18ನೇ ಲೋಕಸಭೆಗೆ ಇಂದು(ಏಪ್ರಿಲ್ 19) ಮೊದಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, ಭರ್ಜರಿ ಮತದಾನ ನಡೆದಿದೆ. ಬಿಸಿ ಗಾಳಿಯ ನಡುವೆಯೂ ಭಾರೀ ಪ್ರಮಾಣದಲ್ಲಿ ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಮೊದಲ ಬಾರಿಗೆ ಮತದಾನ ಮಾಡುವ ಮೂಲಕ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಗ್ರೇಟ್ ನಿಕೋಬಾರ್‌ನ ಶೋಂಪೆನ್ ಬುಡಕಟ್ಟಿನ ಬಸ್ತಾರ್‌ನಲ್ಲಿರುವ 56 ಗ್ರಾಮಗಳು ಮೊದಲ ಬಾರಿಗೆ ಮತ ಚಲಾಯಿಸಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.
High turnout in Phase 1 of #LokSabhaElections2024 despite heat wave
Polling remains largely peaceful across 21 States/UTs . Polling is now complete for 10 States/UTs including most of North east
Photo credit : V Krishnamurthy, Coimbatore, TNhttps://t.co/ZEdJ6GRG2F pic.twitter.com/NdWhGGeEqS— Spokesperson ECI (@SpokespersonECI) April 19, 2024
21 ರಾಜ್ಯದ 102 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ ನಡೆದ ಬಗ್ಗೆ ವರದಿಯಾಗಿದೆ. 20 ಶಾಸಕರು ಒಳಗೊಂಡತೆ 4 ಲಕ್ಷ ಮತದಾರರು ಮತಗಟ್ಟೆಗೆ ಬರಲಿಲ್ಲ. ನಾಗಾ ಬುಡಕಟ್ಟಿನ ಜನ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದಾರೆ. 8 ಕೇಂದ್ರ ಸಚಿವರು ಸೇರಿ 1,625 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ.

ಚುನಾವಣಾ ಆಯೋಗವು ರಾತ್ರಿ 7 ಗಂಟೆಗೆ ಮಾಧ್ಯಮಗಳಿಗ ಬಿಡುಗಡೆ ಮಾಡಿದ ಮತ ಪ್ರಮಾಣದ ವಿವರದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ 77.57 ಶೇಕಡಾದಷ್ಟು ಮತ ಚಲಾವಣೆಯಾಗಿದೆ. ಬಿಹಾರದಲ್ಲಿ 47.49 ಶೇ. ಮತದಾನ ನಡೆದಿರುವುದಾಗಿ ಮಾಹಿತಿ ಹಂಚಿಕೊಂಡಿದೆ. ಒಟ್ಟು ಶೇ.60ರಷ್ಟು ಮತ ಚಲಾವಣೆಯಾಗಿರುವುದಾಗಿ ಆಯೋಗ ತಿಳಿಸಿದೆ.
ತಮಿಳುನಾಡಲ್ಲಿ ಸಿಎಂ ಸ್ಟಾಲಿನ್, ಎಡಪ್ಪಾಡಿ ಪಳನಿಸ್ವಾಮಿ, ಚಿದಂಬರಂ, ಅಣ್ಣಾಮಲೈ, ತಮಿಳ್‌ಸೈ ಸೌಂದರರಾಜನ್, ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್‌ಹಾಸನ್, ಅಜಿತ್, ವಿಜಯ್ ಸೇರಿ ಹಲವರು ಮತದಾನ ಮಾಡಿದರು.
From Herminder Bay, voices resonate in the elections as Voters play their pivotal role in shaping the nation’s destiny during #GeneralElections2024.#ECI #LokSabhaElections2024 #ECISVEEP #IVoteforSure #ChunavKaParv #DeshKaGarv pic.twitter.com/tW9LdwKG10
— Chief Electoral Officer, Andaman & Nicobar Islands (@AndamanCEO) April 19, 2024
ಮಹಾರಾಷ್ಟ್ರದ ನಾಗ್ಪುರದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರಾಖಂಡದಲ್ಲಿ ಸಿಎಂ ಪುಷ್ಕರ್‌ಸಿಂಗ್ ಧಾಮಿ, ಬಾಬಾ ರಾಮ್‌ದೇವ್, ರಾಜಸ್ಥಾನದಲ್ಲಿ ಡಿಸಿಎಂ ದಿಯಾ ಕುಮಾರಿ, ಮಣಿಪುರದಲ್ಲಿ ಸಿಎಂ ಬೀರೇನ್ ಸಿಂಗ್, ಅಸ್ಸಾಂನಲ್ಲಿ ಸರ್ಬಾನಂದ ಸೋನಾವಾಲ್ ಹಕ್ಕು ಚಲಾಯಿಸಿದರು.
Booths vandalized in Manipur @ETPolitics pic.twitter.com/FKU676hj9p
— Bikash Singh (@bikash_ET) April 19, 2024
ಚುನಾವಣೆ ವೇಳೆ ಅಲ್ಲಲ್ಲಿ ಹಿಂಸಾಚಾರ ನಡೆದಿವೆ. ಮಣಿಪುರದ ಇಂಫಾಲದಲ್ಲಿ ಮತಗಟ್ಟೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮತದಾರರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಬಂಗಾಳದ ಚಂದ್ಮರಿ, ಕೂಚ್‌ಬೆಹಾರ್‌ನಲ್ಲಿ ಕಲ್ಲು ತೂರಾಟ ನಡೆದಿದೆ. ದಿನ್‌ಹಟಾದಲ್ಲಿ ಟಿಎಂಸಿ ಕಾರ್ಯಕರ್ತರು ಬಾಂಬ್ ಎಸೆದಿದ್ದಾರೆ. ಇತ್ತ ಛತ್ತೀಸ್‌ಘಡದ ಬಿಜಾಪುರ್‌ನಲ್ಲಿ ಮತಗಟ್ಟೆ ಸಮೀಪ ಗ್ರೆನೇಡ್ ಸ್ಫೋಟಗೊಂಡಿದೆ. ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿರುವುದಾಗಿ ವರದಿಯಾಗಿದೆ.
