ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು

Date:

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ ಬದುಕುತ್ತಿರುವ ಈ ಕುಟುಂಬಗಳ ದಶಕಗಳ ಸಂಕಷ್ಟಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಆಧಾರ್ ಕಾರ್ಡ್ ಮಾಡಿಸಲು ₹2 ಸಾವಿರದಿಂದ ₹5 ಸಾವಿರದವರೆಗೆ ಹಣ ಕೇಳುತ್ತಾರೆ ಎಂಬ ಆರೋಪಗಳೂ ಕೇಳಿಬಂದಿವೆ. ಹಣದ ಕೊರತೆಯಿಂದ ಐದು ವರ್ಷದ ಮಗಳ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಲಾಗದೆ ತಾಯಿ ಪರದಾಡುತ್ತಿರುವುದು ಈ ಕುಟುಂಬಗಳ ದುಸ್ಥಿತಿಗೆ ಸಾಕ್ಷಿಯಾಗಿದೆ.

- Advertisement -

ಈ ಕುರಿತು ಈ ದಿನ.ಕಾಮ್ ವರದಿ ಬಿತ್ತರಿಸಿ, ಯರಗಟ್ಟಿ ತಹಸೀಲ್ದಾ‌ರ್ ಅವರ ಗಮನಕ್ಕೆ ತಂದ ಬಳಿಕ, ತಹಸೀಲ್ದಾ‌ರ್ ಅವರ ಆದೇಶದ ಮೇರೆಗೆ ಗ್ರಾಮ ಆಡಳಿತ ಅಧಿಕಾರಿ ಎಲ್.ಬಿ. ದಳವಾಯಿ ಹಾಗೂ ಬಿ.ಎಲ್.ಒ ಸಂತೋಷ ತಳವಾರ ಅವರು ಅಲೆಮಾರಿಗಳು ವಾಸಿಸುತ್ತಿರುವ ಬಿಡಾರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಧಾ‌ರ್ ಕಾರ್ಡ್ ಇಲ್ಲದವರು ತಮ್ಮ ಕಚೇರಿಗೆ ಬಂದು ಭೇಟಿ ನೀಡಿದರೆ ಆಧಾರ್ ಕಾರ್ಡ್ ಮಾಡಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಇಂಟರ್ನೆಟ್‌ನಿಂದ AIವರೆಗೆ.. ದಶಕಗಳ ಹಿಂದೆಯೇ ಜಗತ್ತಿನ ಭವಿಷ್ಯ ಕಂಡಿದ್ದ...

ತಂತ್ರಜ್ಞಾನ ನಮ್ಮ ಕೈಸೇರುವ, ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗುವ ದಶಕಗಳ ಹಿಂದೆಯೇ, ಅಂದಿನ ಕಾಲದ ಕಲಾವಿದರು ತಮ್ಮ ಗೀತೆಗಳ ಸಾಲುಗಳ ಮೂಲಕ ಮುಂದಿನ ಜಗತ್ತು ಹೀಗೇ ಇದ್ದೀತೆಂದು ಖಚಿತವಾಗಿ ಹೇಳಿದ್ದರು. ಮಾನವಕುಲವು ಮುಂದೆ...

ಕೊಪ್ಪಳ | ದಸರಾ ಪುರಾಣ ಪ್ರವಚನಕ್ಕೆ ಮುಸ್ಲಿಂ ಕಲಾವಿದನ...

ಧರ್ಮಗಳು ಬೇರೆ ಬೇರೆಯಾದರೂ ಕಲೆ, ಸಂಸ್ಕೃತಿ ಮತ್ತು ಮಾನವೀಯತೆಯ ಮುಂದೆ ಧರ್ಮದ ಗಡಿಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮ ಸಾಕ್ಷಿ. ಇಲ್ಲಿನ ಕಂಪ್ಲಿಯಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ನಡೆಯುವ ದಸರಾ ಪುರಾಣ...

ಮಗಳ ಹೃದಯದಲ್ಲಿ ರಂಧ್ರ: ಆಪರೇಷನ್ ಮಾಡಿಸಲು ತಾಯಿಯ ಪರದಾಟ

Advertisements
WhatsApp Image 2026 10 21 at 5.42.39 PM
ಜಂಬಕ್ಕ

ಯರಗಟ್ಟಿ ಪಟ್ಟಣದ ಭಾಗ ಸಂಖ್ಯೆ 44ರ ವ್ಯಾಪ್ತಿಯಲ್ಲಿ ವಾಸವಾಗಿರುವ ಅಲೆಮಾರಿ ಸಮುದಾಯದ ಜಂಬಕ್ಕ ದುರಗಮುರಗಿ ಅವರ ಐದು ವರ್ಷದ ಮಗಳು ಜಯಕ್ಕಳ ಹೃದಯದಲ್ಲಿ ರಂಧ್ರವಿದೆ. ಕೆಎಂಸಿ ಆಸ್ಪತ್ರೆಯಲ್ಲಿ ಪಡಿತರ ಚೀಟಿ ಇದ್ದರೆ ಉಚಿತವಾಗಿ ಆಪರೇಷನ್‌ ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು ಎನ್ನಲಾಗಿದೆ. ಆದರೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಇಲ್ಲದ ಕಾರಣ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಸಾಧ್ಯವಾಗಿರಲಿಲ್ಲ.

ಈ ದಿನ.ಕಾಮ್ ಮತ್ತೊಮ್ಮೆ ಅಲೆಮಾರಿಗಳ ಸಮಸ್ಯೆ ತಿಳಿಯಲು ಸ್ಥಳಕ್ಕೆ ಭೇಟಿ ನೀಡಿದಾಗ, ಜಂಬಕ್ಕ ಅವರು ಸಾಲ ಮಾಡಿ ಒಂದು ಲಕ್ಷ ರೂಪಾಯಿ ಹೊಂದಿಸಿಕೊಂಡು ಮಗಳನ್ನು ಕರೆದುಕೊಂಡು ಹೋಗಿದ್ದಾರೆ ಎಂಬುದು ತಿಳಿದುಬಂದಿತು.

ಭೇಟಿ ವೇಳೆ ಮಾತನಾಡಿದ ಜಂಬಕ್ಕ, “ಜಯಕ್ಕಳಿಗೆ ಹೃದಯದಲ್ಲಿ ರಂಧ್ರವಿದೆ. ಅದನ್ನು ಆಪರೇಷನ್ ಮಾಡಿಸಲು ಹಣವಿಲ್ಲ. ಉಚಿತ ಆಪರೇಷನ್‌ ಮಾಡಿಸಬೇಕು ಎಂದರೆ ಪಡಿತರ ಚೀಟಿ ಬೇಕು. ಆದರೆ ಅದೂ ನಮ್ಮ ಬಳಿ ಇಲ್ಲ. ಬೇರೆಯವರ ತಗಡಿನ ಶೆಡ್‌ನಲ್ಲಿ ವಾಸವಾಗಿದ್ದೇನೆ. ನನ್ನ ಮಕ್ಕಳನ್ನು ಸಾಕುವುದೇ ದೊಡ್ಡ ಸವಾಲಾಗಿದೆ. ದಿನನಿತ್ಯ ದುಡಿದುಕೊಂಡು ಬಂದು ಊಟ ಹಾಕಬೇಕು. ಅಲ್ಲಿಯವರೆಗೂ ಉಪವಾಸ ಇರಬೇಕು. ಪಡಿತರ ಚೀಟಿ ಮಾಡಿಸಲು ₹2 ಸಾವಿರ, ₹1,500ವರೆಗೆ ಬಂದವರಿಗೆಲ್ಲಾ ಹಣ ಕೊಟ್ಟಿದ್ದೇನೆ. ಆದರೆ ಪಡಿತರ ಚೀಟಿ ಮಾತ್ರ ಸಿಕ್ಕಿಲ್ಲ. ಆಧಾರ್ ಕಾರ್ಡ್ ಮಾಡಿಸಲೂ ಹಣ ನೀಡಿದ್ದೇನೆ. ಆದರೂ ಆಧಾರ್ ಕಾರ್ಡ್ ಪಡೆಯಲು ಆಗಿಲ್ಲ. ನೀವೇ ಸಹಾಯ ಮಾಡಿಬಿಡಿ, ಪುಣ್ಯ ಬರುತ್ತದೆ” ಎಂದು ಕಣ್ಣೀರು ಹಾಕಿದರು.

ಮಕ್ಕಳ ಶಿಕ್ಷಣಕ್ಕೂ ಆಧಾರ್ ಕಾರ್ಡ್ ಇಲ್ಲ

WhatsApp Image 2026 10 21 at 5.42.25 PM

ಈ ಕುರಿತು ಮಾಹಿತಿ ಹಂಚಿಕೊಂಡ ರುಕ್ಕು ಮತ್ತು ಗೀತಾ ಶಾಮಣ್ಣ ಅವರ ತಾಯಿ ದುರ್ಗವ್ವ, “ನನ್ನ ಆಧಾರ್ ಕಾರ್ಡ್ ಇದೆ. ಆದರೆ ನಮ್ಮ ಮಕ್ಕಳ ಆಧಾ‌ರ್ ಕಾರ್ಡ್ ಇಲ್ಲ. ಶಾಲೆಯಲ್ಲಿ ವಿದ್ಯಾರ್ಥಿವೇತನಕ್ಕೆ ಆಧಾರ್ ಕಾರ್ಡ್ ಬೇಕು ಎಂದು ಹೇಳಿದ್ದಾರೆ. ಎಲ್ಲ ಕಡೆ ಹೋಗಿ ಬಂದಿದ್ದೇವೆ. ಆದರೂ ಆಧಾ‌ರ್ ಕಾರ್ಡ್ ಆಗಿಲ್ಲ. ಶಾಲೆಯಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ಕೇಳುತ್ತಿದ್ದಾರೆ. ಅದೊಂದು ಕಾರ್ಡ್‌ ಇಲ್ಲದೆ ಮಕ್ಕಳ ಶಿಕ್ಷನಕ್ಕೂ ಅಡ್ಡಿಯಾಗುತ್ತಿದೆ” ಎಂದು ಹೇಳಿದರು.

ಅರ್ಜಿ ತುಂಬಿಕೊಟ್ಟರೂ ಆಧಾರ್ ಕಾರ್ಡ್ ಸಿಗುತ್ತಿಲ್ಲ

“ಆಧಾರ್ ಕಾರ್ಡ್‌ಗಾಗಿ ಫಾರ್ಮ್ ತುಂಬಿ ಕೊಟ್ಟಿದ್ದೇವೆ. ಆನ್‌ಲೈನ್ ಅಂಗಡಿಗೆ ಹೋದರೆ ₹2 ಸಾವಿರ ಕೊಟ್ಟರೆ ಮಾಡಿಕೊಡುತ್ತೇವೆ, ಇಲ್ಲದಿದ್ದರೆ ಕೊಡುವುದಿಲ್ಲ ಎಂದು ಹೇಳಿದ್ದಾರೆ. ನಾನು ಚಿಕ್ಕವಳಿದ್ದಾಗಿನಿಂದಲೂ ಇಲ್ಲಿಯೇ ವಾಸಿಸುತ್ತಿದ್ದೇವೆ. ಆದರೆ ಆಧಾ‌ರ್ ಕಾರ್ಡ್ ಇಲ್ಲ, ಪಡಿತರ ಚೀಟಿಯೂ ಇಲ್ಲ” ಎನ್ನುತ್ತಾರೆ ಈ ಕಾಟ್ಯವ್ವ.

ಇದನ್ನೂ ಓದಿ: ಬೆಳಗಾವಿ | ಹತ್ತರಗಿಯಿಂದ ‘ಹುಬ್ಬಳ್ಳಿ ಚಲೋ’ ಪಾದಯಾತ್ರೆ ಆರಂಭ

ಹುಟ್ಟಿದ ದಿನಾಂಕದ ದಾಖಲೆ ಎಲ್ಲಿಂದ ತರಬೇಕು?

ಈದಿನದೊಂದಿಗೆ ಮಾತನಾಡಿದ ಮಲ್ಲವ್ವ, “ನಮ್ಮ ಮಗಳಿಗೆ ಪಡಿತರ ಚೀಟಿ ಇಲ್ಲ. ಆಧಾ‌ರ್ ಕಾರ್ಡ್ ಮಾಡಿಸಲು ಹೋದಾಗ ಹುಟ್ಟಿದ ದಿನಾಂಕ ಕೇಳಿದರು. ಮನೆಯಲ್ಲಿ ಬಾಣಂತಿ ಇದ್ದಾರೆ. ಆಧಾರ್ ಕಾರ್ಡ್ ಮಾಡಿಸಲು ಬೆಳಗಾವಿವರೆಗೆ ಹೋಗಿ ಬಂದರೂ ಆಗಿಲ್ಲ. ಈ ಸಮಸ್ಯೆಗಾಗಿ ಹೋರಾಟ ಮಾಡುವುದಕ್ಕೂ ಹೆದರಿಕೆಯಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.

WhatsApp Image 2026 10 21 at 5.42.11 PM

ಹೃದಯದಲ್ಲಿ ರಂಧ್ರವಿರುವ ಐದು ವರ್ಷದ ಜಯಕ್ಕಳಿಗೆ ಸೂಕ್ತ ಚಿಕಿತ್ಸೆ ದೊರಕಿಸಿ ಕೊಡುವತ್ತ ಜಿಲ್ಲಾಡಳಿತ ತಕ್ಷಣ ಗಮನಹರಿಸಬೇಕು. ಸ್ಥಳೀಯ ಶಾಸಕ ವಿಶ್ವಾಸ ವೈದ್ಯ ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ಅವರು ಅಲೆಮಾರಿ ಕುಟುಂಬಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಆಧಾರ್ ಕಾರ್ಡ್ ಪಡಿತರ ಚೀಟಿ, ವಸತಿ, ಕುಡಿಯುವ ನೀರು ಮತ್ತು ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕಿದೆ. ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಮಗುವಿನ ಚಿಕಿತ್ಸೆ ಹಾಗೂ ಶಿಕ್ಷಣಕ್ಕೆ ತೊಂದರೆಯಾಗಬಾರದು. ಅಧಿಕಾರಿಗಳ ಭರವಸೆ ಕಾರ್ಯರೂಪಕ್ಕೆ ಬಂದು ಜಯಕ್ಕಳಿಗೆ ಚಿಕಿತ್ಸೆ ದೊರೆಯುವುದರ ಜೊತೆಗೆ ಅಲೆಮಾರಿ ಕುಟುಂಬಗಳ ಹಲವು ವರ್ಷಗಳ ಸಂಕಷ್ಟಕ್ಕೂ ಪರಿಹಾರ ಸಿಗಬೇಕಿದೆ.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಿರಳೆ ಪ್ರತಿಕೃತಿ ದಹನದ ನೆಪದಲ್ಲಿ ಯುವ ದನಿಯನ್ನು ಹತ್ತಿಕ್ಕುವ ಮೋದಿ ಸರ್ಕಾರದ ದಮನಕಾರಿ ನೀತಿ

ದೆಹಲಿಯ ಪೀತಾಂಪುರದಲ್ಲಿ ಮಂಗಳವಾರ ನಡೆದ ದಸರಾ ಆಚರಣೆಯು ಈ ಬಾರಿ ಧಾರ್ಮಿಕ...

ಚಾಮರಾಜನಗರದಲ್ಲಿ ಅ.24ರಿಂದ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ

ಬುದ್ಧನ ಕರುಣೆ, ಸಮಾನತೆ, ಸಹಬಾಳ್ವೆ ಹಾಗೂ ಬಹುತ್ವದ ಸಂದೇಶವನ್ನು ಜನರಿಗೆ ತಲುಪಿಸುವ...

ಕಬ್ಬಿಗೆ ಟನ್‌ಗೆ ₹5,500 ನಿಗದಿಗೆ ಆಗ್ರಹ: ಅ.23ರಂದು ಗಣಂಗೂರು ಟೋಲ್ ಬಂದ್ ಪ್ರತಿಭಟನೆ

ಕಬ್ಬು ಬೆಳೆಗಾರರ ವಿವಿಧ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ರೈತರ ಪ್ರಮುಖ ಬೇಡಿಕೆಗಳನ್ನು...