ಕಾರವಾರ ಜಿಲ್ಲೆಯ ಜೊಯಿಡಾ ತಾಲೂಕಿನ ಗುಂದ ಗ್ರಾಮದ ಸಮೀಪ ಕಾರಿನ ಚಕ್ರಕ್ಕೆ ಸಿಕ್ಕ ನಾಡ ಬಾಂಬ್‌ವೊಂದು ಸ್ಫೋಟಗೊಂಡ ಘಟನೆ ಮಂಗಳವಾರ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಜೋಯಿಡಾದಲ್ಲಿ ನಡೆಯತ್ತಿದ್ದ ಜನ ಸಂಪರ್ಕ ಸಭೆಗೆ ಗುಂದದಿಂದ ಮೂವರು ಅರೆಕಾಲಿಕ ಪತ್ರಕರ್ತರು ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರಿನಡಿಗೆ ಸಿಕ್ಕ ನಾಡಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಕಾರಿನ ಹಿಂಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಮೂವರು ಪತ್ರಕರ್ತರು ಕೂಡ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
“ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಳಸುವ ನಾಡ ಬಾಂಬ್ ರಸ್ತೆಯಲ್ಲಿ ಬಿದ್ದಿದ್ದು, ಅದರ ಮೇಲೆ ಕಾರಿನ ಟಯರ್ ಹತ್ತಿದ್ದರಿಂದ ಸ್ಫೋಟ ಸಂಭವಿಸಿದೆ” ಎಂದು ಸ್ಥಳಕ್ಕೆ ಭೇಟಿ ನೀಡಿದ ಜೋಯಿಡಾ ಪೊಲೀಸರು ಮಾಹಿತಿ ನೀಡಿದ್ದಾರೆ.
