ಗದಗ | ಯಶ್‌ ಅಭಿಮಾನಿಗಳ ಸಾವು: ಮೃತರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದ ಸಚಿವ ಪಾಟೀಲ್‌

Date:

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಜನವರಿ 8ರಂದು ನಟ ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕಟೌಟ್ ನಿಲ್ಲಿಸುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದಿಂದಾಗಿ ಮೃತಪಟ್ಟಿದ್ದರು. ಮೃತಪಟ್ಟ ಯುವಕರ ಮನೆಗೆ ಕಾನೂನು, ಗದಗ ಜಿಲ್ಲಾ ಉಸ್ತುವಾರಿ ಸಚಿವ‌ ಡಾ ಎಚ್ ಕೆ ಪಾಟೀಲ್‌ ಅವರು ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಪರಿಹಾರ ಚೆಕ್ ವಿತರಿಸಿದರು.

ಸೂರಣಗಿ ಗ್ರಾಮದಲ್ಲಿ ಜರುಗಿದ ದುರ್ಘಟನೆಯಲ್ಲಿ ಮೃತರಾದ ಹನುಮಂತಪ್ಪ, ಮಜ್ಜೂರಪ್ಪ ಹರಿಜನ, ಮುರಳಿ ನೀಲಪ್ಪ ನಡುವಿನಮನಿ, ನವೀನ, ನೀಲಪ್ಪ, ಗಾಜಿ ಅವರುಗಳ ಕುಟುಂಬಗಳಿಗೆ ಹಾಗೂ ಗಾಯಾಳುಗಳಾದ ಮಂಜುನಾಥ, ಸಿದ್ದಪ್ಪ ಹರಿಜನ, ಹನುಮಂತ, ಗಾಳೆಪ್ಪ ಹರಿಜನ ಹಾಗೂ ಪ್ರಕಾಶ, ಶಿವಪ್ಪ, ಮ್ಯಾಗೇರಿ ಅವರ ಕುಟುಂಬಗಳ ನೆರವಿಗೆ ಸರ್ಕಾರದ ವತಿಯಿಂದ ಅಗತ್ಯದ ಪರಿಹಾರ ವಿತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಕೆ ಪಾಟೀಲ್‌ ಅವರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರ ಮನವಿಗೆ ಸ್ಪಂದಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50,000 ಪರಿಹಾರವನ್ನು ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಸರ್ಕಾರದ ವತಿಯಿಂದ ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50,000 ಪರಿಹಾರದ ಚೆಕ್‍ಗಳನ್ನು ಕುಟುಂಬ ಸದಸ್ಯರುಗಳಿಗೆ ವಿತರಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೀದಿ ವ್ಯಾಪಾರಿಗಳಿಗೆ ಮಾರ್ಷಲ್‌ಗಳ ಕಿರುಕುಳ; ಆರೋಪ

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, “ಮೃತರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಮೂವರು ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ಹಾಗೂ ಮೂವರು ಗಾಯಾಳುಗಳಿಗೆ‌ ತಲಾ ಐವತ್ತು ಸಾವಿರ ಪರಿಹಾರದ ಚೆಕ್ಕುಗಳನ್ನು ವಿತರಿಸಲಾಗಿದೆ. ಘಟನೆಯಲ್ಲಿ ಇನ್ನೊಬ್ಬ ಗಾಯಾಳು ನಾಗರಾಜ ಅವರನ್ನೂ ಭೇಟಿಯಾಗಿದ್ದು, ಅವರಿಗೂ ಪರಿಹಾರ ಕೊಡಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ” ಎಂದರು.

“ಮೃತರ ಕುಟುಂಬಕ್ಕೆ ಭೂ ಒಡೆತನ ಯೊಜನೆಯಡಿ, ಭೂಮಿ ನೀಡಲು ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ನಂತರ ಅವರಿಗೆ ಅನುಕಂಪದ ಆಧಾರದಲ್ಲಿ ಭೂಮಿ‌ ನೀಡಲು ಕ್ರಮ ವಹಿಸಲಾಗುವುದು” ಎಂದು ತಿಳಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಸಿಪಿಎಂ ಸಂಘಟಿಸುವ ಜವಾಬ್ದಾರಿ ಎಲ್ಲರ ಮೇಲಿದೆ; ಎಂ.ಪಿ.ಮುನಿವೆಂಕಟಪ್ಪ

ಆಧುನಿಕ ಶೋಷಣೆಯಂತಹ ದಬ್ಬಾಳಿಕಾ ಪ್ರವೃತ್ತಿಯನ್ನು ತಡೆದು, ಸಿಪಿಎಂ ಪಕ್ಷದ ಬಲಿಷ್ಟ ಸಂಘಟನೆಯ...

ಗುಬ್ಬಿ | ಬಡ್ಡಿ ದಂಧೆಗೆ ಮತ್ತೋರ್ವ ಬಲಿ : ನಿಟ್ಟೂರು ವಾಸಿ ನೇಣಿಗೆ ಶರಣು; ಆತಂಕದಲ್ಲಿ ಜನತೆ

ಮೀಟರ್ ಬಡ್ಡಿ ದಂಧೆಗೆ ಬೇಕರಿ ಮಾಲೀಕ ಬಲಿಯಾದ ಘಟನೆ ಮಾಸುವ ಮುನ್ನವೇ...

ರಾಮನಗರ | ಸಾಲ ತೀರಿಸಲು ನೆರೆಮನೆಯ ಬಾಲಕಿಯ ಅಪಹರಣಕ್ಕೆ ಯತ್ನ: ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕ

ಮನೆ ಬಾಡಿಗೆ ಸೇರಿದಂತೆ ಕೈ ಸಾಲ ತೀರಿಸಲು ಪಕ್ಕದ ಮನೆಯಲ್ಲಿನ ಬಾಲಕಿಯನ್ನೇ...

ಚಿಂತಾಮಣಿ | ಬೊಲೆರೋ ಟೆಂಪೋ ಬಸ್ ನಡುವೆ ಅಪಘಾತ; ಚಾಲಕ ಸಾವು

ಬೊಲೆರೋ ಟೆಂಪೊಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ...