ಭಿನ್ನಾಭಿಪ್ರಾಯಗಳು ದ್ವೇಷವಾಗಿ ಹಿಂಸಾಸ್ವರೂಪ ತಾಳಬಾರದು: ಸಿಜೆಐ

Date:

Advertisements
  • ವಿಭಿನ್ನ ದೃಷ್ಟಿಕೋನಗಳನ್ನು ಗೌರವಿಸುವ ಅಗತ್ಯ ಒತ್ತಿ ಹೇಳಿದ ಡಿವೈ ಚಂದ್ರಚೂಡ್
  • 16ನೇ ರಾಮನಾಥ್ ಗೋಯೆಂಕಾ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ವಿತರಿಸಿ ಭಾಷಣ

ಭಿನ್ನಾಭಿಪ್ರಾಯಗಳು ವಿರೂಪಗೊಂಡು ದ್ವೇಷಕ್ಕೆ ತಿರುಗಬಾರದು, ದ್ವೇಷವು ಹಿಂಸೆಯಾಗಿ ವಿಕಸನಗೊಳ್ಳಲು ಅವಕಾಶ ಕೊಡಬಾರದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಬುಧವಾರ ವಿಭಿನ್ನ ದೃಷ್ಟಿಕೋನಗಳನ್ನು ಗೌರವಿಸುವ ಅಗತ್ಯವನ್ನು ಒತ್ತಿ ಹೇಳಿದರು.

ನವದೆಹಲಿಯಲ್ಲಿ 16ನೇ ರಾಮನಾಥ್ ಗೋಯೆಂಕಾ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದ ಅವರು, “ನಮ್ಮ ದೇಶದಲ್ಲಿ ಮತ್ತು ಜಾಗತಿಕವಾಗಿ ಅನೇಕ ಪತ್ರಕರ್ತರು ವಿಭಿನ್ನ ಕಠಿಣ ಅನನುಕೂಲ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಾರೆ. ಆದರೆ, ಪ್ರತಿಕೂಲ ಮತ್ತು ವಿರೋಧದ ವಾತಾವರಣದಲ್ಲಿ ಪಟ್ಟುಬಿಡದೆ ಮುಂದೆ ಸಾಗುತ್ತಿದ್ದಾರೆ. ಈ ಗುಣವನ್ನು ಎಂದಿಗೂ ಕಳೆದುಕೊಳ್ಳಬಾರದು” ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜೆಗಳಾಗಿ ನಾವು ಪತ್ರಕರ್ತರ ಮುಂದಿಡುವ ಅಭಿಪ್ರಾಯಗಳು ಮತ್ತು ತೆಗೆದುಕೊಳ್ಳುವ ತೀರ್ಮಾನಗಳನ್ನು ನಾವು ಒಪ್ಪದೆ ಇರಬಹುದು. ಅನೇಕ ಪತ್ರಕರ್ತರಲ್ಲಿ ನನಗೂ ಭಿನ್ನಾಭಿಪ್ರಾಯವಿದೆ. ನಮ್ಮಲ್ಲಿ ಎಲ್ಲರೂ ಎಲ್ಲ ಮಂದಿಯನ್ನೂ ಒಪ್ಪಿಕೊಳ್ಳುವುದಿಲ್ಲ ಅಲ್ಲವೆ? ಆದರೆ ಭಿನ್ನಾಭಿಪ್ರಾಯಗಳು ದ್ವೇಷವಾಗಿ ವಿರೂಪಗೊಳ್ಳಬಾರದು ಮತ್ತು ಈ ದ್ವೇಷ ಹಿಂಸೆಯಾಗಿ ಪರಿವರ್ತನೆಯಾಗಬಾರದು ಎಂದು ಸಿಜಿಐ ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಸ್ವತಂತ್ರ ಪತ್ರಿಕೋದ್ಯಮದ ಅಗತ್ಯವನ್ನು ಹೇಳಿದ ಸಿಜಿಐ, “ಮಾಧ್ಯಮ ರಾಷ್ಟ್ರ ಕಲ್ಪನೆಯ ನಾಲ್ಕನೇ ಸ್ತಂಭ. ಹೀಗಾಗಿ ಪ್ರಜಾಪ್ರಭುತ್ವದಲ್ಲಿ ಅತಿಮುಖ್ಯ ಪಾತ್ರ ವಹಿಸುತ್ತದೆ. ಕಾರ್ಯಕಾರಿ ಮತ್ತು ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಪತ್ರಿಕೋದ್ಯಮವನ್ನು ಒಂದು ಸಂಸ್ಥೆಯಾಗಿ ಅಭಿವೃದ್ಧಿಗೊಳ್ಳುವುದನ್ನು ಪ್ರೋತ್ಸಾಹಿಸಬೇಕು. ಉತ್ತಮ ನಾಳೆಗಾಗಿ ನಮಗೆ ಮಾರ್ಗದರ್ಶಿಯಾಗಬಲ್ಲ ಸತ್ಯಗಳನ್ನು ಮುಂದಿಡುವುದು ನ್ಯಾಯಪರ ಪತ್ರಿಕೋದ್ಯಮ. ಇಂತಹ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಚಾಲಕಶಕ್ತಿ. ಡಿಜಿಟಿಲ್ ಯುಗದಲ್ಲಿ ಪತ್ರಕರ್ತರು ನಿಖರತೆ, ಪಾರದರ್ಶಕತೆ ಮತ್ತು ಜವಾಬ್ದಾರಿಯುತ ವರದಿಗಳನ್ನು ಪ್ರಕಟಿಸುವ ಅಗತ್ಯವಿದೆ” ಎಂದರು.

Advertisements
Bose Military School
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements
Advertisements
Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ಲಾಸ್ಟಿಕ್ ಚೀಲ ಮುಕ್ತ ದಿನ | ಪರಿಸರ ಸ್ನೇಹಿ ಭವಿಷ್ಯಕ್ಕಾಗಿ ಜಾಗತಿಕ ಹೋರಾಟ

ಪ್ಲಾಸ್ಟಿಕ್ ಚೀಲ ಮುಕ್ತ ದಿನವು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳನ್ನು ಅರಿತು, ಬಟ್ಟೆಯ...

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಶಾಲಾ ಶಿಕ್ಷಕಿ ಬಂಧನ

16 ವರ್ಷದ ವಿದ್ಯಾರ್ಥಿಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ...

7 ವರ್ಷಗಳ ಪ್ರೀತಿ: ಮದುವೆಗೆ ನಿರಾಕರಿಸಿದ ಪ್ರಿಯಕರ; ನೊಂದು ಆ್ಯಸಿಡ್ ಕುಡಿದ ಯುವತಿ

ಏಳು ವರ್ಷಗಳ ಕಾಲ ಪ್ರೀತಿಸಿದ್ದ ಪ್ರಿಯಕರ ಈಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆಂದು ಯುವತಿಯೊಬ್ಬರು...

ಸಂವಿಧಾನದ 370ನೇ ವಿಧಿ ಅಂಬೇಡ್ಕರ್ ಅವರ ಏಕ ಸಂವಿಧಾನ ಪರಿಕಲ್ಪನೆಗೆ ವಿರುದ್ಧವಾಗಿತ್ತೇ?

370ನೇ ವಿಧಿ ರದ್ದುಗೊಳಿಸಿದಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಚುನಾಯಿತ ಸರಕಾರವಿರಲಿಲ್ಲ;...

Download Eedina App Android / iOS

X