ವಿಜಯಪುರ | ಸಡಗರ ಸಂಭ್ರಮದ ರಂಜಾನ ಹಬ್ಬ ಆಚರಣೆ

Date:

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ರಂಜಾನ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.

- Advertisement -

ಸ್ಥಳೀಯ ಅಂಜುಮನ್ ಕಮಿಟಿಯ ಕಾರ್ಯದರ್ಶಿ ಲಾಲಸಾಬ್‌ ಸೈಯದ ಅವರು ಮಾತನಾಡಿ, ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರವಾಗಿರುವ ಈ ಮಾಸ ರಂಜಾನ್‌. ಚಂದ್ರನ ಚಲನೆಯನ್ನು ಆದರಿಸಿದ ಇಸ್ಲಾಮಿಕ್ ಕ್ಯಾಲೆಂಡರ ಪ್ರಕಾರ 9ನೇಯ ಈ ತಿಂಗಳಲ್ಲಿ ಹಗಲಿನ ಸುಮಾರು 14 ಗಂಟೆಗಳ ಕಾಲ ಉಪವಾಸವಿರುವ ರಂಜಾನ್ ಮಾಸದ ಆಚರಣೆ ಒಂದು ಭಾಗವಷ್ಟೇ, ಹೊರತು ಉಪವಾಸವೇ ಆಚರಣೆ ಅಲ್ಲ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಇಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ದೇಹದ ಹಸಿವು, ಕಾಮನೆ, ಕೆಟ್ಟದ್ದನ್ನು ಆಚರಿಸುವ ಬಯಕೆಯನ್ನೇ ಮನಸ್ಸಿನಲ್ಲಿ ಮೊಳಕೆ ಒಡೆಯದಂತೆ ಮಾಡಿ ಶುದ್ಧೀಕರಿಸುವುದೇ ಪ್ರಮುಖ ಉದ್ದೇಶ. ಸೂರ್ಯೋದಯಕ್ಕೂ ಸುಮಾರು ಒಂದುವರೆ ಗಂಟೆ ಮೊದಲೇ ಶಹರಿ ಮಾಡಿ ಉಪವಾಸ ಮಾಡುವುದು ಮುಂದಿನ ಹದಿನಾಲ್ಕು ಗಂಟೆಗಳ ಕಾಲ ಮಾನಸಿಕವಾಗಿ ಮಾತ್ರವಲ್ಲ, ಯಾವುದೇ ಪ್ರಲೋಭನೆಗೆ ಒಳಗಾಗದೆ ಸೂರ್ಯಸ್ತದವರೆಗೆ ಕುರಾನ ಪಟ್ಟಣ, ಪ್ರಾರ್ಥನೆ, ದಾನ ಮತ್ತಿತರ ಕೆಲಸಗಳನ್ನು, ನಮ್ಮ ನಿತ್ಯದ ಕೆಲಸಗಳೊಂದಿಗೆ ಆಚರಿಸುವುದೇ ನಿಜವಾದ ಉಪವಾಸವಾಗಿದೆ ಎಂದರು.

ಈ ಉಪವಾಸದ ಉದ್ದೇಶ ಉಪವಾಸದ ಅವಧಿಯಲ್ಲಿ ಸುಳ್ಳು ಹೇಳುವುದು ಲಾಭ ಮಾಡಿಕೊಳ್ಳುವುದು ಇನ್ನೊಬ್ಬರಿಗೆ ನೋವು ನೀಡುವುದು ಮೊದಲಾದ ಬಯಕೆಗಳನ್ನು ಮೂಲದಲ್ಲಿಯೇ ಹತ್ತಿಕ್ಕುವುದೇ ರಂಜಾನ. ಬಡವರ ಹಸಿವು ಶ್ರೀಮಂತರಿಗೆ ಈ ಕಠಿಣ ಪರಿಶ್ರಮದ ಅರಿವು ಮಾಡಿಸುವುದೇ ಉಪವಾಸ ಎಂದರು.

ಈ ಸಂದರ್ಭದಲ್ಲಿ ಹಾಪಿಜ ಮೊಹಮ್ಮದಸಾದ ಅವರು, ದೇಶದ ಒಳಿತಿಗಾಗಿ ರೈತರು ಎದುರಿಸುತ್ತಿರುವ ಬರಗಾಲ ಪ್ರಯುಕ್ತ ಮಳೆಗಾಗಿ ಅಲ್ಲಾಹನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಅಂಜುಮನ್ ಕಮಿಟಿಯ ಅಧ್ಯಕ್ಷ ಹಾರನರಶೀದ  ಹತ್ತರಕಿಹಾಳ, ಸದಸ್ಯರಾದ ಲಾಲ ಸಾಬ ಭಾಗವಾನ, ಬಾಬು ಭಾಗವಾನ, ಮಹಮ್ಮದಹನಿಪ, ಮಹಿಬೂಬ ಸೈಯದ, ಮಹಿಬೂಬ ಭಗವಾನ, ಮತ್ತಿತರು ಉಪಸ್ಥಿತರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ರಾಮೀಣ ಬದುಕು, ಕೃಷಿ ಸಂಸ್ಕೃತಿ ಪ್ರವಾಸಿಗರಿಗೆ ಪರಿಚಯಿಸಲು ಹೊಸ ಪ್ರವಾಸೋದ್ಯಮ ಪ್ಯಾಕೇಜ್‌ಗಳ ಚಿಂತನೆ

ಉಡುಪಿ ಜಿಲ್ಲೆಯ ನೈಸರ್ಗಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಹಾಗೂ ಕಡಲತೀರಗಳೊಂದಿಗೆ ಗ್ರಾಮೀಣ...

ವಿಜಯಪುರ | ಬರ ಪರಿಹಾರ ಹೆಚ್ಚಳ, ಸಾಲಮನ್ನಾಕ್ಕೆ ರಾಜ್ಯ ರೈತ ಸಂಘ ಆಗ್ರಹ

ವಿಜಯಪುರ ಜಿಲ್ಲೆಯಲ್ಲಿ ಮಳೆ ಕೈಕೊಟ್ಟು ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿರುವ...

ಇಂಡಿ | ಸ್ಥಳೀಯ ಚುನಾವಣೆ: ಕಾಂಗ್ರೆಸ್ ಬಲಗೊಳಿಸಲು ಯಶವಂತರಾಯಗೌಡ ಪಾಟೀಲ ಕರೆ

ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆ...