ಸುಮಾರು 200 ವರ್ಷಗಳ ಹಿಂದೆಯೇ , ದಕ್ಷಿಣ ಭಾರತದ ರಾಣಿಯೊಬ್ಬರು ತಿರುವಾಂಕೂರು ರಾಜ್ಯದಲ್ಲಿ ವರದಕ್ಷಿಣೆ ಕಿರುಕುಳವನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದರು ಎಂದು ಹಳೆಯ ದಾಖಲೆಗಳಿಂದ ಬಹಿರಂಗಗೊಂಡಿದೆ.
ರಾಣಿ ಗೌರಿ ಪಾರ್ವತಿ ಬಾಯಿ ಅವರು ಬ್ರಾಹ್ಮಣ ಸಮುದಾಯದ ಮಹಿಳೆಯರನ್ನು ವಿವಾಹವಾಗಲು ಇದ್ದ ಅತಿಯಾದ ವರದಕ್ಷಿಣೆ ಬೇಡಿಕೆಯನ್ನು ಪ್ರಶ್ನಿಸಿದ್ದರು. ಅಲ್ಲದೇ 1823ರಲ್ಲಿ ಅದರ ಮೊತ್ತವನ್ನು ಮಿತಿಗೊಳಿಸಿ ಆದೇಶ ಹೊರಡಿಸಿದ್ದರು
ವರದಕ್ಷಿಣೆಯನ್ನು ಸಂಪೂರ್ಣವಾಗಿ ನಿಷೇಧಿಸದಿದ್ದರೂ ಸಹ, ಅಸ್ತಿತ್ವದಲ್ಲಿರುವ ಸಾಮಾಜಿಕ ಆಚರಣೆಯಲ್ಲಿ ಮಧ್ಯಪ್ರವೇಶಿಸಿ ತನ್ನ ರಾಜ್ಯದ ಮಹಿಳೆಯರ ಪರವಾಗಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದರಿಂದ ಈ ಆದೇಶ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ಇತಿಹಾಸಕಾರರು ಹೇಳುತ್ತಾರೆ.
ಮಹತ್ವ ಪಡೆದ ರಾಜಾಜ್ಞೆ ಇತ್ತೀಚಿನ ವರ್ಷಗಳಲ್ಲಿ ದೇಶದಾದ್ಯಂತ ಮಹಿಳೆಯರ ಮೇಲೆ ಹಲ್ಲೆ, ವರದಕ್ಷಿಣೆ ಸಂಬಂಧಿತ ಸರಣಿ ಆತ್ಮಹತ್ಯೆ ಘಟನೆಗಳು ಹೆಚ್ಚುತ್ತಿರುವ ನಡುವೆ ಎರಡು ಶತಮಾನಗಳಷ್ಟು ಹಳೆಯದಾದ ಈ ರಾಜಾಜ್ಞೆಯು ಕೇರಳದಲ್ಲಿ ಮಹತ್ವ ಪಡೆದುಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೈತಸ್ನೇಹಿ- ಚುನಾವಣಾ ಸಮಯದ ಗಿಮಿಕ್ ಆಗದಿರಲಿ
ರಾಣಿಯ 19ನೇ ಶತಮಾನದಲ್ಲಿ ಹೊರಡಿಸಿದ ರಾಜಾಜ್ಞೆ , ಈಗ ರಾಜ್ಯ ದಾಖಲೆಗಳಲ್ಲಿ ಲಭ್ಯವಿದೆ. ಎರಡು ಶತಮಾನಗಳ ಹಿಂದೆಯೇ ದೇಶದ ಈ ಭಾಗದಲ್ಲಿ ವರದಕ್ಷಿಣೆ ಪಿಡುಗು ಆಳವಾಗಿ ಬೇರೂರಿತ್ತು ಎಂಬುವುದನ್ನೂ ಸೂಚಿಸುತ್ತದೆ.
19ನೇ ಶತಮಾನದಲ್ಲಿ ಆಗಿನ ಸಾಮಾಜಿಕ ಆಚರಣೆಗಳ ಬಗ್ಗೆ ತಿಳಿದಿದ್ದ ರಾಣಿ ಪಾರ್ವತಿ ಬಾಯಿ ಅವರು, ರಾಜಪ್ರಭುತ್ವದಲ್ಲಿ ಚಾಲ್ತಿಯಲ್ಲಿರುವ ಪದ್ಧತಿಯಂತೆ ಸಮುದಾಯದ ಹೆಣ್ಣುಮಕ್ಕಳನ್ನು 10-14 ವರ್ಷ ವಯಸ್ಸಿನೊಳಗೆ ವಿವಾಹವಾಗಬೇಕು ಎಂದೂ ಹೇಳಿದ್ದರು .
ವರದಕ್ಷಿಣೆಯಾಗಿ 1000-2000 ಹಣ ಬೇಡಿಕೆಯಿರುವುದರಿಂದ ಸಮುದಾಯದ ಅನೇಕ ಕುಟುಂಬಗಳಿಗೆ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದರು. ವರದಕ್ಷಿಣೆಯಾಗಿ 700ಕ್ಕಿಂ ತ ಹೆಚ್ಚು ‘ಕಲ್ಯಾಣ ಪಣಂ ‘ ನೀಡಬಾರದು ಅಥವಾ ಬೇಡಿಕೆಯಿಡಬಾರದು ಎಂದು ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದರು .
ಸಮುದಾಯದ ಪ್ರತಿಯೊಬ್ಬರೂ ರಾಜಮನೆತನದ ಆಡಳಿತದ ನಿರ್ಧಾರವನ್ನು ಪಾಲಿಸಬೇಕೆಂದೂ, ಅದನ್ನು ಉಲ್ಲಂಘಿಸುವವರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಹಾಗೂ ಕಾನೂನಿನ ಪ್ರಕಾರ ಶಿಕ್ಷಿಸಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿತ್ತು.