ವಿಜಯಪುರ | ʼಶಾಂತಿ, ಸೌಹಾರ್ದತೆ, ಸಹಬಾಳ್ವೆ ನಮ್ಮ ಪರಂಪರೆʼ ಪೋಸ್ಟರ್‌ ಬಿಡುಗಡೆ

Date:

Advertisements

1947 ಆಗಸ್ಟ್ 15 ಗುಲಾಮಗಿರಿಯಿಂದ ದೇಶವು ಮುಕ್ತವಾಯಿತು ಮತ್ತು ಸ್ವತಂತ್ರವಾಗಿ ತಲೆಯೆತ್ತಿತು. ಇದು ಕ್ರೌರ್ಯ ಮತ್ತು ದಬ್ಬಾಳಿಕೆಯ ಆಳ್ವಿಕೆಗಳಿಂದ ಗಳಿಸಿದ ಸ್ವಾತಂತ್ರ್ಯ ಮಾತ್ರವಲ್ಲ, ಅನ್ಯಾಯ ಮತ್ತು ತುಳಿತಗಳಿಂದಲೂ ಲಭಿಸಿದ ಸ್ವಾತಂತ್ರ್ಯವಾಗಿದೆ. ಈ ಸ್ವಾತಂತ್ರ್ಯವು ಬಡತನ ಅನಾರೋಗ್ಯ, ಅಜ್ಞಾನ, ಬಳಲಿಕೆ ಮತ್ತು ಅವಕಾಶಗಳ ಅಸಮಾನತೆಗಳನ್ನು ಕೊನೆಗಾಣಿಸುವ ಭರವಸೆ ಬೆಳಕಾಗಿತ್ತು ಎಂದು ಅಬ್ದುಲ್‌ ಹಮೀದ್ ಜಾವೇದ್ ತಿಳಿಸಿದರು.

ವಿಜಯಪುರ ನಗರದಲ್ಲಿ ಸೋಲಿಡಾರಿಟಿ ಯೂತ್ ಮೂಮೆಂಟ್ ವತಿಯಿಂದ ಹಮ್ಮಿಕೊಂಡಿದ್ದ ʼಶಾಂತಿ ಸೌಹಾರ್ದತೆ ಸಹಬಾಳ್ವೆ ನಮ್ಮ ಪರಂಪರೆʼ ಎಂಬ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.

“ಸ್ವಾತಂತ್ರ್ಯ ಎಂದರೆ ಮನುಷ್ಯರೆಲ್ಲರೂ ಸಮಾನ ಸೃಷ್ಟಿಗಳು ಮತ್ತು ಪ್ರತಿಯೊಬ್ಬನಿಗೂ ಸೃಷ್ಟಿಕರ್ತನು ಬದುಕುವ ಹಕ್ಕು ಮುಂತಾದ ಹಕ್ಕುಗಳನ್ನು ನೀಡಿರುತ್ತಾನೆಂಬ ಸತ್ಯಕ್ಕೆ ನಾವೆಲ್ಲರೂ ಸ್ವಯಂ ಸಾಕ್ಷಿಗಳು ಎಂಬುದನ್ನು ಘೋಷಿಸುತ್ತದೆ” ಎಂದರು.

Advertisements

“ಸ್ವತಂತ್ರ್ಯ ಭಾರತ ಎಂದು ಹೇಳುವಾಗ ಜಾತಿ, ಮತ, ಧರ್ಮ ಜನಾಂಗಗಳ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಬದುಕುವ ಪವಿತ್ರ ಪರಿಕಲ್ಪನೆ. ಭಾರತದ ಇತಿಹಾಸವು ಈ ವೈವಿಧ್ಯಮಯ ಭವ್ಯವಾದ ದಾಖಲೆಯನ್ನು ನೀಡುತ್ತದೆ. ದೈತ್ಯಾಕಾರದ ಪರ್ವತ ಶ್ರೇಣಿಗಳು, ಅದ್ಭುತ ನದಿಗಳು, ಪ್ರಶಾಂತ ಕಣಿವೆಗಳ, ತಾಪಭರಿತ ಮರುಭೂಮಿ, ಅನೇಕ ಭಾಷೆಗಳನ್ನು ಒಳಗೊಂಡ ಸಂಸ್ಕೃತಿಗಳು, ಹಲವು ಧರ್ಮಗಳು, ವಿವಿಧ ಆಹಾರ ಭಕ್ಷಗಳು, ವಿಶಿಷ್ಟ ಸಂಪ್ರದಾಯಗಳ ಹತ್ತು ಹಲವು ಬಗೆಯ ಜನ ವಿಭಾಗದ ಸಹಬಾಳ್ವೆಯ ಪ್ರಚಂಡ ಪ್ರದರ್ಶನವಾಗಿದೆ” ಎಂದರು.

“ಭಾರತದ ಶ್ರೀಮಂತ ಮತ್ತು ಅಚ್ಚರಿಯ ವೈವಿಧ್ಯತೆಯಲ್ಲಿಯೂ ಒಗ್ಗಟ್ಟಿನ, ಐಕ್ಯತೆಯ ತಾಜಾ ಬಂಧವನ್ನು ಕಾಣಬಹುದು. ಇತ್ತೀಚೆಗಿನ ಕೆಲವು ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಗಳಿಂದ ಈ ಭವ್ಯ ವೈವಿಧ್ಯತೆಯು ಅಳಿಯುತ್ತಿರುವಂತೆ ಕಾಣುತ್ತಿದೆ. ತಿಳಿಗೇಡಿ ರಾಷ್ಟ್ರೀಯತೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರ್ಥೈಸದಿರುವಿಕೆ, ಸುಳ್ಳು ಸುದ್ದಿಗಳು, ಪೂರ್ವಗ್ರಹ ಧೋರಣೆಗಳು, ಚರ್ಚೆ ಮತ್ತು ನಿರಾಕರಣೆಗೆ ಅವಕಾಶ ಕುಸಿಯುತ್ತಿರುವುದು, ಸೈದ್ಧಾಂತಿಕ ಅಭಿಮಾನದ ಅತಿರೇಕಗಳು, ಸಾಂಸ್ಕೃತಿಕ ಅಂಧವಿಶ್ವಾಸ ಮುಂತಾದವುಗಳು ನಮ್ಮ ಪ್ರಮುಖ ಸಮಸ್ಯೆಗಳನ್ನು ಪಾತಾಳಕ್ಕೆ ತಳ್ಳಿವೆ. ಕೋಮುವಾದವು ಸಾಂಸ್ಕೃತೀಕರಣಗೊಳ್ಳುವುದರಿಂದ ಕೋಮುದ್ವೇಷ, ಮರ್ದನಗಳು ಏರಿಕೆಯಾಗಿವೆ. ಜನರ ನಡುವೆ ಗೋಡೆಗಳು ಬೆಳೆದು ಅಂತರಗಳು ಹೆಚ್ಚಾಗುತ್ತಿವೆ” ಎಂದು ಹೇಳಿದರು.

“ಪ್ರಸ್ತುತ ರಾಜಕೀಯ ಸ್ಥಿತಿಯಲ್ಲಿ ನ್ಯಾಯ, ಸಮಾನತೆ ಮಾಯವಾಗುತ್ತಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮರ್ದನಕ್ಕೊಳಗಾದ ಮತ್ತು ಕಡೆಗಣಿಸಲ್ಪಟ್ಟಿರುವ ಜನಸಮುದಾಯವು ಮತ್ತಷ್ಟು ಕಡೆಗಣಿಸಲ್ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಪರಿಕಲ್ಪನೆಯನ್ನು ಸಂರಕ್ಷಿಸಲು ಕಟಿಬದ್ಧರಾಗವುದು ಕಾಲದ ತೀವ್ರ ಬೇಡಿಕೆಯಾಗಿದೆ. ನಮ್ಮ ಅಂತರ್ಗತ ವೈವಿಧ್ಯತೆಯ ಜೊತೆಗೆ ಒಂದು ಸಮಾಜವಾಗಿ ನಾವು ಒಗ್ಗೂಡುವ ಅಗತ್ಯವಿದೆ. ನ್ಯಾಯ, ಸಹೋದರತೆ ಮತ್ತು ಅವಕಾಶಗಳ ಸಮಾನತೆಯನ್ನು ಅನುಭವಿಸುವುದರಿಂದ ಆತ್ಮೀಯ ಭಾವನೆ ವಿಮೋಚನೆಯನ್ನು ಬಳಸಲು ಸಾಧ್ಯ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಗದಗ | ಶತಮಾನ ಕಂಡ ಮುನ್ಸಿಪಲ್ ಪ್ರೌಢಶಾಲೆಯ ದುಃಸ್ಥಿತಿ

“ನಮ್ಮ ಪ್ರೇಮಭರಿತ ಈ ದೇಶವು ಮುಂದೆ ಸಾಗಿದಂತೆ, ನಾವೆಲ್ಲರೂ ಮೊದಲು ಮನುಷ್ಯರು ಎಂಬುದನ್ನು ಅರಿತುಕೊಳ್ಳಬೇಕಿದೆ. ನ್ಯಾಯವನ್ನು ಆತ್ಮವಾಗಿಸುತ್ತ ಒಂದು ಮಾನವೀಯ ಸಮಾಜವನ್ನು ನಿರ್ಮಿಸೋಣ. ಕ್ಷಮೆ, ಸಹೋದರತೆ ಎಂಬ ನಮ್ಮ ಕ್ರಿಯೆಗಳನ್ನು ಸಮರ್ಥ ಜೀವನದ ಲಾಂಛನವನ್ನಾಗಿಸಬೇಕಿದೆ. ನಮ್ಮ ಸಂಯುಕ್ತ ನಾಳೆಗಳು ಎಂದು ನಿನ್ನೆಗಳ ಪುನರಾವರ್ತನೆ ಆಗಬಾರದು. ಬದಲಾಗಿ ಜ್ಞಾನ ಮತ್ತು ಅರಿವಿನ ನಾಳೆಗಳು ಆಗಬೇಕು. ನಮ್ಮ ಸಂವಿಧಾನವು ಶೇ.80 ಬಹುಸಂಖ್ಯಾತರಿಗೂ ಮತ್ತು ಶೇ.20ರಷ್ಟು ಅಲ್ಪಸಂಖ್ಯಾತರಿಗೂ ಸಮಾನ ಅರ್ಥಗಳನ್ನು ನೀಡುತ್ತದೆ ಎಂಬುದನ್ನು ಅರಿತುಕೊಳ್ಳಬೇಕಿದೆ. ಆದ್ದರಿಂದ ನಾವು ಜೊತೆಯಾಗಿ ಗಣರಾಜ್ಯವನ್ನು ನಿರ್ಮಿಸಬೇಕಿದೆ. ಐಕ್ಯತೆಯ ಬಂಧವನ್ನು ಬಲಪಡಿಸಲು ಕೈ ಜೋಡಿಸೋಣ” ಎಂದರು.

ಈ ಸಂದರ್ಭದಲ್ಲಿ ಉಬೈದ್ ಶೈಖ್, ಯಾಸಿರ್, ಯಾಸಿನ್ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X