ಬೇಸಿಗೆಯ ಬೇಗೆ | ಅರಣ್ಯದಂಚಿನಲ್ಲಿ ಮೂರು ದಿನಗಳ ಅಂತರದಲ್ಲಿ ಐದು ಕಾಡಾನೆಗಳ ಸಾವು

Date:

Advertisements

ಬಿಸಿಲಿನ ತಾಪ ವನ್ಯಜೀವಿಗಳ ಮೇಲೂ ಪ್ರಭಾವ ಬೀರಿದ್ದು, ಬಿಸಿಲಿನ ಬೇಗೆ ತಡೆಯಲಾಗದೆ  ಕಾಡಾನೆಗಳು ಅರಣ್ಯದಲ್ಲಿ ಸಾಯುತ್ತಿದೆ. ಮೂರು ದಿನದ ಅಂತರದಲ್ಲೇ ಐದು ಆನೆಗಳು ಮೃತಪಟ್ಟಿರುವುದರಿಂದ ಬಿಸಿಲಿನ ಜಳದ ಪರಿಣಾಮವನ್ನು ತೋರುತ್ತಿದೆ.

ರಾಮನಗರ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಕಾಡಾನೆಗಳು ಮೃತಪಟ್ಟಿದ್ದು, ಅರಣ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಕೆಲವು ಆನೆಗಳು ನೀರಿನ ಕೊರತೆಯಿಂದ ಮೃತಪಟ್ಟರೆ, ಆಹಾರದಲ್ಲಿ ವ್ಯತ್ಯಯವಾಗಿ ಅನಾರೋಗ್ಯದಿಂದ ಎರಡು ಆನೆಗಳು ಮೃತಪಟ್ಟಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿರುವುದು ವರದಿಯಾಗಿದೆ.

ಕರ್ನಾಟಕದ ತಮಿಳುನಾಡು ಗಡಿಯಲ್ಲಿರುವ ಕಾವೇರಿ ವನ್ಯಜೀವಿ ಧಾಮದ ಗೋಪಿನಾಥಂನ ಕಾವೇರಿ ನದಿ ತೀರದಲ್ಲಿ ಭಾರೀ ಗಾತ್ರದ ಆನೆ ಮೃತಪಟ್ಟಿದೆ. ನೀರು ಕುಡಿಯಲೆಂದು ಆನೆ ಕಾವೇರಿ ನದಿಗೆ ಬಂದಾಗ ಕಾಲುಜಾರಿ ಬಿದ್ದಿದೆ. ಮತ್ತೆ ಮೇಲೆ ಏಳಲು ಆನೆಗೆ ಆಗಿಲ್ಲ. ಅಲ್ಲಿಯೇ ಬಿದ್ದು ಮೂರು ದಿನಗಳಾಗಿದ್ದು, ದೇಹದ ಭಾಗವನ್ನು ಮೀನುಗಳು ತಿಂದಿವೆ ಎನ್ನಲಾಗಿದೆ.

Advertisements

“ಬೇಸಿಗೆ ಕಾರಣಕ್ಕೆ ನೀರು ಕುಡಿಯಲು ದೂರದಿಂದ ಬಂದಾಗ ಆನೆ ಬಿದ್ದು ಮೃತಪಟ್ಟಿರುವ ಅನುಮಾನಗಳಿವೆ. ಆನೆಯ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೇಹದ ಭಾಗವನ್ನು ವಿಧಿವಿಜ್ಞಾನ ಪ್ರಯೋಗಾಲಕ್ಕೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಆನೆಯ ಸಾವಿಗೆ ನಿಖರ ಕಾರಣ ತಿಳಿಯಲಿದೆ” ಎಂದು ಕಾವೇರಿ ವನ್ಯಧಾಮದ ಡಿಸಿಎಫ್‌ ಸುರೇಂದ್ರ ತಿಳಿಸಿದ್ದಾರೆ.

“ರಾಮನಗರ ಜಿಲ್ಲೆ ಕನಕಪುರ ತಾಲೂಕಿನಲ್ಲಿ ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ ಅರಣ್ಯದಲ್ಲಿ 11 ವರ್ಷದ ಆನೆ ಮಾವು ತಿಂದು ಮೃತಪಟ್ಟಿದೆ. ಆಹಾರ ಸೇವಿಸುವ ಮೇಳೆ ಮಾವಿನ ಕಾಯಿಗಳನ್ನು ತಿಂದಿದೆ. ಈ ವೇಳೆ ಕರುಳಿನಲ್ಲಿ ಸಿಲುಕಿಕೊಂಡು ಆನೆ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಆಹಾರದ ವ್ಯತ್ಯಯವೇ ಆನೆ ಸಾವಿಗೆ ಕಾರಣವಿರಬಹುದು” ಎಂದು ಕನಕಪುರ ಎಸಿಎಫ್‌ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಕೋಡಿಹಳ್ಳಿ ವಲಯದಲ್ಲಿ ಮಖನಾ( ಗಂಡೂ ಅಲ್ಲ ಹೆಣ್ಣೂ ಅಲ್ಲ) ಆನೆ ಜೀವ ಬಿಟ್ಟಿದೆ. ಈ ಆನೆಯೂ ಬಿಸಿಲಿನಿಂದ ಜೀವ ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ. ದೇಹದಲ್ಲಿ ನೀರಿನ ಕೊರತೆಯಿಂದಾಗಿ ರಾಮನಗರ ಸಮೀಪದಲ್ಲೇ ಆನೆ  ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪಿರಿಯಾಪಟ್ಟಣ ತಾಲೂಕಿನ ಆನೆಚೌಕೂರು ಶಿಬಿರದಲ್ಲೊಂದು ಆನೆ ಮೃತಪಟ್ಟಿದೆ. ಐದು ತಿಂಗಳ ಹಿಂದೆಯಷ್ಟೇ ಸೆರೆ ಹಿಡಿದಿದ್ದ ವಿರಾಟ್‌ ಎನ್ನುವ ಆನೆಯು ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ನಾಗರಹೊಳೆ ವ್ಯಾಪ್ತಿಯ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ ಕಾಡಿನಿಂದ ಹೊರಬಂದು ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಸೆರೆ ಹಿಡಿಯಲಾಗಿತ್ತು. ಅದಕ್ಕೆ ವಿರಾಟ್‌ ಎನ್ನುವ ಹೆಸರಿಟ್ಟು ಆನೆಚೌಕೂರು ಶಿಬಿರದಲ್ಲಿ ಪಳಗಿಸಲಾಗುತ್ತಿತ್ತು. ಆನೆ ಕಾಲಿಗೆ ಸೆರೆ ಹಿಡಿಯುವಾಗಲೇ ಗಾಯವಾಗಿತ್ತು. ಈಗ ಆನೆ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿ ಆನೆಯ ಶವಸಂಸ್ಕಾರ ನಡೆಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಗದಗ | ನಿಮ್ಮ ಮತದಿಂದ ನಿಮ್ಮ ಅಭಿವೃದ್ಧಿ, ದೇಶದ ಅಭಿವೃದ್ಧಿ ಸಾಧ್ಯ: ಎಸ್.ಕೆ ಇನಾಮದಾರ

ಕರ್ನಾಟಕದಲ್ಲಿ ಹಿಂದೆ ಈ ಪ್ರಮಾಣದಲ್ಲಿ ಬೇಸಿಗೆ ವೇಳೆ ಆನೆಗಳು ಮೃತಪಟ್ಟಿದ್ದು ಕಡಿಮೆ. ಈ ಬಾರಿ ಅವುಗಳ ಪ್ರಮಾಣ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆಯವರು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲೆಮಾರಿಗಳ ಹಕ್ಕು ತಿರಸ್ಕರಿಸಿದ ಸಿಎಂ; ಹೋರಾಟ ತೀವ್ರಗೊಳಿಸಲು ನಿರ್ಧಾರ

"ನಾಗಮೋಹನ್‌ ದಾಸ್‌ ಅವರೂ ಕಣ್ಣೀರು ಹಾಕುತ್ತಿದ್ದಾರೆ. ನಾನಂದುಕೊಂಡ ಸಮುದಾಯಕ್ಕೆ ನ್ಯಾಯ ಕೊಡಲು...

ಚಿಕ್ಕಮಗಳೂರು l ಅತ್ತೆಯನ್ನು ಹತ್ಯೆಗೈದ ಸೊಸೆ

ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಸೊಸೆಯೇ ಅತ್ತೆಯನ್ನು ಹತ್ಯೆ ಮಾಡಿರುವ ಘಟನೆ...

ಧರ್ಮಸ್ಥಳ ಪ್ರಕರಣ | ಸೌಜನ್ಯ ಹೋರಾಟ ಮುಂದುವರಿಯಲಿದೆ: ಮಹೇಶ್ ಶೆಟ್ಟಿ ತಿಮರೋಡಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಕೋಲಾರ | ಪ್ರಗತಿಪರ ರೈತ ತುರಾಂಡಹಳ್ಳಿ ರವಿ ತೋಟಕ್ಕೆ ಅಂತಾರಾಷ್ಟ್ರೀಯ ಅಧಿಕಾರಿಗಳು ಭೇಟಿ

ಕೋಲಾರ ತಾಲೂಕಿನ ತುರಾಂಡಹಳ್ಳಿ ಗ್ರಾಮದ ಪ್ರಗತಿಪರ ರೈತ ಟಿ.ಎನ್ ರವಿ ಅವರ...

Download Eedina App Android / iOS

X