ಚಾಮರಾಜನಗರ । ಎಲೆಕ್ಟ್ರಿಕಲ್ ಮತ್ತು ಮೋಟಾರ್ ರಿವೈಡಿಂಗ್ ಕಾರ್ಮಿಕರು ಸಂಘಟಿತರಾಗಬೇಕು : ಕೆ. ವೀರಭದ್ರಸ್ವಾಮಿ 

Date:

ಕರ್ನಾಟಕ ರಾಜ್ಯ ರೈತ ಮಿತ್ರ ಎಲೆಕ್ಟ್ರಿಕಲ್  ಮತ್ತು ಮೋಟಾರ್ ರಿವೈಡಿಂಗ್ ಸಂಘದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ  ನಗರದಲ್ಲಿ ಜೀಪ್ ಮೆರವಣಿಗೆ ನಡೆಸಲಾಯಿತು. 

- Advertisement -

ಮೋಟರ್ ಪಂಪ್ ಎತ್ತುವ ಜೀಪ್‌ಗಳಿಗೆ  ಜೈ ಭುವನೇಶ್ವರಿ  ಪೋಟೊ ಹಾಗೂ ಕನ್ನಡ ಬಾವುಟ ಕಟ್ಟಿ ಶೃಂಗರಿಸಿ ನಗರದ ಪ್ರಮುಖ ಬೀದಿಗಳಲ್ಲಿ  ಜಾಥಾ ನಡೆಸಿದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೆದ್ದಾರಿ ನಿರ್ಲಕ್ಷ್ಯಕ್ಕೆ ಆರಿ ಹೋದ ಅಲೆಮಾರಿ ಸಮುದಾಯದ ಜ್ಯೋತಿ.!

ಕಡು ಬಡತನ, ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ವರ್ಷದ ಜಿಎನ್ಎಂ ನರ್ಸಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದಳು. ತನ್ನ ಸಮುದಾಯದಲ್ಲೇ ಅತಿ ಹೆಚ್ಚು ಶಿಕ್ಷಣ ಪಡೆದ ಬೆರಳೆಣಿಕೆಯ ವಿದ್ಯಾರ್ಥಿಗಳಲ್ಲಿ...

ಕ್ಷೇತ್ರ ಮರುವಿಂಗಡಣೆಯ ಹಿಂದಿರುವ ಬಲಪಂಥೀಯ ರಾಜಕಾರಣದ ಗುಪ್ತ ಕಾರ್ಯಸೂಚಿ

ಕ್ಷೇತ್ರ ಮರುವಿಂಗಡಣೆ ಕೇವಲ ಲೋಕಸಭಾ ಸ್ಥಾನಗಳ ಹೆಚ್ಚಳವಲ್ಲ; ಅದು ದೇಶದ ರಾಜಕೀಯ ಅಧಿಕಾರದ ಹಂಚಿಕೆ, ಒಕ್ಕೂಟ ವ್ಯವಸ್ಥೆ ಮತ್ತು ಸಾಮಾಜಿಕ ನ್ಯಾಯದ ಭವಿಷ್ಯವನ್ನು ನಿರ್ಧರಿಸುವ ಪ್ರಕ್ರಿಯೆ. ಕ್ಷೇತ್ರಗಳ ಗಡಿ ಬದಲಾವಣೆಯಿಂದ ದಲಿತ, ಆದಿವಾಸಿ,...

ಗುಳೇದಗುಡ್ಡ | ತಾಲೂಕಾಗಿ ಹತ್ತು ವರ್ಷ ಕಳೆದರೂ ಭೂ...

ಗುಳೇದಗುಡ್ಡ ತಾಲೂಕು ರಚೆನೆಯಾಗಿ ಹತ್ತು ವರ್ಷ ಕಳೆದಿದೆ. ತಾಲೂಕು ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮಗಳಿಗೆ ಸಂಬಂಧಿಸಿದ ಭೂದಾಖಲೆಗಳು ಬಾದಾಮಿ ತಹಸೀಲ್ದಾರ್ ಕಚೇರಿ ಮತ್ತು ಗದಗ ರಸ್ತೆಯ ಎಪಿಎಂಸಿ ಸಮೀಪದ ಕಚೇರಿಯಲ್ಲಿ ಸಂಗ್ರಹವಾಗಿವೆ....

ನಗರದ ಜಿಲ್ಲಾ ಅಂಬೇಡ್ಕರ್  ಜಿಲ್ಲಾ ಕ್ರೀಡಾಂಗಣದಿಂದ ಹೊರಟ ಜೀಪ್ ಜಾಥಾಕ್ಕೆ  ಕರ್ನಾಟಕ ಅಭಿವೃದ್ದಿ ಹೋರಾಟ ಸಮಿತಿಯ ಅಧ್ಯಕ್ಷ  ಕೆ. ವೀರಭದ್ರಸ್ವಾಮಿ  ಹಸಿರು ನಿಶಾನೆ ತೋರಿದರು. ಬಳಿಕ ಜೀಪ್ ಜಾಥಾವು  ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ಸರ್ಕಲ್, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್ ರಸ್ತೆ ಸುಲ್ತಾನ್ ಷರೀಪ್ ರಸ್ತೆ , ಗುಂಡ್ಲುಪೇಟೆ ಸರ್ಕಲ್ ಮಾರ್ಗವಾಗಿ  ಮತ್ತೆ ಕ್ರೀಡಾಂಗಣ ತಲುಪಿತು. 

ಕರ್ನಾಟಕ ಅಭಿವೃದ್ದಿ ಹೋರಾಟ ಸಮಿತಿಯ ಅಧ್ಯಕ್ಷ  ಕೆ. ವೀರಭದ್ರಸ್ವಾಮಿ ಮಾತನಾಡಿ,  ಕರ್ನಾಟಕ ರಾಜ್ಯ ರೈತ ಮಿತ್ರ ಎಲೆಕ್ಟ್ರಿಕಲ್ ಮತ್ತು ಮೋಟಾರ್ ರಿವೈಡಿಂಗ್ ಕೆಲಸಗಾರರು ಸಂಘಟಿತರಾಗಿ  ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ  ಹೋರಾಟ ಅಗತ್ಯವಾಗಿದೆ. ನಿಮ್ಮ ಯಾವುದೇ ಹೋರಾಟಕ್ಕೆ ನಮ್ಮ ಸಂಘದ ಬೆಂಬಲ ಇರುತ್ತದೆ ಎಂದು ತಿಳಿಸಿದರು. 

ಸಂಘದ ಅಧ್ಯಕ್ಷ  ಗೌಡಿಕೆ ನಾಗೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ  ಮೋಟಾರ್ ರಿವೈಡಿಂಗ್ ಹಾಗೂ ಎಲೆಕ್ಟ್ರಿಕಲ್  ಕೆಲಸ ಮಾಡುವವರು ಬಹಳಷ್ಟು ಮಂದಿ ಇದ್ದಾರೆ.  ಇವರ ರಕ್ಷಣೆ ಮತ್ತು ಸಂಘಟನೆ ಮಾಡುವ ನಿಟ್ಟಿನಲ್ಲಿ  ಸಂಘವನ್ನು ಸ್ಥಾಪನೆ ಮಾಡಿದ್ದು, ವೃತ್ತಿ ಕೌಶಲ್ಯ ಹೆಚ್ಚಳ ಹಾಗೂ ಹೊಸ ತಂತ್ರಜ್ಞಾನವನ್ನು ಪರಿಚಯಿಸುವ ಜೊತೆಗೆ ಮೊಟಾರ್ ರಿವೈಡಿಂಗ್ ಕೆಲಸಗಳಿಗೆ ತೆರಳುವ ಜೀಪ್‌ಗಳಿಗೆ ಸಾರಿಗೆ ಇಲಾಖೆಯ ಪರವಾನಗಿ ಮತ್ತು ವಾಹನ ವಿಮೆ ಸೌಲಭ್ಯವನ್ನು ಕಲ್ಪಿಸಿಕೊಡಬೇಕೆಂಬ ನಮ್ಮ ಹೋರಾಟ ನಿರಂತರವಾಗಿದೆ. ಕನ್ನಡ ರಾಜ್ಯೋತ್ಸವ ಆಚರಣೆಯ  ಜೊತೆಗೆ  ಕನ್ನಡ  ನಾಡು, ನುಡಿ ಜಲ ವಿಚಾರದಲ್ಲಿ ಕನ್ನಡಿಗರು ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದರು.
 
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಜಾಹೀರ್, ಖಜಾಂಚಿ ರೇವಣ್ಣ, ಕಾರ್ಯದರ್ಶಿಗಳಾದ ನಾಗರಾಜು,  ಮೂಡ್ನಾಕೂಡು ಮಹೇಶ್, ಅರಳೀಕಟ್ಟೆ ಮಹೇಶ್, ಸಂತೇಮಹರಳ್ಳಿ ರಾಜು,  ನಾಗೇಂದ್ರ ,ಮೈಸೂರು ಜಿಲ್ಲಾ ಸಂಘದ ಅಧ್ಯಕ್ಷ ನಾಗೇಂದ್ರ, ಮೈಸೂರು ಆಲಿ, ರೆಹಮಾನ್, ಗುರುಸ್ವಾಮಿ, ಕುಮಾರ್, ಮೊದಲಾದವರು ಇದ್ದರು. 
೫೦ಕ್ಕು  ಜೀಪ್‌ಗಳು ರ‍್ಯಾಲಿಯಲ್ಲಿ ಭಾಗವಹಿಸಿ ಗಮನ ಸೆಳೆದವು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವಕಲ್ಯಾಣಕ್ಕೆ ಜಿಲ್ಲಾ ಸ್ಥಾನಮಾನ, ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆಗೆ ಆಗ್ರಹ

ಬಸವಕಲ್ಯಾಣದಲ್ಲಿ ವಿಶ್ವ ಬಸವಧರ್ಮ ಟ್ರಸ್ಟ್ ಹಾಗೂ ಅನುಭವ ಮಂಟಪದ ಆಶ್ರಯದಲ್ಲಿ ಎರಡು...

ಕ್ಷೇತ್ರ ಮರುವಿಂಗಡಣೆ ಮಸೂದೆ ಬೆಂಬಲಿಸಲು ನನಗೂ ಆಫರ್ ಬಂದಿತ್ತು, ಆದರೆ ಜನರ ಹಿತಾಸಕ್ತಿ ನನಗೆ ಮುಖ್ಯ: ಉದ್ಧವ್ ಠಾಕ್ರೆ

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಕ್ಷೇತ್ರ ಮರುವಿಂಗಡಣೆ...

ಜನನುಡಿ 2026 | ನಾವಿಂದು ಗಾಯಗೊಂಡ ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆ : ಕಿರಣ್ ಗಾಜನೂರು

ನಾವಿಂದು ಒಂದು 'ಗಾಯಗೊಂಡ ಪ್ರಜಾಪ್ರಭುತ್ವ'ದಲ್ಲಿ ಬದುಕುತ್ತಿದ್ದೇವೆ. ಯಾವ ಸಮಾಜದಲ್ಲಿ ಧರ್ಮವು ರಾಜಕೀಯದ...

ಜನನುಡಿ – 2026 | ನಮ್ಮ ನಡುವೆ ಇರುವ ಫ್ಯಾಸಿಸ್ಟರ ಬಗ್ಗೆ ಸದಾ ಜಾಗೃತರಾಗಿರಬೇಕು : ಟಿ. ಎಲ್‌. ಕೃಷ್ಣೇಗೌಡ

ಫ್ಯಾಸಿಸ್ಟರು ನಮ್ಮ ನಡುವೆಯೇ ಸಾಮಾನ್ಯರಂತೆ, ಅತ್ಯಂತ ಅಮಾಯಕರಂತೆ ಇರುತ್ತಾರೆ. ಇಂತಹ ಅಮಾಯಕ...