ಕೆಲವು ತಿಂಗಳ ಹಿಂದಷ್ಟೆ ಗುಜರಾತ್‌ನಲ್ಲಿ ನಕಲಿ ಟೋಲ್ ಪ್ಲಾಜಾ ಹಾಗೂ ನಕಲಿ ಸರ್ಕಾರಿ ಕಚೇರಿಗಳು ಪತ್ತೆಯಾಗಿದ್ದವು. ಇದೀಗ ಅಹಮದಾಬಾದ್‌ನಲ್ಲಿ ನಕಲಿ ಆಸ್ಪತ್ರೆ ಯನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒರ್ವ ರೋಗಿ ಮೃತಪಟ್ಟ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದ ತಂಡ ಅಹಮದಾಬಾದ್ ಜಿಲ್ಲೆಯ ಭವ್ಲಾ ತಾಲೂಕಿನ ಕೇರಳ ಎಂಬ ಗ್ರಾಮದಲ್ಲಿ ‘ಅನನ್ಯ ಮಲ್ಟಿ ಸ್ಪೆಷಾಲಿಟಿ’ ಎಂಬ ಹೆಸರಿನ ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಪ್ರಕರಣವನ್ನು ಬಯಲಿಗೆಳದಿದ್ದಾರೆ.
ಅಧಿಕಾರಿಗಳ ಪ್ರಕಾರ ಸಂಪೂರ್ಣ ಆಸ್ಪತ್ರೆ ನಕಲಿ ವೈದ್ಯರಿಂದ ನಡೆಯುತ್ತಿತ್ತು. ಆಸ್ಪತ್ರೆಯು ಬೇರೆ ವ್ಯದ್ಯರ ಹೆಸರಿನಲ್ಲಿ ನೋಂದಣಿಯಾಗಿತ್ತು. ಸದ್ಯ ಆಸ್ಪತ್ರೆಯನ್ನು ಮುಚ್ಚಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಆಸ್ಪತ್ರೆಯಲ್ಲಿ ಇಎನ್‌ಟಿ, ಮೂತ್ರ ವಿಭಾಗ, ಚರ್ಮ ವಿಭಾಗ ಸೇರಿದಂತೆ ಹಲವು ವಿಭಾಗಗಳಿದ್ದು,ದಿನವಿಡಿ ಕಾರ್ಯನಿರ್ವಹಿಸಲಾಗುತ್ತಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಮನಗರ ಜಿಲ್ಲೆ ಹೆಸರು ಬದಲಾವಣೆ ಯಾರಿಗಾಗಿ, ಏತಕ್ಕಾಗಿ?
ಆಸ್ಪತ್ರೆಯಲ್ಲಿ ಬಾಲಕಿಯೊಬ್ಬಳು ಮೃತಪಟ್ಟ ನಂತರ ಆಕೆಯ ಕುಟುಂಬದವರು ವಿಡಿಯೋ ಚಿತ್ರೀಕರಿಸಿದ ನಂತರ ಕ್ರಮ ಕೈಗೊಳ್ಳಲಾಗಿತ್ತು.
ಸಾಮಾನ್ಯ ಆನಾರೋಗ್ಯದ ಸಮಸ್ಯೆಯಿಂದಾಗಿ ಕುಟುಂಬವು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿತ್ತು. ದಾಖಲಿಸಿದ ಕೆಲವು ದಿನಗಳಲ್ಲಿ ಬಾಲಕಿಯ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿತು. ಅಲ್ಲಿನ ನಕಲಿ ವೈದ್ಯರು ಇಲ್ಲಿ ಸರಿಪಡಿಸಲು ಸಾಧ್ಯವಿಲ್ಲ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಎಂದು ಹೇಳಿದರು.
ಬಾಲಕಿಗೆ 1.5 ಲಕ್ಷ ರೂ. ಶುಲ್ಕ ವಿಧಿಸಿದ ಆಸ್ಪತ್ರೆ ಸಿಬ್ಬಂದಿ ಪೋಷಕರು ಪರಿಪರಿಯಾಗಿ ಕೇಳಿಕೊಂಡರು ವೈದ್ಯಕೀಯ ವರದಿಯನ್ನು ಮಾತ್ರ ನೀಡಲಿಲ್ಲ.
ಬೇರೆ ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಬಾಲಕಿ ಮೃತಪಟ್ಟಿದ್ದಳು. ಬಾಲಕಿ ಸಾವಿನ ನಂತರ ಆಸ್ಪತ್ರೆ ನಡೆಸುತ್ತಿರುವವರ ವಿರುದ್ಧ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಅಹಮದಾಬಾದ್‌ನ ಎಸ್‌ಪಿ ತಿಳಿಸಿದ್ದಾರೆ.