ಬೀದರ್‌ | ಉನ್ನತ ಶಿಕ್ಷಣದಲ್ಲಿ ಸಂಶೋಧನಾತ್ಮಕ ಅಧ್ಯಯನ ಹೆಚ್ಚು ಅಗತ್ಯ : ಪರಮೇಶ್ವರ ನಾಯಕ

Date:

Advertisements

ಕಾಲೇಜು ಶಿಕ್ಷಣದಲ್ಲಿ ಸಂಶೋಧನಾತ್ಮಕ, ಸೃಜನಾತ್ಮಕ ಅಧ್ಯಯನಗಳಿಗೆ ಹೆಚ್ಚು ಮಹತ್ವವಿರಲಿ. ಸಂಶೋಧನಾತ್ಮಕ ಅಧ್ಯಯನಗಳಿಂದ ಸಮಾಜದ ಮತ್ತು ದೇಶದ ಪ್ರಗತಿ ಸಾಧ್ಯ ಎಂದು ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಪರಮೇಶ್ವರ ನಾಯಕ ಹೇಳಿದರು.

ಬಸವಕಲ್ಯಾಣ ನಗರದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಪದವಿ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ʼಉನ್ನತ ಶಿಕ್ಷಣದ ಸವಾಲು ಮತ್ತು ಸಾಧ್ಯತೆಗಳುʼ ಕುರಿತ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

“ಉನ್ನತ ಶಿಕ್ಷಣ ಎಲ್ಲರಿಗೂ ದಕ್ಕಲೆಂದು ಸರ್ಕಾರ ಹಲವು ವಿಶ್ವವಿದ್ಯಾಲಯಗಳು ಸ್ಥಾಪಿಸಿದೆ. ಸಕಾರಾತ್ಮಕ ಮನೋಭಾವದಿಂದ ಮನುಷ್ಯನಲ್ಲಿ ವಿಕಾಸವಾಗುತ್ತದೆ. ಧನಾತ್ಮಕ ಚಿಂತನೆಗಳಿದ್ದರೆ ಎಲ್ಲ ಸವಾಲುಗಳು ಮೆಟ್ಟಿ ನಿಲ್ಲಬಹುದು. ಉನ್ನತ ಶಿಕ್ಷಣದಲ್ಲಿ ಪಠ್ಯಕ್ರಮದ ಬೋಧನೆ, ವಿಮರ್ಶಾ ಮತ್ತು ಸಂಶೋಧನಾ ಕೇಂದ್ರಿತವಾಗಿರಲಿ. ಗುಣಮಟ್ಟದ ಬೋಧನೆ, ಪಾರದರ್ಶಕ ಪರೀಕ್ಷೆಗಳು. ಹೊಸ ದೃಷ್ಟಿ ಧೋರಣೆಯಿರುವ ಪಠ್ಯಕ್ರಮಗಳಿಂದ ವಿದ್ಯಾರ್ಥಿಗಳ ಬೆಳವಣಿಗೆ ಸಾಧ್ಯ” ಎಂದರು.

Advertisements

ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟಿ ಮಾತನಾಡಿ, “ವಿದ್ಯಾರ್ಥಿಗಳ ಸರ್ವೊತೋಮುಖ ಬೆಳವಣಿಗೆಗೆ ಉನ್ನತ ಶಿಕ್ಷಣ ಬಹುದೊಡ್ಡ ದಾರಿಯಾಗಿದೆ. ವಿಜ್ಞಾನ-ತಂತ್ರಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಹೊಸ ಚಿಂತನೆ ಮೂಡಿಸಲು ವಿಚಾರ ಸಂಕೀರಣ ಮತ್ತು ಕಮ್ಮಟಗಳು ನಡೆಸಲು ನಮ್ಮ ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಉನ್ನತ ಶಿಕ್ಷಣದ ಬೆಳವಣಿಗೆಗೆ ನಮ್ಮ ಸಂಸ್ಥೆ ಮತ್ತು ಆಡಳಿತ ಮಂಡಳಿ ನಿರಂತರವಾಗಿ ಶ್ರಮಿಸುತ್ತಿದೆ. ಬೀದರ ವಿಶ್ವವಿದ್ಯಾಲಯದ ನೆರವು ಮತ್ತು ಸಹಕಾರ ನೀಡಬೇಕಿದೆ” ಎಂದರು.

ಬಸವವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, “ಉದಾರಿಕರಣದ ಪ್ರಭಾವದಿಂದ ಶಿಕ್ಷಣ ವಲಯ ಖಾಸಗಿಕರಣಗೊಂಡಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಗುಣಮಟ್ಟದ ಸಂಶೋಧನೆಗಳಿಂದ ದೇಶದ ಆರ್ಥಿಕ, ವಾಣಿಜ್ಯ ಉದ್ಯಮ, ಕೃಷಿ, ವಿಜ್ಞಾನ, ವೈದ್ಯಲೋಕದಲ್ಲಿ ಹಲವು ಬದಲಾವಣೆ ಮತ್ತು ಬೆಳವಣಿಗೆಗಳು ಕಂಡಿವೆ. ಜ್ಞಾನ ಸೃಷ್ಠಿಸಿ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆ ಬಯಸುವ ಕ್ರಿಯಾಶೀಲ ಅಧ್ಯಾಪಕರಿಂದ ಉನ್ನತ ಶಿಕ್ಷಣಕ್ಕೆ ಹೊಸ ದಿಕ್ಕು ದೊರೆತಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಕಲ್ಯಾಣ ಕರ್ನಾಟಕದ 1,008 ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ

ಕಾರ್ಯಕ್ರಮದಲ್ಲಿ ಶ್ರೀನಿವಾಸ ಉಮಾಪುರೆ, ಅಶೋಕರೆಡ್ಡಿ ಗದಲೆಗಾಂವ, ಗುರುದೇವಿ ಕಿಚಡೆ, ನೀಲಮ್ಮ ಮೇತ್ರೆ, ಸಚಿನ ಬಿಡವೆ, ಪವನ ಪಾಟೀಲ, ಗಂಗಾಧರ ಸಾಲಿಮಠ, ರೋಶನ ಬಿ, ಸೌಮ್ಯಾ ಕರಿಗೌಡ, ಚನ್ನಬಸಪ್ಪ ಗೌರ, ಸಂಗೀತಾ ಮಹಾಗಾಂವೆ, ಜಗದೇವಿ ಜವಳಗೆ, ಪ್ರವೀಣ ಬಿರಾದಾರ, ಪ್ರಶಾಂತ ಬುಡಗೆ, ಗಣೇಶ ಮೇತ್ರೆ, ಎಂ.ಡಿ. ಜಬಿ, ಭಾಗ್ಯಶ್ರೀ ಶೀಲವಂತ, ಖದಿಜಾ ತಬಸ್ಸುಮ್, ಸುಧೀರ ಗೋದೆ, ಪ್ರಭಾಕರ ನವಗಿರೆ, ಶಶಿಧರ ಪಾಟೀಲ, ಬಸವರಾಜ ಗುಂಗೆ ಮುಂತಾದವರಿದ್ದರು. ಬಸವೇಶ್ವರ ಪಿಜಿ ಕಾಲೇಜು ಪ್ರಾಚಾರ್ಯ ಡಾ. ಶಾಂತಲಾ ಪಾಟೀಲ ಸ್ವಾಗತಿಸಿದರು. ಡಾ. ಬಸವರಾಜ ಖಂಡಾಳೆ ನಿರೂಪಿಸಿದರು. ವಿವೇಕಾನಂದ ಶಿಂಧೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X