ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಕಿವಿಮಾತು

Date:

Advertisements
ನಾಳೆ(ಮೇ.8) ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ  ಫಲಿತಾಂಶದ ಬಗ್ಗೆ ಆತಂಕ, ಮುಂದೇನು? ಎಂಬ ಚಿಂತೆ, ಗೊಂದಲಗಳಿರುವುದು ಸಹಜ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಕೆಲವು ಕಿವಿಮಾತು

ನಾಳೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಫಲಿತಾಂಶದ ಬಗ್ಗೆ ಆತಂಕ, ಮುಂದೇನು? ಎಂಬ ಚಿಂತೆ, ಗೊಂದಲಗಳಿರುವುದು ಸಹಜ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಕೆಲವು ಕಿವಿಮಾತುಗಳನ್ನು ಮುಂದೆ ನೀಡಲಾಗಿದೆ.

ಫಲಿತಾಂಶ ಏನೇ ಬರಲಿ. ಅದನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಆತ್ಮಸ್ಥೈರ್ಯದಿಂದ ಸ್ವೀಕರಿಸಿ ಮುಂದಿನ ಕಲಿಕೆ ಮತ್ತು ವೃತ್ತಿ ಜೀವನಕ್ಕೊಂದು ದಾರಿಯನ್ನು ಕಂಡುಕೊಳ್ಳುವಂತಾಗಲಿ ಎಂಬುದು ಈ ಬರಹದ ಆಶಯ.

ವಿದ್ಯಾರ್ಥಿಗಳಿಗೆ ಕಿವಿಮಾತು
ಮೊದಲನೆಯದಾಗಿ ಪರೀಕ್ಷೆ ಬರೆದಿರುವ ಎಲ್ಲ ಮಕ್ಕಳಿಗೂ ಶುಭಾಶಯಗಳು. ಇದು ನಿಮ್ಮ ವಿದ್ಯಾರ್ಥಿ ಬದುಕಿನ ಮೊದಲ ಅಥವಾ ಕೊನೆಯ ಪರೀಕ್ಷೆಯಲ್ಲ. ಎಲ್‌ಕೆಜಿ ಅಥವಾ ಒಂದನೇ ತರಗತಿಯಿಂದ ಅನೇಕ ಪರೀಕ್ಷೆಗಳನ್ನು ಬರೆದು ಪಾಸಾಗಿ ಈ ಹಂತವನ್ನು ತಲುಪಿದ್ದೀರಿ.

Advertisements

ನಿರೀಕ್ಷಿತ‌ ಫಲಿತಾಂಶ ಬರಲಿ ಅಥವಾ ಬಾರದಿರಲಿ, ಎದೆಗುಂದಬೇಡಿ. ಪಾಸಾಗಲಿ ಅಥವಾ ಫೇಲಾಗಲಿ. ಫಲಿತಾಂಶವನ್ನು ಧೈರ್ಯವಾಗಿ ಸ್ವೀಕರಿಸಿ. ಶಾಲೆಯ‌ ಪರೀಕ್ಷೆಗಳಿಗಿಂತ ಬದುಕಿನ ಪರೀಕ್ಷೆಯಲ್ಲಿ ಪಾಸಾಗೋದು ಮುಖ್ಯ ಎಂಬುದು ತಿಳಿದಿರಲಿ.

ನಿಮಗೆ ಒತ್ತಡಗಳಿರಬಹುದು, ಪರವಾಗಿಲ್ಲ. ಅದನ್ನು ಜಾಣತನದಿಂದ ಎದುರಿಸಿ. ಮೂರ್ಖರಂತೆ ಎಂದೂ ತಪ್ಪು ತೀರ್ಮಾನ ಕೈಗೊಳ್ಳಬೇಡಿ, ಅಡ್ಡದಾರಿ ಹಿಡಿಯಬೇಡಿ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಬುದ್ಧಿವಂತರಾಗಿ.

ನಿಮಗಿಂತ ಕಡಿಮೆ ಕಲಿತು ಅಥವಾ ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾಗಿ ಸಾಧನೆ ಮತ್ತು ದುಡ್ಡು ಸಂಪಾದನೆ ಮಾಡಿರುವ ಅನೇಕ ಜನರು ನಿಮ್ಮ ಸುತ್ತಮುತ್ತ ಇದ್ದಾರೆ. ನಿಮ್ಮಲ್ಲೂ ಪ್ರತಿಭೆ, ಕೌಶಲ್ಯಗಳಿವೆ. ಆತ್ಮವಿಶ್ವಾಸವೊಂದಿದ್ದರೆ, ನೀವೂ ಎತ್ತರಕ್ಕೆ ಬೆಳೆಯಬಹುದು, ನೆನಪಿರಲಿ.

ನಾಳೆ ಪ್ರಕಟವಾಗುವ ಫಲಿತಾಂಶವನ್ನು ಸ್ವೀಕರಿಸಲು ನೀವು ತಯಾರಿಲ್ಲ ಎಂದಾದರೆ ಚಾಲೆಂಜ್ ಮಾಡಿ. ನಿಮ್ಮ ಉತ್ತರ ಪತ್ರಿಕೆ ತರಿಸಿಕೊಳ್ಳಿ. ರೀ ಟೋಟಲಿಂಗ್, ರೀ ವ್ಯಾಲ್ಯುವೇಶನ್’ಗೆ ಅರ್ಜಿ ಹಾಕಿ. ಅಥವಾ ಪೂರ್ತಿ ಫಲಿತಾಂಶವನ್ನೆ ಧಿಕ್ಕರಿಸಿ ಮರು ಪರೀಕ್ಷೆ ಬರೆಯಿರಿ.

ಈ ಸುದ್ದಿ ಓದಿದ್ದೀರಾ? ನಾಳೆ ಎಸ್ಸೆಸ್ಸೆಲ್ಸಿ ಫಲಿತಾಂಶ; ಪರಿಶೀಲಿಸುವುದು ಹೀಗೆ

ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾದರೂ, ಫೇಲಾದರೂ ಕಲಿಯಲು ಸಾವಿರಾರು ಕೋರ್ಸ್’ಗಳಿವೆ. ಗೂಗಲ್ ಸರ್ಚ್ ಮಾಡಿ, ಯೂಟ್ಯೂಬ್’ನಲ್ಲಿ ಹುಡುಕಿ. ಅಥವಾ ತಿಳಿದವರಲ್ಲಿ ಅವುಗಳ ಮಾಹಿತಿ ಪಡೆಯಿರಿ.

ಪಾಲಕರಿಗೆ ಕಿವಿಮಾತು
ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಮಕ್ಕಳಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬಿರಿ. ಜಾಣ ಜಾಣೆಯರಾಗುವಂತೆ ಮಕ್ಕಳನ್ನು ಬೆಳೆಸಿರಿ.

ಒತ್ತಡ, ಆಕರ್ಷಣೆ, ಅವಾಸ್ತವ ಭ್ರಮೆಗೆ ಒಳಗಾಗಿ ಮಕ್ಕಳಿಗೆ ಕೋರ್ಸ್’ಗಳ ಆಯ್ಕೆ ಮಾಡಬೇಡಿ. ಪಕ್ಕಾ ಕರಿಯರ್ ಪ್ಲ್ಯಾನಿಂಗ್ ಮಾಡಿ, ಅದಕ್ಕೆ ಪೂರಕವಾದ ಕೋರ್ಸ್’ಗಳನ್ನ ಆಯ್ಕೆ ಮಾಡಿಕೊಳ್ಳುವಂತೆ ಮಕ್ಕಳನ್ನು ಪ್ರೇರೇಪಿಸಿರಿ. ಸಾಧ್ಯವಾದರೆ ಕರಿಯರ್ ಕೌನ್ಸಿಲರ್‍‌ಗಳ ಮಾರ್ಗದರ್ಶನ ಪಡೆಯಿರಿ.

ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳಿಸಿದರೆ ಪಿಯುಸಿಯಲ್ಲಿ ವಿಜ್ಞಾನ, ಅಂಕಗಳು ಸಾಧಾರಣವಾದರೆ ವಾಣಿಜ್ಯ ಹಾಗೂ ಕಡಿಮೆ ಅಂಕ ಗಳಿಸಿದರೆ ಕಲಾ ವಿಭಾಗ ಆಯ್ಕೆ ಮಾಡುವ ವಾಡಿಕೆ ಸಮಾಜದಲ್ಲಿದೆ. ಇದು ಸರಿಯಲ್ಲ.

ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯವನ್ನು ನೋಡಿಕೊಂಡು ಪಿಯುಸಿಯಲ್ಲಿನ ವಿಭಾಗಗಳು ಮತ್ತು ಉಪವಿಭಾಗಗಳನ್ನು ಆಯ್ಕೆ ಮಾಡಿ. ಇದವರ ಮುಂದಿನ ಕಲಿಕೆಗೆ ಪೂರಕವಾಗಿರಲಿ.

ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿರುವವರು ಮಾತ್ರ ದುಡ್ಡು ಸಂಪಾದನೆ ಮತ್ತು ಕೀರ್ತಿ ಪಡೆದಿರುವುದಲ್ಲ.

ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿಂತ ಹೆಚ್ಚು ಅವಕಾಶಗಳು ಕಲಾ ವಿಭಾಗದವರಿಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

ಎಲ್ಲ ಮಕ್ಕಳೂ ಪಿಯುಸಿ ಕಲಿಯಲೇ ಬೇಕು ಎಂದೇನಿಲ್ಲ. ಪಿಯುಸಿ ಹೊರತಾಗಿ ಕಲಿಯಬಹುದಾದ ಸಾವಿರಾರು ಕೋರ್ಸ್‌ಗಳಿವೆ.

ಐಟಿಐ, ಪಾಲಿಟೆಕ್ನಿಕ್‌ ಡಿಪ್ಲೊಮಾ, ಪ್ಯಾರಾ ಮೆಡಿಕಲ್‌, ಪ್ಲಾಸ್ಟಿಕ್‌ ಟೆಕ್ನಾಲಜಿ, ಲೆದರ್‌ ಆಂಡ್‌ ಫೂಟ್‌ವೇರ್‌ ಟೆಕ್ನಾಲಜಿ, ಟೂಲ್‌ ಆಂಡ್‌ ಡೈ ಮೇಕಿಂಗ್‌, ಫೈರ್‌ ಆಂಡ್‌ ಸೇಫ್ಟಿ, ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್‌, ಫ್ಯಾಶನ್‌ ಡಿಸೈನಿಂಗ್‌ ಮುಂತಾದ ವಿಭಾಗಗಳಲ್ಲಿ ಪೂರ್ಣ ಕಾಲಿಕ ಮತ್ತು ಅರೆ ಕಾಲಿಕ ಡಿಪ್ಲೊಮಾ, ಸರ್ಟಿಫಿಕೇಟ್ ಮತ್ತು ಜಾಬ್‌ ಓರಿಯೆಂಟೆಡ್‌ ಕೋರ್ಸ್‌ಗಳಿವೆ. ಇವುಗಳ ಮಾಹಿತಿ ಕಲೆಹಾಕಿ, ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಪೂರಕವಾದ ಕೋರ್ಸ್ ಗಳ ಆಯ್ಕೆ ನಡೆಯಲಿ.

(ಲೇಖಕರು ಕರಿಯರ್ ಕೌನ್ಸಿಲರ್ ಕೂಡ ಆಗಿದ್ದಾರೆ. ಮಾಹಿತಿಗಾಗಿ 9845054191 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು)

ಉಮರ್
ಉಮರ್‌ ಯು ಎಚ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X