬೋಧಿಸುವ ಯತ್ನವನ್ನು ನಾನು ಮಾಡಿದ್ದೇನೆ” ಎಂದರು.

“ನನ್ನ ಅಲೆಮಾರಿತನಕ್ಕೆ ಕಾರಣ ಸ್ವಲ್ಪ ಸಂಬಳ ಹೆಚ್ಚಾದರೆ ಇನ್ನೂ ನಾಲ್ಕು ಜನಕ್ಕೆ ನೆರವು ನೀಡಬಹುದು ಎಂಬ ಉದ್ದೇಶವಾಗಿತ್ತು. ಅದೇ ಕಾರಣಕ್ಕೆ ತಾತ್ಕಾಲಿಕ ಉಪನ್ಯಾಸಕನಿಂದ ಖಾಯಂ ಅಧ್ಯಾಪಕನಾದ ನಂತರ ಕೂಡ ರಾಜ್ಯದ ಬೇರೆಬೇರೆ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದೆ” ಎಂದರು.

ಬೆಂಗಳೂರು, ಶಿವಮೊಗ್ಗ, ಮೈಸೂರು, ಕಲಬುರಗಿ, ಬೆಳಗಾವಿ, ಮಂಡ್ಯ, ದಾವಣಗೆರೆ ಮೊದಲಾದ ಜಿಲ್ಲೆಗಳಿಂದ ರಾಜಪ್ಪ ದಳವಾಯಿಯವರ ಶಿಷ್ಯರು ಮತ್ತು ಸ್ನೇಹಿತರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಮತದಾರರು ಬಿಜೆಪಿಯ ಸುಳ್ಳು ಭರವಸೆಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ: ಚ್.ಎಫ್. ಜಕ್ಕಪ್ಪ

ಕಾರ್ಯಕ್ರಮದಲ್ಲಿ ಡಾ ಕೆ ಸಿ ಶಿವಾರೆಡ್ಡಿ, ಡಾ. ಬಿ ಗಂಗಾಧರ್, ಡಾ. ಸಿ ಪಿ ನಾಗರಾಜ್, ಡಾ. ಚಿತ್ತಯ್ಯ ಪೂಜಾರ್, ಡಾ. ಹೊನ್ನು ಸಿದ್ಧಾರ್ಥ, ಭಕ್ತರಹಳ್ಳಿ ಕಾಮರಾಜ್, ಬೆಳಗಾವಿ ವಿಶ್ವವಿದ್ಯಾಲಯ ಕುಲಪತಿ ಡಾ. ತ್ಯಾಗರಾಜ್, ಡಾ. ಎಂ ಜಿ ಹೆಗಡೆ, ನಟ ಸಂಪತ್ ಮೈತ್ರೇಯ, ಪತ್ರಕರ್ತ ದಿಲಾವರ್ ರಾಮದುರ್ಗ, ಕಲಾವಿದ ಕೃಷ್ಣಾ ರಾಯಚೂರು, ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್ ಸೇರಿದಂತೆ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X