ತುಮಕೂರು | ಕುಲಾಂತರಿ ನೀತಿಯನ್ನು ಕಾಲಿನಲ್ಲಿ ಒದ್ದು ತಿರಸ್ಕರಿಸಬೇಕು: ರೈತ ಮುಖಂಡ ಕೆ.ಟಿ. ಗಂಗಾಧರ್

Date:

116 ದೇಶಗಳಲ್ಲಿ ತಿರಸ್ಕಾರ ಮಾಡಿರುವ ಕುಲಾಂತರಿ ಬೀಜ ತಳಿಯನ್ನು ನಮ್ಮ ದೇಶದಲ್ಲಿ ತರಲು ಹೊರಟಿರುವುದು ವಿಪರ್ಯಾಸ. ಇದರಿಂದ ಪರಿಸರ, ಜೀವವೈಧ್ಯತೆ ಅಷ್ಟೇ ಅಲ್ಲದೆ, ಮಾನವನ ವಿಕಾಸದಲ್ಲೂ ಅನಾಹುತವೇ ಸಂಭವಿಸಲಿದೆ. ಆದ್ದರಿಂದ ರೈತರು ಮಾತ್ರವಲ್ಲದೆ, ಪಟ್ಟಣದಲ್ಲಿರುವ ಜನರೂ ಕುಲಾಂತರಿ ನೀತಿಯನ್ನು ಕಾಲಿನಲ್ಲಿ ಒದ್ದು ತಿರಸ್ಕಾರ ಮಾಡಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಕೆ.ಟಿ. ಗಂಗಾಧರ್ ಕರೆ ನೀಡಿದರು.

- Advertisement -

ಗಾಂಧಿ ಸಹಜ ಬೇಸಾಯ ಆಶ್ರಮದ ವತಿಯಿಂದ ‘ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಬೇಯರ್ ಮತ್ತು ಮಾನ್ಸೆಂಟೋ ಕಂಪನಿಗಳ ಸಹಯೋಗದಲ್ಲಿ ತರಲು ಹೊರಟಿರುವ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯನ್ನು ವಿರೋಧಿಸಿ ಹಮ್ಮಿಕೊಂಡಿರುವ ಗ್ರಾಮಾಂತರದ ಹ್ಯಾಂಡ್ ಪೋಸ್ಟ್‌ನ ದೊಡ್ಡ ಹೊಸೂರಿನ ಎರಡನೇ ದಿನದ ಸತ್ಯಾಗ್ರಹ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಳೇ ಮೈಸೂರು: ಮಹಿಳಾ ರಾಜಕಾರಣಕ್ಕೆ ದಿಕ್ಕು ತೋರಿದ ‘ಗುಂಡ್ಲುಪೇಟೆ...

ಹಳೇ ಮೈಸೂರು ಭಾಗದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ, ಪುರುಷ ಪ್ರಧಾನ ರಾಜಕಾರಣದ ನಡುವೆ ತನ್ನದೇ ಆದ ಛಾಪು ಮೂಡಿಸಿದ ಮಹಿಳಾ ನಾಯಕಿಯರ ಪೈಕಿ ಕೆ.ಎಸ್. ನಾಗರತ್ನಮ್ಮ ಅವರ ಹೆಸರು ವಿಶಿಷ್ಟವಾಗಿ ಕಾಣಿಸುತ್ತದೆ. ಶಾಸಕಿಯಾಗಿ,...

ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ...

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟಿರ್ಕಿ...

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ತ್ರೇತಾಯುಗದಲ್ಲಿ ರಾಮ ಸೀತೆಯೂ ಕೃಷಿ ಮಾಡಿದ್ದರು. ಭರತಖಂಡದಲ್ಲಿ ಕೃಷಿಗೆ ಪೂರಕವಾದ ವಾತಾವರಣವಿದೆ. ಇಲ್ಲಿನ ಕೃಷಿಗೆ ಶೇ.75ರಷ್ಟು ಪ್ರಾಕೃತಿಕ ಬೆಂಬಲವಿದ್ದು, ಶೇ.25 ರಷ್ಟು ಮಾತ್ರವೇ ಮಾನವನ ಶ್ರಮವಿರುತ್ತದೆ. ಆದ್ದರಿಂದಲೇ, ನಮ್ಮದು ಬಹುಪಾಲು ಕೃಷಿ ಪ್ರಧಾನವಾದ ಸಂಪದ್ಭರಿತ ರಾಷ್ಟ್ರ. ಈ ಸಾರ್ವಭೌಮತೆಯನ್ನು ವಶಕ್ಕೆ ಪಡೆಯಲು ಬಹುರಾಷ್ಟ್ರೀಯ ಕಂಪನಿಗಳು ಹುನ್ನಾರ ನಡೆಸಿವೆ. ದೇಶೀ ಬೆಳೆಗಳನ್ನು ನಾಶ ಮಾಡಿ ಕುಲಾಂತರಿ ವ್ಯವಸ್ಥೆಯನ್ನು ತರುವ ಮೂಲಕ ನಮ್ಮ ಕೃಷಿ ವ್ಯವಸ್ಥೆಯನ್ನು ನಿಯಂತ್ರಣ ಮಾಡಲು ಯೋಜನೆ ರೂಪಿಸಿವೆ. ಅನ್ನ ಹಾಕುವ ರೈತರನ್ನು ಗ್ರಾಹಕರನ್ನಾಗಿ ಮಾರ್ಪಾಡು ಮಾಡುವ ದೊಡ್ಡ ಸಂಚು ನಡೆದಿದೆ ಎಂದು ವಿವರಿಸಿದರು.

ಹಸಿರು ಕ್ರಾಂತಿಯಿಂದಾದ ಹಾನಿಯಿಂದ ಇನ್ನೂ ಚೇತರಿಸಿಕೊಳ್ಳಲು ಆಗಿಲ್ಲ. ಈಗ 3ನೇ ಕೃಷಿ ಕ್ರಾಂತಿ ತರಲು ಹೊಂಚು ಹಾಕುತ್ತಿದ್ದಾರೆ. ಇದನ್ನು ನಾವು ವಿರೋಧಿಸಬೇಕು. ನಮ್ಮ ಧ್ವನಿ ಹಾಗೂ ಪ್ರತಿಭಟನೆಗಳ ಸಾಮರ್ಥ್ಯ ಹೆಚ್ಚಾದರೆ ಸಂವಿಧಾನಾತ್ಮಕವಾಗಿಯೂ ಮಹತ್ವ ದೊರೆಯಲಿದ್ದು, ಸರ್ಕಾರಗಳಿಗೆ ಚಳವಳಿಗಳ ಮೂಲಕವೇ ಅರ್ಥ ಮಾಡಿಸೋಣ ಎಂದು ನಿರ್ಧಾರ ಕೈಗೊಂಡರು.

WhatsApp Image 2024 09 30 at 6.52.51 PM

“ಕುಲಾಂತರಿ ನೀತಿಯ ಚೆಂಡು ಸುಪ್ರೀಂ ಕೋರ್ಟಿನಿಂದ ಸಂಸತ್ತಿನ ಅಂಗಳಕ್ಕೆ ಬಂದು ನಿಂತಿದೆ. ಈಗ ನಮ್ಮ ಜನಪ್ರತಿನಿಧಿಗಳ ಮೇಲೆ ಒತ್ತಡ ತರುವ ಮೂಲಕ ಕಾಯಿದೆಗೆ ಸಹಿ ಬೀಳದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಯ ಜನ್ಮ ಜಾಲಾಡಲು ಸಿದ್ಧರಾಗಬೇಕು” ಎಂದು ಕೆ.ಟಿ. ಗಂಗಾಧರ್ ಕರೆ ನೀಡಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಸರ್ಕಾರಿ ವಿಜ್ಞಾನಿಗಳು ಮಾರಾಟವಾಗಿದ್ದಾರೆ. ವೈದ್ಯರು ವ್ಯಾಪಾರಿಗಳಾಗಿದ್ದಾರೆ. ಆರೋಗ್ಯ ಮತ್ತು ವಿಜ್ಞಾನ ಕ್ಷೇತ್ರವೇ ಹಣಗಳಿಕೆಗೆ ಮೀಸಲಾಗಿದೆ. ಹಳಿತಪ್ಪಿರುವ ವ್ಯವಸ್ಥೆ ಸರಿಮಾಡುವವರು ಯಾರು ಎಂಬುದೇ ಪ್ರಶ್ನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯ ಹಾಗೂ ವ್ಯಾಪಾರದಂತೆ ಕೃಷಿಯಲ್ಲಿಯೂ ಸಂಸ್ಕೃತಿ ಕಣ್ಮರೆಯಾಗಿದೆ. ಪುಟ್ಟ ಮಕ್ಕಳಿಗೆ ಡಯಾಬಿಟೀಸ್ ಅಂಟಿಕೊಂಡಿದೆ. ನಾಲ್ಕು ವರ್ಷದ ಹೆಣ್ಣು ಮಕ್ಕಳು ಋತುಮತಿಯಾಗುತ್ತಿದ್ದಾರೆ. ಮತ್ತೊಂದು ಕಡೆ ಅಪೌಷ್ಠಿಕತೆ ಕಾಡುತ್ತಿದೆ. ಈಗ ಅನ್ನ ತಿನ್ನುವವರೆಲ್ಲರೂ ಎಚ್ಚೆತ್ತುಕೊಳ್ಳಬೇಕಾದ ಕಾಲ ಬಂದಿದೆ. ಇಲ್ಲವಾದರೆ ಆಹಾರ ಕ್ಷೇತ್ರ ಅಧೋಗತಿ ತಲುಪಲಿದೆ ಎಂದು ಎಚ್ಚರಿಸಿದರು.

ಕುಲಾಂತರಿ

ಭೂಮಿಗೂ ನಮಗೂ ಭಾವನಾತ್ಮಕ ಸಂಬಂಧವಿದ್ದು, ಕೃಷಿ ಸಂಸ್ಕೃತಿ ಆಧಾರಿತ ಉದ್ಯೋಗ ತಂದುಕೊಟ್ಟಿದೆ. ನಮ್ಮ ಸಂಸ್ಕೃತಿ ಉಳಿಯಬೇಕೆಂದರೆ ಭೂಮಿಯನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ದೊಡ್ಡ ಹೊಸೂರು ಸತ್ಯಾಗ್ರಹ ದಾಖಲೆಯಾಗಿ ಉಳಿಯಲಿದೆ. ಸತ್ಯಾಗ್ರಹಕ್ಕೆ ತನ್ನದೇ ಆದ ಶಕ್ತಿ ಇದ್ದು, ಅದಕ್ಕೆ ಸಾಕ್ಷಿಯಾಗಿ ಮಹಾತ್ಮಗಾಂಧಿ ನಮ್ಮೆದುರಿಗಿದ್ದಾರೆ ಎಂದು ರೈತರನ್ನು ಹುರಿದುಂಬಿಸಿದರಲ್ಲದೆ, ಎಲ್ಲ ರಾಜಕೀಯ ಪಕ್ಷಗಳು ಬಂಡವಾಳ ಶಾಹಿಗಳ ಪರವಿರುವುದರಿಂದ ನಾವು ಸ್ಥಳೀಯ ಮಟ್ಟದಿಂದಲೇ ಚಳಚಳಿಗಳನ್ನು ಕಟ್ಟಬೇಕು ಎಂದು ಬಡಗಲಪುರ ನಾಗೇಂದ್ರ ಸಲಹೆ ನೀಡಿದರು.

ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಮಾತನಾಡಿ, ನಮ್ಮ ದೇಶದ ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಪರಿಸರದ ಮೇಲೆ ಅವ್ಯಾಹತವಾಗಿ ದಾಳಿ ನಡೆಯುತ್ತಿದೆ. ಕೃಷಿ, ಕಲೆ, ಸಾಹಿತ್ಯ, ಆಡಳಿತ, ಸಂಸ್ಕೃತಿ ಒಂದಕ್ಕೊಂದು ಅಂತರ ಸಂಬಂಧ ಹೊಂದಿದ್ದು, ಈ ವ್ಯವಸ್ಥೆಯನ್ನು ಸರಿ ಮಾಡಬೇಕಾದರೆ ಮಸನೋಬು ಫುಕುವೋಕ, ಜೆ.ಸಿ.ಕುಮಾರ್, ಮಹಾತ್ಮಗಾಂಧಿ ಅವರ ತತ್ವದಡಿಯಲ್ಲಿ ಹೋರಾಟಗಳು ಮುನ್ನಡೆಯಬೇಕು ಎಂದರು.

ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ರೀತಿಯ ಭತ್ತದ ತಳಿಗಳಿದ್ದವು. ಅವೆಲ್ಲವೂ ಈಗ ನಾಶವಾಗಿ ಕುಲಾಂತರಿ ಭತ್ತ ರಾರಾಜಿಸುತ್ತಿದೆ. ಜಪಾನ್ ಹಾಗೂ ಚೀನಾದಲ್ಲಿ ಕುಲಾಂತರಿ ಮನುಷ್ಯರನ್ನು ಸೃಷ್ಟಿ ಮಾಡಲಾಗಿದೆ. ಇದು ಪ್ರಕೃತಿ ವಿರುದ್ಧವಾದುದು. ಹೀಗೇ ಮುಂದುವೆರೆದರೆ 2050ರ ಹೊತ್ತಿಗೆ ಭೂಮಂಡಲ ವಿನಾಶವಾಲಿದೆ ಎಂದು ನಾಸಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಪರಿಸರಕ್ಕೆ ಪೂರಕವಾದ ನೈಸರ್ಗಿಕ ಕೃಷಿ ಮಾಡಬೇಕು. ನಾವು ತಿನ್ನುವ ಆಹಾರ ಉತ್ತಮವಾಗಿದ್ದರೆ ಮನಸ್ಥಿತಿ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ. ಸಮಾಜದ ಬಗ್ಗೆ ಕಾಳಜಿ ವಹಿಸಬೇಕಾದ ಸಾಹಿತಿಗಳು ಮರ್ಯಾದೆ ಇಲ್ಲದಂತೆ ವರ್ತಿಸುತ್ತಿದ್ದು, ಸಣ್ಣಪುಟ್ಟ ರಾಜಕಾರಣಿಗಳಿಗೆ ಆ ಸ್ಥಾನ ಬಿಟ್ಟುಕೊಟ್ಟಿದ್ದಾರೆ ಎಂದು ಚಾಟಿ ಬೀಸಿದರು.

ಇದನ್ನು ಓದಿದ್ದೀರಾ? ಪಶ್ಚಿಮ ಘಟ್ಟಗಳ ಬಗ್ಗೆ ಕೇಂದ್ರದ ಕರಡು ಘೋಷಣೆ: ಗ್ರಾಮ, ವಾರ್ಡ್ ಸಭೆ ನಿರ್ಧರಿಸಲಿ; ಕೃಷಿ ತಜ್ಞರ ಸಲಹೆ

ಈ ಸಂದರ್ಭದಲ್ಲಿ ಅಖಿಲ ಭಾರತ ಕೃಷಿ ಕಾರ್ಮಿಕ ಸಂಘದ ಎಸ್.ಎನ್ ಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಹೋರಾಟಗಾರರಾದ ಶಾಂತಕೃಷ್ಣ, ತನುಜ, ನೇತ್ರಾವತಿ, ಶಾರದಾ, ಬಿ.ಮರುಳಯ್ಯ, ಕೃಷಿ ವಿಜ್ಞಾನಿ ಡಾ.ಮಂಜುನಾಥ್, ಪರಿಸರವಾದಿ ಸಿ.ಯತಿರಾಜು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಹಾಜರಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾರವಾರ | ಯುವಜನರಿಗೆ ಪ್ರಜಾಪ್ರಭುತ್ವದ ಮೌಲ್ಯಗಳ ಅರಿವು ಅಗತ್ಯ: ಕೆ.ಎಸ್. ಬಸವಂತಪ್ಪ

ಕಾರವಾರ: ಬಸವಣ್ಣನವರು 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಆಶಯಗಳಿಗೆ...

ಕೊಡಗು | ಸಮಾಜದ ನೋವಿಗೆ ಧ್ವನಿಯಾದ ಪತ್ರಕರ್ತನ ಬದುಕಿಗಾಗಿ ನೆರವಿನ ಮನವಿ

ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ಸಮಾಜದ ನೋವು,...

ರಾಯಚೂರು | ಅಂತರರಾಜ್ಯ ಕಳ್ಳನ ಬಂಧನ: ₹25.50 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ವಶ

ಸಿಂಧನೂರು ನಗರದ ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದ ವೇಳೆ ಬೀಗ...

ಯಾದಗಿರಿ | ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ; 19 ಮಂದಿ ವಿರುದ್ಧ ಪ್ರಕರಣ ದಾಖಲು

ಗಣೇಶ ಮೂರ್ತಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ...