ಆದೇಶ ಪಾಲನೆ ಮಾಡದ ಹುಣಸಗಿಯ ಎಸ್.ಕೆ ಇಂಡಿಪೆಂಡೆಂಟ್ ಪಿಯು ಕಾಲೇಜು ಮತ್ತು ಸಾಯಿ ವಿಜ್ಞಾನ ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಯಾದಗಿರಿ ಜಿಲ್ಲಾದ್ಯಂತ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆಯ ವರದಿಯನ್ವಯ ವಿದ್ಯಾರ್ಥಿಗಳ ರಕ್ಷಣಾ ಹಿತದೃಷ್ಟಿಯಿಂದ ಜುಲೈ 27ರ ಗುರುವಾರ ಜಿಲ್ಲಾದಾದ್ಯಂತ ರಜೆ ಘೋಷಣೆ ಮಾಡಲಾಗಿತ್ತು. ಆದರೂ ಹುಣಸಗಿ ತಾಲೂಕಿನ ಖಾಸಗಿ ಶಾಲೆಗಳು ಆದೇಶ ಉಲ್ಲಂಘಿಸಿದ್ದು, ತರಗತಿಗಳನ್ನು ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಗೈರಾದ ಮಕ್ಕಳಿಗೂ ಹಾಜರಾತಿ; ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹ
“ಶಾಲೆಯಲ್ಲಿ ಮಕ್ಕಳಿಗೆ ಯಾವುದೇ ಮೂಲ ಸೌಕರ್ಯಗಳೂ ಇರುವುದಿಲ್ಲ. ಆದರೂ ಜಿಲ್ಲಾಧಿಕಾರಿ ಆದೇಶಕ್ಕೆ ಅವಮಾನ ಮಾಡಿದಕ್ಕಾಗಿ ಖಾಸಗಿ ಶಾಲೆ ಹಾಗೂ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಶಿನಾಥ ನಟೇಕಾರ, ರಾಹುಲ್ ಕೊಲ್ಲೂರಕರ್, ದೊ.ಸಾಬಣ್ಣ ಕೆ ಶಹಾಪೂರ, ಹಂಪಯ್ಯ ಎಸ್ ಶೇಂಗಿನೋರ, ಬಾಲು ಚಲುವಾದಿ, ಮೌನೇಶ ಯಾಡ್ಡಳ್ಳಿ, ಮರೆಪ್ಪ ಗುರುಸಣಗಿ, ಭೀಮಪ್ಪ ಗೌಂಡಿ ಕ್ಯಾತ್ನಾಳ, ಮಲ್ಲಪ್ಪ ಕುರಕುಂದಿ, ಮಲ್ಲಿಕಾರ್ಜುನ ಕಾಮನೂರ ಇದ್ದರು.