ಚಿಕ್ಕಮಗಳೂರು | ನಾಲೆಗೆ ಬಿದ್ದವರ ರಕ್ಷಿಸಲು ಹೋಗಿ ಮೂವರು ನೀರು ಪಾಲು

Date:

ಕಾಲುವೆಗೆ ಆಕಸ್ಮಿಕವಾಗಿ ಬಿದ್ದ ಒಬ್ಬರನ್ನು ರಕ್ಷಿಸಲು ಮುಂದಾದ ವೇಳೆ ಮೂವರು ಕಾಲುವೆಗೆ ಬಿದ್ದು, ಮೃತಪಟ್ಟಿರುವ ಹೃದಯ ವಿದ್ರಾವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಪಕ್ಕದ ಕಾಲುವೆಯಲ್ಲಿ ನಡೆದಿದೆ.

ರವಿ (31), ಅನನ್ಯ (17), ಶಾಮವೇಣಿ (16) ಮೃತಪಟ್ಟವರು. ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಆಯತಪ್ಪಿ ನಾಲೆಗೆ ಬಿದ್ದಿದ್ದು, ಒಬ್ಬರನ್ನು ರಕ್ಷಿಸಲು ಮತ್ತೊಬ್ಬರು ಮುಂದಾಗಿದ್ದಾರೆ. ಈ ವೇಳೆ ಮೂವರೂ ಪ್ರಾಣ ಕಳೆದುಕೊಂಡಿದ್ದಾರೆ.

ಮೃತ ರವಿ ಮೂಲತಃ ಲಕ್ಕವಳ್ಳಿ ನಿವಾಸಿ, ಅನನ್ಯ, ಶಾಮವೇಣಿ ರವಿಯ ಸಹೋದರಿಯರ ಮಕ್ಕಳಾಗಿದ್ದಾರೆ. ರವಿ ಮೃತದೇಹ ಪತ್ತೆಯಾಗಿದೆ, ಮತ್ತಿಬ್ಬರ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ.

ಘಟನೆ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಓದಿದ್ದೀರಾ? ವಿಧಾನಸೌಧ ಆವರಣಕ್ಕೆ ‘ಗೋ ಮೂತ್ರ’ ಎರಚಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಪೂಜೆ!

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪನಿಶ್ಮೆಂಟ್‌ಗೆ ಆಸ್ಪದ ಕೊಡಬೇಡಿ, ಒಳ್ಳೆ ಕೆಲಸ ಮಾಡಿ: ಬಿಬಿಎಂಪಿ ಅಧಿಕಾರಿಗಳಿಗೆ ಡಿಸಿಎಂ ಎಚ್ಚರಿಕೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಡಿಸಿಎಂ ಸಭೆ 'ಪನಿಶ್ಮೆಂಟ್ ಮಾಡೋದು ದೊಡ್ಡ...

ಟಿ.ನರಸೀಪುರ ಬಳಿ ಭೀಕರ ಅಪಘಾತ | 10 ಮಂದಿ ಸಾವು; ಹಲವರಿಗೆ ಗಂಭೀರ ಗಾಯ

ಮೈಸೂರು ಜಿಲ್ಲೆ ಕುರುಬೂರು ಗ್ರಾಮದ ಪಿಂಜರ ಪೋಲ್ ಎಂಬಲ್ಲಿ ಕೊಳ್ಳೇಗಾಲ- ಟಿ.ನರಸೀಪುರ...

ಧಾರವಾಡ | ರಿಯಲ್‌ ಎಸ್ಟೇಟ್‌ ಉದ್ಯಮಿ ಕೊಲೆ ಪ್ರಕರಣ; ಆರು ಮಂದಿ ಆರೋಪಿಗಳ ಬಂಧನ

ಧಾರವಾಡದ ಕಮಲಾಪುರ ಹೊರವಲಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ಕೊಲೆ...

ಧಾರವಾಡ | ಕುಸ್ತಿಪಟುಗಳ ಹೋರಾಟ ಬೆಂಬಲಿಸಿದವರ ಬಂಧನ ಖಂಡಿಸಿ ಪ್ರತಿಭಟನೆ

ಬ್ರಿಜ್ ಭೂಷಣ್ ಪರವಾಗಿ ಕೇಂದ್ರ ಸರ್ಕಾರ ನಿಂತಿರುವುದು ನಿಜಕ್ಕೂ ಖಂಡನೀಯ ಕುಸ್ತಿಪಟುಗಳ ಹೋರಾಟ...