ಬಗರ್‌ಹುಕುಂ ಭೂಸಾಗುವಳಿ ಮಾಡುತ್ತಿರುವ ಭೂರಹಿತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಬಗರಹುಕುಂ ಸಾಗುವಳಿದಾರರ ಭೂ ಕಾರ್ಯಕಾರಿ ಮಂಡಳಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದಿಂದ ವಿಜಯಪುರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸೋಮಲಿಂಗ್ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭೀಮರಾಯ ಪೂಜಾರಿ ಹಾಗೂ ಬಗರ ಹುಕುಂ ಭೂಸಾಗುವಳಿದಾರ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಹೇಮಲು ಜಾದವ್ ಮಾತನಾಡಿ, “1998-99ರಲ್ಲಿ ಬಗರ್‌ಹುಕುಂ ಭೂಹಂಚಿಕೆ ಅಡಿಯಲ್ಲಿ ಸಂಬಂಧಪಟ್ಟ ಸರ್ವೇ ನಂಬರ್‌ರಗಳಲ್ಲಿ ಅರ್ಜಿ ನಮೂನೆ ಫಾರ್ಮ್ ನಂ:52/53/57ರ ಮುಖಾಂತರ ಜಾಲಗೇರಿ ಗ್ರಾಮದ ಭೂರಹಿತರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು” ಎಂದು ಹೇಳಿದರು.
“ಬಗರ್‌ಹುಕುಂ ಹಕ್ಕುಪತ್ರ ನೀಡುವಂತೆ 1998ರಲ್ಲಿಯೇ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲಿಂದ ಈವರೆಗೆ ರೈತರು ಸಾಗುವಳಿ ಮಾಡುತ್ತ ಬಂದಿದ್ದಾರೆ. ಸಾಗುವಳಿ ಮಾಡುತ್ತಿರುವ ರೈತರಿಗೆ ಜಮೀನುಗಳ ಹಕ್ಕುಪತ್ರ ನೀಡಿಲ್ಲ. ಸಂಬಂಧಪಟ್ಟ ತಹಶೀಲ್ದಾರರಿಗೆ 2024ರ ನವೆಂಬರ್ 20ರ ಹಾಗೂ ಡಿಸೆಂಬರ್ 30ರಂದು ಮನವಿ ಸಲ್ಲಿಸಲಾಗಿದೆ. ಆದ್ದರಿಂದ ಹಕ್ಕುಪತ್ರ ನೀಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಗೋಣಿಕೊಪ್ಪ | ಹ್ಯೂಮಾನಿಟಿ ರಿಲೀಪ್ ಸೊಸೈಟಿ ಲೋಗೋ ಉದ್ಘಾಟನೆ
ಈ ಸಂದರ್ಭದಲ್ಲಿ ಸಾಬು ವಿಜಯಪುರ, ಗೋವಿಂದ ಲಮಾಣಿ, ಹೇಮು ಜಾದವ್, ವೇಣು ಲಮಾಣಿ, ಬಿಕ್ಕು ರಾಠೋಡ್, ಜಗಪ್ ರಾಥೋಡ್, ಲಾವು ರಾಠೋಡ, ಬಾಬು ಲಮಾಣಿ, ಸುರೇಶ್ ಚೌಹಾಣ, ಅಪ್ಪು ಜಾದವ್, ಹುನ್ನೂ ರಾಠೋಡ, ಗೋವಿಂದ ರಾಥೋಡ್, ಅಮಿನಾ ಪಿತೋಳಿ, ದುಖದೇವ ಜಾದವ್, ಸಂತೋಷ ರಾಠೋಡ್, ಸಯ್ಯಾಬಾಯಿ ಜಾದವ್, ತುಳಸಬಾಯಿ ಜಾದವ್, ರಾಗು ಪವಾರ್ ಕೃಷ್ಣ ಕೋರೆ, ಶ್ರೀಶೈಲ ಬಸನಾಳ ಸೇರಿದಂತೆ ಇತರರು ಇದ್ದರು.