ಲೋಕಸಭಾ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಹಾಗೂ ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರಾವಿಡ ಮುನ್ನೇತ್ರ ಕಝಗಂ(ಡಿಎಂಕೆ) ಪಕ್ಷ ತನ್ನ ಚುನಾವಣಾ ಪ್ರಣಾಳಿಕೆ ಹಾಗೂ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಬಿಡುಗಡೆಗೊಳಿಸಿದ್ದು, ಭರಪೂರ ಭರವಸೆಗಳನ್ನು ಘೋಷಿಸಿದೆ.
ಏಪ್ರಿಲ್ 19ರಂದು ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಮತದಾರರಿಗೆ ಭರಪೂರ ಕೊಡುಗೆ ಘೋಷಿಸಿರುವ ಡಿಎಂಕೆ, ಪಕ್ಷ ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಕಣಕ್ಕಿಳಿಸಿದೆ.
#WATCH | Chennai: DMK released its manifesto for the upcoming Lok Sabha elections, in the presence of Tamil Nadu CM MK Stalin, DMK MP Kanimozhi and other party leaders. pic.twitter.com/s5HUGsQkoR
— ANI (@ANI) March 20, 2024
ಡಿಎಂಕೆ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಇಂಡಿಯಾ ಮೈತ್ರಿಕೂಟ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಹಲವು ಮಹತ್ವದ ಬದಲಾವಣೆ ತರುತ್ತೇವೆ. ಪ್ರಮುಖವಾಗಿ ದೇಶದಲ್ಲಿ ರಾಜ್ಯ ಸರ್ಕಾರಗಳ ಆಳ್ವಿಕೆಯಲ್ಲಿ ರಾಜ್ಯಪಾಲರ ಹಸ್ತಕ್ಷೇಪ, ಮಧ್ಯಪ್ರವೇಶಕ್ಕೆ ಇರುವ ಹಕ್ಕು, ಅಧಿಕಾರಗಳನ್ನು ರದ್ದು ಮಾಡುತ್ತೇವೆ. ರಾಜ್ಯಪಾಲರ ಹಕ್ಕು ರದ್ದಿಗೆ ಸಂವಿಧಾನ ತಿದ್ದುಪಡಿಯ ಭರವಸೆಯನ್ನು ತರುತ್ತೇವೆ ಎಂದು ಘೋಷಿಸಿದೆ. ಅಲ್ಲದೆ ದೇಶಾದ್ಯಂತ ನೀಟ್ ಪರೀಕ್ಷೆಯನ್ನು ರದ್ದುಪಡಿಸುವ ಭರವಸೆಯನ್ನು ಡಿಎಂಕೆ ನಾಯಕರು ನೀಡಿದ್ದಾರೆ.
திமுக தேர்தல் அறிக்கை!
சமையல் எரிவாயு சிலிண்டர் விலை ரூ 500 க்கு குறைக்கப்படும்.
நாற்பதும் நமதே! நாடும் நமதே!#DMKManifesto2024#Vote4Dmk#Vote4RisingSun pic.twitter.com/g2XsLqThYO
— DMK (@arivalayam) March 20, 2024
ಅಲ್ಲದೇ, ಸಾಮಾನ್ಯ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ₹75ಕ್ಕೆ ಪೆಟ್ರೋಲ್, ₹65ಕ್ಕೆ ಡೀಸೆಲ್ ಹಾಗೂ ₹500 ರೂಪಾಯಿಗೆ ಸಿಲಿಂಡರ್ ನೀಡುವುದಾಗಿ ಘೋಷಿಸಿದೆ. ಜಾತಿ ಗಣತಿ ನಡೆಸಲಾಗುವುದು ಮತ್ತು ರಾಜ್ಯದಲ್ಲಿ ಆಶ್ರಯ ಪಡೆದಿರುವ ಶ್ರೀಲಂಕಾ ತಮಿಳರಿಗೆ ಪೌರತ್ವ ನೀಡುವುದಾಗಿ ಪಕ್ಷ ಭರವಸೆ ನೀಡಿದೆ.
ಡಿಎಂಕೆ ಪ್ರಣಾಳಿಕೆಯ ಪ್ರಮುಖ ಅಂಶಗಳು ಹೀಗಿದೆ:
1. ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ(ಸಿಎಎ) ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು(ಯುಸಿಸಿ) ಜಾರಿಗೆ ತರುವುದಿಲ್ಲ.
2. ಅಡುಗೆ ಗ್ಯಾಸ್ ಸಿಲೆಂಡರ್ ₹500, ಪೆಟ್ರೋಲ್ ಲೀಟರ್‌ಗೆ ₹75 ಮತ್ತು ಡೀಸೆಲ್ 65 ರೂಪಾಯಿಗೆ ಮಾರಾಟ
3. ತಮಿಳುನಾಡಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಹಾಗೂ ನೀಟ್ ಪರೀಕ್ಷೆ ಜಾರಿಗೆ ತರುವುದಿಲ್ಲ
4. ಪುದುಚೇರಿಗೆ ರಾಜ್ಯದ ಸ್ಥಾನಮಾನ
5. ತಿರುಕುರಳ್ ಅನ್ನು ರಾಷ್ಟ್ರೀಯ ಪುಸ್ತಕ ಎಂದು ಘೋಷಣೆ
6. ಸಂಸತ್ ಮತ್ತು ಅಸೆಂಬ್ಲಿಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ
7. ಕೇಂದ್ರ ಸರ್ಕಾರದ ನೇಮಕಾತಿ ಪರೀಕ್ಷೆಯಲ್ಲಿ ತಮಿಳು ಭಾಷೆಯಲ್ಲಿ ಬರೆಯಲು ಅವಕಾಶ
8. ರೈಲ್ವೆ ಇಲಾಖೆಗೆ ಪ್ರತ್ಯೇಕ ಹಣಕಾಸು ನೀತಿ ಜಾರಿ
8. ಶ್ರೀಲಂಕಾದಿಂದ ಮರಳಿರುವ ತಮಿಳಿಗರಿಗೆ ಭಾರತದ ನಾಗರಿಕತ್ವ
10. ಬಡ ಮಹಿಳೆಯರಿಗೆ ತಿಂಗಳಿಗೆ 1000 ರೂಪಾಯಿ ನಗದು ವಿತರಣೆ
11. ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ
12. ಎಂ ಎಸ್ ಸ್ವಾಮಿನಾಥನ್ ಸಮಿತಿಯ ಶಿಫಾರಸು ಜಾರಿ: ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ
ಡಿಎಂಕೆ ಚುನಾವಣಾ ಪ್ರಣಾಳಿಕೆಯ ಜೊತೆಗೆ ಸಿಎಂ ಎಂ.ಕೆ ಸ್ಟಾಲಿನ್ ಅವರು ಮೊದಲ ಹಂತದಲ್ಲಿ ಪಕ್ಷದ 16 ಲೋಕಸಭಾ ಕ್ಷೇತ್ರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಡಿಎಂಕೆ ಮಿತ್ರಪಕ್ಷಗಳಾದ ಕಾಂಗ್ರೆಸ್ (9), ವಿದುತಲೈ ಚಿರುತೈಗಲ್ ಕಚ್ಚಿ (2), ಸಿಪಿಐ (2), ಸಿಪಿಐಗಳೊಂದಿಗೆ 39 ಲೋಕಸಭಾ ಕ್ಷೇತ್ರಗಳಲ್ಲಿ 21 ರಲ್ಲಿ ಸ್ಪರ್ಧಿಸುತ್ತಿದೆ.
ಇದನ್ನು ಓದಿದ್ದೀರಾ? ಕೇರಳ | ಅಭ್ಯರ್ಥಿ ಇಲ್ಲದೆಯೇ ಮೋದಿ ರೋಡ್‌ಶೋ; ‘ನನ್ನ ಕರೆದಿಲ್ಲ’ ಎಂದ ಸಲಾಮ್!
ದಕ್ಷಿಣ ಚೆನ್ನೈಯಿಂದ ತಂಗಪಾಡ್ಯನ್, ಸೆಂಟ್ರಲ್ ಚೆನ್ನೈಯಿಂದ ದಯಾನಿಧಿ ಮಾರನ್, ಶ್ರೀಪೆರಂಬೂರುನಿಂದ ಟಿ.ಆರ್.ಬಾಲು, ತಿರುವಣ್ಣಾಮಲೈನಿಂದ ಅಣ್ಣಾದೊರೈ, ನೀಲಗಿರಿಯಿಂದ ಎ.ರಾಜಾ, ತೂತುಕುಡಿಯಿಂದ ಕನ್ನಿಮೊಳಿ, ಉತ್ತರ ಚೆನ್ನೈಯಿಂದ ಕಲಾನಿಧಿ ವೀರಸ್ವಾಮಿ ಮುಂತಾದ ಪ್ರಮುಖರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
