ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಸ್ವಚ್ಛತೆ ಹಾಗೂ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಿಡಗುಂದಿ ಪಟ್ಟಣ ಪಂಚಾಯತ್ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿದರು.
“ಪಟ್ಟಣದ ನ್ಯೂ ಇಂಗ್ಲಿಷ್ ಶಾಲೆಯ ಬಳಿ ಇರುವ ಗಟಾರಿನಲ್ಲಿ ನೀರು ನಿಂತು ಗಬ್ಬು ವಾಸನೆ ಬರುತ್ತಿದ್ದು, ಶೀಘ್ರದಲ್ಲಿ ಸ್ವಚ್ಛಗೊಳಿಸಿ ಶಾಲಾ ಮಕ್ಕಳು ಓಡಾಡುವ ಪ್ರದೇಶವನ್ನು ಶುದ್ಧವಾಗಿಡುವಂತೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ನಿಡುಗುಂದಿ ಪೊಲೀಸ್ ಠಾಣೆ ಕತ್ತಲಾದರೆ ಯಾರಿಗೂ ಕಾಣುತ್ತಿಲ್ಲ. ಒಂದನೇ ವಾರ್ಡಿನ ವಿನಾಯಕ ನಗರದ ಕೊನೆಯ ಭಾಗದಲ್ಲಿ ದೊಡ್ಡ ಕಾಲುವೆ ಇರುವುದರಿಂದ ಇಲ್ಲಿ ವಿಷ ಜಂತುಗಳು ಹರಿದಾಡುವ ಸಂಭವಗಳು ಹೆಚ್ಚಾಗಿವೆ. ಹಾಗಾಗಿ ಈ ಎರಡೂ ಸ್ಥಳಗಳಲ್ಲಿ ಎತ್ತರ ಹಾಗೂ ದೊಡ್ಡ ಗಾತ್ರದ ಹೈ ಮಾಸ್ಟ್ ದೀಪಗಳನ್ನು ಕೂಡಲೇ ಅಳವಡಿಸಬೇಕು. ಪಟ್ಟಣದಲ್ಲಿ ಕಳ್ಳತನ ಹೆಚ್ಚಾಗುತ್ತಿರುವುದರಿಂದ ಸಿಸಿಟಿವಿ ವ್ಯವಸ್ಥೆಯನ್ನು ಕಲ್ಪಿಸಬೇಕು” ಎಂದು ರೈತ ಸಂಘದ ಸದಸ್ಯರು ಪಟ್ಟಣ ಪಂಚಾಯತ್ ಕಚೇರಿ ಅಧಿಕಾರಿಗಳಿಗೆ ಒತ್ತಾಯಿಸಿದರು.
ಇದೇ ವೇಳೆ ಸಂಘದ ತಾಲೂಕು ಅಧ್ಯಕ್ಷ ಡಾ. ಕೆ ಎಂ ಬಿರಾದಾರ (ಗುಡ್ನಾಳ) ಮಾತನಾಡಿ ಮನವಿಯ ವಿವರ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಯಶ್ ಅಭಿಮಾನಿಗಳ ಸಾವು: ಮೃತರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದ ಸಚಿವ ಪಾಟೀಲ್
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಡಾ. ಕೆ ಎಂ ಬಿರಾದಾರ, ರೈತ ಮುಖಂಡ ತಿರುಪತಿ ಬಂಡಿ ವಡ್ಡರ್ ಬಳಬಟ್ಟಿ, ಗ್ರಾಮ ಘಟಕದ ಪ್ರಧಾನ ಕಾರ್ಯದರ್ಶಿ ಎಂ ಆರ್ ಕಂದಗಲ್, ತಾಲೂಕು ಗೌರವಾಧ್ಯಕ್ಷ ಐ ಆರ್ ಪಾಟೀಲ್, ರೈತ ಮುಖಂಡರುಗಳಾದ ನಾಗಪ್ಪ ವಾಲೀಕಾರ್, ಭೀಮಪ್ಪ ಬಿರಾದಾರ್, ಮುದ್ದಾಪೂರ ಗ್ರಾಮ ಘಟಕದ ಅಧ್ಯಕ್ಷ ಆರ್ ಎಸ್ ಉಕ್ಕಲಿ, ಮೋತಿಲಾಲ್ ಉಣ್ಣಿಬಾವಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷ ಸುಭಾನ್ ಮುಲ್ಲಾ, ಸಲ್ಲಿಮಾ ಚಪ್ಪರಬಂದ, ಚಾಂದಬಿ ನದಾಫ್, ನೀಲಮ್ಮ ಗೂಡಿನಮನಿ, ಶಾಂತಾ ಪರಪ್ಪಗೋಳ, ಮಸೂತಿಯ ಚಾಂದಸಾಬ ನದಾಫ್, ಬೊಮ್ಮಣ್ಣ ಕೋಲಕಾರ್, ನರ್ಹಿನ್ ದಳವಾಯಿ, ನಾಜಮೀನ್ ಹಣಗಿ ಮಂಜುಳಾ ಗೂಡಿನಮನಿ, ಕರಿಯಪ್ಪ ಆಲೂರ್, ನಗರ ಘಟಕದ ಅಧ್ಯಕ್ಷ ರಾಜು ನದಾಫ್, ರೆಹಮಾನ್ ಮಾಕಂದಾರ್ ಸೇರಿದಂತೆ ಅನೇಕರು ಹಾಜರಿದ್ದರು.