ಭಗವಾನ್ ಬುದ್ಧರ ತತ್ವ ಸಿದ್ಧಾಂತಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಜೀವನವು ಸಾರ್ಥಕವಾಗುತ್ತದೆ ಎಂದು ರಾಜ್ಯದ ಗೃಹ ಸಚಿವ ಹಾಗೂ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಜಿ ಪರಮೇಶ್ವರ್ ತಿಳಿಸಿದರು.
ತುಮಕೂರು ನಗರದ ಹೊರವಲಯದಲ್ಲಿರುವ ಸಿದ್ಧಾರ್ಥ ನಗರದಲ್ಲಿ ಶ್ರಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯವತಿಯಿAದ ಆಯೋಜಿಸಿದ್ಧಂತಹ ಬುದ್ಧ ಪೌರ್ಣಮಿಯ ಕಾರ್ಯಕ್ರಮದಲ್ಲಿ ಬುದ್ಧನ ವಿಗ್ರಹಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಮಾತನಾಡಿದ ಅವರು, ಭಗವಾನ್ ಬುದ್ಧರು ಮನುಷ್ಯ ಕುಲಕ್ಕೆ ನೀಡಿದ ವಿಚಾರಗಳು, ತತ್ವ ಸಿದ್ಧಾಂತಗಳು ಸಾವಿರಾರು ವರ್ಷಗಳು ಕಳೆದರೂ ಇನ್ನೂ ಜೀವಂತವಾಗಿದೆ ಹಾಗೂ ಮುಂದೆಯೂ ಇರುತ್ತದೆ ಎಂದರೆ ಅವರ ವಿಚಾರಗಳು ಎಷ್ಟು ಮಹತ್ವದ್ದು ಎಂದು ಯೋಚಿಸಬೇಕು. ಮನುಷ್ಯ ಪ್ರತಿನಿತ್ಯ ಅನುಭವಿಸುವ ದುಃಖ ದುಮ್ಮಾನಗಳಿಗೆ, ಕಷ್ಟಗಳಿಗೆ ಮುಕ್ತಿದೊರೆಯುವ ಮಾರ್ಗವನ್ನು ಮಾನವ ಕುಲಕ್ಕೆ ತೋರಿಸಿಕೊಟ್ಟವರು ಭಗವಾನ್ ಬುದ್ಧರು. ಭಗವಾನ್ ಬುದ್ಧ ಹಾಗೂ ಅವರ ವಿಚಾರಗಳು ಯಾವಕಾಲಕ್ಕೂ ಪ್ರಸ್ತುತವೆನಿಸುತ್ತದೆ. ಇಂತಹ ವಿಚಾರಗಳನ್ನು ತತ್ವ ಸಿದ್ಧಾಂತಗಳನ್ನು ಸಾಕಷ್ಟು ರಾಷ್ಟçಗಳು ಅಳವಡಿಸಿಕೊಂಡು ಮುಂದುವರೆಯುತ್ತಿದೆ ಎಂದು ಹೇಳಿದರು
.ಸಿಬಿಐ ನ್ಯಾಯಲಯದ ನ್ಯಾಯಾಧೀಶರಾದ ಎಚ್ ಎ ಮೋಹನ್ ಮಾತನಾಡಿ ಮಾನವ ಕುಲಕ್ಕೆ ಶಾಂತಿಯನ್ನು ಭೋದಿಸಿದ ಮಾನವನ ಕಷ್ಟ ದುಃಖಗಳಿಗೆ ಸೂಕ್ತ ಮಾರ್ಗವನ್ನು ಸೂಚಿಸಿದವರು ಮಹಾನ್ ಚೇತನ ಗೌತಮ ಬುದ್ಧ. ಇವರ ತತ್ವಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಾಹೇ ವಿವಿಯ ಉಪಕುಲಪತಿಗಳಾದ ಡಾ. ಕೆ.ಬಿ. ಲಿಂಗೇಗೌಡ ಮಾತನಾಡಿ ಭಗವಾನ್ ಬುದ್ಧರ ತತ್ವ ಸಿದ್ಧಾಂತಗಳನ್ನು ಅಂಬೇಡ್ಕರ್ ಅವರ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದವರು ಡಾ.ಎಚ್.ಎಂ. ಗಂಗಾಧರಯ್ಯನವರು, ಹಾಗಾಗಿಯೇ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡಿದ್ದಾರೆ. ಇವರ ಹಾದಿಯಲ್ಲೇ ಡಾ. ಜಿ ಪರಮೇಶ್ವರ ರವರೂ ಕೂಡ ನಡೆಯುತ್ತಿದ್ದಾರೆ. ಈ ಸಂಸ್ಥೆ ಇನ್ನು ಎತ್ತರಕ್ಕೆ ಬೆಳೆಯಲಿ ಇದಕ್ಕೆ ನಮ್ಮೆಲ್ಲರ ಬೆಂಬಲ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ನಂಜುಂಡಪ್ಪ, ಬೀದರ್ ಬೌದ್ಧ ವಿಹಾರದ ಭಿಕ್ಷಷು ಪೂಜ್ಯ ಬಂತೇಜಿರವರು, ಸಾಹೇ ವಿವಿಯ ಕುಲಸಚಿವರಾದ ಡಾ. ಅಶೋಕ್ ಮೆಹತ, ಪರಿಕ್ಷಾಂಗ ನಿಯಂತ್ರಕ ಡಾ. ಗುರುಶಂಕರ್, ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಕುಡುವ, ಕುಲಪತಿಗಳ ಆಪ್ತ ಸಲಹೆಗಾರರಾದ ಡಾ. ವಿವೇಕ್ ವೀರಯ್ಯ, ವೈದ್ಯಕೀಯ ಅಧೀಕ್ಷಕರಾದ ಡಾ. ವೆಂಕಟೇಶ್, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಎಸ್ ರವಿಪ್ರಕಾಶ್ ಹಾಗೂ ಸಂಸ್ಥೆಯ ವಿವಿಧ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.