ಬೆಳಗಾವಿ | ತೆರಿಗೆ ವಂಚನೆ; ವೆಗಾ ಫನ್‌ಮೊಬೈಲ್ ಪ್ರೈವೇಟ್ ಲಿಮಿಟೆಡ್‌ಗೆ ₹7 ಕೋಟಿ ದಂಡ ವಿಧಿಸಿದ ಬಿಬಿಸಿ

Date:

ಬೆಳಗಾವಿ ಮಹಾನಗರ ಪಾಲಿಕೆ(ಬಿಸಿಸಿ)ಗೆ ತೆರಿಗೆ ವಂಚನೆ ಮತ್ತು ಕಟ್ಟಡ ನಿರ್ಮಾಣ ನಿಯಮಗಳಲ್ಲಿ ಗಂಭೀರ ಉಲ್ಲಂಘನೆ ಆರೋಪದ ಮೇಲೆ ವೆಗಾ ಫನ್‌ ಮೊಬೈಲ್ ಪ್ರೈವೇಟ್ ಲಿಮಿಟೆಡ್‌ಗೆ 7,08,66,578 ರೂಪಾಯಿಗಳ ತೆರಿಗೆ ದಂಡವನ್ನು ವಿಧಿಸಿದೆ.

- Advertisement -

ನಿಜವಾದ ನಿರ್ಮಾಣ ಪ್ರದೇಶ ಮತ್ತು ಆಸ್ತಿ ತೆರಿಗೆ ಮೌಲ್ಯಮಾಪನಕ್ಕಾಗಿ ಘೋಷಿಸಲಾದ ಪ್ರದೇಶದ ನಡುವಿನ ವ್ಯತ್ಯಾಸಗಳ ಆಧಾರದ ಮೇಲೆ ಹಾಗೂ ಅದರ ಕಾರ್ಯಾಚರಣೆಗಳು ಕೈಗಾರಿಕಾ ವರ್ಗಕ್ಕೆ ಸೇರಿದ್ದರೂ ಕೂಡ ವಾಣಿಜ್ಯ ಮಳಿಗೆ ಅಡಿಯಲ್ಲಿ ತೆರಿಗೆ ಪಾವತಿಸುವುದನ್ನು ಮುಂದುವರಿಸಿದ್ದರಿಂದ ಈಗ ಏಳು ಕೋಟಿ ರೂಪಾಯಿ ದಂಡ ವಿಧಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರ: ಪರಿಹಾರ ಮತ್ತು ಪರ್ಯಾಯ ಮಾರ್ಗಗಳತ್ತ ಒಂದು ನೋಟ

ಬರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರವು ಮಾದರಿ ಕಾರ್ಯಾಚರಣೆ ಕೈಗೊಂಡಿದೆ. ಮತ್ತು ಅದರಲ್ಲಿ ಅದು ಬಹುಪಾಲು ಯಶಸ್ಸನ್ನೂ ಸಾಧಿಸಿದೆ. ಬೃಹತ್ ನೀರಾವರಿ ಯೋಜನೆಗಳಿಗೆ ಕೊಡುವ ಆದ್ಯತೆ ಮತ್ತು ಮಹತ್ವವನ್ನು ಸಣ್ಣ ನೀರಾವರಿ ಯೋಜನೆಗಳಿಗೂ ನೀಡಬೇಕೆನ್ನುವುದೇ...

ಹಮ್ ಔರತೇಂ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ಸ್ ಕಾಯ್ದೆ, 1976 ರ ಸೆಕ್ಷನ್ 112(ಸಿ) ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕಂಪನಿಯು ವಿಚಾರಣೆಯ ಸಮಯದಲ್ಲಿ ಉಲ್ಲಂಘನೆಗಳನ್ನು ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.

2025ರ ಜನವರಿ 31, ಏಪ್ರಿಲ್ 15 ಮತ್ತು ಏಪ್ರಿಲ್ 21 ಈ ಮೂರು ವಿಚಾರಣೆಗಳ ನಂತರ ಬಿಸಿಸಿ ಆಯುಕ್ತೆ ಶುಭಾ ಬಿ ಈ ಆದೇಶ ಹೊರಡಿಸಿದ್ದಾರೆ.

“ಮುನ್ಸಿಪಲ್ ಕಾಯ್ದೆಗೆ ಅನುಗುಣವಾಗಿ, ತೆರಿಗೆ ಕುರಿತ ಬಿಸಿಸಿ ಸ್ಥಾಯಿ ಸಮಿತಿಗೆ ಮೇಲ್ಮನವಿ ಸಲ್ಲಿಸುವ ಮೊದಲು ಕಂಪನಿಯು ದಂಡದ ಮೊತ್ತದ ಶೇ.50ರಷ್ಟು ಠೇವಣಿ ಇಡಬೇಕು. ಈ ಹಿಂದೆ ಪಾವತಿಸಿದ ತೆರಿಗೆ ಮೊತ್ತವನ್ನು ಕಡಿತಗೊಳಿಸಿದ ನಂತರ ತೆರಿಗೆಯನ್ನು ಲೆಕ್ಕಹಾಕಲಾಗಿದೆ” ಎಂದು ಶುಭಾ ತಿಳಿಸಿದ್ದಾರೆ.

“24,000 ಚದರ ಅಡಿ ಕಟ್ಟಡವು ಸಂಪೂರ್ಣವಾಗಿ ಅನಧಿಕೃತವಾಗಿದ್ದು, ಮಾನ್ಯ ಕಟ್ಟಡ ಪರವಾನಗಿ ಇಲ್ಲದೆ ನಿರ್ಮಿಸಲಾಗಿದೆ. ಇದರ ಹೊರತಾಗಿಯೂ, ಕಂಪನಿಯು 2004ರಿಂದ ಸ್ವಯಂ ಮೌಲ್ಯಮಾಪನ ಯೋಜನೆಯನ್ನು ಬಳಸಿಕೊಂಡು ತೆರಿಗೆ ಪಾವತಿಸುತ್ತಿದೆ. ಈ ಕಟ್ಟಡಕ್ಕೆ ಪರವಾನಗಿ ಇದೆಯೆ? ಕಟ್ಟಡದ ಹೂಡಿಕೆಗೆ ಅನುಗುಣವಾಗಿ ತೆರಿಗೆ ವಿಧಿಸಲಾಗಿದೆವೆಯೆ? ಇತ್ಯಾದಿ ವಿಷಯಗಳ ಕುರಿತು ಸಹಜವಾಗಿ ನಗರಾಭಿವೃದ್ಧಿ ಪ್ರಾಧಿಕಾರ ಅಥವಾ ಮಹಾನಗರ ಪಾಲಿಕೆ ಇವು ಪರಿಶೀಲನೆ ಮಾಡಬೇಕಾಗಿತ್ತು. ಆದರೆ ನಿರ್ಲಕ್ಷ್ಯ ವಹಿಸಲಾಗಿದೆ” ಎಂದು ಹೇಳಿದರು.‌

ಈ ಸುದ್ದಿ ಓದಿದ್ದೀರಾ? ಮಂಗಳೂರು | ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಫಾಝಿಲ್ ಸಹೋದರ ಕೂಡ ಭಾಗಿ: ಕಮಿಷನರ್ ಅಗರ್ವಾಲ್

ವೆಗಾ ಫನ್‌ಮೊಬೈಲ್ ಕಂಪೆನಿ ಆಗಸ್ಟ್ 2002ರಲ್ಲಿ ಭೂಮಿಯನ್ನು ಗುತ್ತಿಗೆಗೆ ಪಡೆಯಲು ಬೆಮ್ಕೊ ಕಂಪನಿಯೊಂದಿಗೆ ತಿಳುವಳಿಕಾ ಒಡಂಬಡಿಕೆ(ಎಂಒಯು) ಮಾಡಿಕೊಂಡಿದೆ. ಆರಂಭದಲ್ಲಿ, 2002-03ರಲ್ಲಿ, ಕಂಪನಿಯು ಭೂಮಿಯನ್ನು ಖಾಲಿ ಎಂದು ಘೋಷಿಸಿ ತೆರಿಗೆ ಪಾವತಿಸಿತ್ತು. 2003ರ ಡಿಸೆಂಬರ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದರೂ, 2004-05ರಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆದಿಲ್ಲ. ಈ ಜಾಗದ ಬಳಕೆಯು ಕೈಗಾರಿಕಾ ವರ್ಗಕ್ಕೆ ಸೇರಿದ್ದರೂ ಕೂಡ ಕಟ್ಟಡ ತೆರಿಗೆಯನ್ನು ವಾಣಿಜ್ಯ ಮಳಿಗೆ ಅಡಿಯಲ್ಲಿ ಪಾವತಿಸಲಾಗುತ್ತಿತ್ತು. ಈ ವ್ಯತ್ಯಾಸಗಳನ್ನು ಕಂಡುಹಿಡಿದ ನಂತರ ಆಯುಕ್ತರು ವಿವರವಾದ ವಿಚಾರಣೆಯನ್ನು ಪ್ರಾರಂಭಿಸಿದರು. ವಿಚಾರಣೆಯ ನಂತರ, ಏಪ್ರಿಲ್ 25ರ ಆದೇಶವು ಸಂಪೂರ್ಣ ತೆರಿಗೆ ಮತ್ತು ದಂಡದ ಮೊತ್ತವನ್ನು ಬಿಸಿಸಿಗೆ ಪಾವತಿಸುವಂತೆ ಕಂಪನಿಗೆ ನಿರ್ದೇಶನ ನೀಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮುಖ್ಯ ಚುನಾವಣಾ ಆಯುಕ್ತರು ಕೂಡಲೇ ರಾಜೀನಾಮೆ ನೀಡಬೇಕು’ : ಸುರೇಶ್ ಶೆಟ್ಟಿ ಬನ್ನಂಜೆ

ಮತದಾರರ ಪಟ್ಟಿಯಿಂದ ಮತದಾರರನ್ನು ಅಕ್ರಮವಾಗಿ ತೆಗೆದುಹಾಕುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಅನ್ಯಾಯ...

ಕಲಬುರಗಿ | ಕೂಲಿಕಾರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಪಿಆರ್‌ಎಸ್ ರಸ್ತೆ ತಡೆದು ಪ್ರತಿಭಟನೆ

ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ರೈತರು ಹಾಗೂ ಕೂಲಿಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ...

ಧರ್ಮಸ್ಥಳ | ಸೌಜನ್ಯ ಕೊಲೆ‌ ಪ್ರಕರಣದ ಮರು ತನಿಖೆ: ಎಸ್ಐಟಿಗೆ 16 ಮಂದಿ ಸಹಾಯಕ ಅಧಿಕಾರಿಗಳ ನೇಮಕ

ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಮರು ತನಿಖೆಗೆ...

ಯಾದಗಿರಿ | ಟೈರ್ ಬ್ಲಾಸ್ಟ್‌ನ ಭೀಕರ ದುರಂತ; ತಾಯಿ, ಮಗಳು ಸೇರಿ ಮೂವರ ದಾರುಣ ಸಾವು

ಚಲಿಸುತ್ತಿದ್ದ ಕಾರಿನ ಟೈರ್ ಏಕಾಏಕಿ ಬ್ಲಾಸ್ಟ್‌ಗೆ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ...