ಶಿವಮೊಗ್ಗ | ಶಾಸಕ ಚೆನ್ನಿ, ನೀವೆಷ್ಟು ಗೋಶಾಲೆಗಳಿಗೆ ಅನುದಾನ ನೀಡಿದ್ದೀರೆಂದು ಗಂಡಸ್ತನದಿಂದ ಹೇಳಿ: ಎಚ್‌ ಸಿ ಯೋಗೇಶ್

Date:

Advertisements

ಶಿವಮೊಗ್ಗ ಶಾಸಕ ಚನ್ನಬಸಪ್ಪನವರ ಹೇಳಿಕೆ ಗಮನಿಸಿದ್ದೇನೆ. ಯಾರೇ ಈ ಕೃತ್ಯ ಮಾಡಿದರೂ ಅಮಾನವೀಯ, ಖಂಡನೀಯ. ಹಸುವು ಗೋಮಾತೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಶಾಸಕ ಚೆನ್ನಿಯವರೆ ನೀವೆಷ್ಟು ಗೋಶಾಲೆಗಳಿಗೆ ಅನುದಾನ ಕೊಟ್ಟಿದ್ದೀರೆಂದು ಗಂಡಸ್ತನದಿಂದ ಹೇಳಿ ಎಂದು ಎಚ್‌ ಸಿ ಯೋಗೇಶ್ ಸವಾಲು ಹಾಕಿದರು.

ಶಿವಮೊಗ್ಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಚಾಮರಾಜಪೇಟೆ ಪ್ರಕರಣದ ಕುರಿತು ಶಾಸಕ ಚನ್ನಬಸಪ್ಪನವರ ಹೇಳಿಕೆಗೆ ತಿರುಗೇಟು ನೀಡಿ ಮಾತಾಡಿದರು.

“ಪಶು ಇಲಾಖೆಯಿಂದ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಸರ್ಕಾರದಿಂದ 30 ಅಂಶದ ಕಾರ್ಯಕ್ರಮಗಳೂ ನಡೆಯುತ್ತಿವೆ. ಶಾಸಕ ಚೆನ್ನಿಯವರೇ, ಪಶು ಇಲಾಖೆಯ ರಿವ್ಯೂ ಮೀಟಿಂಗ್ ಎಷ್ಟು ಮಾಡಿದ್ದೀರಿ?. ಇದನ್ನು ನೀವು ಹೇಳಲೇಬೇಕು” ಎಂದು ತಾಕೀತು ಮಾಡಿದರು.

Advertisements

“ಶಿವಮೊಗ್ಗ ಪಾಲಿಕೆಯಿಂದ ಗೋಶಾಲೆಗೆ ₹50 ಲಕ್ಷ ಅನುದಾನ ಇಟ್ಟಿದ್ದು ನೆನಪಿಲ್ಲವೇ? ಶಾಂತಿನಗರದಲ್ಲಿ ಗುದ್ದಲಿಪೂಜೆ ಮಾಡಿದ್ದೀರಿ. ಗೋಶಾಲೆ ಆಗಿದೆಯಾ? ಪ್ರಪ್ರಥಮ ಗೋಶಾಲೆಗೆ ಜಾಗಕೊಟ್ಟಿದ್ದು, ಕಾಂಗ್ರೆಸ್‌ ಶಾಸಕ ಎಚ್‌ಎಂಸಿ, ಮತ್ತು ಕೆ ಬಿ ಪ್ರಸನ್ನ ಕುಮಾ‌ರ್ ಅನುದಾನ ನೀಡಿದ್ದಾರೆ” ಎಂದರು.

“ಈಶ್ವರಪ್ಪ, ಚೆನ್ನಿ ಎಷ್ಟು ಗೋಶಾಲೆಗಳಿಗೆ ಅವಕಾಶ ಕೊಟ್ಟಿದ್ದೀರಿ? ಹೊಸನಗರದ ಸರ್ಕಾರಿ ಗೋಶಾಲೆ ಮುಚ್ಚಿದೆ. ಈ ಶಾಲೆ ನಿರ್ಮಾಣವಾಗಿದ್ದು ಬಿಜೆಪಿ ಶಾಸಕ ಹರತಾಳು ಹಾಲಪ್ಪ ಕಾಲದಲ್ಲಿ. ಆದರೂ ಯಾಕೆ ಮುಚ್ಚಿದೆ? ಹಸುವಿನ ಹೆಸರಲ್ಲಿ ಮತ ಎತ್ತೋದಷ್ಟೇನಾ?” ಎಂದು ಕಿಡಿಕಾರಿದರು.

“ಸರ್ಕಾರದ ವಿರುದ್ಧ ಮಾತನಾಡುತ್ತ ಕೆಟ್ಟದಾಗಿ ಮಾತನಾಡಿದ್ದಾರೆ ಶಾಸಕ ಚೆನ್ನಿ. 2 ಕೋಟಿ ಉದ್ಯೋಗ, ಜನಸಾಮಾನ್ಯರ ಖಾತೆಗೆ ₹15 ಲಕ್ಷ ಸೇರಿದಂತೆ ಹಲವು ಭರವಸೆ ಕೊಟ್ಟು ನಿಭಾಯಿಸದ ನಿಮ್ಮ ಪ್ರಧಾನಿ ಅಥವಾ ಬಿಜೆಪಿಗರು ಗಂಡಸರೇ? ಎಂದು ಪ್ರಶ್ನಿಸಿದ್ದಾರೆ.

YOGESH CONG 1

“ಆಕಳ ಕೆಚ್ಚಲು ಪ್ರಕರಣದ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ಆತ ಹುಚ್ಚನೇ ಇರಲಿ, ಸಾಯುವವರೆಗೆ ಜೈಲಲ್ಲಿ ಹಾಕಿ” ಎಂದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಸಾರ್ವಜನಿಕರಿಗೆ ಬೆದರಿಕೆ; ಮೂವರ ವಿರುದ್ಧ ಎಫ್‌ಐಆರ್ ದಾಖಲು

“ಇ-ಸ್ವತ್ತು ವಿಚಾರವಾಗಿ ಪ್ರತಿದಿನ ಪರಿಶೀಲನೆ ಮಾಡಿ. ಎಲ್ಲದಕ್ಕೂ ಇ-ಸ್ವತ್ತು ಅನಿವಾರ್ಯವಾಗಿದೆ. ಸಮಸ್ಯೆ ಕುರಿತು ಸಚಿವರ ಗಮನಕ್ಕೂ ತಂದಿದ್ದೇನೆ. ಆರೋಪಿತ ಅಧಿಕಾರಿಗಳನ್ನು ಬದಲಾಯಿಸಲಾಗಿದೆ. ಕಾರ್ಪೊರೇಷನ್‌ ಇನ್ನೂ ದೊಡ್ಡದಾಗಲಿದೆ. ಕಾರ್ಪೊರೇಷನ್ ನಿರ್ಮಾಣವಾಗಿದ್ದೇ ಕಾಂಗ್ರೆಸ್‌ ಕಾಲದಲ್ಲಿ” ಎಂದು ತಿಳಿಸಿದರು.

ಶಿವಕುಮಾ‌ರ್, ವಿಶ್ವನಾಥ ಕಾಶಿ, ವಿಜಯಲಕ್ಷ್ಮಿ ಪಾಟೀಲ್‌, ಮಧುಸೂದನ್ ಬಾಲಾಜಿ, ಎಸ್ ಪಿ ಶೇಷಾದ್ರಿ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

Download Eedina App Android / iOS

X