ಗಣೇಶೋತ್ಸವ ಕೋಮು ಸೌಹಾರ್ದದ ಸೇತುವಾಗಲಿ; ಮನುಜ ಸಂಬಂಧದ ತಂತು ಬೆಸೆಯಲಿ

Date:

ಗಣೇಶೋತ್ಸವ ಸಂಭ್ರಮ, ಭಕ್ತಿಯಿಂದ ಜನರು ಒಂದೆಡೆ ಸೇರಿ ಆಚರಿಸುವ ಹಬ್ಬ. ಆದರೆ ಇದೇ ಹಬ್ಬದ ಸಂದರ್ಭದಲ್ಲಿ ಕೆಲವೆಡೆ ಕೋಮು ಸಂಘರ್ಷಗಳು ನಡೆಯುತ್ತಿರುವುದು ಮಾತ್ರ ವಿಷಾದನೀಯ. ಭಾರತದಂತಹ ವಿವಿಧ ಧರ್ಮ, ಭಾಷೆ, ಸಂಸ್ಕೃತಿಗಳನ್ನು ಹೊಂದಿರುವ ದೇಶದಲ್ಲಿ ಹಬ್ಬಗಳು ಜನರನ್ನು ಇನ್ನಷ್ಟು ಹತ್ತಿರಕ್ಕೆ ತರಬೇಕೇ ಹೊರತು, ದೂರ ಮಾಡಬಾರದು.

ಸಾರ್ವಜನಿಕ ಗಣೇಶೋತ್ಸವದ ಉದ್ದೇಶ ಜನರು ಒಂದೆಡೆ ಸೇರಬೇಕು, ಪರಸ್ಪರ ಪರಿಚಯವಾಗಬೇಕು, ಸಾಮಾಜಿಕವಾಗಿ ಒಗ್ಗಟ್ಟಾಗಬೇಕು ಎಂಬುದಾಗಿದೆ. ಇಂತಹ ಆಶಯದಿಂದಲೇ ಸಾರ್ವಜನಿಕವಾಗಿ ಹಬ್ಬ ಆಚರಿಸುವ ಪರಂಪರೆ ಬೆಳೆದಿದೆ. ಆದರೆ ಕಾಲಕ್ರಮೇಣ ಧರ್ಮದ ಜೊತೆಗೆ ರಾಜಕೀಯವೂ ಬೆರೆತಾಗ ಹಬ್ಬದ ಸ್ವರೂಪವೇ ಬದಲಾಗುವ ಅಪಾಯ ಎದುರಾಗುತ್ತದೆ.

- Advertisement -

ಗಣೇಶ ವಿಸರ್ಜನಾ ಮೆರವಣಿಗೆಗಳ ಸಂದರ್ಭದಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕೋಮು ಸಂಘರ್ಷಗಳು ನಡೆದಿರುವ ಉದಾಹರಣೆಗಳಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಿಆರ್ ಚೋಪ್ರಾ ʼಮಹಾಭಾರತʼಕ್ಕೆ ಜೀವ ನೀಡಿದ್ದ ಮುಸ್ಲಿಂ ಪಂಡಿತ:...

ಇಂದು ಡಾ. ರಾಹೀ ಮಾಸೂಮ್ ರೇಜಾ ಅವರ ನೂರನೇ ವರ್ಷದ ಸ್ಮರಣೆಯ ಸಂದರ್ಭದಲ್ಲಿ, ನಾವು ಕೇವಲ ಒಬ್ಬ ಮಹಾನ್ ಲೇಖಕರನ್ನು ನೆನಪಿಸಿಕೊಳ್ಳುತ್ತಿಲ್ಲ; ಬದಲಿಗೆ ಭಾರತೀಯ ಸಮಾಜಕ್ಕೆ ಅತ್ಯಗತ್ಯವಾಗಿರುವ ಸಹಬಾಳ್ವೆಯ ಮೌಲ್ಯಗಳನ್ನು ಪುನರುಚ್ಚರಿಸಿಕೊಳ್ಳುತ್ತಿದ್ದೇವೆ. ಮಹಾಭಾರತ...

ಬಾಡಿ ಶೇಮಿಂಗ್ ತಮಾಷೆಯಲ್ಲ; ಮಾನಸಿಕ ಆರೋಗ್ಯದ ಮೇಲಾಗುವ ಮಾಯದ...

ದೇಹದ ಬಣ್ಣ, ರೂಪ, ತೂಕ-ಎತ್ತರ, ಮುಖ, ಕೂದಲು ಅಥವಾ ದೈಹಿಕ ವೈಶಿಷ್ಟ್ಯಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಹಾಸ್ಯ ಮಾಡುವುದು, ಅವಮಾನಿಸುವುದೇ ಬಾಡಿ ಶೇಮಿಂಗ್. ಇದು ಕೇವಲ ಆ ಕ್ಷಣದ ತಮಾಷೆಯ, ಹಾಸ್ಯ...

ನಡು ಮುರಿದ ಕಾಂಗ್ರೆಸ್ಸನ್ನು ಮತ್ತೆ ಕಟ್ಟಬಲ್ಲರೇ ಹೊಸ ಅಧ್ಯಕ್ಷರು?

ಉತ್ತರ ಕನ್ನಡ ಅಹಿಂದ ಜಿಲ್ಲೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ದೀವರು, ವಿವಿಧ ಪಂಗಡದ ಮೀನುಗಾರ ಸಂಕುಲ, ಕೋಮಾರ ಪಂಥ, ಕೊಂಕಣ ಮರಾಠರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಓಬಿಸಿಗಳ ಬೆಂಬಲ ಕ್ರೋಡೀಕರಿಸುವ ಚಾಕಚಕ್ಯತೆ ಹೊಸ...

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ 2024ರಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಘೋಷಣೆಗಳ ಸಂಘರ್ಷ ಕಲ್ಲುತೂರಾಟ ಹಾಗೂ ಹಿಂಸಾಚಾರಕ್ಕೆ ತಿರುಗಿತ್ತು. ಅಂಗಡಿ-ಮುಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳೂ ನಡೆದಿದ್ದವು. ಪರಿಸ್ಥಿತಿ ನಿಯಂತ್ರಿಸಲು ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಮಹಾರಾಷ್ಟ್ರದ ಮಿರಜ್‌ನಲ್ಲಿ 2009ರಲ್ಲಿ ಗಣೇಶ ಚತುರ್ಥಿ ಸಂದರ್ಭದಲ್ಲಿ ನಿರ್ಮಿಸಲಾಗಿದ್ದ ಕಮಾನು ವಿಚಾರವಾಗಿ ವಿವಾದ ಉಂಟಾಗಿ ದೊಡ್ಡ ಪ್ರಮಾಣದ ಕೋಮು ಸಂಘರ್ಷ ನಡೆದಿತ್ತು. ಸಾಂಗ್ಲಿ ನಗರಕ್ಕೂ ಇದರ ಪರಿಣಾಮ ಬೀರಿತ್ತು.

ಹೈದರಾಬಾದ್‌ನ ಹಳೆಯ ನಗರ ಪ್ರದೇಶದಲ್ಲಿಯೂ ಗಣೇಶ ವಿಸರ್ಜನಾ ಮೆರವಣಿಗೆಗಳು ಹಲವು ಬಾರಿ ಸೂಕ್ಷ್ಮ ಪರಿಸ್ಥಿತಿಗೆ ಕಾರಣವಾಗಿದ್ದವು. ಚಾರ್ಮಿನಾರ್ ಸುತ್ತಮುತ್ತಲೂ ಕಲ್ಲುತೂರಾಟ ಸೇರಿದಂತೆ ಕೋಮು ಸಂಘರ್ಷಗಳ ಘಟನೆಗಳು ನಡೆದಿವೆ.

ಹಬ್ಬಗಳು ಜನರನ್ನು ಒಂದುಗೂಡಿಸಬೇಕಾದರೆ ಅವು ಹೇಗೆ ಸಂಘರ್ಷಕ್ಕೆ ಕಾರಣವಾಗುತ್ತವೆ?

ಇದಕ್ಕೆ ಉತ್ತರ ಹುಡುಕುವಾಗ ಗಣೇಶೋತ್ಸವವನ್ನೇ ಕಾರಣವನ್ನಾಗಿ ನೋಡುವುದು ಸರಿಯಲ್ಲ. ಹಬ್ಬದ ಹೆಸರಿನಲ್ಲಿ ನಡೆಯುವ ಪ್ರಚೋದನೆ, ದ್ವೇಷದ ಭಾಷಣ, ರಾಜಕೀಯ ಹಿತಾಸಕ್ತಿ ಹಾಗೂ ಪರಸ್ಪರ ಅನುಮಾನಗಳೇ ಸಮಸ್ಯೆಗೆ ಕಾರಣವಾಗುತ್ತವೆ. ಅದೇ ವೇಳೆ ಗಣೇಶೋತ್ಸವವೇ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿರುವ ಅನೇಕ ಉದಾಹರಣೆಗಳೂ ನಮ್ಮ ಮುಂದಿವೆ.

ಮುಂಬೈನ ಧಾರಾವಿಯಲ್ಲಿ ಮುಸ್ಲಿಂ ಸಮುದಾಯದ ಯೂಸುಫ್ ಜಕರಿಯಾ ಗಲ್ವಾನಿ ಹಾಗೂ ಅವರ ಸಹೋದರರು ಪರಿಸರ ಸ್ನೇಹಿ ಟೆರಾಕೋಟಾ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಮಹಾರಾಷ್ಟ್ರದ ಅನೇಕ ಮುಸ್ಲಿಂ ಕುಶಲಕರ್ಮಿಗಳು ದಶಕಗಳಿಂದ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದ ಅಲ್ಲಾಬಕ್ಷ್ ಜಮಾದಾರ್ ಅವರು ಶಿಕ್ಷಕರಾಗಿದ್ದರೂ ಬಿಡುವಿನ ವೇಳೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ಅವರ ಕುಟುಂಬ ಮೂರು ತಲೆಮಾರುಗಳಿಂದ ಈ ಕಾಯಕವನ್ನು ಮುಂದುವರಿಸಿಕೊಂಡು ಬಂದಿದೆ.

ಮಂಡ್ಯದ ಬೀಡಿ ಕಾಲೋನಿಯಲ್ಲಿ ಮುಸ್ಲಿಂ ಸಮುದಾಯದವರೇ ಮುಂಚೂಣಿಯಲ್ಲಿ ನಿಂತು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಿಂದೂ ನೆರೆಹೊರೆಯವರೊಂದಿಗೆ ಸೇರಿ ಹಬ್ಬ ಆಚರಿಸುತ್ತಾರೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಸಾಂಡಿಗವಾಡ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ನಿವಾಸಿಗಳು ಒಟ್ಟಾಗಿ ಗಣೇಶೋತ್ಸವ ಆಚರಿಸುವ ಪರಂಪರೆ ಇದೆ. ಇಲ್ಲಿನ ಮುಸ್ಲಿಂ ಯುವಕರು ಗಣೇಶ ಸ್ತೋತ್ರಗಳನ್ನು ಪಠಿಸಿ ಪೂಜೆಯಲ್ಲಿ ಭಾಗವಹಿಸುವುದು ವಿಶೇಷ.

ಯಾದಗಿರಿ ಜಿಲ್ಲೆಯ ದೊರನಹಳ್ಳಿ ಗ್ರಾಮದ ಅಬ್ದುಲ್ ನಬಿ ಅವರು ತಮ್ಮ ಮನೆಯಲ್ಲಿಯೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಕುಟುಂಬದೊಂದಿಗೆ ಪೂಜೆ ಸಲ್ಲಿಸುತ್ತಾರೆ. ಮೋದಕ ಸೇರಿದಂತೆ ಸಿಹಿ ಅಡುಗೆಗಳನ್ನು ನೈವೇದ್ಯವಾಗಿ ಅರ್ಪಿಸಿ ನಂತರ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುತ್ತಾರೆ.

ಹುಬ್ಬಳ್ಳಿಯ ಹಳೆಯ ಆನಂದ್ ನಗರದಲ್ಲಿ ಹಿಂದೂ-ಮುಸ್ಲಿಂ ಮುಖಂಡರು ಒಟ್ಟಾಗಿ ಗಣೇಶೋತ್ಸವ ಸಮಿತಿ ರಚಿಸಿ ಹಬ್ಬ ಆಚರಿಸುತ್ತಾರೆ. ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕೇಸರಿ ಮತ್ತು ಹಸಿರು ಧ್ವಜಗಳನ್ನು ಜೊತೆಯಾಗಿ ಹಾರಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರುತ್ತಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಗೊಂಡಿ ಗ್ರಾಮದಲ್ಲಿಯೂ ಹಿಂದೂ-ಮುಸ್ಲಿಂ ಬಾಂಧವರು ಹಲವು ವರ್ಷಗಳಿಂದ ಒಟ್ಟಾಗಿ ಗಣೇಶೋತ್ಸವ ಆಚರಿಸುತ್ತಿರುವ ಉದಾಹರಣೆ ಇದೆ. ಒಂದೆಡೆ ಹಬ್ಬದ ಸಂದರ್ಭದಲ್ಲಿ ಸಂಘರ್ಷಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಇದೇ ಹಬ್ಬದ ಮೂಲಕ ಬೇರೆ ಧರ್ಮದ ಜನರು ಪರಸ್ಪರರ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.

ಒಬ್ಬ ಮುಸ್ಲಿಂ ಕಲಾವಿದ ಗಣೇಶನ ಮೂರ್ತಿ ತಯಾರಿಸುತ್ತಾನೆ. ಒಬ್ಬ ಹಿಂದೂ ತನ್ನ ಮುಸ್ಲಿಂ ನೆರೆಹೊರೆಯವನೊಂದಿಗೆ ಗಣೇಶೋತ್ಸವ ಆಚರಿಸುತ್ತಾನೆ. ಒಬ್ಬ ಮುಸ್ಲಿಂ ಕುಟುಂಬ ಗಣೇಶನಿಗೆ ನೈವೇದ್ಯ ಅರ್ಪಿಸುತ್ತದೆ. ಇವೆಲ್ಲವೂ ಧರ್ಮ ಬದಲಾವಣೆಯ ಸಂಕೇತಗಳಲ್ಲ. ಇವು ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಸಂಕೇತಗಳು.

ನಮ್ಮ ಹಳ್ಳಿಗಳಲ್ಲಿ, ಬಡಾವಣೆಗಳಲ್ಲಿ ಇಂತಹ ಸೌಹಾರ್ದತೆಯ ಸಾವಿರಾರು ಕಥೆಗಳಿವೆ. ಅವು ಸುದ್ದಿಯಾಗದೇ ಇರಬಹುದು. ಆದರೆ ಸಮಾಜವನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳುವುದು ಇಂತಹ ಸಣ್ಣ-ಸಣ್ಣ ಮಾನವೀಯ ಸಂಬಂಧಗಳೇ. ಹೀಗಾಗಿ ಗಣೇಶೋತ್ಸವದ ಸಂದರ್ಭದಲ್ಲಿ ನಾವು ಯಾವ ಸಂದೇಶವನ್ನು ಸಮಾಜಕ್ಕೆ ನೀಡಬೇಕು ಎಂಬುದು ಮುಖ್ಯ.

ಹಬ್ಬದ ಮೆರವಣಿಗೆ ಸಾಗುವಾಗ ಮತ್ತೊಂದು ಸಮುದಾಯದ ಬಗ್ಗೆ ದ್ವೇಷದ ಘೋಷಣೆ ಮಾಡುವುದಕ್ಕಿಂತ, ಆ ಸಮುದಾಯದ ಜನರನ್ನೂ ಹಬ್ಬದ ಸಂಭ್ರಮಕ್ಕೆ ಆಹ್ವಾನಿಸುವುದು ದೊಡ್ಡ ಸಂಭ್ರಮ.

ಈ ಕುರಿತು ಎಚ್.ಆರ್.ಎಸ್. ಸಂಸ್ಥೆಯ ಯಾಸಿನ್ ಮಖಾನ್‌ದಾರ್ ಅವರು ಈದಿನ.ಕಾಮ್ ಜೊತೆ ಮಾತನಾಡಿ, “ಗಣೇಶೋತ್ಸವ ಎಲ್ಲರನ್ನೂ ಒಂದುಗೂಡಿಸುವ ಹಬ್ಬವಾಗಬೇಕು. ಹಬ್ಬದ ಮೂಲಕ ಸಾಮರಸ್ಯ ಬೆಳೆಸಿ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಮೂಡಿಸುವಂತಾಗಬೇಕು” ಎಂದು ಹೇಳಿದರು.

ಕಲ್ಲಪ್ಪ ಪೂಜೇರಿ ಅವರು ಮಾತನಾಡಿ, “ಗಣೇಶ ಚತುರ್ಥಿಯು ಎಲ್ಲರನ್ನೂ ಒಂದೆಡೆ ಸೇರಿಸುವ ಹಬ್ಬವಾಗಿದೆ. ಬಹುತ್ವದ ಭಾರತದಲ್ಲಿ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ರಾಜಕೀಯ ಹಾಗೂ ಕೋಮು ಸಂಘಟನೆಗಳನ್ನು ದೂರವಿಟ್ಟು, ಹಿಂದೂ-ಮುಸ್ಲಿಮರು ಒಟ್ಟಾಗಿ ಸೇರಿ ಹಬ್ಬ ಆಚರಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರಬೇಕು” ಎಂದು ಹೇಳಿದರು.

ಗಣೇಶೋತ್ಸವದ ಅರ್ಥವೇ ವಿಘ್ನಗಳನ್ನು ದೂರ ಮಾಡುವುದು ಎಂದಾದರೆ, ಸಮಾಜದಲ್ಲಿರುವ ಕೋಮು ದ್ವೇಷ, ಅನುಮಾನ ಮತ್ತು ಅಸಹನೆಯಂತಹ ವಿಘ್ನಗಳನ್ನೂ ದೂರ ಮಾಡುವ ಸಂಕಲ್ಪ ಈ ಹಬ್ಬದಿಂದ ಮೂಡಬೇಕು.

ಗಣೇಶೋತ್ಸವ ಭಕ್ತಿ ಮತ್ತು ಸಂಭ್ರಮದ ಹಬ್ಬವಾಗಿದ್ದು, ಅದು ಸಮಾಜವನ್ನು ಒಗ್ಗೂಡಿಸುವ ಅವಕಾಶವಾಗಬೇಕು. ರಾಜಕೀಯ ಹಾಗೂ ಕೋಮು ಶಕ್ತಿಗಳನ್ನು ದೂರವಿಟ್ಟು, ಎಲ್ಲ ಧರ್ಮದ ಜನರು ಪರಸ್ಪರ ಗೌರವ ಮತ್ತು ಸಹೋದರತ್ವದಿಂದ ಹಬ್ಬ ಆಚರಿಸುವಂತಾಗಬೇಕು. ಹಬ್ಬದ ಹೆಸರಿನಲ್ಲಿ ದ್ವೇಷ, ಪ್ರಚೋದನೆ ಹಾಗೂ ಸಂಘರ್ಷಕ್ಕೆ ಅವಕಾಶ ನೀಡದೆ, ಶಾಂತಿ, ಸೌಹಾರ್ದತೆ ಮತ್ತು ಮಾನವೀಯತೆಯ ಸಂದೇಶವನ್ನು ಸಾರುವುದು ಎಲ್ಲರ ಜವಾಬ್ದಾರಿಯಾಗಿದೆ. ಗಣೇಶೋತ್ಸವ ಜನರನ್ನು ಒಡೆಯುವ ಹಬ್ಬವಾಗದೆ, ಮನಸ್ಸುಗಳನ್ನು ಬೆಸೆಯುವ ಹಬ್ಬವಾಗಬೇಕು.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನನಸಿನತ್ತ ಕರಾವಳಿ ಕನಸು: ಶೀಘ್ರದಲ್ಲೇ ರಾಜ್ಯದ 2ನೇ ಅಧಿಕೃತ ಭಾಷೆಯಾಗಲಿದೆ ತುಳು!

ಕರಾವಳಿ ಜನರ ಬಹುಕಾಲದ ಕನಸು ಮತ್ತು ಬೇಡಿಕೆಯಾದ ತುಳು ಭಾಷೆಗೆ ರಾಜ್ಯದ...

ಕೆಪಿಎಸ್‌ಸಿ ಮಾಜಿ ಅಧ್ಯಕ್ಷರ ಪುತ್ರಿಗೆ ನಕಲಿ ದಾಖಲೆ ನೀಡಿದ್ದ ಕಂದಾಯ ಅಧಿಕಾರಿಯ ಜಾಮೀನು ಅರ್ಜಿ ವಜಾ

ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷರ ಪುತ್ರಿಗೆ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ...

ನಕಲಿ ಹಕ್ಕುಪತ್ರ ತಡೆಗೆ ಕ್ರಮ; ಮಾಲೀಕರ ಫೋಟೋವುಳ್ಳ ‘RTC’ ಜಾರಿಗೆ ಸರ್ಕಾರ ನಿರ್ಧಾರ!

ರಾಜ್ಯದ ಭೂ ಮಾಲೀಕರು ಮತ್ತು ರೈತರಿಗೆ ಭೂಮಿಯ ಹಕ್ಕುಸ್ವಾಮ್ಯ ಮತ್ತು ಮಾಲೀಕತ್ವದ...

‘ನಾನೇ ಬುರುಡೆ ಒಡೆದಿದ್ದು’ ಎಂದಾತನಿಗೆ ಜಾಮೀನು; ಪುರಾವೆ ಇಲ್ಲದಿದ್ದರೂ ವರ್ಷಗಳಿಂದ ಜೈಲಿನಲ್ಲಿದ್ದಾರೆ ಹೋರಾಟಗಾರರು

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ...