ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ರಂಜಾನ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.
ಸ್ಥಳೀಯ ಅಂಜುಮನ್ ಕಮಿಟಿಯ ಕಾರ್ಯದರ್ಶಿ ಲಾಲಸಾಬ್ ಸೈಯದ ಅವರು ಮಾತನಾಡಿ, ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರವಾಗಿರುವ ಈ ಮಾಸ ರಂಜಾನ್. ಚಂದ್ರನ ಚಲನೆಯನ್ನು ಆದರಿಸಿದ ಇಸ್ಲಾಮಿಕ್ ಕ್ಯಾಲೆಂಡರ ಪ್ರಕಾರ 9ನೇಯ ಈ ತಿಂಗಳಲ್ಲಿ ಹಗಲಿನ ಸುಮಾರು 14 ಗಂಟೆಗಳ ಕಾಲ ಉಪವಾಸವಿರುವ ರಂಜಾನ್ ಮಾಸದ ಆಚರಣೆ ಒಂದು ಭಾಗವಷ್ಟೇ, ಹೊರತು ಉಪವಾಸವೇ ಆಚರಣೆ ಅಲ್ಲ ಎಂದರು.
ಇಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ದೇಹದ ಹಸಿವು, ಕಾಮನೆ, ಕೆಟ್ಟದ್ದನ್ನು ಆಚರಿಸುವ ಬಯಕೆಯನ್ನೇ ಮನಸ್ಸಿನಲ್ಲಿ ಮೊಳಕೆ ಒಡೆಯದಂತೆ ಮಾಡಿ ಶುದ್ಧೀಕರಿಸುವುದೇ ಪ್ರಮುಖ ಉದ್ದೇಶ. ಸೂರ್ಯೋದಯಕ್ಕೂ ಸುಮಾರು ಒಂದುವರೆ ಗಂಟೆ ಮೊದಲೇ ಶಹರಿ ಮಾಡಿ ಉಪವಾಸ ಮಾಡುವುದು ಮುಂದಿನ ಹದಿನಾಲ್ಕು ಗಂಟೆಗಳ ಕಾಲ ಮಾನಸಿಕವಾಗಿ ಮಾತ್ರವಲ್ಲ, ಯಾವುದೇ ಪ್ರಲೋಭನೆಗೆ ಒಳಗಾಗದೆ ಸೂರ್ಯಸ್ತದವರೆಗೆ ಕುರಾನ ಪಟ್ಟಣ, ಪ್ರಾರ್ಥನೆ, ದಾನ ಮತ್ತಿತರ ಕೆಲಸಗಳನ್ನು, ನಮ್ಮ ನಿತ್ಯದ ಕೆಲಸಗಳೊಂದಿಗೆ ಆಚರಿಸುವುದೇ ನಿಜವಾದ ಉಪವಾಸವಾಗಿದೆ ಎಂದರು.
ಈ ಉಪವಾಸದ ಉದ್ದೇಶ ಉಪವಾಸದ ಅವಧಿಯಲ್ಲಿ ಸುಳ್ಳು ಹೇಳುವುದು ಲಾಭ ಮಾಡಿಕೊಳ್ಳುವುದು ಇನ್ನೊಬ್ಬರಿಗೆ ನೋವು ನೀಡುವುದು ಮೊದಲಾದ ಬಯಕೆಗಳನ್ನು ಮೂಲದಲ್ಲಿಯೇ ಹತ್ತಿಕ್ಕುವುದೇ ರಂಜಾನ. ಬಡವರ ಹಸಿವು ಶ್ರೀಮಂತರಿಗೆ ಈ ಕಠಿಣ ಪರಿಶ್ರಮದ ಅರಿವು ಮಾಡಿಸುವುದೇ ಉಪವಾಸ ಎಂದರು.
ಈ ಸಂದರ್ಭದಲ್ಲಿ ಹಾಪಿಜ ಮೊಹಮ್ಮದಸಾದ ಅವರು, ದೇಶದ ಒಳಿತಿಗಾಗಿ ರೈತರು ಎದುರಿಸುತ್ತಿರುವ ಬರಗಾಲ ಪ್ರಯುಕ್ತ ಮಳೆಗಾಗಿ ಅಲ್ಲಾಹನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಅಂಜುಮನ್ ಕಮಿಟಿಯ ಅಧ್ಯಕ್ಷ ಹಾರನರಶೀದ ಹತ್ತರಕಿಹಾಳ, ಸದಸ್ಯರಾದ ಲಾಲ ಸಾಬ ಭಾಗವಾನ, ಬಾಬು ಭಾಗವಾನ, ಮಹಮ್ಮದಹನಿಪ, ಮಹಿಬೂಬ ಸೈಯದ, ಮಹಿಬೂಬ ಭಗವಾನ, ಮತ್ತಿತರು ಉಪಸ್ಥಿತರಿದ್ದರು.
