ಪಾಕ್ ಪರ ಸಂಭ್ರಮಾಚರಣೆ | ಪೊಲೀಸರ ‘ಕಟ್ಟುಕಥೆ’ ಬಯಲಿಗೆಳೆದ ನ್ಯಾಯಾಲಯ; 6 ವರ್ಷಗಳ ಬಳಿಕ 17 ಮುಸ್ಲಿಂ ಯುವಕರು ಖುಲಾಸೆ

Date:

Advertisements

2017ರ ಜೂನ್‌ನಲ್ಲಿ ನಡೆದಿದ್ದ ಕ್ರಿಕೆಟ್ ಪಂದ್ಯವೊಂದರಲ್ಲಿ ಪಾಕಿಸ್ತಾನ ಜಯಗಳಿಸಿದ ಬಳಿಕ ಮುಸ್ಲಿಂ ಯುವಕರು ವಿಜಯೋತ್ಸವ ನಡೆಸಿದ್ದಾರೆಂಬ ಆರೋಪದ ಮೇಲೆ ಬಂಧಿತರಾಗಿದ್ದ 17 ಮಂದಿಯನ್ನು ಆರು ವರ್ಷದ ಬಳಿಕ ನ್ಯಾಯಾಲಯವು ಖುಲಾಸೆಗೊಳಿಸಿದೆ. ಅಲ್ಲದೇ, ಪೊಲೀಸರ ಕಟ್ಟುಕಥೆಯನ್ನು ಬಯಲಿಗೆಳೆದಿದೆ.

ಪಾಕಿಸ್ತಾನದ ವಿಜಯವನ್ನು ಆಚರಿಸಿದ ಆರೋಪದ ಮೇಲೆ 17 ಮುಸ್ಲಿಂ ಪುರುಷರು ಮತ್ತು ಇಬ್ಬರು ಅಪ್ರಾಪ್ತರ ಮೇಲೆ ಮಧ್ಯಪ್ರದೇಶದಲ್ಲಿ ಪ್ರಕರಣ ದಾಖಲಾಗಿತ್ತು.

ಆರು ವರ್ಷಗಳ ನಂತರ ಇದೀಗ ಮಧ್ಯಪ್ರದೇಶದ ನ್ಯಾಯಾಲಯವು ಹಿಂದೂ ದೂರುದಾರ ಮತ್ತು ಸರ್ಕಾರಿ ಸಾಕ್ಷಿಗಳು ಸುಳ್ಳು ಹೇಳಿಕೆಗಳನ್ನು ನೀಡಲು ಒತ್ತಾಯಿಸಿರುವುದನ್ನು ಬಯಲಿಗೆಳೆದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ‘ ಪೊಲೀಸರ ಕಟ್ಟುಕಥೆ’ ಎಂದು ಹೇಳಿದೆ.

Advertisements

ತಾವು ಮಾಡದ ತಪ್ಪಿಗೆ ಅಕ್ಟೋಬರ್ 2023 ರಲ್ಲಿ ಬಿಡುಗಡೆಗೊಂಡ ನಿರಪರಾಧಿಗಳು‌ ಆರು‌ ವರ್ಷ ಜೈಲಿನಲ್ಲಿ ತಮ್ಮ ಜೀವನ ಕಳೆಯಬೇಕಾಗಿ ಬಂದಿತ್ತು. ಪೊಲೀಸ್ ಕಸ್ಟಡಿಯಲ್ಲಿ ತಮ್ಮನ್ನು ಥಳಿಸಲಾಯಿತು ಮತ್ತು ಅವಾಚ್ಯವಾಗಿ ನಿಂದಿಸಲಾಗಿದೆ ಎಂದು ಆರೋಪಿಸಿದ್ದಾರೆ.

40 ವರ್ಷದ ಒಬ್ಬ ಆರೋಪಿ ಇಬ್ಬರು ಮಕ್ಕಳ ತಂದೆ, ಈ ಪ್ರಕರಣದ ಕಾರಣದಿಂದಾಗಿ ಮನನೊಂದು ಮುರಿದು 2019 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಪ್ರಕರಣದ ಹಿನ್ನೆಲೆ

18 ಜೂನ್ 2017 ರಂದು ಲಂಡನ್‌ನ ಓವಲ್ ಸ್ಟೇಡಿಯಂನಲ್ಲಿ ಭಾರತವು ಚಾಂಪಿಯನ್ ಟ್ರೋಫಿ ಫೈನಲ್‌ನಲ್ಲಿ ಸೋತಾಗ, ಮಧ್ಯಪ್ರದೇಶದ ಬುರ್ಹಾನ್ ಪುರ ಜಿಲ್ಲೆಯ ಮೊಹಾದ್‌ನ ಗ್ರಾಮಸ್ಥರು ಪಾಕಿಸ್ತಾನವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಿದ್ದಾರೆ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಲ್ಲದೇ, ಪಟಾಕಿಗಳನ್ನು ಸಿಡಿಸಿದ್ದಾರೆ ಎಂಬ ವದಂತಿ ಹರಡಿಸಲಾಗಿತ್ತು.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ , 1860 ರ ಅಡಿಯಲ್ಲಿ ದೇಶದ್ರೋಹ ಮತ್ತು ಕ್ರಿಮಿನಲ್ ಪಿತೂರಿಗಾಗಿ ಮೊಕದ್ದಮೆ ದಾಖಲಿಸಲಾಗಿತ್ತು. ಆರೋಪಿಗಳು ತಾವು ತಪ್ಪು ಮಾಡಿಲ್ಲ ಎಂದು ಹೇಳಿದರೂ ಸಾಕ್ಷ್ಯಾಧಾರವಿಲ್ಲದೆ ಪ್ರಕರಣ ಮುಂದುವರಿಸಲಾಗಿತ್ತು.

ಆರು ವರ್ಷದ ನಂತರ ಇದೀಗ ಸಾಕ್ಷ್ಯಾಧಾರ ಇಲ್ಲದ ಕಾರಣ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿದೆ.
ಹಿಂದೂ ದೂರುದಾರರು ಮತ್ತು ಸರ್ಕಾರಿ ಸಾಕ್ಷಿಗಳು ಸುಳ್ಳು ಆರೋಪಗಳನ್ನು ಮಾಡಲು ನಮಗೆ ಒತ್ತಡ ಹೇರಲಾಗಿತ್ತು ಎಂದು ನ್ಯಾಯಾಲಯದಲ್ಲಿ ಸತ್ಯ ನುಡಿದ ಕಾರಣ, ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ದೇವಂದರ್ ಶರ್ಮಾ ಅವರು 16 ಮುಸ್ಲಿಂ ಆರೋಪಿಗಳನ್ನು (2019 ರಲ್ಲಿ ಒಬ್ಬರು ಮೃತಪಟ್ಟಿದ್ದಾರೆ) ಖುಲಾಸೆಗೊಳಿಸಿದರು.

ದೇಶದ ಹಲವು ಗೋದಿ ಮಾಧ್ಯಮಗಳು ಅಂದು ಈ ಅಮಾಯಕರನ್ನು ‘ದೇಶದ್ರೋಹಿ’ಗಳೆಂದು ಬಿಂಬಿಸಿ ಸುದ್ದಿ ಪ್ರಸಾರ ಮಾಡಿದ್ದವು. ಇದೀಗ ಅವರು ಖುಲಾಸೆಗೊಂಡಾಗ ಸುಮ್ಮನಿದ್ದು, ಮಾಧ್ಯಮಗಳು ತಮ್ಮ ಕುತಂತ್ರ ಬುದ್ದಿಯನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X