ಡಿಕೆ ಶಿವಕುಮಾರ್ ಹೆಸರಲ್ಲಿ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ; ಸಭಾಧ್ಯಕ್ಷರಿಂದ ಆಕ್ಷೇಪ

Date:

ವಿಧಾನಸಭೆ ಸದಸ್ಯರಾಗಿ ಆಯ್ಕೆಯಾದ ಎಲ್ಲ ನೂತನ ಸದಸ್ಯರಿಗೆ ದೇವರು ಮತ್ತು ಸಂವಿಧಾನದ ಹೆಸರು ಹೊರತುಪಡಿಸಿ ಬೇರೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸದಂತೆ ಹಂಗಾಮಿ ಸಭಾಧ್ಯಕ್ಷ ಆರ್‌ ವಿ ದೇಶಪಾಂಡೆ ಸೂಚಿಸಿದ್ದರೂ ಕೆಲವು ಶಾಸಕರು ತಮ್ಮ ಇಚ್ಛೆ ಅನುಸಾರ ಪ್ರಮಾಣ ವಚನ ಸ್ವೀಕರಿಸಿದರು.

16ನೇ ವಿಧಾನಸಭೆಯ ಮೊದಲ ದಿನದ ಅಧಿವೇಶನ ಆರಂಭವಾಗುತ್ತಿದ್ದಂತೆ ಸ್ಪೀಕರ್ ಆರ್‌ ವಿ ದೇಶಪಾಂಡೆ ಅವರು ನೂತನ ಶಾಸಕರಿಗೆ‌ ಪ್ರಮಾಣ ವಚನ ಕುರಿತು ಸೂಚನೆ ನೀಡಿದರು. ಆದರೂ ಸಭಾಧ್ಯಕ್ಷರ ಮಾತಿಗೆ ಕಿವಿಗೊಡದ ಮೂವರು ಶಾಸಕರು ತಮ್ಮ ಇಚ್ಛೆಯ ಅನುಸಾರ ಪ್ರಮಾಣ ವಚನ ಸ್ವೀಕರಿಸಿ, ಸಭಾಧ್ಯಕ್ಷರ ಸಿಟ್ಟಿಗೆ ಕಾರಣರಾದರು.

ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಶಿವಗಂಗಾ ಅವರು ʼನನ್ನ ಆರಾಧ್ಯ ದೈವ ಡಿ ಕೆ ಶಿವಕುಮಾರ್” ಎಂದು ಪ್ರಮಾಣ ವಚನ ಸ್ವೀಕರಿಸಿದರು. ಬಸನಗೌಡ ಪಾಟೀಲ ಯತ್ನಾಳ್‌ ಅವರು ಹಿಂದುತ್ವ ಮತ್ತು ಗೋಮಾತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಭಾಗೀರಥಿ ಮುರುಳ್ಯ ಅವರು ಕುಲದೇವರಾದ ಸತ್ಯಸಾರಮಣಿ ಮತ್ತು ಸತ್ಯಪದನಾದಿ ಹಾಗೂ ಮತದಾರರು ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಬಸವರಾಜ ರಾಯರೆಡ್ಡಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಬಸನಗೌಡ ಪಾಟೀಲ ಯತ್ನಾಳ್‌ ಮಧ್ಯ ಪ್ರವೇಶಿಸಿ ಇದನ್ನೆಲ್ಲ ಆರಂಭಿಸಿದ್ದು ಯಾರು ಎಂದು ಪ್ರಶ್ನಿಸಿದರು.

ಸಭಾಧ್ಯಕ್ಷರು ಮಧ್ಯ ಪ್ರವೇಶಿಸಿ, ನಿಮ್ಮ ಇಷ್ಟದ ಅನುಸಾರ ಪ್ರಮಾಣ ವಚನ ಸ್ವೀಕರಿಸುವ ಹಾಗಿಲ್ಲ. ದಯವಿಟ್ಟು ನಾನು ಎಲ್ಲ ಶಾಸಕರಲ್ಲಿ ಮನವಿ ಮಾಡುವೆ; ಸಂವಿಧಾನ ಹೆಸರು ಇಲ್ಲವೇ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ. ಅದನ್ನು ಬಿಟ್ಟು ಅನವಶ್ಯಕ ಹೆಸರುಗಳನ್ನು ತೆಗೆದುಕೊಳ್ಳಬೇಡಿ” ಎಂದು ಸೂಚಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾನು – ಸವದಿ ಸಚಿವರಾಗಬೇಕಿತ್ತು ಎನ್ನುವುದು ಜನರ ಅಭಿಲಾಷೆಯಾಗಿತ್ತು : ಜಗದೀಶ ಶೆಟ್ಟರ್

ಸಚಿವ ಸ್ಥಾನಕ್ಕೆ ನಾನೆಂದೂ ಬೇಡಿಕೆ ಇಟ್ಟಿಲ್ಲ, ಇಡುವುದೂ ಇಲ್ಲ ಯಾವುದೇ ಸ್ಥಾನ ಕೊಟ್ಟರೂ...

ರಾಯಚೂರು | ಕಲುಷಿತ ನೀರು ಸೇವನೆ; ಮತ್ತೊಂದು ಗ್ರಾಮದಲ್ಲಿ 8 ಮಂದಿ ಅಸ್ವಸ್ಥ

ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ದೇವದುರ್ಗದ...

ಕರ್ನಾಟಕದ ಜಯವನ್ನು ಮಧ್ಯಪ್ರದೇಶದಲ್ಲಿ ಪುನರಾವರ್ತಿಸಲಿದ್ದೇವೆ: ರಾಹುಲ್ ಗಾಂಧಿ

ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಹಿರಿಯ ನಾಯಕರು...

ನೀತಿ ಆಯೋಗದ ಸಭೆಗೆ ಹಾಜರಾಗದೆ ಕರ್ನಾಟಕಕ್ಕೆ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ : ಬಿಜೆಪಿ

ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗುವ ಮೂಲಕ ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ...