ಚಿತ್ರದುರ್ಗ | ಹವಾಮಾನ ಬದಲಾವಣೆಯಿಂದ ಹಲವೆಡೆ ಉತ್ತಮ ಮಳೆ, ಕೃಷಿ ಚಟುವಟಿಕೆಗಳಿಗೆ ಮುನ್ನುಡಿ.

Date:

ಕೋಟೆನಾಡು ಚಿತ್ರದುರ್ಗಕ್ಕೆ ಯುಗಾದಿ ಹೊಸ ವರ್ಷಾರಂಭದಲ್ಲಿ ಮಳೆ ಸುರಿದಿದ್ದು, ಬಿಸಿಲಿಗೆ ಬಳಲಿದ್ದ ರೈತರು, ಸಾರ್ವಜನಿಕರಲ್ಲಿ ತುಸು ಸಮಾಧಾನ ತಂದಿದ್ದು, ಹವಾಮಾನ ಬದಲಾವಣೆ ಹರ್ಷ ತಂದಿದೆ. ಯುಗಾದಿ ಹಬ್ಬದ ನಂತರ ಚಿತ್ರದುರ್ಗ ನಗರದಲ್ಲಿ, ಜಿಲ್ಲೆಯ ಹಲವೆಡೆ ಸುರಿದಿರುವ ಮಳೆ ಇಳೆಯನ್ನು ತಂಪಾಗಿಸಿದೆ.

- Advertisement -

ಚಿತ್ರದುರ್ಗ ನಗರದ ಹಲವೆಡೆ ಅಪರಾಹ್ನ 2 ಗಂಟೆ ಹೊತ್ತಿಗೆ ಶುರುವಾದ ಮಳೆ ಮೂರು ಗಂಟೆವರೆಗೂ ಬಿಡದೇ ಸುರಿದಿದೆ. ಮಳೆಯ ಸೂಚನೆ ಇಲ್ಲದೆ ದಿನನಿತ್ಯದಂತೆ ರಸ್ತೆಯಲ್ಲಿ ಓಡಾಡುತ್ತಿದ್ದವರು ಮಳೆ‌ ಆರಂಭವಾಗುತ್ತಿದ್ದಂತೆ ಸುರಕ್ಷತೆಯ ಸ್ಥಳ ಸೇರಿದರೆ, ಕೆಲವರು ಹಾಗೂ ಕೆಲ ವಾಹನ ಸವಾರರು ಅನಿರೀಕ್ಷಿತ ಮಳೆಯಲ್ಲಿ ನೆನೆದುಕೊಂಡು ಮುಂದೆ ಸಾಗಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಇಂದು ಸುರಿದಿರುವ ಮಳೆಗೆ ಬೇಸಿಗೆಯ ಬಿಸಿಲಿಗೆ ಕಾದು ಹೆಂಚಂತಾಗಿದ್ದ ಭೂಮಿ ತಂಪಾಗಿದೆ. ಚಿತ್ರದುರ್ಗದ ಕೋಟೆ ಕೊತ್ತಲಗಳು, ಮರ, ಗಿಡಗಳು ತೊಳೆದು ಸ್ವಚ್ಛಗೊಳಿಸಿದಂತಾಗಿವೆ.‌ ಹದವಾದ ಮಳೆಯಾಗಿರುವುದರಿಂದ ಹವಾಮಾನ ಬದಲಾವಣೆಯ ಮುನ್ಸೂಚನೆ ರೈತರಿಗೆ ಸಿಕ್ಕಿದಂತಾಗಿದ್ದು, ಮುಂಗಾರಿಗೆ ಮೊದಲೇ ಬಿತ್ತನೆಗೆ ಭೂಮಿ ಹದಮಾಡಿ ಅಣಿಗೊಳಿಸುವ ರೈತರ ಕೆಲಸ ಗರಿಗೆದಲಿದೆ. ನೀರಾವರಿ ಆಶ್ರಿತ ಬೇಸಿಗೆ ಬೆಳೆಗಳಿಗೆ, ತೋಟಗಳಿಗೆ ಮಳೆಯ ಸಿಂಚನವಾಗಿರುವುದು ನೀರಿನ ಬವಣೆ ನೀಗಿಸಲು ವರದಾನವಾಗಿದೆ.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಡಿಕೆ, ತೆಂಗು, ಹನಿ ನೀರಾವರಿ ಉಪಕರಣಗಳು ಬೆಂಕಿಗಾಹುತಿ, ರೈತ ಕಂಗಾಲು.

ಕಳೆದೆರಡು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಮಳೆ ಮೋಡವಾಗುತ್ತಿತ್ತು.‌  ಕೆಲವೆಡೆ ಮಳೆ ಹನಿಗಳು ಉದುರಿದ್ದು ಬಿಟ್ಟರೆ, ಉತ್ತಮ ಮಳೆಯ ನಿರೀಕ್ಷೆ ಎಲ್ಲರಲ್ಲಿತ್ತು.‌ ಅದರಂತೆ ಬುಧವಾರ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ಉತ್ತಮ ಮಳೆಯಾಗಿತ್ತು.

ಬಿ.ಜಿ.ಕೆರೆ ಗ್ರಾಮ ಸೇರಿದಂತೆ ಮೊಳಕಾಲ್ಮುರು, ಹಾನಗಲ್, ರಾಯಪುರ, ರಾಂಪುರ, ದೇವಸಮುದ್ರ ಗ್ರಾಮಗಳ ಸುತ್ತ ಮುತ್ತಲಿನ ಪರಿಸರದಲ್ಲಿ ಉತ್ತಮ ಮಳೆ ಸುರಿದಿದೆ.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ |ಮಾರಾಟಕ್ಕಿರುವ ಎತ್ತುಗಳನ್ನು ಕೊಳ್ಳುವವರು ದಿಕ್ಕಿಲ್ಲ; ರೈತರ ಪರದಾಟ

ಮಧ್ಯ ಕರ್ನಾಟಕದಲ್ಲಿ ಬರಗಾಲದ ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಚಿತ್ರದುರ್ಗ ಜಿಲ್ಲೆಯ...

ಚಿತ್ರದುರ್ಗ | ತಾಯಿ-ಮಗುವಿನ ಆರೋಗ್ಯಕ್ಕೆ ಮೂರು ವರ್ಷಗಳ ಅಂತರ ಅಗತ್ಯ : ಟಿಹೆಚ್‌ಇಒ ಬಿ. ಮೂಗಪ್ಪ

 ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕನಿಷ್ಠ ಮೂರು ವರ್ಷಗಳ ಅಂತರ ಕಾಯ್ದುಕೊಳ್ಳುವುದು...

ಹಿರಿಯ ಕಾದಂಬರಿಕಾರ್ತಿ ಸಿ.ಎನ್. ಮುಕ್ತಾ ನಿಧನ

ಪ್ರಸಿದ್ಧ ಕಾದಂಬರಿಕಾರ್ತಿ ಹಾಗೂ ಜನಪ್ರಿಯ ಲೇಖಕಿ ಸಿ.ಎನ್. ಮುಕ್ತಾ (77) ಅವರು...