ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ, ಹೋರಾಟಗಾರ ಆರ್.ಜಯಕುಮಾರ್ ಅವರ ಶ್ರದ್ಧಾಂಜಲಿ ಸಭೆಯನ್ನು ಹಾವೇರಿ ನಗರದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಎಸ್ಎಫ್ಐ ಹಾಗೂ ಡಿವೈಎಫ್ಐ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಹಿರಿಯ ಹೋರಾಟಗಾರ, ಪತ್ರಕರ್ತ ಆರ್.ಜಯಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಿಲಾಯಿತು.
“ಕೊಡಗು ಮೂಲದವರಾದ ಆರ್.ಜಯಕುಮಾರ್ ಅವರು ವಿದ್ಯಾರ್ಥಿ ಚಳವಳಿ ಸಾಮಾಜಿಕ ಜೀವನ ಆರಂಭಿಸಿ, ಮುಂದೆ ಪತ್ರಕರ್ತರಾಗಿ ಕನ್ನಡ ವಿವಿಧ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲಿ ಸುಮಾರು ಮೂರು ದಶಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದರು. ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಜಯಕುಮಾರ್ ಅವರು ʼಗಾಂಧಿ ಮರೆತ ನಾಡಿನಲ್ಲಿʼ ಮತ್ತು ʼಕಾಡು ಹಾದಿಯ ಬೆಳಕಿನ ಜಾಡಿನಲ್ಲಿʼ ಎಂಬ ಎರಡು ಮಹತ್ವ ಕೃತಿಗಳನ್ನು ರಚಿಸಿದ್ದರು” ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಣೆಯಾದ ಮಹಿಳೆಯರು ಮತ್ತು ಸಾಮಾಜಿಕ ವಿಡಂಬನೆ
ಸಭೆಯಲ್ಲಿ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ, ಎಐಟಿಯುಸಿ ಮುಖಂಡ ಹೊನ್ನಪ ಮರೆಯಮ್ಮನವರ, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ವಕೀಲ ಬಸವರಾಜ ಹಾದಿಮನಿ, ಕೆಎಸ್ಎಮ್ಎಫ್ ರಾಜ್ಯ ಕಾರ್ಯದರ್ಶಿ ಅಕ್ಷತಾ ಕೆ. ಸೇರಿದಂತೆ ಪ್ರಮುಖರಾದ ಮಹಮ್ಮದ್ ನರೆಗಲ್, ಉಡಚಪ್ಪ ಮಾಳಗಿ, ಸುರೇಶ್ ಛಲವಾದಿ, ಎ.ಕೆ.ಹೆಬ್ಬಸೂರ, ರೇಣುಕಾ ಕಹಾರ, ಬಸವರಾಜ ಲಕ್ಷ್ಮಣ ಕೆಂಗಪ್ಪಳವರ, ಶೆಟ್ಟಿ ವಿಭೂತಿ ನಾಯಕ, ಮಾರುತಿ ತಳವಾರ, ಸುಭಾಷ್ ಸೊಟ್ಟೆಪ್ಪನವರ, ರಮೇಶ್ ವಿ. ಇದ್ದರು.