ದರ್ಶನ್‌ನ ಸ್ತ್ರೀ ವಿರೋಧಿ, ಕೊಲ್ಲುವ ಮನಸ್ಥಿತಿಗೆ ಬಲಪಂಥೀಯ ಸಿದ್ದಾಂತ ಕಾರಣ! ಆತನ ಸೈದ್ದಾಂತಿಕ ಗುರು ಯಾರು ಗೊತ್ತೇ?

Date:

ದರ್ಶನ್‌ನ ನಟನಾ ಗುರು ಅಡ್ಡಂಡ ಕಾರ್ಯಪ್ಪ ದರ್ಶನ್‌ಗಿಂತಲೂ ಕೆಳಮಟ್ಟದ ಆಲೋಚನೆ ಹೊಂದಿರುವವರು. ದರ್ಶನ್ ಮತ್ತು ಅಡ್ಡಂಡ ಕಾರ್ಯಪ್ಪರನ್ನು ತೂಗಿದರೆ ಒಳ್ಳೆಯತನದಲ್ಲಿ ಗುರುವಿಗಿಂತ ದರ್ಶನ್ ಒಂದು ಹಿಡಿಯಷ್ಟಾದರೂ ಹೆಚ್ಚಿಗೆ ತೂಗುತ್ತಾರೆ. ಅಂತಹ ನೀಚಾತಿ ನೀಚ ರಂಗಕರ್ಮಿ ಯಾರಿಗಾದರೂ ಗುರುವಾದರೆ ದರ್ಶನ್‌ನಂತಹ ಶಿಷ್ಯರೇ ಹುಟ್ಟುತ್ತಾರೆ.

ಭಜರಂಗದಳದ ಜಿಲ್ಲಾ ಪ್ರಮುಖ್ ಮಟ್ಟದ ನಾಯಕ ರೇಣುಕಾಸ್ವಾಮಿಯನ್ನು ಕೊಂದ ನಟ ದರ್ಶನ್ ನಡವಳಿಕೆ ಈಗ ಎಲ್ಲೆಡೆ ಚರ್ಚೆ ಆಗ್ತಿದೆ. ರೇಣುಕಾಸ್ವಾಮಿಯ ಕೊಲೆಯೊಂದೇ ಚರ್ಚೆಯ ವಿಷಯವಲ್ಲದೇ, ಈ ಹಿಂದೆ ದರ್ಶನ್ ತನ್ನ ಪತ್ನಿ, ಜನಸಾಮಾನ್ಯರು, ಮಹಿಳೆಯರ ಬಗ್ಗೆ ನೀಡಿದ ಹೇಳಿಕೆ, ನಡವಳಿಕೆಗಳು ಈಗ ಚರ್ಚೆಗೆ ಒಳಪಡುತ್ತಿದೆ. ದರ್ಶನ್ ಯಾಕೆ ಹೀಗಾದರು? ಅವರ ಈ ಕ್ರೂರ ನಡವಳಿಕೆಗಳಿಗೆ ಕಾರಣರಾರು ಎಂಬ ಚರ್ಚೆ ನಡೆಯುತ್ತಿದೆ.

ದರ್ಶನ್ ತನ್ನ ಪತ್ನಿ ವಿಜಯಲಕ್ಷ್ಮಿಗೆ ಹೊಡೆದಾಗ “ನನ್ನ ಪತ್ನಿಗೆ ಹೊಡೆಯದೇ ಪಕ್ಕದ ಮನೆಯವನ ಪತ್ನಿಗೆ ಹೊಡೆಯೋಕೆ ಆಗುತ್ತಾ? ನಾನೇನು ನಿಮ್ಮ ಪತ್ನಿಗೆ ಹೊಡೆದಿದ್ನಾ?” ಎಂದು ಪ್ರಶ್ನಿಸಿದ್ದರು. ಸಾವಿರಾರು ಜನರಿದ್ದ ಸಭೆಯಲ್ಲಿ “ನನ್ನಂತಹ ಡ್ಯಾಶ್ ಡ್ಯಾಶ್ ಜನ ಇನ್ನೊಬ್ಬ ಇಲ್ಲ. ಗೊತ್ತಿರ್ಲಿ” ಅಂತ ದರ್ಶನ್ ಅಸಹ್ಯವಾಗಿ ಬೆದರಿಕೆ ಒಡ್ಡಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪವಿತ್ರಾ ಗೌಡ ಮತ್ತು ದರ್ಶನ್ ಬಗ್ಗೆ ವಿವಾದ ಎದ್ದಾಗ, “ಇವತ್ತೊಬ್ಳು ಬರ್ತಾಳೆ, ನಾಳೆ ಒಬ್ಳು ಎದ್ದು ಹೋಗ್ತಿರ್ತಾಳೆ. ಹೋಗಲೇ ನಿ*ಮ್ಮನ್… ಅದಕ್ಕೆಲ್ಲಾ ಯಾರು ತಲೆಕೆಡಿಸ್ಕೋತಾರೆ” ಎಂದು ಬಹಿರಂಗ ಸಭೆಯಲ್ಲಿ ಹೇಳಿ ಚಪ್ಪಾಳೆ ಶಿಳ್ಳೆ ಗಿಟ್ಟಿಸಿಕೊಂಡಿದ್ದರು.

ಇದೆಲ್ಲದರ ಮುಂದುವರೆದ ಬೆಳವಣಿಗೆಯೇ ಬ್ಯಾಡ್ ಕಮೆಂಟ್ ಮಾಡಿದ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ ತಾನೇ ಶೆಡ್‌ನಲ್ಲಿ ಅಕ್ರಮ ಬಂಧನದಲ್ಲಿ ಇರಿಸಿಕೊಂಡು, ಹೀನಾಯವಾಗಿ ಹಿಂಸಿಸಿ ಸಾವಿನ ‘ಶಿಕ್ಷೆ’ಯನ್ನು ದರ್ಶನ್ ನೀಡಿದರು. ಬಹುಶಃ ಪತ್ನಿಗೆ ಹೊಡೆದಿದ್ದನ್ನು ಸಮರ್ಥಿಸಿದ್ದ ದರ್ಶನ್, ಜೈಲಿನಿಂದ ಹೊರಬಂದು ಕೊಲೆಯನ್ನೂ ಸಮರ್ಥಿಸಬಹುದು.

ಒಬ್ಬ ರಂಗಕರ್ಮಿ ಎಂದರೆ ದಿನಕಳೆದಂತೆ ಸಾಮಾಜಿಕ ಚಿಂತಕನಾಗುತ್ತಾ ಹೋಗುತ್ತಾನೆ. ಆದರೆ ಈ ನಟ ದರ್ಶನ್ ಯಾಕೆ ಹೀಗಾದ ಎನ್ನುವುದಕ್ಕೆ ಉತ್ತರ ಸ್ಪಷ್ಟವಿದೆ. ಸಹಜವಾಗಿ ನಟರು, ರಂಗ ಕಲಾವಿದರು ಎಂದರೆ ಲಿಂಗಸೂಕ್ಷ್ಮತೆ, ಜಾತ್ಯತೀತತೆ ಮತ್ತು ವಿಶಾಲ ಮನೋಭಾವವನ್ನು ತಕ್ಕಮಟ್ಟಿಗಾದರೂ ಹೊಂದಿರುತ್ತಾರೆ. ಆದರೆ ದುರದೃಷ್ಟವಶಾತ್ ದರ್ಶನ್ ಇಂತಹ ಮನೋಭಾವ ಬೆಳೆಸುವ ಗುರು, ರಂಗಶಾಲೆಯಿಂದ ವಂಚಿತರಾದರು.‌ ಬದಲಾಗಿ ಸ್ತ್ರೀ ವಿರೋಧಿ, ಸಮಾನತೆಯ ವಿರೋಧಿ ಅಡ್ಡಂಡ ಕಾರ್ಯಪ್ಪನೆಂಬ ಮನುವಾದಿ ಗುರು ದರ್ಶನ್‌ ಗೆ ಸಿಕ್ಕರು. ದರ್ಶನ್‌ಗೆ ಮೊದಲು ಬಣ್ಣ ಹಚ್ಚಿದ್ದು, ನಟನೆ ಕಲಿಸಿದ್ದೇ ಈ ಅಡ್ಡಂಡ ಕಾರ್ಯಪ್ಪ. ಆದ್ದರಿಂದಲೇ ದರ್ಶನ್ ಉಳಿದ ನಟರಂತೆ ಲಿಂಗಸೂಕ್ಷ್ಮತೆ, ಜಾತ್ಯತೀತತೆ, ವಿಶಾಲ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯವಾಗಲಿಲ್ಲ.

ದರ್ಶನ್ ಗುರು ಅಡ್ಡಂಡ ಕಾರ್ಯಪ್ಪ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಂಗಾಯಣದ ಅಧ್ಯಕ್ಷರಾಗಿದ್ದರು. ಟಿಪ್ಪು ನಿಜಕನಸುಗಳು ಎಂಬ ಟಿಪ್ಪು ವಿರೋಧಿ, ಮುಸ್ಲಿಂ ವಿರೋಧಿ ನಾಟಕ ಪ್ರದರ್ಶಿಸಿ ಸಮಾಜವನ್ನು ಹಿಂದೂ ಮುಸ್ಲಿಂ ಎಂದು ಒಡೆದವರು. ರಾಜ್ಯದ ಪ್ರತಿಷ್ಠಿತ ರಂಗಾಯಣದ ಅಧ್ಯಕ್ಷರಾಗಿದ್ದಷ್ಟೂ ದಿನ ಸಮಾನತೆಯ ವಿರೋಧಿಯಾಗಿ ಕೆಲಸ ಮಾಡಿದವರು.

ದರ್ಶನ್‌ನ ನಟನಾ ಗುರು ಅಡ್ಡಂಡ ಕಾರ್ಯಪ್ಪ ದರ್ಶನ್‌ಗಿಂತಲೂ ಕೆಳಮಟ್ಟದ ಆಲೋಚನೆ ಹೊಂದಿರುವವರು. ದರ್ಶನ್ ಮತ್ತು ಅಡ್ಡಂಡ ಕಾರ್ಯಪ್ಪರನ್ನು ತೂಗಿದರೆ ಒಳ್ಳೆಯತನದಲ್ಲಿ ಗುರುವಿಗಿಂತ ದರ್ಶನ್ ಒಂದು ಹಿಡಿಯಷ್ಟಾದರೂ ಹೆಚ್ಚಿಗೆ ತೂಗುತ್ತಾರೆ. ಅಂತಹ ನೀಚಾತಿ ನೀಚ ರಂಗಕರ್ಮಿ ಯಾರಿಗಾದರೂ ಗುರುವಾದರೆ ದರ್ಶನ್‌ನಂತಹ ಶಿಷ್ಯರೇ ಹುಟ್ಟುತ್ತಾರೆ.

ತಮ್ಮ ಶಿಷ್ಯ ದರ್ಶನ್ ಪ್ರಕರಣದ ಬಗ್ಗೆ ಏನ್ ಹೇಳ್ತೀರಿ ಎಂದು ಮಾಧ್ಯಮದವರು ಅಡ್ಡಂಡ ಕಾರ್ಯಪ್ಪನವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಅಡ್ಡಂಡ ಕಾರ್ಯಪ್ಪ ಕೊಟ್ಟ ಉತ್ತರ ಕೇಳಿದರೆ ಅದಕ್ಕಿಂತ ದರ್ಶನ್ ಕೈಲಿ ಒದೆ ತಿಂದು ಸಾಯೋದೇ ಮೇಲು ಅನ್ನಿಸದೇ ಇರದು.

“ಹೆಣ್ಣು ಮತ್ತು ಹೆಂಡದ ನಶೆ ದರ್ಶನ್‌ಗೆ ಈ ಸ್ಥಿತಿ ತಂದಿಟ್ಟಿದೆ. ಪವಿತ್ರಾಗೌಡ ಆತನ ಪಾಲಿಗೆ ಶನಿ ಆಗಿದ್ದಾಳೆ. ಅವನ ನಡವಳಿಕೆಗಳು ತೀರಾ ಕೆಟ್ಟಿದ್ದವು. ಹೆಂಡ ಮತ್ತು ಹೆಣ್ಣು ಅವನನ್ನು ಪ್ರಪಾತಕ್ಕೆ ತಳ್ಳಿದೆ. ಹೆಂಡ ಮತ್ತು ಹೆಣ್ಣು ಎರಡೂ ಕೂಡ ಒಬ್ಬ ಮನುಷ್ಯನನ್ನು ಹಾಳು ಮಾಡುತ್ತದೆ. ಅದೇ ರೀತಿ ಇದೇ ಅವನನ್ನು ಹಾಳು ಮಾಡಿದೆ. ತನ್ನ ತಪ್ಪನ್ನು ಅವನು ಒಪ್ಪಿಕೊಳ್ಳಬೇಕು” ಎಂದು ದರ್ಶನ್ ಗೆ ನಟನೆ ಕಲಿಸಿದ ಮೊದಲ ಗುರು ಅಡ್ಡಂಡ ಕಾರ್ಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಅಡ್ಡಂಡ ಕಾರ್ಯಪ್ಪ ಎಂಬ ಬಲಪಂಥೀಯ ಬುದ್ದಿಜೀವಿಗೆ ಹೆಣ್ಣು ಮತ್ತು ಹೆಂಡ ಎರಡೂ ಒಂದೇ. ಎರಡರ ಸಹವಾಸವೂ ಪ್ರಪಾತಕ್ಕೆ ತಳ್ಳುತ್ತದೆಯಂತೆ. ಅಡ್ಡಂಡ 2024ನೇ ಇಸವಿಯಲ್ಲಿ ಬದುಕುತ್ತಿದ್ದರೂ ಇನ್ನೂ ಸ್ತ್ರೀ ಸಮಾನತೆಯ ಮನಸ್ಥಿತಿಯೇ ಬಂದಿಲ್ಲ ಎಂದರೆ ಅದೆಂತಹ ಗುರು ದರ್ಶನ್ ಸಿಕ್ಕಿದರು. ಇಂತಹ ಗುರುವಿನ ಶಿಷ್ಯರು ಪತ್ನಿಗೆ ಹೊಡೆದು ಸಮರ್ಥಿಸದೇ ಇನ್ನೇನು ಮಾಡ್ತಾರೆ?

ಪವಿತ್ರಾ ಗೌಡ ಮತ್ತು ದರ್ಶನ್ ಸಂಬಂಧ ಮೂರನೆಯವರಿಗೆ ಸಂಬಂಧಿಸಿದ ವಿಷಯವಲ್ಲ. ಆದರೆ ಪವಿತ್ರಾ ಗೌಡ ದರ್ಶನ್ ಪಾಲಿನ ಶನಿ ಎನ್ನುವುದು ಅಡ್ಡಂಡ ಕಾರ್ಯಪ್ಪನ ಸ್ತ್ರೀ ವಿರೋಧಿ ನೀಚ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ರಾಮಾಯಣ, ಮಹಾಭಾರತದಿಂದ ಹಿಡಿದು ದರ್ಶನ್ ವರೆಗೆ ಅವಾಂತರಗಳಿಗೆಲ್ಲಾ ಮಹಿಳೆಯೇ ಕಾರಣ ಎಂಬ ಮನುವಾದಿ ಮನಸ್ಥಿತಿಯೇ ಅಡ್ಡಂಡ ಕಾರ್ಯಪ್ಪನಿಂದ ಈ ಹೇಳಿಕೆ ಕೊಡಿಸಿದೆ. ಇಂತಹ ಗುರುವಿಗೆ ತಕ್ಕದಾದ ಶಿಷ್ಯ ದರ್ಶನ್ ರೂಪುಗೊಂಡಿದ್ದಾರೆ.

ಸ್ತ್ರೀ ವಿರೋಧಿ, ಕೊಲೆಯ ಮನಸ್ಥಿತಿ ದರ್ಶನ್ ಬಂದಿರುವುದೇ ಇಂತಹ ಗುರುಗಳಿಂದ! ಬಲಪಂಥೀಯ ಮನುವಾದಿ ಸಿದ್ದಾಂತವೇ ಸ್ತ್ರೀ ವಿರೋಧಿಯಾಗಿರುವಂಥದ್ದು. ಆದ್ದರಿಂದಲೇ ರೇಣುಕಾಸ್ವಾಮಿ ಎಂಬ ಭಜರಂಗದಳದ ನಾಯಕ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಫೋಟೋ ಮತ್ತು ಕಮೆಂಟ್ ಮಾಡುತ್ತಾರೆ ! ಒಂದು ಕಡೆ ತನ್ನ ಮಿದುಳು ತುಂಬಿರೋ ಸ್ತ್ರೀ ವಿರೋಧಿ ಗುರು ಅಡ್ಡಂಡ, ಇನ್ನೊಂದೆಡೆ ಸ್ತ್ರೀ ವಿರೋಧಿ ರೇಣುಕಾಸ್ವಾಮಿಯಂತವರ ಮಧ್ಯೆ ದರ್ಶನ್ ಎಂಬ ನಟ ಸ್ತ್ರೀಯರ ವಿಚಾರದಲ್ಲಿ ಕ್ರೂರಿಯೂ ಹಂತಕನೂ ಆಗಿ ರೂಪುಗೊಂಡ.

ಇದನ್ನು ಓದಿದ್ದೀರಾ? ನೀಟ್ ಬದಲು ರಾಜ್ಯಗಳೇ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಅವಕಾಶ ನೀಡಲಿ: ಡಿ ಕೆ ಶಿವಕುಮಾರ್

ಹಾಗಾಗಿ, ದರ್ಶನ್ ಅವನತಿಗೆ ಅವರ ಅಭಿಮಾನಿಗಳೋ, ಪವಿತ್ರಾ ಗೌಡರೋ ಕಾರಣರಲ್ಲ. ಬದಲಾಗಿ‌ ಅಡ್ಡಂಡ ಕಾರ್ಯಪ್ಪರಂತಹ ಮನುವಾದಿ ರಂಗ ಗುರುಗಳೇ ದರ್ಶನ್‌ನ ಇಂದಿನ ಈ ಸ್ಥಿತಿಗೆ ಕಾರಣ.

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

1 COMMENT

  1. ಸಂಪೂರ್ಣ ಸತ್ಯವಲ್ಲ. ನೀನಾಸಂ ರಂಗಶಾಲೆಯಿಂದ ಅಕಾಲಿಕವಾಗಿ ಹೊರಬಂದ ದರ್ಶನ್ ನಟನೆ ಕಲಿಯಲು ಹೋಗಿ ಸೇರಿದ್ದು ಅಡ್ಡಂಡ ಕಾರ್ಯಪ್ಪ ಕುಶಾಲನಗರದಲ್ಲಿ ಆಯೋಜಿಸಿದ್ದ ರಂಗ ತರಬೇತಿ ಕಾರ್ಯಾಗಾರಕ್ಕೆ. ಆ ರಂಗಶಿಬಿರದ ನಿರ್ದೇಶಕರಾಗಿದ್ದವರು ಮಂಡ್ಯ ರಮೇಶರವರು. ಹೀಗಾಗಿ ದರ್ಶನ್ ಗೆ ಆರಂಭಿಕ ಹಂತದಲ್ಲಿ ನಟನೆ ಹೇಳಿಕೊಟ್ಟವರು ಮಂಡ್ಯ ರಮೇಶರವರೇ ಹೊರತು ಅಡ್ಡಂಡ ಕಾರ್ಯಪ್ಪನವರಲ್ಲ. ಮಂಡ್ಯ ರಮೇಶರವರು ಎಂದೂ ಸ್ತ್ರೀವಿರೋಧಿ ನಿಲುವನ್ನು ಹೊಂದಿದವರೂ ಅಲ್ಲಾ, ದರ್ಶನ್ ಹಾಗೆ ದುರಹಂಕಾರವನ್ಜು ರೂಢಿಸಿಕೊಂಡವರೂ ಅಲ್ಲಾ. ಅರ್ಹತೆಗಿಂತಲೂ ಅತಿಯಾದ ಹಣ, ಯೋಗ್ಯತೆಗಿಂತಲೂ ಹೆಚ್ಚಾದ ಜನಪ್ರೀಯತೆಗಳೇ ನಟ ದರ್ಶನ್ ರವರ ಇಂದಿನ ದುರಂತ ಸುಸ್ಥಿತಿಗೆ ಕಾರಣ..

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿ ಬಿಜೆಪಿಯಲ್ಲಿ ಯೋಗಿ-ಮೌರ್ಯ ನಡುವೆ ಗುದ್ದಾಟ; ಮೋದಿ-ಶಾ ಚರ್ಚೆ

ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ತೀರಾ ಕಳಪೆ ಪ್ರದರ್ಶನ ನೀಡಿದೆ....

ಕನ್ನಡಿಗರಿಗೆ ಉದ್ಯೋಗ | ‘ಅಸ್ತು’ ಎಂದು ಹೆಜ್ಜೆ ಇಟ್ಟ ಸರ್ಕಾರ ದಿನ ಕಳೆಯುವುದರೊಳಗೇ ‘ಸುಸ್ತು’: ವಿಜಯೇಂದ್ರ ವ್ಯಂಗ್ಯ

ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ತಂದದ್ಯಾಕೆ? ತಡೆಹಿಡಿದಿದ್ದೇಕೆ? ಕನ್ನಡಿಗರ ಬದುಕಿನೊಂದಿಗೆ ಚೆಲ್ಲಾಟವೇಕೆ?...

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆಗೆ ತಡೆ; ಯೂ-ಟರ್ನ್‌ ಸರ್ಕಾರ ಎಂದ ಬಿಜೆಪಿ

ಖಾಸಗಿ ವಲಯದ ಕಂಪನಿಗಳು, ಸಂಸ್ಥೆಗಳಲ್ಲಿ ಕನ್ನಡಿಗರಿಗೆ 75% ಮೀಸಲಾತಿ ಒದಗಿಸುವ ಮಸೂದೆಯನ್ನು...

‘ಬಡವರ ವಿರುದ್ಧ ಬುಲ್ಡೋಜರ್ ಹರಿಸಿದ್ದೇ ಬಿಜೆಪಿಗೆ ಮುಳುವಾಯಿತು’; ಬಿಜೆಪಿ ಮಿತ್ರ ಪಕ್ಷದ ಟೀಕೆ

ಬಡವರ ವಿರುದ್ಧ ಬುಲ್ಡೋಜರ್ ಹರಿಸಿದ್ದೇ ಬಿಜೆಪಿಗೆ ಮುಳುವಾಯಿತು ಎಂದು ಉತ್ತರಪ್ರದೇಶದ ಯೋಗಿ...