ಕಲಬುರಗಿ | ಕಾರ್ಮಿಕ ಮಹಿಳೆಯರ ಕೊಲೆ ತನಿಖೆ ಸಿಐಡಿಗೆ ವಹಿಸಿ; ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ

Date:

ಕಲಬುರಗಿ ಜಿಲ್ಲೆಯಲ್ಲಿ ನಡೆದ ಕಟ್ಟಡ ಕಾರ್ಮಿಕ ಮಹಿಳೆಯರ ಜೋಡಿ ಕೋಲೆ ಪ್ರಕರಣದ ತನಿಖೆ ಸಿಐಡಿಗೆ ಒಪ್ಪಿಸುವಂತೆ ಒತ್ತಾಯಿಸಿ ಹಾಗೂ ಮೃತ ಕಾರ್ಮಿಕರ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ ತಲಾ 5 ಲಕ್ಷ ರೂ. ತಕ್ಷಣ ಪರಿಹಾರ ಬಿಡುಗಡೆಗೆ ಒತ್ತಾಯಸಿ ಕೇಂದ್ರ ರಾಮಿರ್ ಸಂಧಾನಗಳಿ ಸಮನ್ವಯ ಸಮಿತಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.

ಮನವಿ ಪತ್ರದಲ್ಲಿ, ಏಪ್ರಿಲ್ 07ರಂದು ಕಲಬುರಗಿ ಹೊರವಲಯದ ತಾವರಗೇರಾ ಕ್ರಾಸ ಬಳಿ ಜಮೀನಿನಲ್ಲಿ ಕಟ್ಟಡ ಕಾರ್ಮಿಕರಾದ ಶರಣಮ್ಮ ಮತ್ತು ಚಂದಮ್ಮ ಇವರನ್ನು ಭೀಕರವಾಗಿ ಕೋಲೆ ಮಾಡಲಾಗಿದೆ. ಕಡು ಬಡವರಾದ ಇವರು ಪ್ರತೀ ನಿತ್ಯ ದುಡಿಮೆಗಾಗಿ ಗಂಜ್ ಪ್ರದೇಶದ ನಾಕ ಬಂದಿ (ನಿರ್ಮಾಣ ವಲಯದ ಕೆಲಸಕ್ಕೆ ನಿಲ್ಲುವ ಜಾಗ) ಸ್ಥಳಗಳಲ್ಲಿ ಕಾರ್ಮಿಕರು ನಿರ್ಮಾಣವಲಯದ ದುಡುಮೆಗಾಗಿ ಸರಳವಾಗಿ ದೊರೆಯುತ್ತಾರೆ.

ಗುತ್ತಿಗೆದಾರರು ಅಥವಾ ಮಾಲೀಕರು ಈ ಸ್ಥಳದಿಂದ ದಿನಗೂಲಿ ಲೆಕ್ಕದಲ್ಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಾರೆ. ಅದರಂತೆ ಕಾರ್ಮಿಕ ಮಹಿಳೆಯರನ್ನು ಕೆಲಸಕ್ಕೆ ಕರೆದುಕೊಂಡು ಹೊದ ದುಷ್ಕರ್ಮಿಗಳು ಕಲಬುರಗಿ ಹೊರವಲಯದಲ್ಲಿ ಈ ಇಬ್ಬರು ಮಹಿಳೆಯರನ್ನು ಕೊಲೆ ಮಾಡಿ ಚಿನ್ನ-ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೃತ್ಯನಡೆದು ಮೂರು ದಿನಗಳು ಕಳೆದರೂ ಆರೋಪಿಗಳೂ ಪತ್ತೆಯಾಗಿಲ್ಲ. ಈ ಕೃತ್ಯ ಅತ್ಯಂತ ಹೀನಾಯವಾಗಿದ್ದು, ಕಾರ್ಮಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಒಂದು ಹೊತ್ತಿನ ಉಟಕ್ಕಾಗಿ ಕಷ್ಟ ಪಡುವ ಕಾರ್ಮಿಕರ ಜೀವಗಳಿಗೆ ಬೇಲೆ ಇಲ್ಲದಹಾಗಾಗಿದೆ. ಇಂತಹ ಸಂದರ್ಭದಲ್ಲಿ ಕಲಬುರಗಿಯಲ್ಲಿ ಕಾರ್ಮಿಕ ಇಲಾಖೆ ಪ್ರಾದೇಶಿಕ ಆಯುಕ್ತರ ಕಚೇರಿ ಇದ್ದರೂ ಸಹ, ಉಪ ಕಾರ್ಮಿಕ ಆಯುಕ್ತರು/ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ.

ಸೌಜನ್ಯಕ್ಕಾದರೂ ಮೃತ ಕುಟುಂಬಗಳಿಗೆ ಬೇಟಿ ನೀಡಿ ಸಾಂತ್ವನ ಹೇಳಿಲ್ಲ. ನೈಜ ಕಾರ್ಮಿಕರು ಆಗಿರುವದರಿಂದ ಹಾಗೂ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿರುವದರಿಂದ ಕಾರ್ಮಿಕ ಇಲಾಖೆ ನಿಯಮಗಳನ್ವಯ ವಿಶೇಷ ಪ್ರಕರಣವೆಂದು ಪ್ರತೀ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡಲು ಅವಕಾಶವಿದೆ.

ಕೂಡಲೇ ಪರಿಹಾರ ವಿತರಿಸಲು ಕಾರ್ಮಿಕ ಅಧಿಕಾರಿಗಳಿಗೆ ಸೂಚಿಸಬೇಕು ಮತ್ತು ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಕಲಬುರಗಿಯಲ್ಲಿ ಇರುವ ಒಟ್ಟು 4 ನಾಕಾ ಬಂದಿ ಸ್ಥಳಗಳಲ್ಲಿ ಸುರಕ್ಷತೆ ಕ್ರಮಗಳು ಅಳವಡಿಸಲು ಕಾರ್ಮಿಕ ಇಲಾಖೆಗೆ ಸೂಚನೆ ನೀಡಬೇಕು ಹಾಗೂ ಸದರಿ ಕೊಲೆ ಪ್ರಕರಣವೂ ಅತ್ಯಂತ ಹೀನಾಯ ಮತ್ತು ದುಷ್ಕತ್ಯವಾಗಿದ್ದು, ಕೊಲೆ ಆರೋಪಿಗಳಿಗೆ ಅತ್ಯಂತ ಕಠೀಣ ಶಿಕ್ಷೆ ಆಗಬೇಕು ಮತ್ತು ಸಮಗ್ರ ತನಿಖೆ ಅವಶ್ಯಕತೆ ಇರುವುದರಿಂದ ಸದರಿ ಕಟ್ಟಡ ಕಾರ್ಮಿಕ ಮಹಿಳೆಯರ ಜೋಡಿ ಕೊಲೆ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಶಂಕರ್ ಕಟ್ಟಿ ಸಂಗಾವಿ, ಹಣಮಂತರಾಯ ಬಿ ಪೂಜಾರಿ, ಶಿವಲಿಂಗ ಹಾವನೂರ, ಮಲ್ಲಿಕಾರ್ಜುನ ಎಸ್. ಮಾಳಗೆ, ಸಂಜೂಕುಮಾರ್ ಗುತ್ತೇದಾರ, ನಾಗಪ್ಪ ರಾಯಚೂರಕರ್, ಪಾಸ್ವಾನ್ ಚಿಂಚನ್ಸೂರ್, ಶಿವಶರಣಪ್ಪ, ದಶರಥ ಹೇಮಸಿಂಗ, ಸಿದ್ದು ಇನ್ನಿತರರು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಜನೆ ಬಾಲ್ಯವಿವಾಹ ತಡೆಗೆ ದಾರಿ: ಆರ್ ಕೆ ಸರ್ದಾರ್

ನಮ್ಮ ಭಾರತದ ಕಾನೂನಿನ ಅಡಿಯಲ್ಲಿ ಬಾಲ್ಯವಿವಾಹ ಕಾಯ್ದೆ ಪ್ರಕಾರ 18 ವರ್ಷದೊಳಗಿನವರಿಗೆ...

ಬಾಗೇಪಲ್ಲಿ | ಸಿಪಿಎಂ ಸಂಘಟಿಸುವ ಜವಾಬ್ದಾರಿ ಎಲ್ಲರ ಮೇಲಿದೆ; ಎಂ.ಪಿ.ಮುನಿವೆಂಕಟಪ್ಪ

ಆಧುನಿಕ ಶೋಷಣೆಯಂತಹ ದಬ್ಬಾಳಿಕಾ ಪ್ರವೃತ್ತಿಯನ್ನು ತಡೆದು, ಸಿಪಿಎಂ ಪಕ್ಷದ ಬಲಿಷ್ಟ ಸಂಘಟನೆಯ...

ಗುಬ್ಬಿ | ಬಡ್ಡಿ ದಂಧೆಗೆ ಮತ್ತೋರ್ವ ಬಲಿ : ನಿಟ್ಟೂರು ವಾಸಿ ನೇಣಿಗೆ ಶರಣು; ಆತಂಕದಲ್ಲಿ ಜನತೆ

ಮೀಟರ್ ಬಡ್ಡಿ ದಂಧೆಗೆ ಬೇಕರಿ ಮಾಲೀಕ ಬಲಿಯಾದ ಘಟನೆ ಮಾಸುವ ಮುನ್ನವೇ...

ರಾಮನಗರ | ಸಾಲ ತೀರಿಸಲು ನೆರೆಮನೆಯ ಬಾಲಕಿಯ ಅಪಹರಣಕ್ಕೆ ಯತ್ನ: ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕ

ಮನೆ ಬಾಡಿಗೆ ಸೇರಿದಂತೆ ಕೈ ಸಾಲ ತೀರಿಸಲು ಪಕ್ಕದ ಮನೆಯಲ್ಲಿನ ಬಾಲಕಿಯನ್ನೇ...