ಮೊದಲ ಅಧಿವೇಶನದಲ್ಲೇ ಸದಾಶಿವ ಆಯೋಗದ ವರದಿ ಮಂಡನೆ: ಜಿ ಪರಮೇಶ್ವರ್

Date:

ಮೊದಲ ಅಧಿವೇಶನದಲ್ಲಿಯೇ ಸದಾಶಿವ ಆಯೋಗದ ವರದಿಯನ್ನು ಮಂಡನೆ ಮಾಡುವ ಭರವಸೆಯನ್ನು ಈಡೇರಿಸುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್‌ ಹೇಳಿದರು.

ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಪರಿಶಿಷ್ಟರ ಒಕ್ಕೂಟದಿಂದ ನಡೆದ “ಪರಿಶಿಷ್ಟ ಸಮುದಾಯಗಳ ಸಹೋದರತ್ವ” ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ರಕ್ಷಣೆ ಮಾಡುತ್ತೇವೆ” ಎಂದರು.

“2023ರ ರಾಜ್ಯ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿದ್ದೆ. ಅದರಂತೆ ಸದಾಶಿವ ಆಯೋಗದ ವರದಿಯನ್ನು ಮೊದಲ ಅಧಿವೇಶನದಲ್ಲಿ ಮಂಡಿಸುತ್ತೇವೆ. ಈ ಕುರಿತು ನಾನು, ಮುನಿಯಪ್ಪ ಸಿಎಂ ಅವರಿಗೆ ಒತ್ತಾಯ ಮಾಡಿದ್ದೇವೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಅಂಬೇಡ್ಕರ್ ಸಂವಿಧಾನ ಕೊಡದಿದ್ದರೆ ನಾವಿಂದು ಜೀವಿಸುವುದಕ್ಕೇ ಸಾಧ್ಯ ಇರುತ್ತಿರಲಿಲ್ಲ. ಅಂಥದ್ದರಲ್ಲಿ ಆ ಸಂವಿಧಾನವನ್ನೇ ಬದಲು ಮಾಡಿಬಿಡುತ್ತೇವೆ ಎನ್ನುವವರನ್ನು ನಾವು ಸುಮ್ಮನೆ ಬಿಡಬೇಕಿಲ್ಲ. ಅದಕ್ಕೆ ರಾಜ್ಯದ ಚುನಾವಣೆ ಸಾಕ್ಷಿಯಾಗಿದೆ” ಎಂದು ಗೃಹ ಸಚಿವರು ರಾಜ್ಯ ಬಿಜೆಪಿ ವಿರುದ್ಧ ಹರಿಹಾಯ್ದರು.

ನಾನು ಸಿಎಂ ಆಗ್ಬೇಕು, ನಿಮ್ಮೆಲ್ಲರ ಸಹಕಾರ ಬೇಕು

“ನಾನು ಮುಖ್ಯಮಂತ್ರಿಯಾಗುವ ಅವಕಾಶಗಳನ್ನು ತಪ್ಪಿಸಿದ್ದಾರೆ. ನೀವೆಲ್ಲ ವೋಟಿನ ಮೂಲಕ ಪ್ರತಿಪಾದಿಸಿದರೆ ಅದು ಸಾಧ್ಯ ಆಗುತ್ತದೆ. ಅದಕ್ಕಾಗಿ ನಮ್ಮ ಸಮುದಾಯವೆಲ್ಲ ಒಗ್ಗಟ್ಟಾಗಬೇಕು. ಸಂವಿಧಾನದಿಂದ ಈ ದೇಶದಲ್ಲಿ ದೊಡ್ಡ ಬದಲಾವಣೆಗಳು ಆಗಿವೆ. ನಮ್ಮ ಸಮುದಾಯಗಳ ಜನ ಕೂಡ ಮುಂದೆ ಬಂದಿದ್ದೀವಿ, ಅದನ್ನು ಇಲ್ಲ ಎನ್ನಬಾರದು. ಅಂತಹ ಕೀಳರಿಮೆ ನಮ್ಮ ಸಮುದಾಯಗಳಿಗೆ ಇರಬಾರದು. ಹಾಗಾಗಿ ಯಾವಾಗಲೂ ನಾನು ಮುಖ್ಯಮಂತ್ರಿ ಆಗ್ತೀನಿ ಅನ್ನೋದು. ಅಷ್ಟಕ್ಕೂ ಯಾಕೆ ಆಗ್ಬಾರು? ನಾನು, ಕೆ ಎಚ್‌ ಮುನಿಯಪ್ಪ, ಆರ್‌ ಬಿ ತಿಮ್ಮಾಪುರ್‌, ಪ್ರಿಯಾಂಕ್‌ ಖರ್ಗೆ, ಹೆಚ್‌ ಸಿ ಮಹಾದೇವಪ್ಪ ಎಲ್ಲ ಯಾವುದರಲ್ಲಿ ಕಮ್ಮಿ ಇದ್ದೀವಿ!” ಎನ್ನುವ ಮೂಲಕ ಗೃಹ ಸಚಿವರು ಸಿಎಂ ಆಗುವ ತಮ್ಮೊಳಗಿನ ಅಭಿಲಾಷೆಯನ್ನು ಮತ್ತೆ ತೆರೆದಿಟ್ಟರು.

ನಮ್ಮ ಕಷ್ಟ ಹೇಳಿಕೊಳ್ಳುವುದಕ್ಕೆ ವೇದಿಕೆ ಇದು

“ನಾವು ಸರ್ಕಾರದಲ್ಲಿ ಇದ್ದೇವೆ ಅಂತ ನಮ್ಮ ಕಷ್ಟ ಹೇಳಿಕೊಳ್ಳಬಾರದು ಅಂತ ಏನೂ ಇಲ್ಲ. ಇದು ನಮ್ಮ ಕಷ್ಟ ಹೇಳಿಕೊಳ್ಳುವ ವೇದಿಕೆ ಕೂಡ. ಈ ಹಿಂದೆ ನಾನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ನನ್ನ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂತು. ಆದರೆ, ಯಾರೂ ಅದನ್ನು ಹೇಳಲಿಲ್ಲ. ಒಂಭತ್ತು ವರ್ಷದ ನಂತರ ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ. ಈಗ ಮಾತ್ರ‌ ನಮ್ಮಿಂದ, ನಾವು ಮಾಡಿದ್ದು ಅಂತ ಹೇಳಿಕೊಳ್ಳುತ್ತಾರೆ” ಎಂದು ಜಿ ಪರಮೇಶ್ವರ್ ಸ್ವಪಕ್ಷದ ನಾಯಕರ ಮೇಲೆ ಅಸಮಾಧಾನ ಹೊರಹಾಕಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ ಎಚ್ ಮುನಿಯಪ್ಪ ಮಾತನಾಡಿ, “ಹಿಂದೆ ನಾಯಿ ನರಿಗಳೆಲ್ಲ ಮನೆ ಒಳಗೆ ಬರಬಹುದಿತ್ತು, ಆದರೆ, ನಮ್ಮ ಸಮುದಾಯದ ಜನ ಹೋಗುವಂತಿರಲಿಲ್ಲ. ಅದನ್ನ ಅರಿತುಕೊಂಡ ಅಂಬೇಡ್ಕರ್ ಸಂವಿಧಾನವನ್ನು ಕೊಟ್ಟರು. ಆದರೂ ಇಂದಿಗೂ ಸಂಘರ್ಷ ನಿಂತಿಲ್ಲ. ನಮ್ಮ‌ ಸಮುದಾಯಗಳು ಗುರಿ ಮುಟ್ಟಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ದಲಿತ ಸಮುದಾಯಗಳು ಸಂಘರ್ಷಗಳ ನಡುವೆ ಸಮಾನತೆ ಬಯಸಿ ಹೋರಾಟ ಮುಂದುವರೆಸಿರುವ ಸಂದರ್ಭದಲ್ಲೇ ಆರ್‌ಎಸ್‌ಎಸ್, ಭಜರಂಗದಳ, ಹಿಂದೂ ಮಹಾಸಭಾ, ಬಿಜೆಪಿಯವರೆಲ್ಲ ಸಂವಿಧಾನವನ್ನೇ ತೆಗೆಯಲು ಪಣ ತೊಟ್ಟಿದ್ದಾರೆ. ಅದನ್ನು ತಪ್ಪಿಸಲು ಪರಿಶಿಷ್ಟ ಸಮುದಾಯಗಳ ನಾಯಕರು ಒಟ್ಟಾಗಿ ಬೇರುಮಟ್ಟದಿಂದ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಬೇಕು, ಹೋರಾಡಬೇಕು. ನಾವು ನಿಮ್ಮ ಬೆಂಬಲಕ್ಕೆ ಇರುತ್ತೇವೆ. ಇದು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತೆಗೆಯಲು ಹೆಜ್ಜೆಯಾಗಬೇಕು. ಸಂವಿಧಾನವನ್ನು ಉಳಿಸಿಕೊಳ್ಳಬೇಕು” ಎಂದು ಸಚಿವ ಕೆ ಎಚ್ ಮುನಿಯಪ್ಪ ಕರೆ ಕೊಟ್ಟರು.

ಒಂದು ದೇಶ, ಒಂದು ಧರ್ಮ, ಒಂದು ಭಾಷೆ, ಒಂದು ಪಕ್ಷ ಎನ್ನುವವರಿಗೆ ಪಾಠ ಕಲಿಸೋಣ

“ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ನಾಗಪುರದ ಹಾವುಗಳಿಗೆ ಪೆಟ್ಟು ಕೊಟ್ಟಿದ್ದಾರೆ. ಆದರೆ, ಅವು ಸತ್ತಿಲ್ಲ, ಸಂವಿಧಾನ-ಪ್ರಜಾಪ್ರಭುತ್ವವನ್ನು ಮುಗಿಸಲು ಬುಸುಗುಟ್ಟುತ್ತಲೇ ಇವೆ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಂದು ದೇಶ, ಒಂದು ಧರ್ಮ, ಒಂದು ಭಾಷೆ, ಒಂದು ಪಕ್ಷ ಎನ್ನುವವರಿಗೆ ಪಾಠ ಕಲಿಸೋಣ, ದೇಶವನ್ನು ಬಿಜೆಪಿ ಮುಕ್ತ ಮಾಡೋಣ” ಎಂದು ಮೈಸೂರಿನ ಉರಿಲಿಂಗಪೆದ್ದಿಮಠ ಮಹಾಸಂಸ್ಥಾನದ ಜ್ಞಾನಪ್ರಕಾಶ ಸ್ವಾಮೀಜಿ ಕರೆ ಕೊಟ್ಟಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ದಿಟ್ಟ ಹೆಜ್ಜೆ ಮತ್ತು ನೇರ ಮಾತು ಹೇಳಿದ್ದಾರೆ, ನಮಗೆ , ನಮಗಿಂತ ದೇಶ ಮುಖ್ಯ ಎಂಬ ಭಾವನೆ ಎಲ್ಲ ಜನರಲ್ಲಿ ಮೂಡಿ ಬರಬೇಕು, ಮನುಷ್ಯ ರಲ್ಲಿ ಯಾರೂ ಯಾರಿಗಿಂತ ಮೇಲಲ್ಲ. ಮಾನವೀಯತೆ ಎಲ್ಲರಿಗಿಂತ ಮೇಲು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚೊಂಬು, ಗ್ಯಾಸ್ ಹೊರತುಪಡಿಸಿ ಶಾಂತಿಯುತ ಮತದಾನಕ್ಕೆ ಸಾಕ್ಷಿಯಾದ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ...

ಕಸ ಸುರಿಯುವ ಜಾಗವಾಗಿ ಮಾರ್ಪಟ್ಟ ಬೆಂಗಳೂರಿನ ಮೇಲ್ಸೇತುವೆಗಳು!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸವಾರರಿಗೆ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ....

ರಾಯಚೂರು | ಅಬಕಾರಿ ಇಲಾಖೆ ದಾಳಿ; ₹500 ಮುಖಬೆಲೆಯ ನೋಟಿನ 62 ಬಂಡಲ್ ಪತ್ತೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಳಿಗಲ್ಲಿಯ ಗೌಳಿಯೊಬ್ಬರ ಮನೆಯಲ್ಲಿ ಗೋಣಿ ಚೀಲದ...