ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಅದಾದ ಬಳಿಕ ಪ್ರವಾಸಿಗರು ಈಗ ಜಮ್ಮು ಮತ್ತು ಕಾಶ್ಮೀರ ಬದಲಾಗಿ ಹಿಮಾಚಲ ಪ್ರದೇಶದತ್ತ ಮುಖ ಮಾಡಿದ್ದಾರೆ ಎಂದು ವರದಿಯಾಗಿದೆ.
ದೇಶೀಯ ಮತ್ತು ಅಂತಾರಾಷ್ಟ್ರೀಯ ಟಿಕೆಟ್ ಬುಕಿಂಗ್‌ಗಳಲ್ಲಿ ಸರಿಸುಮಾರು ಶೇಕಡ 15-20ರಷ್ಟು ಪ್ರವಾಸಿಗರು ಕಾಶ್ಮೀರ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಮನಾಲಿ, ಶಿಮ್ಲಾ ಮತ್ತು ಧರ್ಮಶಾಲಾ ಸೇರಿದಂತೆ ಹಿಮಾಚಲ ಪ್ರದೇಶದ ಜನಪ್ರಿಯ ತಾಣಗಳಿಗೆ ಪ್ರವಾಸ ಹೋಗುತ್ತಿದ್ದಾರೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಘೋಷಿಸಿದ ಜಮ್ಮು ಕಾಶ್ಮೀರ ಸರ್ಕಾರ
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದರೂ ಜನರು ‘ಕಾದು ನೋಡುವ’ ನೀತಿಯನ್ನು ಅಳವಡಿಸಿಕೊಂಡಿರುವುದರಿಂದ ಜನರ ಸಂಖ್ಯೆ ನಿಧಾನವಾಗಿ ಹೆಚ್ಚಾಗಬಹುದು ಎಂಬ ನಿರೀಕ್ಷೆಯಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಕಾಂಗ್ರಾದ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ನ ಅಧ್ಯಕ್ಷ ಅಶ್ವನಿ ಬಂಬಾ, “ಭಯೋತ್ಪಾದನಾ ದಾಳಿಯ ನಂತರ ಪ್ರವಾಸ ನಿರ್ವಾಹಕರು ಮತ್ತು ಪ್ರವಾಸಿಗರು ಹಿಮಾಚಲ ಮತ್ತು ಉತ್ತರಾಖಂಡದಲ್ಲಿ ಬುಕಿಂಗ್ ಮಾಡುವ ಬಗ್ಗೆ ವಿಚಾರಿಸಿದ್ದಾರೆ. ಈ ಏರಿಕೆಯು ಗಮನಾರ್ಹವಾಗಿರುತ್ತದೆ” ಎಂದು ತಿಳಿಸಿದ್ದಾರೆ.
“ವಾಸ್ತವವಾಗಿ ಕೇವಲ 15-20% ಪ್ರವಾಸಿಗರು ಮಾತ್ರ ಜಮ್ಮು ಮತ್ತು ಕಾಶ್ಮೀರ ಬದಲಾಗಿ ಹಿಮಾಚಲ ಪ್ರದೇಶದತ್ತ ಮುಖ ಮಾಡಿದ್ದಾರೆ. ಉಳಿದವರು ಈ ಬೇಸಿಗೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಹೊರಗೆ ಹೋಗದಿರುವ ನಿರ್ಧಾರ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಉಗ್ರರ ದಾಳಿ ಬೆದರಿಕೆ: ಕಾಶ್ಮೀರದ 48 ಪ್ರವಾಸಿ ತಾಣಗಳನ್ನು ಮುಚ್ಚಿದ ಸರ್ಕಾರ
“ಪ್ರಸ್ತುತ ರಾಜ್ಯಾದ್ಯಂತ ಹೋಟೆಲ್‌ಗಳ ಜನಸಂಖ್ಯೆ ಸುಮಾರು ಶೇಕಡ 40ರಷ್ಟಿದೆ. ಮಹಾರಾಷ್ಟ್ರ, ಗುಜರಾತ್ ಮತ್ತು ಇತರ ರಾಜ್ಯಗಳಿಂದ ಪ್ರಯಾಣಿಸುವ ಪ್ರವಾಸಿ ಗುಂಪುಗಳ ಬುಕಿಂಗ್‌ಗಳನ್ನು ಬದಲಾಯಿಸಿದೆ. ಕಾಶ್ಮೀರದಲ್ಲಿ ತಕ್ಷಣದ ಬುಕಿಂಗ್‌ಗಳನ್ನು ರದ್ದುಗೊಳಿಸಲಾಗಿಲ್ಲ” ಎಂದರು.
ಹಿಮಾಚಲದಲ್ಲಿ, ಮನಾಲಿಯಲ್ಲಿ ಗರಿಷ್ಠ ಸಂಖ್ಯೆಯ ಬುಕಿಂಗ್‌ಗಳು ಸುಮಾರು 20% ರಷ್ಟಿದ್ದರೆ, ಧರ್ಮಶಾಲಾ, ದಲ್‌ಹೌಸಿರ್ ಮತ್ತು ಶಿಮ್ಲಾದಲ್ಲಿ ತೀರಾ ಕಡಿಮೆ ಇವೆ. ಧರ್ಮಶಾಲಾದಲ್ಲಿ ಐಪಿಎಲ್ ಪಂದ್ಯಗಳಿಗೆ ಈಗಾಗಲೇ ಮುಂಗಡ ಬುಕಿಂಗ್ ಮಾಡಲಾಗಿದೆ ಎಂದು ಅಶ್ವನಿ ಬಂಬಾ ಹೇಳಿದ್ದಾರೆ.
