ತುಮಕೂರು ದಸರಾ: ವಿಐಪಿಗಳಿಗೆ ರಾಜಮರ್ಯಾದೆ, ಸಾಮಾನ್ಯರ ಮೇಲೆ ಪೊಲೀಸ್ ದರ್ಪ!

Date:

 ಅಧಿಕಾರಿಗಳ ಕುಟುಂಬಸ್ಥರಿಗೆ ವಿಶೇಷ ಆತಿಥ್ಯ, ಜನ ಸಾಮಾನ್ಯರು ನಿಂತುಕೊಂಡು ಕಾರ್ಯಕ್ರಮ ನೋಡಲು ನೂಕು ನುಗ್ಗಲು , ಸಾಮಾನ್ಯರ ಮೇಲೆ ಪೊಲೀಸರ ದರ್ಪ..ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ  ಸೋಮವಾರ ರಾತ್ರಿ ಕಂಡು ಬಂದ ದೃಶ್ಯವಿದು…

- Advertisement -

‘ತುಮಕೂರು ದಸರಾ’ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಭಾಗವಹಿಸಿದ್ದರು. ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಕಾರ್ಯಕ್ರಮದ ಕಡೆಗೆ ಹೆಜ್ಜೆ ಹಾಕಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...
1004228867

ಪೊಲೀಸರು ವಿವಿಐಪಿ ಪಾಸ್‌ ಇದ್ದವರನ್ನು ಮಾತ್ರ ಮನುಷ್ಯರಂತೆ ನಡೆಸಿಕೊಂಡರು. ಉಳಿದವರನ್ನು ದರ್ಪದಿಂದ ಮಾತನಾಡಿಸಿದರು. ಅಧಿಕಾರಿಗಳು, ಅವರ ಕುಟುಂಬಸ್ಥರು ರಚಿತಾ ರಾಮ್ ಸುತ್ತಲೂ ಕೋಟೆ ಕಟ್ಟಿಕೊಂಡಿದ್ದರು. ಸಾಮಾನ್ಯರಿಗೆ ಕನಿಷ್ಠ ನಟಿಯನ್ನು ನೋಡಲೂ ಬಿಡಲಿಲ್ಲ. ದೂರದಿಂದಲೇ ಅವರ ಮಾತು ಕೇಳಿಸಿಕೊಂಡು ಪಾವನರಾದರು.

ಕಾರ್ಯಕ್ರಮದ ವ್ಯವಸ್ಥೆ ಹಾಗೂ ಪೊಲೀಸರ ವರ್ತನೆಯ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಗಾಯಕ, ನಟ ಚಂದನ್ ಶೆಟ್ಟಿ ಹಾಡುಗಳಿಗೆ ವಿವಿಐಪಿ ಪಾಸ್ ಪಡೆದವರು ವೇದಿಕೆ ಬಳಿ ಹೋಗಿ ಕುಣಿದು ಕುಪ್ಪಳಿಸಿದರು. ಪಾಸ್ ಇಲ್ಲದವರು ದೂರದಲ್ಲಿಯೇ ನಿಂತು ಕುಣಿದರು.

ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದ ಕೆಲವರು ಪೊಲೀಸರ ವರ್ತನೆ ಹಾಗೂ ಲಾಠಿ ಪ್ರಯೋಗದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸುವ ಸಂದರ್ಭದಲ್ಲಿ ಸಾರ್ವಜನಿಕರನ್ನು ನಡೆಸಿಕೊಂಡ ರೀತಿಯ ಬಗ್ಗೆ ಪ್ರಶ್ನೆಗಳು ಮೂಡಿವೆ. ಆದರೆ ಈ ಆರೋಪಗಳ ಕುರಿತು ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯ ಅಧಿಕೃತ ಸ್ಪಷ್ಟನೆ ಲಭ್ಯವಾಗಿದೆಯೇ ಎಂಬುದು ದೃಢಪಟ್ಟಿಲ್ಲ.

1004228869

ದೂರದ ಊರುಗಳಿಂದ ಮಕ್ಕಳೊಂದಿಗೆ ಆಗಮಿಸಿದ್ದ ಕುಟುಂಬಗಳು ಕಾರ್ಯಕ್ರಮವನ್ನು ವೀಕ್ಷಿಸಲು ಸೂಕ್ತ ಪ್ರವೇಶ ವ್ಯವಸ್ಥೆ ಕಲ್ಪಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿವೆ. ಖ್ಯಾತ ಕಲಾವಿದರ ಕಾರ್ಯಕ್ರಮ ಆಯೋಜಿಸಿದ್ದರೂ, ಜನಸಂದಣಿ ನಿರ್ವಹಣೆ, ಪ್ರವೇಶ ನಿಯಂತ್ರಣ ಮತ್ತು ಆಸನ ವ್ಯವಸ್ಥೆಯಲ್ಲಿ ಉಂಟಾದ ಸಮಸ್ಯೆಗಳು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿವೆ.

‘ದಸರಾ ಎಲ್ಲರಿಗಾಗಿ ಆಯೋಜಿಸುವ ಸಾರ್ವಜನಿಕ ಉತ್ಸವ. ಆದರೆ ವಿಐಪಿ ಮತ್ತು ವಿವಿಐಪಿಗಳಿಗೆ ವಿಶೇಷ ಗೌರವ ನೀಡಿ, ಸಾಮಾನ್ಯ ಜನರನ್ನು ನಿರ್ಲಕ್ಷಿಸುವುದು ಎಷ್ಟು ಸರಿ? ನಾವು ಕೂಡ ಸಾರ್ವಜನಿಕರೇ, ನಮ್ಮ ತೆರಿಗೆ ಹಣದಲ್ಲೇ ಇಂತಹ ಕಾರ್ಯಕ್ರಮಗಳು ನಡೆಯುತ್ತವೆ. ನೆಚ್ಚಿನ ಕಲಾವಿದರ ಕಾರ್ಯಕ್ರಮ ನೋಡಲು ಕುಟುಂಬ ಸಮೇತ ಬಂದ ಜನರಿಗೆ ಗೌರವಯುತ ಪ್ರವೇಶ ಮತ್ತು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಜಿಲ್ಲಾಡಳಿತದ ಜವಾಬ್ದಾರಿ. ವಿಐಪಿಗಳಿಗೆ ಮಾತ್ರ ಸೌಲಭ್ಯ ನೀಡಿ, ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಬಾರದು’ ಎಂದು ನಗರದ ಹೇಮಾಮಾಲಿನಿ ಆಕ್ಷೇಪ ವ್ಯಕ್ತಪಡಿಸಿದರು.

‘ಸಾವಿರಾರು ಜನರು ಸೇರುವ ಕಾರ್ಯಕ್ರಮದಲ್ಲಿ ಜನಸಂದಣಿ ನಿಯಂತ್ರಿಸುವುದು ಜಿಲ್ಲಾಡಳಿತದ ಕರ್ತವ್ಯ. ಆದರೆ ನನ್ನ ಮೇಲೆ ಪೊಲೀಸರು ದರ್ಪ ತೋರಿದ್ದಾರೆ. ಕುಟುಂಬ ಸಮೇತ ಬಂದವರು ಸುರಕ್ಷಿತವಾಗಿ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಬೇಕಿತ್ತು. ಜನರಿಗೆ ಭದ್ರತೆ ಮತ್ತು ಸಹಕಾರ ನೀಡಬೇಕಾದ ಜಿಲ್ಲಾಡಳಿತ ಭಯದ ವಾತಾವರಣ ಸೃಷ್ಟಿಸಬಾರದು’ ಎಂದು ಬಸವರಾಜ (ಹೆಸರು ಬದಲಾಯಿಸಲಾಗಿದೆ) ದೂರಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಕುಡಿಯುವ ನೀರಿನ ಸಮಸ್ಯೆ : ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ, ಇಂದೇ ಪರಿಹಾರಕ್ಕೆ ಸೂಚನೆ

 ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕು. ನೀರಿನ...

ತುಮಕೂರು | ಪದವಿಯೊಂದೇ ಸಾಲದು, ಉದ್ಯಮದ ಬೇಡಿಕೆಗೆ ತಕ್ಕ ಕೌಶಲ ಬೆಳೆಸಿಕೊಳ್ಳಿ : ವಿನಾಯಕ್ ಅಂಬರೀಷ್

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಪಡೆದುಕೊಂಡರೆ ಸಾಲದು. ಉದ್ಯಮ ಕ್ಷೇತ್ರದ...

ತುಮಕೂರು | ಎಸ್‌ಎಸ್‌ಐಟಿ–ಸಿಎಂಟಿಐ ಒಪ್ಪಂದ: ವಿದ್ಯಾರ್ಥಿಗಳಿಗೆ ಕೈಗಾರಿಕಾ ತರಬೇತಿ ಮತ್ತು ಸಂಶೋಧನೆಗೆ ಅವಕಾಶ

ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರದ ನಡುವಿನ ಸಹಯೋಗವನ್ನು ಬಲಪಡಿಸುವ ನಿಟ್ಟಿನಲ್ಲಿ...

ಮಧುಗಿರಿಯಲ್ಲಿ ಯುವ ಸಂಸತ್ತು ಅಣಕು ಅಧಿವೇಶನ

 ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ...