ಸುರಪುರ | ಐತಿಹಾಸಿಕ ಸ್ಮಾರಕಗಳಲ್ಲಿ ಸ್ವಚ್ಛತೆ ಕಾಪಾಡಲು ಆಗ್ರಹಿಸಿ ನಗರಸಭೆ ಪೌರಾಯುಕ್ತರಿಗೆ ಮನವಿ

Date:

Advertisements

ಐತಿಹಾಸಿಕ ಸ್ಮಾರಕಗಳ ಸ್ವಚ್ಛತೆ ಕಾಪಾಡುವಂತೆ ಆಗ್ರಹಿಸಿ ಯಾದಗಿರಿ ಜಿಲ್ಲೆಯ ಸುರಪುರ ಮಹರ್ಷಿ ವಾಲ್ಮೀಕಿ ಆರ್.ಸಿ ನಾಯಕ ಜನಸೇವೆ ಶೈಕ್ಷಣಿಕ ಟ್ರಸ್ಟ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಆ ಬಳಿಕ ಸುರಪುರ ನಗರಸಭೆಯ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಜನಸೇವೆ ಶೈಕ್ಷಣಿಕ ಟ್ರಸ್ಟ್ ಅಧ್ಯಕ್ಷ ರಾಜಾ ಚನ್ನಪ್ಪ ನಾಯಕ, ಸುರಪುರದ ಐತಿಹಾಸಿಕ ವೃತ್ತವಾದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಬಲವಂತ ಬಹರಿ ಬಹದ್ದೂರ ಪ್ರತಿಮೆಯ ಐತಿಹಾಸಿಕ ವ್ಯಕ್ತಿಯ ವೃತ್ತದ ಸುತ್ತಲು ಸ್ವಚ್ಚತೆ ಹಾಗೂ ನೀರಿನ ವ್ಯವಸ್ಥೆ ಇಲ್ಲ. ಬಹದ್ದೂರ ಪ್ರತಿಮೆಯ ವೃತ್ತದ ಸುತ್ತಲೂ ಜಾಹೀರಾತುಗಳ ಪೋಸ್ಟರ್‌ಗಳನ್ನು ಹಚ್ಚಿ ಅದರ ಅಂದವನ್ನು ಹಾಳು ಮಾಡುತ್ತಿರುವುದು ಕಂಡು ಬಂದಿದೆ. ಹೀಗಾಗಿ, ಈ ಬಗ್ಗೆ ಸುರಪುರ ನಗರಸಭೆಯ ಅಧಿಕಾರಿಗಳು ಗಮನ ಹರಿಸಬೇಕು” ಎಂದು ತಿಳಿಸಿದರು.

‘ಸುರಪುರದಿಂದ ವೆಂಕಟಾಪೂರಕ್ಕೆ ಹೋಗುವ ಮಾರ್ಗದಲ್ಲಿ ಡಿಗ್ನಿ ಅಗಸಿ ಹತ್ತಿರ ಸ್ಥಳೀಯರು ಮಣ್ಣು, ಕಸ ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ತಂದು ಹಾಕಿ ಅದನ್ನು ಕಾಣದಂತೆ ಮಾಡುತ್ತಿದ್ದಾರೆ. ಕೂಡಲೆ ನಗರಸಭೆಯವರು ಅದನ್ನು ತೆಗೆಸಲು ಕಾರ್ಯ ಪ್ರವೃತ್ತರಾಗಬೇಕು. ತಕ್ಷಣವೇ ಈ ಕೆಲಸಗಳನ್ನು ಕೈಗೊಂಡು ಸ್ಮಾರಕಗಳ ಅಂದವನ್ನು ಹೆಚ್ಚುವಂತಹ ಕೆಲಸ ಮಾಡಬೇಕು” ಎಂದು ಅಗ್ರಹಿಸಿ, ಮನವಿ ಪತ್ರ ಸಲ್ಲಿಸಿದರು.

Advertisements

ಇದನ್ನು ಓದಿದ್ದೀರಾ? ಹುಬ್ಬಳ್ಳಿ | ತಿಂಗಳಾದರೂ ಮುಗಿಯದ ಚರಂಡಿ‌ ಕಾಮಗಾರಿ: ಕಣ್ಮುಚ್ಚಿ ಕುಳಿತ ಅಧಿಕಾರಿ ವರ್ಗ, ಜನಪ್ರತಿನಿಧಿಗಳು

ಈ ಸಂದರ್ಭದಲ್ಲಿ ರಾಜಾ ದೇವಿಂದ್ರ ನಾಯಕ, ಆಬಿದ್ ಹುಸೇನ್ ಪಗಡಿ, ಯಂಕಪ್ಪ ಕೋಸಗಿ, ಶರೀಫ್.ಎಮ್, ಶ್ರೀಕಾಂತ್ ಹೂಗಾರ, ಹಣಮಂತ್ರಾಯ ಕಬಾಡಗೇರಾ, ಮಹದೇವಪ್ಪ ಮಡಿವಾಳ್, ಮೆಹಬೂಬ್ ಪಟೇಲ್, ಸಾಲೇ ಸಾಬ್ ಅಗ್ನಿ, ಮಲ್ಲಪ್ಪ, ಪರಶುರಾಮ್, ವನ್ನಪ್ಪ, ಅಯ್ಯಪ್ಪ, ಈಶಪ್ಪ, ಬಸವರಾಜ್ ಗುಂಡಗುರ್ತಿ, ಮಲ್ಲಣ್ಣ ಗುಂಡಗುರ್ತಿ, ಕಲ್ಯಾಣಿ ಸ್ವಾಮಿ,ಚನ್ನಬಸಯ್ಯ ಹಿರೇಮಠ್ ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

Download Eedina App Android / iOS

X