ಲೈಂಗಿಕ ಕಿರುಕುಳ ಪರಿಹಾರಕ್ಕೆ ಕೇರಳ ಹೈಕೋರ್ಟ್‌ನಲ್ಲಿ 12 ಸದಸ್ಯರ ಸಮಿತಿ

Date:

ಲೈಂಗಿಕ ಕಿರುಕುಳದ ದೂರುಗಳನ್ನು ವಿಚಾರಣೆ ನಡೆಸುವುದು ಹಾಗೂ ಲಿಂಗ ಸಮಾನತೆ ಮತ್ತು ಸಂವೇದನಾಶೀಲತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕೇರಳ ಹೈಕೋರ್ಟ್‌ 12 ಸದಸ್ಯರ ಲಿಂಗ ಸಂವೇದನಾಶೀಲತೆ ಮತ್ತು ಆಂತರಿಕ ದೂರುಗಳ ಸಮಿತಿ (GSICC) ರಚಿಸಿದೆ.

- Advertisement -

ಹೈಕೋರ್ಟ್‌ನ ನ್ಯಾಯಮೂರ್ತಿ ಜೆ. ನಿಶಾ ಬಾನು ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ನ್ಯಾಯಮೂರ್ತಿ ಶೋಭಾ ಅನ್ನಮ್ಮ ಈಪನ್ ಅವರು ಸದಸ್ಯರಾಗಿದ್ದಾರೆ. 2026ರ ‘ಕೇರಳ ಹೈಕೋರ್ಟ್‌ನಲ್ಲಿ ಮಹಿಳೆಯರ ಲಿಂಗ ಸಂವೇದನಾಶೀಲತೆ ಮತ್ತು ಲೈಂಗಿಕ ಕಿರುಕುಳ ತಡೆ, ನಿಷೇಧ ಮತ್ತು ಪರಿಹಾರ ನಿಯಮಾವಳಿ’ಯ ನಿಯಮ 4ರ ಅನ್ವಯ ಈ ಸಮಿತಿ ರಚಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಹೈಕೋರ್ಟ್‌ ಆವರಣದಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಸಾರ್ವಜನಿಕರಲ್ಲಿ ಲಿಂಗ ಸಂಬಂಧಿತ ವಿಚಾರಗಳ ಕುರಿತು ಜಾಗೃತಿ ಮೂಡಿಸುವುದು ಸಮಿತಿಯ ಪ್ರಮುಖ ಜವಾಬ್ದಾರಿಯಾಗಿದೆ. ಸಮಿತಿಯ ಅವಧಿ ಎರಡು ವರ್ಷಗಳಾಗಿದ್ದು, ಯಾವುದೇ ಸದಸ್ಯರನ್ನು ಸತತವಾಗಿ ಎರಡು ಅವಧಿಗಳಿಗಿಂತ ಹೆಚ್ಚು ಕಾಲ ನೇಮಕ ಮಾಡುವಂತಿಲ್ಲ.

ಸಮಿತಿಯ ಸದಸ್ಯರಾಗಿ ಹೈಕೋರ್ಟ್‌ ವಿಜಿಲೆನ್ಸ್‌ ರಿಜಿಸ್ಟ್ರಾರ್‌ ಡಾ. ಮಿನಿ ಎಸ್. ದಾಸ್ ಅವರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ವಕೀಲರಾದ ಪಾರ್ವತಿ ಮೆನನ್ ಎ., ವಿನೋದ್ ಭಟ್ ಎಸ್., ಬೋಬಿ ಎಂ. ಶೇಖರ್‌, ಅಂಜನಾ ಕಣ್ಣಾಥ, ಎಂ. ಶಜ್ನಾ ಮತ್ತು ಸಂಧ್ಯಾ ರಾಜು ಅವರು ಸದಸ್ಯರಾಗಿದ್ದಾರೆ.

ಇದನ್ನೂ ಓದಿ: ಕಾರ್ಗಿಲ್‌ ಯೋಧನಿಗೆ 24 ವರ್ಷವಾದರೂ ಸಿಗದ ಭೂಮಿ; ಆತ್ಮಹತ್ಯೆಗೆ ಯತ್ನ

ಈ ಪೈಕಿ ಬೋಬಿ ಎಂ. ಶೇಖರ್‌ ಮತ್ತು ಅಂಜನಾ ಕಣ್ಣಾಥ ಅವರನ್ನು ಕೇರಳ ಹೈಕೋರ್ಟ್‌ ವಕೀಲರ ಸಂಘ, ಎಂ. ಶಜ್ನಾ ಅವರನ್ನು ಕೇರಳ ಫೆಡರೇಶನ್‌ ಆಫ್‌ ವುಮೆನ್‌ ಲಾಯರ್ಸ್‌ ಪರವಾಗಿ ನಾಮನಿರ್ದೇಶನ ಮಾಡಲಾಗಿದೆ. ಸಂಧ್ಯಾ ರಾಜು ಅವರು ಎರ್ನಾಕುಲಂನ ಸೆಂಟರ್‌ ಫಾರ್‌ ಕಾನ್‌ಸ್ಟಿಟ್ಯೂಷನಲ್‌ ರೈಟ್ಸ್‌ ರಿಸರ್ಚ್‌ ಆ್ಯಂಡ್‌ ಅಡ್ವೊಕಸಿ (CCRRA) ನಿರ್ದೇಶಕರಾಗಿದ್ದು, POSH ಕಾಯ್ದೆಯಡಿ ಸ್ಥಳೀಯ ಸಮಿತಿಯ ಎನ್‌ಜಿಒ ಪ್ರತಿನಿಧಿಯಾಗಿದ್ದಾರೆ.

ಹೈಕೋರ್ಟ್‌ನ ಉಪ ರಿಜಿಸ್ಟ್ರಾರ್‌ ಶ್ರೀದೇವಿ ಎ.ಆರ್., ಅಡ್ವೊಕೇಟ್‌ ಜನರಲ್‌ ಕಚೇರಿಯ ಅಂಡರ್‌ ಸೆಕ್ರೆಟರಿ ಗೀತಾ ವಿ. ಮೋಹನನ್ ಹಾಗೂ ಹೈಕೋರ್ಟ್‌ ವಕೀಲರ ಗುಮಾಸ್ತರ ಸಂಘದಿಂದ ನಾಮನಿರ್ದೇಶನಗೊಂಡ ಸೋನಿ ಜಾನ್ ಅವರೂ ಸಮಿತಿಯಲ್ಲಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತ & ಚೀನಾದ H-1B ಉದ್ಯೋಗಿಗಳಿಂದ ಅಮೆರಿಕನ್ನರ ಉದ್ಯೋಗಕ್ಕೆ ಕುತ್ತು; ಸಂಸದ ರಿಲೆ ಮೂರ್ ಆರೋಪ

ಅಮೆರಿಕದ ಕಂಪ್ಯೂಟರ್‌ ಸೈನ್ಸ್‌ ಪದವೀಧರರ ಉದ್ಯೋಗಾವಕಾಶಗಳನ್ನು ಭಾರತ ಮತ್ತು ಚೀನಾದಿಂದ ಬರುವ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ; ಸುಪ್ರೀಂನದ್ದು ದ್ವಂದ್ವ ನಿಲುವಲ್ಲವೇ?

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ...

ದೇಶ ತೊರೆಯುವಂತೆ ನೋಟಿಸ್‌; ಹೈಕೋರ್ಟ್ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ...

ಅವಧಿ ಮೀರಿದ ಆಹಾರ ಮರುಮಾರಾಟ ಆರೋಪ: ರಿಲಯನ್ಸ್‌, ಬ್ಲಿಂಕಿಟ್‌ ಘಟಕಗಳ ವಿರುದ್ಧ ತನಿಖೆ

ಅವಧಿ ಮೀರಿದ, ಹಾಳಾದ ಹಾಗೂ ಗ್ರಾಹಕರು ತಿರಸ್ಕರಿಸಿದ ಆಹಾರ ಪದಾರ್ಥಗಳನ್ನು ನಾಶಪಡಿಸುವ...