ತುಮಕೂರು | ಬಡವರ ಅಭ್ಯುದಯ ಸಿದ್ದರಾಮಯ್ಯನವರ ಆಶಯ: ಸಚಿವ ಕೆ ಎನ್ ರಾಜಣ್ಣ

Date:

ಬಡವರ ಅಭ್ಯುದಯ ಆಗಬೇಕೆಂಬುದು ಸಿದ್ದರಾಮಯ್ಯ ಅವರ ಆಶಯ. ಅವರ ಅನ್ನಭಾಗ್ಯ ಯೋಜನೆ ಜನರಿಗೆ ಬದುಕು ನೀಡಿದೆ. ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಇಂಥವರು ಅಧಿಕಾರದಲ್ಲಿರಬೇಕು ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಅಭಿಪ್ರಾಯ ಪಟ್ಟರು.

ತುಮಕೂರು ಜಿಲ್ಲೆ ಮಧುಗಿರಿಯ ಕುರುಬರ ಸಮುದಾಯ ಭವನದಲ್ಲಿ ‘ಕನಕ ನೌಕರರ ಸಂಘʼದ ವತಿಯಿಂದ ಭಾನುವಾರ ಏರ್ಪಡಿಸಿಸಿದ್ದ ‘ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

“ಪ್ರಸ್ತುತದಲ್ಲಿ ಯಾವುದೇ ಭಿಕ್ಷುಕರೂ ಅನ್ನ ಬೇಡುತ್ತಿಲ್ಲ. ಅದಕ್ಕೆ ಕಾರಣ ಅನ್ನಭಾಗ್ಯ. ಬಡವರ ಕಾರ್ಯಕ್ರಮಗಳನ್ನು ತೆಗೆದುಕೊಂಡು ಹೋದರೆ ಸಿದ್ದರಾಮಯ್ಯ ಮೊದಲ ಆದ್ಯತೆ ನೀಡುತ್ತಾರೆ. ಅವರು ಎಂದಿಗೂ ನುಡಿದಂತೆ ನಡೆಯುವವರು. ಅವರು ಸುಳ್ಳು ಹೇಳುವವರಲ್ಲ. ಯಾರ ಬಗ್ಗೆಯೂ ಹೇಳಿಕೆ ಮಾತು ಕೇಳುವವರಲ್ಲ. ಎಲ್ಲರನ್ನೂ ಸಮಾನವಾಗಿ ಕೊಂಡೊಯ್ಯುತ್ತಾರೆ. ಆದ್ದರಿಂದ ನಮಗೆಲ್ಲ ಅವರು ಅಚ್ಚುಮೆಚ್ಚು” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಹೆಣ್ಣು-ಗಂಡು ಇಬ್ಬರಲ್ಲೂ ಸಮಾನವಾದ ಬುದ್ಧಿಶಕ್ತಿ ಇರುತ್ತದೆ. ಸೂಕ್ತ ಪರಿಸರ ಮತ್ತು ಮಾರ್ಗದರ್ಶನ ಇದ್ದಾಗ ಸಾಧನೆ ಮಾಡಲು ಸಾಧ್ಯ. ವಿದ್ಯೆಗೆ ಸರ್ವಸ್ವವನ್ನೂ ಗಳಿಸುವ ಶಕ್ತಿ ಇದೆ. ಯಾವುದೇ ಮಕ್ಕಳಲ್ಲೂ ಕೀಳರಿಮೆಯನ್ನು ಬೆಳೆಸಬಾರದು. ಇಬ್ಬರನ್ನೂ ಸಮಾನವಾಗಿ ಕಾಣುವುದರಿಂದ ಗುರಿ ಸಾಧಿಸಲು ಸಾಧ್ಯವಾಗುತ್ತದೆ” ಎಂದರು.

“1957ರಲ್ಲಿ ಶುಲ್ಕ ಪಾವತಿಸದ ಕಾರಣಕ್ಕೆ ಶಾಲೆಯಲ್ಲಿ ನನ್ನ ಸಹಪಾಠಿಯನ್ನು ಆಚೆಗೆ ಹಾಕಿದ್ದರು. ಅಸಹಾಯಕರಿಗೆ ನೆರವಾಗಬೇಕೆಂದು ಅಂದೇ ತೀರ್ಮಾನ ಮಾಡಿದ್ದೆ. ಇಂದು ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಯಾರೇ ಬಂದರೂ ಫೀಸ್ ಎಷ್ಟೇ ಆಗಿದ್ದರೂ ಕೂಡ ಮೊದಲು ಅವರಿಗೆ ಸ್ಪಂದಿಸುತ್ತೇನೆ. ಮೂರನೇ ತಲೆಮಾರಿಗೆ ಭೂಮಿ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ವಿದ್ಯೆಯನ್ನು ಹೆಚ್ಚು ಮಾಡಿಕೊಳ್ಳಬೇಕು. ಸಹಕಾರ ಸ್ಮರಣೆ ಇರಬೇಕು” ಎಂದರು.

“ಅಸಹಾಯಕರಿಗೆ ಮತ್ತು ಧ್ವನಿ ಇಲ್ಲದವರ ಪರ ಧ್ವನಿ ಎತ್ತಿದಾಗ ಅದೇ ನಮಗೆ ದೇವರ ಆಶೀರ್ವಾದ. ನಮ್ಮ ನಡವಳಿಕೆಗಳು ದುರ್ಬಲ ವರ್ಗದವರ ಪರವಾಗಿ ಇರಬೇಕು. ಹೆಣ್ಣು ಮಕ್ಕಳಿಗೆ ಅವಕಾಶ ನೀಡಿದಾಗ ಪ್ರತಿಭಾವಂತಿಕೆ ತಿಳಿಯುತ್ತಿದೆ. ವಿದ್ಯೆ ಪಡೆದ ಹೆಣ್ಣು ಮಕ್ಕಳು ಸಮಾಜದ ಆಸ್ತಿ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ತಾಂತ್ರಿಕ ಸಮಸ್ಯೆಗಳಿಂದ ಹೊರಬರದ ಶಾಖೋತ್ಪನ್ನ ಕೇಂದ್ರಗಳು; ವಿದ್ಯುತ್ ಉತ್ಪಾದನೆ ಕುಸಿತ

“ದೊಡ್ಡೇರಿ ಹೋಬಳಿಯಲ್ಲೇ ನಾಲ್ಕೂವರೆ ಸಾವಿರ ಲೀಡ್. ಕುಂಚಿಟಿಗ ಸಮುದಾಯದ ವಿದ್ಯಾವಂತರೂ ನನಗೆ ಬೆಂಬಲ ನೀಡಿದರು. 96 ಸಾವಿರ ಮತಗಳು ಮಧುಗಿರಿ ಇತಿಹಾಸದಲ್ಲಿ ಯಾವ ಅಭ್ಯರ್ಥಿಗಳಿಗೂ ಬಿದ್ದಿಲ್ಲ. ಎಲ್ಲ ಸಮುದಾಯಗಳ ಋಣ ತೀರಿಸುತ್ತೇನೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಈ ವೇಳೆ ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಹಾಗೂ ಕುರುಬ ಸಂಘದ ಮುಖಂಡ ಗೇಟ್ ಶಿವಣ್ಣ, ಸಂಪಾದಕ ಎಸ್ ನಾಗಣ್ಣ, ಕಾಂಗ್ರೆಸ್ ಮುಖಂಡ ತಂಗೋಟಿ ರಾಮಣ್ಣ ಇದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಅರೆಬೆಂದ ಊಟ ಸೇವಿಸಿ ವಸತಿ ನಿಲಯದ ವಿದ್ಯಾರ್ಥಿನಿಯರು ಅಸ್ವಸ್ಥ

ಅಂಬೇಡ್ಕರ್ ವಸತಿ ನಿಲಯವೊಂದರಲ್ಲಿ ಅರೆಬೆಂದ ಊಟ ಸೇವಿಸಿ 24 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ...

ಲೋಕಸಭಾ ಚುನಾವಣೆ | ಮೊದಲ ಹಂತದ ಮತದಾನ ದಿನ 2,172 ಪ್ರಕರಣ ದಾಖಲು

ಲೋಕಸಭಾ ಚುನಾವಣೆ ಹಿನ್ನೆಲೆ, ಏ.26 ರಂದು ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...

ಚಿಕ್ಕಮಗಳೂರು | ಹಿಂದು ಕಾರ್ಯಕರ್ತನ ಮೇಲೆ ಬಿಜೆಪಿಗರ ಹಲ್ಲೆ

ಹಿಂದುತ್ವವಾದಿ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿ, ಥಳಿಸಿರುವ ಘಟನೆ...

ಮಂಡ್ಯ | 8,000 ಕಿ.ಮೀ ದೂರದಿಂದ ಬಂದು ಮತದಾನ ಮಾಡಿದ ಯುವತಿ!

ಯುವತಿಯೊಬ್ಬರು ಬರೋಬರಿ 8,000 ಕಿ.ಮೀ ದೂರದ ಲಂಡನ್‌ನಿಂದ ಮಂಡ್ಯಕ್ಕೆ ಬಂದು ಮತದಾನ...