ಭಾರತದ ಸಂವಿಧಾನ ಕೇವಲ ನೀತಿ ನಿರೂಪಣೆಯ ಗುಚ್ಛವಲ್ಲ, ಅದು ಕೋಟ್ಯಂತರ ಭಾರತೀಯರ ಹಕ್ಕುಗಳ ರಕ್ಷಾಕವಚ, ನಮ್ಮ ದೇಶದ ನಿಜಚೇತನ.ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಭರವಸೆ.ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವಂತವಾಗಿಡುವ ಆಶಯಗಳ ಸಾಕಾರ ಸಾಧನ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಗೋವಿಂದರಾಯ ಎಂ ತಿಳಿಸಿದರು.
ಅವರು ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಸಂವಿಧಾನವು ನ್ಯಾಯದ ಭರವಸೆ, ದುರ್ಬಲರಿಗೆ ಧೈರ್ಯ, ಶೋಷಿತರಿಗೆ ಸಮಾನತೆಯ ಹಕ್ಕು ಹಾಗೂ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಅವಕಾಶ ನೀಡುತ್ತಿರುವ ಕಾನೂನಾತ್ಮಕ ದಾರಿದೀಪ ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ನಾಗರಾಜು ಮಾತನಾಡುತ್ತಾ ಭವಿಷ್ಯದ ಮಕ್ಕಳಿಗೆ ಸಂವಿಧಾನಾತ್ಮಕ ಭಾರತವನ್ನು ಜತನವಾಗಿ ಕಾಪಿಡಬೇಕು. ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಭ್ರಾತೃತ್ವದ ಮೌಲ್ಯಗಳ ಮೇಲೆ ನಿಂತ ಸಾಮರಸ್ಯ ಭಾರತವನ್ನು ಹಸ್ತಾಂತರಿಸಬೇಕು.ಇದಕ್ಕಾಗಿ ಸಂವಿಧಾನವನ್ನು ಜತನವಾಗಿ ಕಾಪಾಡಬೇಕು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಬುಡಸನಹಳ್ಳಿ ಮಾತನಾಡುತ್ತಾ, ಸಂವಿಧಾನವನ್ನು ರಕ್ಷಿಸುವುದು ಎಂದರೆ ಭಾರತದ ಪ್ರಜಾಪ್ರಭುತ್ವವನ್ನು, ಭಾರತದ ವಿವಿಧತೆಯನ್ನು ಮತ್ತು ಪ್ರತಿಯೊಬ್ಬ ಭಾರತೀಯನ ಹಕ್ಕುಗಳನ್ನು ರಕ್ಷಿಸುವುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಕಾರ್ಯದರ್ಶಿ ಮಂಜುನಾಥ್ ಬಿ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ರಂಜಿತ, ಡಾ.ಲತಾ ಸಿ.ವಿ, ಡಾ.ದುರ್ಗಪ್ಪ, ರಾಮಮೂರ್ತಿ, ಗ್ರಂಥಪಾಲಕ ಮಂಜುನಾಥ್, ಡಾ.ರಂಗಸ್ವಾಮಯ್ಯ, ಮಿಸ್ಬಾ, ಶಿವಶಂಕರ್, ಕುಮಾರ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.




