ಖಬರಸ್ಥಾನಕ್ಕಾಗಿ ಜಮೀನು ನೀಡಬೇಕು ಎಂದು ಆಗ್ರಹಿಸಿ ಚೋರಡಿಯ ಜಾಮೀಯಾ ಮಸ್ಟಿದ್ ಕಮಿಟಿಯ ಮುಖಂಡರು ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮದಲ್ಲಿ 150ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳಿವೆ. ಆದರೆ ಮುಸ್ಲಿಮರು ಮರಣ ಹೊಂದಿರೆ ಅವರ ಅಂತ್ಯ ಸಂಸ್ಕಾರ ಮಾಡಲು ಜಾಗವೇ ಇಲ್ಲವಾಗಿದೆ. ಇದುವರೆಗೂ ಕುಮದ್ವತಿ ನದಿಯ ದಡದಲ್ಲಿಯೇ ದಫನ ಮಾಡಿಕೊಂಡು ಬರುತ್ತಿದ್ದರು. ಆದರೆ ಇದಕ್ಕೆ ಯಾವುದೇ ದಾಖಲಾತಿ ಇಲ್ಲ ಮತ್ತು ಅತಿವೃಷ್ಟಿಯಯಿಂದಾಗಿ ಗೋರಿ ಸಮೇತ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿವೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಈ ಬಗ್ಗೆ ಕಳೆದ 25 ವರ್ಷಗಳಿಂದಲೂ ಬೇಡಿಕೆ ಇಡುತ್ತಾ ಬಂದಿದ್ದೆವು.ಆದರೂ ಕೂಡ ಸರ್ಕಾರವಾಗಲೀ, ಅಧಿಕಾರಿಗಳಾಗಲೀ ಸ್ಮಶಾನಕ್ಕೆ ಜಾಗ ನೀಡಿಲ್ಲ. ಆದ್ದರಿಂದ ಈಗಲಾದರೂ ಖಬರಸ್ಥಾನಕ್ಕೆ ಜಾಗ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ಚೋರಡಿ ಜಾಮೀಯಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್, ಪ್ರಮುಖರಾದ ಅನ್ವರ್, ಅಥಾವುಲ್ಲಾ, ಸನಾವುಲ್ಲಾ, ಬಾಷಾ, ನಯಾಬ್. ಕಲೀಮುಲ್ಲಾ, ರಿಜ್ವಾನ್, ನಜೀರ್ ಅಹಮ್ಮದ್, ಮೊಹಮ್ಮದ್, ಮುದಾಸಿರ್, ಸಮೀವುಲ್ಲಾ, ಖಾಸೀಂ ಸೇರಿದಂತೆ ಇನ್ನಿತರರಿದ್ದರು.
