ಜಮ್ಮು ಕಾಶ್ಮೀರದ ಅಕ್‌ನೂರ್ ಪಟ್ಟಣದಲ್ಲಿ ಆಳವಾದ ಕಣಿವೆಗೆ ಬಸ್ ಉರುಳಿದ ಪರಿಣಾಮ 21 ಮಂದಿ ಮೃತಪಟ್ಟು, 40 ಮಂದಿ ಗಾಯಗೊಂಡಿದ್ದಾರೆ.
ಕಂದಕಕ್ಕೆ ಉರುಳಿದ ಬಸ್ ಪ್ರಯಾಣಿಕರನ್ನು ಉತ್ತರ ಪ್ರದೇಶದ ಹತ್ರಾಸ್‌ನಿಂದ ಜಮ್ಮುವಿನ ಶಿವಕೋರಿ ಧಾರ್ಮಿಕ ಸ್ಥಳಕ್ಕೆ ಕರೆದೊಯ್ಯಲಾಗುತ್ತಿತ್ತು.
ಜಮ್ಮು ಪೂಂಚ್ ಹೆದ್ದಾರಿಯ ಕಾಲಿ ಧಾರ್ ಮಂದಿರದ ಬಳಿಯ ಆಳವಾದ ಕಣಿವೆಗೆ ಬಸ್ ಬಿದ್ದಿದೆ. ಗಾಯಗೊಂಡವರನ್ನು ಅಂಕೂರ್ ಸ್ಥಳೀಯ ಆಸ್ಪತ್ರೆ ಹಾಗೂ ಜಮ್ಮುವಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೋರಾಟಗಳನ್ನು ಹತ್ತಿಕ್ಕಿದ ಗೌಡರ ಹಾಸನದಲ್ಲಿ ಮತ್ತೆ ಮೊಳಗಿದ ಹೋರಾಟದ ಕೂಗು
“ಅಪಘಾತಗೊಂಡ ಬಸ್ ಪ್ರಯಾಣಿಕರನ್ನು ಉತ್ತರ ಪ್ರದೇಶದ ಹತ್ರಾಸ್‌ನಿಂದ ಜಮ್ಮುವಿನ ಶಿವಕೋರಿ ಧಾರ್ಮಿಕ ಸ್ಥಳಕ್ಕೆ ಕರೆದೊಯ್ಯುತ್ತಿತ್ತು. ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ” ಎಂದು ಜಮ್ಮುವಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದ್ದು, ಮೃತ ಕುಟುಂಬಗಳಿಗೆ 2 ಲಕ್ಷ ರೂ., ಹಾಗೂ ಗಾಯಗೊಂಡ ಕುಟುಂಬಗಳಿಗೆ 50 ಸಾವಿರ ರೂ.ಗಳ ಪರಿಹಾರ ನೀಡಲಾಗುವುದೆಂದು ಹೇಳಿದ್ದಾರೆ.
