ಮೃತರ ಸ್ಮರಣೆಯಲ್ಲಿ ಠೇವಣಿ, ಮಕ್ಕಳ ಭವಿಷ್ಯಕ್ಕೆ ಬೆಳಕು: ಕರಿಕಟ್ಟಿ ಪ್ರೌಢಶಾಲೆಗೆ ರಾಜ್ಯಮಟ್ಟದ ಉತ್ತಮ ಶಾಲಾ ಪ್ರಶಸ್ತಿ

Date:

ಮೃತರ ಸ್ಮರಣೆಯಲ್ಲಿ ಶಾಲೆಗೆ ಠೇವಣಿ ನೀಡುವಂಥಹ ವಿಶಿಷ್ಟ ಸಂಪ್ರದಾಯ, ಸಮುದಾಯದ ಸಹಕಾರದಿಂದ ಶೈಕ್ಷಣಿಕ ಸಾಧನೆ ಮಾಡಿರುವ ಕರಿಹಟ್ಟಿ ಪ್ರೌಢಶಾಲೆಗೆ ಇದೀಗ ರಾಜ್ಯಮಟ್ಟದ ಪ್ರಶಸ್ತಿ ದೊರೆತಿರುವುದು ಕರಿಕಟ್ಟಿ ಗ್ರಾಮದ ಹೆಮ್ಮೆಯಷ್ಟೇ ಅಲ್ಲ, ಇತರ ಸರ್ಕಾರಿ ಶಾಲೆಗಳಿಗೂ ಮಾದರಿಯಾಗಿದೆ.

ಯಾರಾದರೊಬ್ಬರು ನಿಧನರಾದಾಗ ಅವರ ಸ್ಮರಣಾರ್ಥ ಹಣ ನೀಡುವುದು ಸಾಮಾನ್ಯ. ಆದರೆ ಆ ಹಣವನ್ನು ಮಕ್ಕಳ ಭವಿಷ್ಯ ರೂಪಿಸಲು ಬಳಸಿ, ವರ್ಷದಿಂದ ವರ್ಷಕ್ಕೆ ಅದನ್ನು ಬೆಳೆಸಿಕೊಂಡು ಹೋಗುತ್ತಿರುವ ಅಪರೂಪದ ಸಂಪ್ರದಾಯವೊಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮದಲ್ಲಿ ಕಂಡುಬಂದಿದೆ. ಈ ವಿಶಿಷ್ಟ ಪರಂಪರೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ನೀಡುತ್ತಿರುವ ಕರಿಕಟ್ಟಿ ಪ್ರೌಢಶಾಲೆಗೆ ಇದೀಗ ರಾಜ್ಯಮಟ್ಟದ ಪ್ರಶಂಸೆ ದೊರೆತಿದೆ.

- Advertisement -

ಕರಿಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ 2026-27ನೇ ಸಾಲಿನ ಮಲೆನಾಡ ಗಾಂಧಿ ಶ್ರೀ ಗೋವಿಂದೇಗೌಡ ಹೆಚ್ ಜಿ ಮಾಜಿ ಶಿಕ್ಷಣ ಸಚಿವರ ಹೆಸರಿನ ಉತ್ತಮ ಶಾಲಾ ಪ್ರಶಸ್ತಿ ಲಭಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಕರಿಕಟ್ಟಿ ಶಾಲೆಯ ವಿಶೇಷತೆ ಕೇವಲ ಫಲಿತಾಂಶದಲ್ಲಿಲ್ಲ. ಗ್ರಾಮಸ್ಥರು ರೂಪಿಸಿಕೊಂಡಿರುವ ನಿಶ್ಚಿತ ಠೇವಣಿ ಸಂಪ್ರದಾಯವೇ ಈ ಶಾಲೆಯ ಯಶೋಗಾಥೆಯ ಪ್ರಮುಖ ಕಾರಣ.

ಕರಿಹಟ್ಟಿ ಪ್ರೌಢಶಾಲೆ ಶಿಕ್ಷಕರು

1996ರ ಮಾರ್ಚ್‌ 21ರಂದು ಹಿರಿಯ ಶಿಕ್ಷಣ ಪ್ರೇಮಿ ಮತ್ತು ಆಧ್ಯಾತ್ಮಿಕ ಜೀವಿ ಶ್ರೀ ವೀರಭದ್ರಪ್ಪ ನಿಂಗಪ್ಪ ಜಕಾತಿ ಅವರು ₹1,000 ಠೇವಣಿ ಇಡುವ ಮೂಲಕ ಈ ಸಂಪ್ರದಾಯಕ್ಕೆ ಚಾಲನೆ ನೀಡಿದ್ದರು. ಇಂದು ಅದೇ ಠೇವಣಿ ₹6 ಲಕ್ಷಕ್ಕೆ ಬೆಳೆದಿದೆ.

ಗ್ರಾಮದಲ್ಲಿ ಯಾರಾದರೂ ಕುಟುಂಬದ ಹಿರಿಯರು ನಿಧನರಾದಾಗ, ಅವರ ಸ್ಮರಣಾರ್ಥವಾಗಿ ಅಂತ್ಯಕ್ರಿಯೆ ಸಂದರ್ಭದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಶಾಲೆಗೆ ನೀಡುವ ಠೇವಣಿ ಮೊತ್ತವನ್ನು ಘೋಷಿಸುವ ಪದ್ಧತಿ ಬೆಳೆದಿದೆ. ನಂತರ ಕುಟುಂಬದವರು ಸ್ವಯಂಪ್ರೇರಣೆಯಿಂದ ಶಾಲೆಗೆ ಆಗಮಿಸಿ ಮುಖ್ಯೋಪಾಧ್ಯಾಯರು ಹಾಗೂ ಎಸ್‌ಡಿಎಂಸಿ ಸದಸ್ಯರ ಸಮ್ಮುಖದಲ್ಲಿ ಹಣವನ್ನು ಠೇವಣಿ ಮಾಡುತ್ತಾರೆ.

ಈ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿಯಾಗಿ ಇಡಲಾಗುತ್ತದೆ. ಅದರಿಂದ ಬರುವ ಬಡ್ಡಿಯನ್ನು ಮಾತ್ರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹಕ್ಕೆ ಬಳಸಲಾಗುತ್ತದೆ.

ಪ್ರತಿ ವರ್ಷ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ 8, 9 ಮತ್ತು 10ನೇ ತರಗತಿಗಳಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಠೇವಣಿ ಬಡ್ಡಿಯಿಂದ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.

₹10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಠೇವಣಿ ನೀಡಿದವರ ಸ್ಮರಣಾರ್ಥವಾಗಿ ಅವರ ಭಾವಚಿತ್ರವನ್ನು ಶಾಲೆಯ ಕಚೇರಿ ಮತ್ತು ಸಿಬ್ಬಂದಿಗಳ ಕೊಠಡಿಗಳಲ್ಲಿ ಅಳವಡಿಸುವ ಸಂಪ್ರದಾಯವೂ ಇದೆ.

ದಾನಿಗಳ ಕೊಡುಗೆ ಅಪಾರ

ವಿಶ್ವೇಶ್ವರ ಲಿಂಗಪ್ಪ ಮೊಕಾಶಿ ಅವರ ಸ್ಮರಣಾರ್ಥ ಅವರ ಪುತ್ರಿ ಡಾ. ಜ್ಯೋತಿ ಸಂತೋಷ್ ಜೀವನ್ನವರ ಹಾಗೂ ಕುಟುಂಬದವರು ಈ ಶಾಲೆಗೆ ₹1,23,015 ಮೌಲ್ಯದ ಸ್ಮಾರ್ಟ್ ಬೋರ್ಡನ್ನು ನೀಡಿದ್ದಾರೆ.

ಕರಿಹಟ್ಟಿ ಪ್ರೌಢಶಾಲೆ 1

ಸಿಂಗಾಪುರದಲ್ಲಿ ಸಾಫ್ಟ್‌ವೇರ್ ಎಂಜಿನಿಯ‌ರ್ ಆಗಿರುವ ಉಮೇಶ್ ಚೆನ್ನಪ್ಪ ಬಾಳಿ ಅವರು ತಮ್ಮ ತಂದೆ ದಿ. ಚೆನ್ನಪ್ಪ ಬಾಳಿ ಅವರ ಸ್ಮರಣಾರ್ಥ ₹35 ಸಾವಿರ ಠೇವಣಿ ನೀಡಿ, ಪ್ರತಿವರ್ಷ 10ನೇ ತರಗತಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ₹10 ಸಾವಿರ ಬಹುಮಾನ ನೀಡುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 625 ಅಂಕ ಪಡೆಯುವ ವಿದ್ಯಾರ್ಥಿಗೆ ₹25 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಅದೇ ರೀತಿ ವೀರಣ್ಣ ಶಿ. ಬಾಗೋಜಿ ಮತ್ತು ಸಹೋದರರು ತಮ್ಮ ತಂದೆ ದಿ. ಶಿವಪ್ಪ ಚ. ಬಾಗೋಜಿ ಅವರ ಸ್ಮರಣಾರ್ಥ ₹25 ಸಾವಿರ ಠೇವಣಿ ನೀಡಿ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

40 ಮಕ್ಕಳಿಂದ 352 ವಿದ್ಯಾರ್ಥಿಗಳವರೆಗೆ

1994ರ ಜೂ.6ರಂದು ಕೇವಲ 40 ಮಕ್ಕಳೊಂದಿಗೆ ಆರಂಭಗೊಂಡಿದ್ದ ಕರಿಕಟ್ಟಿ ಸರ್ಕಾರಿ ಪ್ರೌಢಶಾಲೆ ಇಂದು ಸುಮಾರು 352 ವಿದ್ಯಾರ್ಥಿಗಳೊಂದಿಗೆ ಮುನ್ನಡೆಯುತ್ತಿದೆ.

ಪಕ್ಕದ ಅಸುಂಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೂ ಶಾಲೆ ಆಕರ್ಷಣೀಯ ಕೇಂದ್ರವಾಗಿದೆ. ಸರ್ಕಾರಿ ಸೌಲಭ್ಯಗಳ ಜತೆಗೆ ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ಕಂಪ್ಯೂಟ‌ರ್, ಸ್ಮಾರ್ಟ್ ಬೋರ್ಡ್, ಪ್ರೊಜೆಕ್ಟ‌ರ್ ಸೇರಿದಂತೆ ತಂತ್ರಜ್ಞಾನ ಆಧಾರಿತ ಬೋಧನಾ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ಸಾಧಿಸಿರುವುದು ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

2018ರಿಂದ ಜೂನ್ 2026ರವರೆಗೆ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ನಿವೃತ್ತ ಮುಖ್ಯೋಪಾಧ್ಯಾಯರು ಮಾತನಾಡಿ, “ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ನಾನು ಕಾರ್ಯನಿರ್ವಹಿಸಿದ ಎಂಟು ವರ್ಷಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಂಡಳಿಯಿಂದ 10 ಲ್ಯಾಪ್‌ಟಾಪ್‌ಗಳು ದೊರೆತಿವೆ. ಆದರ್ಶ ಎಂಬ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದಿದ್ದು, ಇವರು ಮತ್ತು ಸುಶೀಲಾ ಪ್ರಸ್ತುತ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ” ಎಂದು ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕ ಮೇಘರಾಜ ಅವರು ಮಾತನಾಡಿ, “ನಮ್ಮ ಶಾಲೆ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿದೆ. ಸಮುದಾಯದ ಸಹಕಾರದಿಂದಲೇ ಈ ಉತ್ತಮ ಶಾಲಾ ಪ್ರಶಸ್ತಿ ದೊರೆತಿದೆ. ಗ್ರಾಮಸ್ಥರು ಮತ್ತು ದಾನಿಗಳಿಂದ ಸುಮಾರು ₹6 ಲಕ್ಷದಷ್ಟು ಸಹಕಾರ ದೊರೆತಿದೆ. ಗ್ರಾಮ ಪಂಚಾಯಿತಿ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಿಂದ ಶಾಲೆಯಲ್ಲಿ ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್ ಮತ್ತು ಪ್ರೊಜೆಕ್ಟರ್ ಮೂಲಕ ಪಾಠ ಮಾಡಲಾಗುತಿದೆ” ಎಂದರು.

“ಬೈಲಹೊಂಗಲ ಕ್ಷೇತ್ರದ ಶಾಸಕ ಮಹಾಂತೇಶ ಶಿವಾನಂದ ಕೌಜಲಗಿ ಅವರ ಮಾರ್ಗದರ್ಶನ, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ದೇವುಪ್ಪಾರ ಹಾಗೂ ಸರ್ವ ಸದಸ್ಯರ ಸಹಕಾರ, ಹಿಂದಿನ ಮುಖ್ಯೋಪಾಧ್ಯಾಯ ವೈ.ಎಂ. ಶಿವಬಸನ್ನವರ ಹಾಗೂ ಶಿಕ್ಷಕ ಸಿಬ್ಬಂದಿಯ ಪರಿಶ್ರಮವೂ ಶಾಲೆಯ ಸಾಧನೆಗೆ ಕಾರಣವಾಗಿದೆ” ಎಂದು ಹೇಳಿದರು.

ಇದನ್ನೂ ಓದಿದ್ದೀರಾ? ವಿಜಯಪುರ | ಮಹಿಳಾ ವಿವಿ ಗೋಲ್‌ಮಾಲ್‌; ಮರುತನಿಖೆಗೆ ನೂತನ ಸಮಿತಿ ರಚನೆ

ಮೃತರ ಸ್ಮರಣೆಯಲ್ಲಿ ಇಡುವ ಒಂದು ಸಣ್ಣ ಠೇವಣಿ, ಅದರ ಬಡ್ಡಿಯಿಂದ ದೊರೆಯುವ ಬಹುಮಾನ, ಆ ಬಹುಮಾನದಿಂದ ವಿದ್ಯಾರ್ಥಿಯ ಸಾಧನೆ ಹೀಗೆ ಒಂದು ಕುಟುಂಬದ ನೆನಪು ಇಡೀ ಗ್ರಾಮದ ಮಕ್ಕಳ ಭವಿಷ್ಯಕ್ಕೆ ಬೆಳಕಾಗುತ್ತಿದೆ.

ಮೃತರ ಸ್ಮರಣೆಯಲ್ಲಿ ಶಾಲೆಗೆ ಠೇವಣಿ ನೀಡುವಂಥಹ ವಿಶಿಷ್ಟ ಸಂಪ್ರದಾಯ, ಸಮುದಾಯದ ಸಹಕಾರದಿಂದ ಶೈಕ್ಷಣಿಕ ಸಾಧನೆ ಮಾಡಿರುವ ಕರಿಹಟ್ಟಿ ಪ್ರೌಢಶಾಲೆಗೆ ಇದೀಗ ರಾಜ್ಯಮಟ್ಟದ ಪ್ರಶಸ್ತಿ ದೊರೆತಿರುವುದು ಕರಿಕಟ್ಟಿ ಗ್ರಾಮದ ಹೆಮ್ಮೆಯಷ್ಟೇ ಅಲ್ಲ, ಇತರ ಸರ್ಕಾರಿ ಶಾಲೆಗಳಿಗೂ ಮಾದರಿಯಾಗಿದೆ.

ಕರಿಹಟ್ಟಿ ಪ್ರೌಢಶಾಲೆ 2
ಕರಿಹಟ್ಟಿ ಪ್ರೌಢಶಾಲೆ 3
ಕರಿಹಟ್ಟಿ ಪ್ರೌಢಶಾಲೆ 4
WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಬಸ್‌ನಲ್ಲಿ ಮರೆತು ಹೋಗಿದ್ದ ಚಿನ್ನಾಭರಣ ಮರಳಿಸಿದ ಚಾಲಕ, ನಿರ್ವಾಹಕ

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟುಹೋಗಿದ್ದ ಬೆಳ್ಳಿ...

ವಿಜಯಪುರ | ಹೊರಗುತ್ತಿಗೆ ನೇಮಕಾತಿಯಲ್ಲಿ ವಿಕಲಚೇತನರಿಗೆ ಉದ್ಯೋಗ ನೀಡಿ: ವಿನೋದ ಖೇಡ

ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ...

ಬಾಗಲಕೋಟೆ | ಬಡವರ ಅನ್ನಕ್ಕೂ ಕನ್ನ! ಅಹಮದಾಬಾದ್‌ಗೆ ಅನ್ನಭಾಗ್ಯದ ಅಕ್ಕಿ ಸಾಗಾಟ; 34 ಟನ್ ಅಕ್ಕಿ ತುಂಬಿದ ಲಾರಿ ಜಪ್ತಿ

ಬಡವರು ಹಸಿವಿನಿಂದ ಬಳಲಬಾರದು, ಪ್ರತಿಯೊಂದು ಕುಟುಂಬಕ್ಕೂ ಆಹಾರ ಭದ್ರತೆ ದೊರೆಯಬೇಕು ಎಂಬ...