ಲೋಕಸಭೆ ಚುನಾವಣೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ 19ರ ಬೆಳಗ್ಗೆ 7 ರಿಂದ ಜೂನ್ 1ರ ಸಂಜೆ 6.30ರವರೆಗೆ ಎಕ್ಸಿಟ್ ಪೋಲ್(Exit Poll)ನ ಫಲಿತಾಂಶಗಳನ್ನು ಪ್ರಕಟಿಸುವುದಕ್ಕೆ ಚುನಾವಣಾ ಆಯೋಗವು ನಿರ್ಬಂಧ ಹೇರಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಚುನಾವಣಾ ಆಯೋಗವು, “ಮತದಾನ ಪ್ರಕ್ರಿಯೆಯ ಬಳಿಕ ನಡೆಸಲಾಗುವ ಮತದಾನೋತ್ತರ ಸಮೀಕ್ಷೆಗಳನ್ನು ನಡೆಸದಂತೆ ಹಾಗೂ ಅವುಗಳ ಫಲಿತಾಂಶಗಳನ್ನು ಪ್ರಕಟಿಸಬಾರದು” ಎಂದು 1951 ರ ಜನತಾ ಪ್ರಾತಿನಿಧ್ಯ ಕಾಯಿದೆ (ಆರ್‌ಪಿಎಕ್ಟ್) ಅನ್ನು ಉಲ್ಲೇಖಿಸಿ ನಿರ್ಬಂಧ ವಿಧಿಸಿದೆ.
Ban on Exit Poll🚫
Time Period 👇
7.00 AM – 19 April 2024
To
6.30 PM – 1 June 2024#ChunavKaParv #DeshKaGarv #ECI #Election2024#LokSabhaElection2024 pic.twitter.com/J5VC9W7Dnb— Election Commission of India (@ECISVEEP) April 19, 2024
“ಸುದ್ದಿ ಬ್ಯೂರೋಗಳು, ಮಾಧ್ಯಮ ಸಂಸ್ಥೆಗಳು, ರೇಡಿಯೋ ಮತ್ತು ದೂರದರ್ಶನ ಚಾನೆಲ್‌ಗಳು ಮತದಾನದ ಬಳಿಕ ಸಂಗ್ರಹಿಸುವ ಯಾವುದೇ ಅಭಿಪ್ರಾಯ ಅಥವಾ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಸಾರ ಮಾಡುವಂತಿಲ್ಲ” ಎಂದು ತಿಳಿಸಿದೆ.
ಲೋಕಸಭಾ ಚುನಾವಣೆಯು ಏಪ್ರಿಲ್ 19ರಿಂದ ಜೂನ್ 1ರ ನಡುವೆ ಏಳು ಹಂತಗಳಲ್ಲಿ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
18ನೇ ಲೋಕಸಭೆಗೆ ಇಂದು(ಏಪ್ರಿಲ್ 19) ಮೊದಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, ಭರ್ಜರಿ ಮತದಾನ ನಡೆದಿದೆ. ಬಿಸಿ ಗಾಳಿಯ ನಡುವೆಯೂ ಭಾರೀ ಪ್ರಮಾಣದಲ್ಲಿ ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. 21 ರಾಜ್ಯದ 102 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಮುಕ್ತಾಯ ಕಂಡಿದೆ.
