ವಿಜಯಪುರ ತಾಲೂಕಿನ ಹಲಗಣಿ ಗ್ರಾಮದಲ್ಲಿ ಪ್ರಗತಿ ಕೌಶಲ್ಯ ಅಭಿವೃದ್ಧಿ ಕೇಂದ್ರದ ಅಡಿಯಲ್ಲಿ ಹಲಗಣಿಯ ಗ್ರಾಮ ಪಂಚಾಯತ್ ಹಾಗೂ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಹೊಲಿಗೆ ತರಬೇತಿ ಶಿಬಿರವನ್ನು ಉದ್ಘಾಟಿಸಲಾಯಿತು.
ಅಂಬಿಗರ ಚೌಡಯ್ಯ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಫಾದರ್ ಟೀಯೋಲ ಮಚಾದೊ ವಹಿಸಿದ್ದರು.
ಬಳಿಕ ಮಾತನಾಡಿದ ಅವರು, ದೇಶ ಪ್ರಗತಿಯತ್ತ ಸಾಗಬೇಕಾದರೆ ಹೆಣ್ಣು ಮಕ್ಕಳ ಪಾತ್ರ ಹಾಗೂ ಅವರ ಆರ್ಥಿಕ ಸಬಲೀಕರಣ ತುಂಬಾ ಮುಖ್ಯವಾದದ್ದು. ಮಹಿಳೆಯರು ಹಲವಾರು ಕೌಶಲ್ಯಗಳನ್ನು ಅಭಿವೃದ್ದಿಪಡಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸ್ವಾವಲಂಬನೆ ಮಾಡುವ ಗುರಿಯನ್ನು ಅನೌಪಚಾರಿಕ ಶಿಕ್ಷಣ ಸಂಸ್ಥೆ ಹೊಂದಿದೆ. ಎಲ್ಲರ ಸಹಭಾಗಿತ್ವದಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲರೂ ಬಂದು ಹೊಲಿಗೆ ತರಬೇತಿ ಪಡೆದು, ಮನೆಯಲ್ಲಿ ಬಟ್ಟೆ ಹೊಲೆಯುವ ಮೂಲಕ ಮಹಿಳೆಯರು ಸ್ಟಾವಲಂಬನೆ ಹೊಂದಬಹುದು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಹಲಗಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ ಗುಣದಾಳ ಮಾತನಾಡಿ, “ನಮ್ಮ ಗ್ರಾಮದ ಮಹಿಳೆಯರಿಗೆ ಒಂದು ಒಳ್ಳೆಯ ಸುವರ್ಣ ಅವಕಾಶ ಒದಗಿ ಬಂದಿದೆ. ಎಲ್ಲರೂ ಹೊಲಿಗೆ ತರಬೇತಿಯನ್ನು ಪಡೆಯಲು ಮುಂದಾಗಬೇಕು. ಇದಕ್ಕೆ ಬೇಕಾದ ಸಹಕಾರಕ್ಕೆ ನೀಡಲು ನಾವು ಸಿದ್ಧವಿದ್ದೇವೆ” ಎಂದು ಹೇಳಿದರು.
ಹಲಗಣಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುಖಣ್ಣ ನಾಯಕ ಮಾತನಾಡುತ್ತಾ, ಗ್ರಾಮದ ಮಹಿಳೆಯರ ಭಾಗವಹಿಸುವಿಕೆ ಹಾಗೂ ಅವರ ಅಭಿವೃದ್ಧಿ ನಮ್ಮ ಗ್ರಾಮಿಣ ಅಭಿವೃದ್ಧಿಯ ಮುಖ್ಯ ಅಂಶವಾಗಿದೆ. ಗ್ರಾಮೀಣ ಮಟ್ಟದಲ್ಲಿ ತರಬೇತಿ ಪಡೆದು ಚಿಕ್ಕ ಚಿಕ್ಕ ಪ್ರಮಾಣದಲ್ಲಿ ಸ್ವ ಉದ್ಯೋಗ ಮಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿ ಗ್ರಾಮಕ್ಕೆ ಒಳ್ಳೆ ಹೆಸರು ಬರುವಂತೆ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಅದರಂತೆ ನಮ್ಮ ಗ್ರಾಮೀಣ ಮಹಿಳೆಯರು ಕೂಡ ಹೊಲಿಗೆ ತರಬೇತಿ ಪಡೆದು ಸ್ವ-ಉದ್ಯೋಗ ಕೈಗೊಂಡು ಅಭಿವೃದ್ದಿಯತ್ತ ಸಾಗಲಿ ಎಂದು ಶುಭ ಹಾರೈಸಿದರು.
ಇದನ್ನು ಓದಿದ್ದೀರಾ? ಸೊರಬ | ಸಚಿವ ಮಧು ಬಂಗಾರಪ್ಪರಿಂದ ಕುಬಟೂರು ಸರ್ಕಾರಿ ಶಾಲೆಗೆ ₹10 ಲಕ್ಷ ಮೌಲ್ಯದ ಪರಿಕರ ದೇಣಿಗೆ
ಈ ವೇಳೆ ಗ್ರಾಮದ ಪ್ರಮುಖ ಮುಖಂಡರಾದ ಬಿಮು ಗೌಡ ಬಿರಾದಾರ, ರಾಜುಗೌಡ ಬಿರಾದಾರ, ಎಂ ಕುಂಕರ್ಣಿ, ರಾಕೇಶ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳಾದ ಸಿಸ್ಟರ್ ಜಯಾ, ಸಿಸ್ಟರ್ ಶಕುಂತಲಾ ಹಾಗೂ ನಾರಾಯಣ ಬಡಿಗೆರ, ಯುವ ಮುಖಂಡರಾದ ಆಕಾಶ ಗುಣದಾಳ, ಶ್ರೀಧರ್ ಕೊಣ್ಣೂರ, ಮಹಿಳಾ ಒಕ್ಕೂಟದ ಸುನೀತಾ ಮೊರೆ, ರೇಣುಕಾ ಕಾಂಬಳೆ, ಚಂದಾಬಾಯಿ ಮಾದರ ಇತರರು ಹಾಜರಿದ್ದರು.

