ಬೀದರ್ ಜಿಲ್ಲೆಯ ವಿವಿಧೆಡೆ ಗುರುವಾರ ಗುಡುಗು, ಬಿರುಗಾಳಿ ಸಹಿತ ಮಳೆ ಸುರಿಯಿತು.
ಮಧ್ಯಾಹ್ನ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ನೀರು ಹರಿಯಿತು. ವಾಹನ ಸವಾರರು ಕೆಲ ಹೊತ್ತು ಪರದಾಡುವಂತಾಯಿತು.
ಔರಾದ್ ಪಟ್ಟಣ ಸೇರಿದಂತೆ ವಿವಿಧ ಭಾಗಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಜೋರು ಮಳೆಯಾಗಿದೆ.
ಚಿಟಗುಪ್ಪ, ಹುಮನಾಬಾದ್ ನಲ್ಲಿ ಜಿಟಿ ಜಿಟಿ ಮಳೆಯಾದರೆ, ಹುಲಸೂರ, ಭಾಲ್ಕಿ ತಾಲೂಕಿನ ಕೆಲವೆಡೆ ಸಾಧಾರಣ ಮಳೆಯಾಗಿದೆ.
ಬಿಸಿಲಿನ ತಾಪಮಾನ ಏರಿಕೆಗೆಯಿಂದ ಕಂಗೆಟ್ಟಿರುವ ಜಿಲ್ಲೆಯ ಜನರಿಗೆ ಮಳೆ ತಂಪೆರೆದಿದೆ.