140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಕ್ಕಿಂತ ಎಣಿಕೆಯಾದ ಮತಗಳ ಸಂಖ್ಯೆ ಹೆಚ್ಚು: ಏನು ಈ ವ್ಯತ್ಯಾಸ?

Date:

2024ರ ಲೋಕಸಭೆ ಚುನಾವಣೆಯ ಫಲಿತಾಂಶಗಳು ಹೊರಬಿದ್ದಿವೆ. ಮೂರನೇ ಬಾರಿಗೆ ಮೋದಿ ನೇತೃತ್ವದಲ್ಲಿ ಸರ್ಕಾರವೂ ರಚನೆಯಾಗಿದೆ. ಆದರೆ, ಚುನಾವಣಾ ಪ್ರಕ್ರಿಯೆಯ ಸುತ್ತ ವಿವಾದಗಳು, ಚರ್ಚೆಗಳು, ಪ್ರಶ್ನೆಗಳು ಇನ್ನೂ ಮುಂದುವರಿದಿವೆ.

2019ರ ಲೋಕಸಭಾ ಚುನಾವಣೆಯಲ್ಲಿ 340ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇವಿಎಂಗಳಲ್ಲಿ ಚಲಾವಣೆಯಾದ ಮತಗಳು ಮತ್ತು ಎಣಿಕೆಯಾದ ಮತಗಳ ನಡುವೆ ಭಾರೀ ವ್ಯತ್ಯಾಸಗಳು ಕಂಡುಬಂದಿದ್ದವು. ಈ ಬಗ್ಗೆ ‘ದಿ ಕ್ವಿಂಟ್‌’ ವರದಿ ಮಾಡಿತ್ತು. 2019ರಲ್ಲಿ ‘ಅಸೋಷಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್‌’ ಸಲ್ಲಿಸಿದ್ದ ಅರ್ಜಿಯ ಆಧಾರದ ಮೇಲೆ ಐದು ವರ್ಷಗಳ ಬಳಿಕ 2024ರಲ್ಲಿ ಸುಪ್ರೀಂ ಕೋರ್ಟ್‌ ಇವಿಎಂ ವಸ್ತುನಿಷ್ಠತೆಯ ಬಗ್ಗೆ ವಿಚಾರಣೆಯನ್ನು ನಡೆಸಿತ್ತು. ವಿಚಾರಣೆಯ ಸಂದರ್ಭದಲ್ಲಿ, ಚುನಾವಣಾ ಆಯೋಗವು ವ್ಯತ್ಯಾಸಗಳ ಕುರಿತ ಆರೋಪವನ್ನು ತಿರಸ್ಕರಿಸಿತ್ತು.

ಈಗ, 2024ರ ಲೋಕಸಭಾ ಚುನಾವಣೆಯಲ್ಲೂ ಚಲಾವಣೆಯಾದ ಮತ್ತು ಎಣಿಕೆಯಾದ ಮತಗಳ ಅಂಕಿಅಂಶಗಳ ನಡುವೆ ವ್ಯತ್ಯಾಸಗಳು ಕಂಡುಬಂದಿವೆ. 543 ಕ್ಷೇತ್ರಗಳಿಂದ ಆಯೋಗದ ಡೇಟಾವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೇರಳದ ದಮನ್ & ದಿಯು, ಲಕ್ಷದ್ವೀಪ ಮತ್ತು ಅಟ್ಟಿಂಗಲ್‌ ಸೇರಿದಂತೆ 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಣಿಕೆಯಾದ ಮತಗಳ ಸಂಖ್ಯೆಯು ಇವಿಎಂಗಳಲ್ಲಿ ಚಲಾವಣೆಯಾದ ಮತಗಳ ಸಂಖ್ಯೆಗೂ ವ್ಯತ್ಯಾಸಗಳಿವೆ. ಕೆಲವು ಕ್ಷೇತ್ರಗಳಲ್ಲಿ ಎಣಿಸಿದ ಮತಗಳು ಚಲಾಯಿಸಿದ್ದ ಮತಗಳಿಗಿಂತ ಹೆಚ್ಚಿದ್ದರೆ, ಕೆಲವು ಕ್ಷೇತ್ರಗಳಲ್ಲಿ ಕಡಿಮೆ ಇವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇವಿಎಂಗಳಲ್ಲಿ ಚಲಾವಣೆಯಾದ ಮತಗಳಿಗಿಂತ ಎಣಿಕೆಯಾದ ಮತಗಳ ಸಂಖ್ಯೆ ಹೆಚ್ಚಿರುವ ಪ್ರಮುಖ ಮೂರು ಕ್ಷೇತ್ರಗಳಿವು

ಚಲಾವಣೆಯಾದ ಮತಕ್ಕಿಂತ ಎಣಿಕೆಯಾದ ಮತಗಳು ಕಡಿಮೆ ಬಂದಿರುವ ಪ್ರಮುಖ ಮೂರು ಕ್ಷೇತ್ರಗಳಿವು

ಎಣಿಕೆಯಾದ ಇವಿಎಂ ಮತಗಳ ಸಂಖ್ಯೆ ಮತ್ತು ಅಂಚೆ ಮತಗಳ ಎಣಿಕೆಯನ್ನು ಪ್ರತ್ಯೇಕವಾಗಿ ಚುನಾವಣಾ ಆಯೋಗ ಉಲ್ಲೇಖಿಸಿದೆ. ಉದಾಹರಣೆಗೆ, ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದಮನ್ ಮತ್ತು ದಿಯು ಚುನಾವಣಾ ಫಲಿತಾಂಶದ ಸ್ಕ್ರೀನ್‌ಶಾಟ್ ಇಲ್ಲಿದೆ
ಇದಲ್ಲದೆ, ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ಒತ್ತಾಯದಿಂದಾಗಿ 2024ರ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಸಂಪೂರ್ಣ ಸಂಖ್ಯೆಯನ್ನು ಆಯೋಗ ಬಿಡುಗಡೆ ಮಾಡಿದೆ. ಚುನಾವಣೆಯ ಮೊದಲ ಐದು ಹಂತಗಳಲ್ಲಿ, ಚುನಾವಣಾ ಆಯೋಗವು ಒಂದು ಕ್ಷೇತ್ರದಲ್ಲಿನ ಒಟ್ಟು ಮತದಾರರ ಸಂಖ್ಯೆಯಲ್ಲಿ ಚಲಾವಣೆಯಾದ ಶೇಕಡಾವಾರು ಮತಗಳನ್ನು ಮಾತ್ರ ಬಿಡುಗಡೆ ಮಾಡಿತ್ತು. ಬಳಿಕ, ಮೇ 25 ರಂದು, ಚಲಾವಣೆಯಾದ ಇವಿಎಂ ಮತಗಳ ಸಂಪೂರ್ಣ ಅಂಕಿಅಂಶಗಳನ್ನು ಬಿಡುಗಡೆ ಮಾಡಿತು.

ಆದಾಗ್ಯೂ, ಆ ಡೇಟಾವು ಚಲಾವಣೆಯಾದ ಅಂಚೆ ಮತಪತ್ರಗಳ ಸಂಖ್ಯೆಯನ್ನು ಒಳಗೊಂಡಿಲ್ಲ ಎಂದು ಆಯೋಗವು ತನ್ನ ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿದೆ.

ಇತ್ತೀಚೆಗೆ, ಎಣಿಕೆ ಮಾಡಿದ ಮತಗಳ ಸಂಖ್ಯೆಯಲ್ಲಿನ ವ್ಯತ್ಯಾಸದ ಬಗ್ಗೆ ‘ಎಕ್ಸ್‌’ನಲ್ಲಿ ಆರೋಪಗಳು ಕೇಳಿಬರಲಾರಂಭಿಸಿದವು. ಈ ಬೆನ್ನಲ್ಲೇ, ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಯು ಡೇಟಾದಲ್ಲಿ ವ್ಯತ್ಯಾಸ ಕಂಡು ಬರಲು ಎರಡು ಕಾರಣಗಳಿರುತ್ತವೆ ಎಂದು ಪ್ರತಿಪಾದಿಸಿದರು.

“(1) ಪ್ರೆಸೈಡಿಂಗ್ ಆಫೀಸರ್‌ಗಳು ಮತದಾರರಿಂದ ಮತದಾನ ಪ್ರಾರಂಭಿಸುವ ಮೊದಲು ನಿಯಂತ್ರಣ ಘಟಕವು ನಡೆಸುವ ಅಣಕು ಮತದಾನದ ಡೇಟಾವನ್ನು ತೆರವುಗೊಳಿಸುವಲ್ಲಿ ವಿಫಲವಾಗಿದ್ದರೆ, ಅಥವಾ ಮತದಾನ ಪ್ರಾರಂಭಿಸುವ ಮೊದಲು VVPAT ನಿಂದ ಅಣುಕು ಮತದಾನದ ಚೀಟಿಗಳನ್ನು ತೆಗೆದುಹಾಕದಿದ್ದರೆ ವ್ಯತ್ಯಾಸಗಳು ಕಂಡುಬರುತ್ತವೆ.

(2) ಕಂಟ್ರೋಲ್ ಯೂನಿಟ್‌ನಲ್ಲಿ ಚಲಾವಣೆಯಾದ ಒಟ್ಟು ಮತಗಳು, ಪ್ರಿಸೈಡಿಂಗ್ ಆಫೀಸರ್ ಸಿದ್ಧಪಡಿಸಿದ ಫಾರ್ಮ್ ‘17-ಸಿ’ಯಲ್ಲಿನ ಮತಗಳ ದಾಖಲೆಗೆ ಹೊಂದಿಕೆಯಾಗದಿದ್ದರೆ ಅಥವಾ ತಪ್ಪಾಗಿ ಸಂಖ್ಯೆಯನ್ನು ದಾಖಲಿಸಿದ್ದರೆ ವ್ಯತ್ಯಾಸವಾಗುತ್ತದೆ.

 

ಒಂದೆರಡು ಬೂತ್‌ಗಳಲ್ಲಿ ಅಥವಾ ಕ್ಷೇತ್ರಗಳಲ್ಲಿ ಇಂತಹ ವ್ಯತ್ಯಾಸಗಳು ಅಥವಾ ತಪ್ಪುಗಳು ಆಗಬಹುದು. ಆದರೆ, ಬರೋಬ್ಬರಿ 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಂತಹ ವ್ಯತ್ಯಾಸಗಳು ಕಂಡುಬರುವುದು ಸುಮ್ಮನೆ ತಳ್ಳಿ ಹಾಕುವ ಸಂಗತಿಯಂತೂ ಅಲ್ಲ. ಆದಾಗ್ಯೂ, 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹೆಚ್ಚು ಮತಗಳ ಎಣಿಕೆ ಹೇಗಾಯಿತು ಎಂಬುದರ ಕುರಿತು ಚುನಾವಣಾ ಆಯೋಗ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಮತದಾನ ಮುಗಿದ ನಂತರ ಇವಿಎಂಗಳಲ್ಲಿ ಮಾಂತ್ರಿಕವಾಗಿ ಹೆಚ್ಚಿನ ಮತಗಳು ಹೇಗೆ ನೋಂದಣಿಯಾದವು? ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ.

ಇದೆಲ್ಲದರ ನಡುವೆ, ಇಂತಹ ವ್ಯತ್ಯಾಸಗಳು ಕಂಡುಬಂದಿರುವ ಪ್ರಮುಖ ನಾಲ್ಕು ಕ್ಷೇತ್ರಗಳಲ್ಲಿ ಗೆಲುವಿನ ಅಂತರ ತುಂಬಾ ಕಡಿಮೆ ಇದೆ. ಇಲ್ಲಿ, ಹೆಚ್ಚು-ಕಡಿಮೆಯಾದ ಮತಗಳ ಪರಿಣಾಮ ಹೆಚ್ಚಾಗಿರುತ್ತದೆ.

ಮೊದಲಿಗೆ, ಮಹಾರಾಷ್ಟ್ರದ ಮುಂಬೈ ವಾಯವ್ಯದಲ್ಲಿ, 9,51,580 ಇವಿಎಂ ಮತಗಳು ಚಲಾವಣೆಯಾಗಿದ್ದವು. ಆದರೆ 9,51,582 ಇವಿಎಂ ಮತಗಳನ್ನು ಎಣಿಸಲಾಗಿದೆ. ಎರಡು ಹೆಚ್ಚುವರಿ ಮತಗಳನ್ನು ಎಣಿಸಲಾಗಿದೆ. ಈ ಕ್ಷೇತ್ರದಲ್ಲಿ ಶಿವಸೇನೆಯ (ಶಿಂಧೆ ಬಣ) ರವೀಂದ್ರ ದತ್ತಾರಾಮ್ ವೈಕರ್ ಅವರು ಶಿವಸೇನಾ (ಉದ್ದವ್ ಬಣ) ಅಭ್ಯರ್ಥಿ ಅಮೋಲ್ ಗಜಾನನ್ ಅವರ ವಿರುದ್ಧ ಕೇವಲ 48 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

ಎರಡನೆಯದಾಗಿ, ರಾಜಸ್ಥಾನದ ಜೈಪುರ ಗ್ರಾಮಾಂತರದಲ್ಲಿ 12,38,818 ಇವಿಎಂ ಮತಗಳು ಚಲಾವಣೆಯಾಗಿದ್ದವು. ಆದರೆ, 12,37,966 ಇವಿಎಂ ಮತಗಳನ್ನು ಎಣಿಸಲಾಗಿದೆ. ಅಂದರೆ 852 ಮತಗಳ ಎಣಿಕೆಯನ್ನೇ ಮಾಡಲಾಗಿಲ್ಲ. ಇಲ್ಲಿ, ಬಿಜೆಪಿಯ ರಾವ್ ರಾಜೇಂದ್ರ ಸಿಂಗ್ ಅವರು 1,615 ಮತಗಳ ಅಲ್ಪ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಮೂರನೆಯದಾಗಿ, ಛತ್ತೀಸ್‌ಗಢದ ಕಂಕೇರ್‌ನಲ್ಲಿ 12,61,103 ಇವಿಎಂ ಮತಗಳು ಚಲಾವಣೆಯಾಗಿದ್ದು, 12,60,153 ಇವಿಎಂ ಮತಗಳನ್ನು ಎಣಿಸಲಾಗಿದೆ. ಅಂದರೆ, 950 ಮತಗಳನ್ನು ಎಣಿಕೆ ಮಾಡಲಾಗಿಲ್ಲ. ಇಲ್ಲಿಯೂ, ಬಿಜೆಪಿಯ ಭ್ರೋಜರಾಜ್ ನಾಗ್ ಅವರು 1,884 ಮತಗಳ ಅಲ್ಪ ಅಂತರದಲ್ಲಿ ಗೆದ್ದಿದ್ದಾರೆ.

ನಾಲ್ಕನೆಯದಾಗಿ, ಉತ್ತರ ಪ್ರದೇಶದ ಫರೂಕಾಬಾದ್‌ನಲ್ಲಿ 10,32,244 ಇವಿಎಂ ಮತಗಳು ಚಲಾವಣೆಯಾಗಿದ್ದರೆ, 10,31,784 ಇವಿಎಂ ಮತಗಳನ್ನು ಎಣಿಸಲಾಗಿದೆ. ಅಂದರೆ, 460 ಮತಗಳನ್ನು ಎಣಿಕೆ ಮಾಡಲಾಗಿಲ್ಲ. ಇಲ್ಲಿಯೂ ಬಿಜೆಪಿಯ ಮುಖೇಶ್ ರಜಪೂತ್ 2,678 ಮತಗಳ ಅಂತರದಿಂದ ಗೆದ್ದಿದ್ದಾರೆ.

ಗಮನಾರ್ಹವಾಗಿ, ಈ ನಾಲ್ಕರಲ್ಲಿ ಮೂವರು ಬಿಜೆಪಿ ಹಾಗೂ ಓರ್ವ ಎನ್‌ಡಿಎ ಭಾಗವಾಗಿರುವ ಶಿವಸೇನೆ (ಶಿಂಧೆ ಬಣ) ಅಭ್ಯರ್ಥಿಗಳಾಗಿದ್ದಾರೆ. ಹೇಗೂ, ಗೆಲುವಿನ ಅಂತರವು ಮತಗಳ ವ್ಯತ್ಯಾಸಕ್ಕಿಂತ ಹೆಚ್ಚಿನದ್ದಾಗಿದೆ. ಆದ್ದರಿಂದ, ಮರುಎಣಿಕೆಗೆ ಒತ್ತಾಯಿಸುವ ಅಗತ್ಯವಿಲ್ಲ ಎಂದು ಕೆಲವರು ಭಾವಿಸಬಹುದು. ಆದರೆ, ಮತಗಳ ಕೊರತೆಯು ಗೆಲುವು-ಸೋಲಿನ ಮಾರ್ಜಿನ್‌ಗಿಂತ ಕಡಿಮೆ ಇದ್ದರೂ, ಮರುಎಣಿಕೆ ಮಾಡಬಹುದು ಎಂದು ಉತ್ತರ ಪ್ರದೇಶದ ಮುಖ್ಯಚುನಾವಣಾಧಿಕಾರಿ ಹೇಳಿದ್ದಾರೆ. ಸದ್ಯ, ಮೇಲಿನ ನಾಲ್ಕರ ಪೈಕಿ ಮೂರು ಕ್ಷೇತ್ರಗಳಲ್ಲಿ ವ್ಯತ್ಯಾಸವು ಮಾರ್ಜಿನ್‌ಗಿಂತ 50% ಒಳಗೇ ಇರುವುದರಿಂದ ಅವರ ಹೇಳಿಕೆ ಗಮನಾರ್ಹವೆಂದು ಪರಿಗಣಿಸಬಹುದು.

ಈ ಮೇಲಿನ ಸ್ಥಾನಗಳು ಮತ್ತು ಗೆಲುವಿನ ಅಂತರ ತೀರಾ ಕಡಿಮೆ ಇರುವ ಇತರ ಕ್ಷೇತ್ರಗಳಲ್ಲಿ ಸೋತ ಅಭ್ಯರ್ಥಿಗಳು 100% ಮರು ಮತ ಎಣಿಕೆಗೆ ಒತ್ತಾಯಿಸಬೇಕು ಎಂಬ ಅಭಿಪ್ರಾಯವಿದೆ. ಇವಿಎಂಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರೆ ಅಥವಾ ಅಧಿಕಾರಿಗಳಿಂದ ಅಂಕಿಅಂಶ ನಿರ್ವಹಣಾ ದೋಷ ಕಂಡುಬಂದಲ್ಲಿ ವಿವಿಪ್ಯಾಟ್‌ ಚೀಟಿಗಳನ್ನು ಎಣಿಸಬೇಕು.

ಉತ್ತರ ಪ್ರದೇಶ ಮುಖ್ಯಚುನಾವಣಾ ಅಧಿಕಾರಿಯ ಪ್ರತಿಕ್ರಿಯಗಳ ಹೊರತಾಗಿಯೂ ಇನ್ನೂ, ಹಲವು ಗಂಭೀರ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಿಸಬೇಕಿದೆ

  1. ಚಲಾವಣೆಯಾದ ಮತಗಳಿಗಿಂತ ಹೆಚ್ಚಿನ ಮತಗಳನ್ನು ಎಣಿಕೆ ಮಾಡಿರುವುದನ್ನು ಆಯೋಗ ಹೇಗೆ ವಿವರಿಸುತ್ತದೆ ಮತ್ತು ಸಮರ್ಥಿಸುತ್ತದೆ?
  2. ಸಾಮಾನ್ಯ ಹೇಳಿಕೆಯನ್ನು ನೀಡುವ ಬದಲು, ಎಣಿಕೆ ಮಾಡಿದ ಕೊರತೆ ಅಥವಾ ಹೆಚ್ಚುವರಿ ಇವಿಎಂ ಮತಗಳ ಬಗ್ಗೆ ಚುನಾವಣಾ ಆಯೋಗವು ಲೋಕಸಭಾ ಕ್ಷೇತ್ರವಾರು ಸ್ಪಷ್ಟೀಕರಣವನ್ನು ಏಕೆ ನೀಡುತ್ತಿಲ್ಲ?
  3. ಅಣುಕು ಮತದಾನದ ದತ್ತಾಂಶವನ್ನು ಅಳಿಸದಿರುವುದರಿಂದ ಚಲಾವಣೆಯಾದ ಮತ್ತು ಎಣಿಸಿದ ಮತಗಳ ನಡುವಿನ ವ್ಯತ್ಯಾಸವೇ ಕಾರಣ ಎಂಬ ತೀರ್ಮಾನಕ್ಕೆ ಆಯೋಗ ಹೇಗೆ ಬಂದಿತು?
  4. ನಮೂನೆ ‘17ಸಿ’ಯಲ್ಲಿ ನಮೂದಿಸಿರುವಂತೆ ಚಲಾವಣೆಯಾದ ಮತಗಳ ಸಂಖ್ಯೆ ಮತ್ತು ಕೆಲವು ಕ್ಷೇತ್ರಗಳಲ್ಲಿನ ಕಂಟ್ರೋಲ್ ಯೂನಿಟ್‌ಗಳಲ್ಲಿ ದಾಖಲಾದ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳಿವೆ ಎಂದು ಆಯೋಗ ಒಪ್ಪಿಕೊಳ್ಳುತ್ತಿದೆಯೇ?
  5. ಮತದಾನವಾದ ಇವಿಎಂ ಮತಗಳಲ್ಲಿ ವ್ಯತ್ಯಾಸ ಕಂಡುಬಂದಾಗ ಹಾಗೂ ಗೆಲುವಿನ ಅಂತರ ಕಡಿಮೆ ಬಂದಾಗ ಆಯೋಗವು ಯಾಕೆ ವಿವಿಪ್ಯಾಟ್‌ ಚೀಟಿಗಳನ್ನು ಎಣಿಸಲಿಲ್ಲ?

2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಚುನಾವಣಾ ಆಯೋಗವು ವಸ್ತುನಿಷ್ಠವಾಗಿ ವರ್ತಿಸಲಿಲ್ಲ. ಮತದಾನದ ಸಮಗ್ರ ಮಾಹಿತಿಯನ್ನು ಹಂಚಿಕೊಳ್ಳಲಿಲ್ಲ. ಬಳಿಕ, ಡೇಟಾ ಪ್ರಕಟಿಸಲು ವಿಳಂಬ ಮಾಡಿತು. ದ್ವೇಷ ಭಾಷಣಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪಕ್ಷಪಾತ ಧೋರಣೆ ತಾಳಿತು ಎಂಬ ಆರೋಪಗಳಿವೆ.

ಇಂತಹ ಸಮಯದಲ್ಲಿ, ಅದರಲ್ಲೂ ಚುನಾವಣಾ ಮಾಹಿತಿಯನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಆಯೋಗದಿಂದ ವಿಶೇಷ ಕ್ರಮಗಳನ್ನು ನಿರೀಕ್ಷಿಸುವುದು ಪ್ರಯೋಜನವಾಗದು. ಆದರೂ, ಇಂತಹ ವ್ಯತ್ಯಾಸಗಳನ್ನು ಪ್ರಶ್ನಿಸುವುದು ದೇಶದ ಜನರ ಹಕ್ಕು. ಪ್ರಶ್ನಿಸೋಣ. ಉತ್ತರ ಪಡೆಯೋಣ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಜರಾತ್ | ಡ್ರಗ್ಸ್ ಪ್ರಕರಣದಲ್ಲಿ ಯುವಕನ ಬಂಧನ; ಬಿಜೆಪಿ ಜೊತೆಗೆ ನಂಟು ಆರೋಪ

ಡ್ರಗ್ಸ್ ಪ್ರಕರಣದಲ್ಲಿ ಗುಜರಾತ್‌ನ ಸೂರತ್‌ ಮೂಲಕ ವ್ಯಕ್ತಿಯೊಬ್ಬನನ್ನು ಬಂಧಸಿಲಾಗಿದೆ. ಆತನನ್ನು ವಿಕಾಸ್...

ಕೇಂದ್ರ ಬಜೆಟ್‌-2024 | ಮಹಿಳೆಯರಿಗೆ ನೆರವಾಗುವ ನಾರಿಶಕ್ತಿ ಬಜೆಟ್ ಇದಾಗಿದೆ: ಎಚ್‌ ಡಿ ಕುಮಾರಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ 'ವಿಕಸಿತ ಭಾರತ' ನಿರ್ಮಾಣಕ್ಕೆ ಶಕ್ತಿ...

ಗ್ಯಾಂಗ್‌ಸ್ಟಾರ್ ಜೊತೆ ಓಡಿ ಹೋಗಿದ್ದ ಐಎಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆ

ಗ್ಯಾಂಗ್​ಸ್ಟರ್​ನನ್ನು ಪ್ರೀತಿಸಿ ಆತನೊಂದಿಗೆ ಓಡಿ ಹೋಗಿದ್ದ ಐಎಎಸ್​ ಅಧಿಕಾರಿ ಪತ್ನಿ ಮನೆಗೆ...

ಕೇಂದ್ರ ಬಜೆಟ್ | ಇನ್ಮುಂದೆ ಯಾವುದು ಅಗ್ಗ? ಯಾವುದು ದುಬಾರಿ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23ರಂದು ಕೇಂದ್ರ ಬಜೆಟ್...