ರಾಮದುರ್ಗ | ಸಂಪೂರ್ಣ ಹದಗೆಟ್ಟ ಹಲಗತ್ತಿ ಗ್ರಾಮದ ರಸ್ತೆ; ಶಾಸಕ ಅಶೋಕ ಪಟ್ಟಣ ವಿರುದ್ಧ ಸಾರ್ವಜನಿಕರ ಆಕ್ರೋಶ

Date:

“ಶಾಸಕ ಅಶೋಕ ಪಟ್ಟಣ ಅವರು ಇದೇ ರಸ್ತೆಯಲ್ಲಿ ಓಡಾಡ್ತ ಇರ್ತಾರೆ. ಆದರೂ, ರಸ್ತೆ ಸರಿ ಮಾಡಬೇಕು ಅಂತ ಅವರಿಗೆ ಅನ್ನಿಸಿಲ್ಲ. ಇದಕ್ಕಿಂತ ದೌರ್ಭಾಗ್ಯ ನಮಗೆ ಇನ್ನೇನಿದೆ”…ಹೀಗಂತ ಆಕ್ರೋಶ ಹೊರ ಹಾಕಿರುವುದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಜನ.

- Advertisement -

ಹೌದು. ಹಲಗತ್ತಿ ಗ್ರಾಮದ ರಸ್ತೆ ಸಂಪೂರ್ಣವಾಗಿ ಹಾಳಾಗಿ ವರ್ಷಗಳೇ ಕಳೆದಿದೆ. ಆದರೂ, ರಸ್ತೆಯನ್ನು ದುರಸ್ತಿ ಮಾಡುವ ಕಾರ್ಯಕ್ಕೆ ಜನಪ್ರತಿನಿಧಿಗಳಾಗಲೀ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲೀ ಮುಂದಾಗಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಗನಕ್ಕೇರಿದ ಅಕ್ಕಿ ಬೆಲೆ: ತತ್ತರಿಸಿದ ಬಡ, ಮಧ್ಯಮ ವರ್ಗದ...

ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಕರಿಛಾಯೆ ಕೃಷಿ ಕ್ಷೇತ್ರವನ್ನು ತತ್ತರಿಸುವಂತೆ ಮಾಡಿದೆ. ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ನೂಕಿದ್ದ ಈ ಬರಗಾಲದ ಬಿಸಿ ಇದೀಗ ನೇರವಾಗಿ ಜನಸಾಮಾನ್ಯರ ತಟ್ಟೆಗೆ ತಟ್ಟಿದ್ದು, ಅಕ್ಕಿಯ...

ಬೆಳಗಾವಿ | ಬಿಸಿಲಿಗೂ ಕುಗ್ಗದೆ ಕಬ್ಬಿಗೆ ₹5500 ಬೆಲೆಗಾಗಿ...

ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕು, ಸಕ್ಕರೆಗೆ ಪ್ರತಿ ಕೆ.ಜಿ.ಗೆ ₹60 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕು ಹಾಗೂ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲೆಯ...

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ ಜಯಂತ್ ಪರ್ಮಾರ್ ಅವರ ಒಂದು ಉರ್ದು ಕವನದ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ ಬೇವಿನ...

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಹಲಗತ್ತಿ ಗ್ರಾಮದ ವಿಜಯಲಕ್ಷ್ಮಿ, “ಈ ರಸ್ತೆಯಲ್ಲಿ ಬೇರೆ ಬೇರೆ ಜಿಲ್ಲೆಯ ವಾಹನಗಳು ಸಂಚಾರ ಮಾಡುತ್ತವೆ. ಇದು ಮುಖ್ಯ ರಸ್ತೆ ಬೆರೆ. ಶಾಸಕರು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಎಲೆಕ್ಷನ್ ಬಂದಾಗ ಓಟು ಹಾಕಿಸಿಕೊಳ್ಳುತ್ತಾರೆ. ಆಮೇಲೆ ನಾಪತ್ತೆಯಾಗ್ತಾರೆ. ಜನರು ಪ್ರತಿಭಟನೆ ನಡೆಸಿದಾಗ, ರಸ್ತೆಗೆ ಮಣ್ಣು ಹಾಕಿ ಪ್ಯಾಚ್ ವರ್ಕ್ ಮಾಡ್ತಾರೆ. ಅದು ಮತ್ತೆ ಹಾಳಾಗುತ್ತದೆ. ಹಲವು ವರ್ಷಗಳಿಂದ ಇದುವೇ ಪುನರಾವರ್ತನೆಯಾಗ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾಬಿ

ಈ ಕುರಿತು ಕೊರಿಯರ್ ಕೆಲಸ ಮಾಡುವ ಫಾರೂಕ್ ಜೈನೆಖಾನ ಮಾತನಾಡಿ, “ನಾನು ಕೊರಿಯರ್ ಕೆಲಸ ಮಾಡುತ್ತಿರುವುದರಿಂದ ದಿನನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತೇನೆ. ರಸ್ತೆ ಸಂಪೂರ್ಣ ಹಾಳಾಗಿದ್ದು, ಇಲ್ಲಿ ಓಡಾಡುವುದೇ ಬಹಳ ತ್ರಾಸದ ಕೆಲಸ” ಎಂದು ತಿಳಿಸಿದ್ದಾರೆ.

“ರಸ್ತೆ ಹಾಳಾಗಿರುವುದರಿಂದ ನಮ್ಮ ವಾಹನಗಳು ಸಹ ಹಾಳಾಗುತ್ತಿವೆ. ನಾವು ಓಟು ಹಾಕಿದ್ದೆಲ್ಲ ವ್ಯರ್ಥವಾಗಿದೆ. ಈ ರಸ್ತೆಯ ಸಮಸ್ಯೆಯ ಕುರಿತು ವಿಡಿಯೋ ಮಾಡಿ, ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿದ್ದಲ್ಲದೇ, ಶಾಸಕರು, ಸಂಸದರು ಹಾಗೂ ಪ್ರಧಾನಿಯವರಿಗೂ ಟ್ಯಾಗ್ ಮಾಡಿದ್ದೇನೆ. ಆದರೂ ಈವರೆಗೆ ಯಾರೂ ಕೂಡ ಸ್ಪಂದಿಸಿಲ್ಲ. ನಿಮ್ಮ ಸುದ್ದಿಯನ್ನು ನೋಡಿದ ಮೇಲಾದರೂ ರಸ್ತೆ ದುರಸ್ತಿ ಮಾಡಲಿ” ಎಂದು ಫಾರೂಕ್ ಆಗ್ರಹ ವ್ಯಕ್ತಪಡಿಸಿದ್ದಾರೆ.

ಫಾರೂಕ್

ಹಲಗತ್ತಿಯ ಮಾರ್ಗವಾಗಿ ವಿಜಯಪೂರ, ಬಾಗಲಕೋಟೆ, ಧಾರವಾಡ ಮತ್ತು ರಾಮದುರ್ಗ ತಾಲೂಕಿನ ಹಳ್ಳಿಗಳಿಗೆ ದಿನ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಆದರೆ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು ರಸ್ತೆಯ ತುಂಬೆಲ್ಲಾ ಗುಂಡಿಗಳೇ ತುಂಬಿ ಹೋಗಿವೆ.

ಇದನ್ನು ಓದಿದ್ದೀರಾ? ಬೇಲೆಕೇರಿ ಅದಿರು ಪ್ರಕರಣ | ಕಾಂಗ್ರೆಸ್ ಶಾಸಕ ​ಸತೀಶ್​ ಸೈಲ್​​ಗೆ ಏಳು ವರ್ಷ ಜೈಲು ಶಿಕ್ಷೆ, 9 ಕೋಟಿ ದಂಡ

ಮಳೆ ಬಂದರೆ ಈ ರಸ್ತೆಯಲ್ಲಿ ಓಡಾಡಬೇಕಾದರೆ, ವಾಹನ ಸವಾರರು ಹರಸಾಹಸ ಮಾಡಬೇಕಾಗುತ್ತದೆ. ಆದರೆ, ಕೆಲವೊಮ್ಮೆ ಮಣ್ಣು ಹಾಕಿ ಗುಂಡಿಗಳನ್ನು ಮುಚ್ಚುತ್ತಾರೆ. ಮಳೆ ನಂತರ ಮತ್ತೆ ರಸ್ತೆ ಹಾಳಾಗುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಆದಷ್ಟು ಬೇಗನೆ ರಾಮದುರ್ಗ ತಾಲೂಕಿನ ಶಾಸಕರಾದ ಅಶೋಕ ಪಟ್ಟಣ ರಸ್ತೆ ದುರಸ್ತಿ ಮಾಡಲಿ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಈ ವರದಿಯ ಬಳಿಕ ದುರಸ್ತಿ ಮಾಡುವ ಕಾರ್ಯಕ್ಕೆ ಜನಪ್ರತಿನಿಧಿಗಳಾಗಲೀ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲೀ ಸ್ಪಂದಿಸುತ್ತಾರಾ ಕಾದು ನೋಡಬೇಕಿದೆ.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ರೈತರ ಹೋರಾಟಕ್ಕೆ ಎರಡು ಮೂರು ದಿನಗಳಲ್ಲಿ ಶುಭಸುದ್ದಿ: ಜಿಲ್ಲಾಧಿಕಾರಿ ಭರವಸೆ

ಕಬ್ಬಿಗೆ ಸೂಕ್ತ ದರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ...

ಬೆಳಗಾವಿ | ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಅ.17ರಿಂದ ಗುರ್ಲಾಪುರ ಕ್ರಾಸ್ ಬಂದ್ ಎಚ್ಚರಿಕೆ: ಶಶಿಕಾಂತ ಗುರೂಜಿ

ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಗುರ್ಲಾಪುರ ಕ್ರಾಸ್‌ನಲ್ಲಿ ರೈತರು ನಡೆಸುತ್ತಿರುವ...

ಸಿಂಧನೂರು | ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ತಲೆಕೊಟ್ಟ ಅನಾಮಧೇಯ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ...

ರಾಯಚೂರು | ದೇವದುರ್ಗದಲ್ಲಿ ರಕ್ತನಿಧಿ ಕೇಂದ್ರ ಲೋಕಾರ್ಪಣೆ; 100ಕ್ಕೂ ಹೆಚ್ಚು ಜನರಿಂದ ಸ್ವಯಂಪ್ರೇರಿತ ರಕ್ತದಾನ

ಪಟ್ಟಣದಲ್ಲಿ ರಕ್ತನಿಧಿ ಕೇಂದ್ರವನ್ನು ಲೋಕಾರ್ಪಣೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ 100ಕ್ಕೂ ಹೆಚ್ಚು...