ಕಲಬುರಗಿ | ಸಾವಿತ್ರಿ ಬಾಯಿ ಫುಲೆ ಜನ್ಮದಿನ ಆಚರಣೆ

Date:

Advertisements

ಸಮಾಜದಲ್ಲಿ ನೋವುಗಳಿಗೆ ಸ್ಪಂದಿಸಿ. ಅವುಗಳ ನಿವಾರಣೆಗೆ ಅನೇಕ ಮಹಾನ್ ವ್ಯಕ್ತಿಗಳು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಸುಮಾರು 150 ವರ್ಷಗಳ ಹಿಂದೆ ಮಹಿಳೆಯರನ್ನು ತೀವ್ರ ಸಂಕಷ್ಟದಲ್ಲಿ ಮುಳುಗಿಸಿದ್ದ ಕಾಲದಲ್ಲಿ, ಅವುಗಳ ವಿರುದ್ಧ ಧ್ವನಿ ಎತ್ತಿ ಮಹಿಳೆಯರ ಶಿಕ್ಷಣಕ್ಕಾಗಿ, ಉನ್ನತ ಸ್ಥಾನಮಾನಗಳಿಗಾಗಿ ಹೋರಾಡಿದ ಚೇತನ ಸಾವಿತ್ರಿಬಾಯಿ ಫುಲೆ ಎಂದು ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಸ್ನೇಹಾ ಕಟ್ಟಿಮನಿ ಹೇಳಿದ್ದಾರೆ.

ಕಲಬುರಗಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ಜ ಕಾಲೇಜಿನಲ್ಲಿ ಎಐಡಿಎಸ್‌ಒ ಆಯೋಜಿಸಿದ್ದ ‘ಸಾವಿತ್ರಿ ಬಾಯಿ ಫುಲೆ’ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “19ನೇ ಶತಮಾನದಲ್ಲಿ ಸಣ್ಣ ವಯಸ್ಸಿನಲ್ಲೇ ಹೆಣ್ಣು ಮಕ್ಕಳಿಗೆ ವಯಸ್ಸಾದವರ ಜೊತೆ ಮದುವೆ ಮಾಡುತ್ತಿದ್ದರು. ಗಂಡ ಸತ್ತರೆ ತಲೆ ಬೋಳಿಸುವುದು ಮತ್ತು ಗಂಡನ ದೇಹದ ಜೊತೆನೆ ಚಿತೆಯನ್ನೆರಿಸಿ ಜೀವಂತವಾಗಿ ಸುಡುತ್ತಿದ್ದರು. ಇಂತಹ ಕೆಟ್ಟ ಪರಿಸ್ಥಿತಿಯ ವಿರುದ್ಧ ಸಾವಿತ್ರಿ ಬಾಯಿ ಫುಲೆ ಹೋರಾಟ ಕಟ್ಟಿದರು. ಸಮಾಜದ ವಿರೋಧ, ಅವಮಾನ, ಹಿಂಸೆಗಳ ನಡುವೆಯೂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಅವರು ತಮ್ಮ ಜೀವನದುದ್ದಕ್ಕೂ ಹೋರಾಡಿದರು” ಎಂದು ತಿಳಿಸಿದರು.

“ಮಹಿಳೆಯರಿಗಾಗಿ ಸಾವಿತ್ರಿ ಬಾಯಿ ಫುಲೆ ಹೋರಾಟ ಮಾಡಿದರು. ಹಲವಾರು ಹಕ್ಕುಗಳನ್ನು ತಂದುಕೊಟ್ಟರು. ಆದರೆ, ಇಂದಿನ ಪರಿಸ್ಥಿತಿ ಮತ್ತೆ ಶೋಚನೀಯವಾಗುತ್ತಿದೆ. ಇಂದು ಮಹಿಳೆಯರ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. 06 ತಿಂಗಳ ಮಕ್ಕಳಿಂದ ವಯಸ್ಸಾದ ಅಜ್ಜಿಯವರೆಗೂ ಮಹಿಳೆಯರ ಮೇಲೆ ಪ್ರತಿದಿನ ಅತ್ಯಾಚಾರ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅಶ್ಲೀಲ ಸಿನಿಮಾ ಸಾಹಿತ್ಯಗಳನ್ನು ಇಂದು ಅಡೆತಡೆ ಇಲ್ಲದೆ ಹರಿಬಿಡಲಾಗುತ್ತಿದೆ. ಮಹಿಳೆಯರು, ವಿದ್ಯಾರ್ಥಿನಿಯರು ಇಂತಹ ದುಸ್ಥಿತಿಯ ವಿರುದ್ಧ ಒಗ್ಗಟ್ಟಾಗಿ, ಘನತೆ ಗೌರವದ ಬದುಕಿಗಾಗಿ ಹೋರಾಡಬೇಕು” ಎಂದು ಹೇಳಿದರು.

Advertisements

ಕಾರ್ಯಕ್ರಮದಲ್ಲಿ ತುಳಜರಾಮ ಎನ್.ಕೆ. ಸೇರಿದಂತೆ ಹಲವರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

Download Eedina App Android / iOS

X