ಅರ್ಜೆಂಟೀನಾದ LNG ಮೋದಿ ಮಿತ್ರ ಅದಾನಿ ಪಾಲು; 10 ವರ್ಷಗಳ ಸಾಗರ ಒಪ್ಪಂದಕ್ಕೆ ಮುದ್ರೆ!

Date:

ಅರ್ಜೆಂಟೀನಾದ ಮೊದಲ ದ್ರವೀಕೃತ ನೈಸರ್ಗಿಕ ಅನಿಲ (LNG) ರಫ್ತು ಯೋಜನೆಗಾಗಿ 10 ವರ್ಷಗಳ ಕಡಲ ಸೇವೆಗಳ (Marine Services) ಒಪ್ಪಂದವು ಅದಾನಿ ಪೋರ್ಟ್‌ನ ಪಾಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (APSEZ), “ಕಂಪನಿಯು ದಕ್ಷಿಣ ಅಮೆರಿಕಾಗೆ ಪ್ರವೇಶ ಪಡೆದಿದೆ. ತನ್ನ ಅಂತರರಾಷ್ಟ್ರೀಯ ಕಡಲ ಸೇವೆಗಳ ಹೆಜ್ಜೆಯನ್ನು ವಿಸ್ತರಿಸಿದೆ. ಜೊತೆಗೆ, ಭಾರತ ಮತ್ತು ಅರ್ಜೆಂಟೀನಾ ನಡುವೆ ಬೆಳೆಯುತ್ತಿರುವ ಇಂಧನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿದೆ” ಎಂದು ಹೇಳಿಕೊಂಡಿದೆ.

- Advertisement -

ಇತ್ತೀಚೆಗೆ, ಸದರ್ನ್ ಎನರ್ಜಿ ಎಸ್‌ಎ (SESA) ನಡೆಸಿದ ಜಾಗತಿಕ ಸ್ಪರ್ಧಾತ್ಮಕ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಇದರಲ್ಲಿ, APSEZನ ಅಂಗಸಂಸ್ಥೆಯಾದ ‘ದಿ ಅದಾನಿ ಹಾರ್ಬರ್ ಇಂಟರ್ನ್ಯಾಷನಲ್ ಎಫ್‌ಝಡ್‌ಸಿಒ’ ಬಿಡ್‌ ಮಾಡಿತ್ತು. ಅದಾನಿ ಪೋರ್ಟ್‌ನ ಬಿಡ್‌ಅನ್ನು ಅರ್ಜೆಂಟೀನಾ ಮೂಲದ ‘ಮೆರಿಡಿಯನ್ ಗ್ರೂಪ್’ ಒಪ್ಪಿದ್ದು, ಗುತ್ತಿಗೆ ಒಪ್ಪಂದಕ್ಕೆ ಮುದ್ರೆ ಹಾಕಲಾಗಿದೆ ಎಂದು ‘ಇಂಟಿಗ್ರೇಟೆಡ್ ಟ್ರಾನ್ಸ್ಪೋರ್ಟ್ ಯುಟಿಲಿಟಿ’ ಸಂಸ್ಥೆ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

OBC ಮೀಸಲಾತಿಗೆ ಮತಾಂತರದ ಬೇಲಿ: ಸುಪ್ರೀಂ ಹೊಸ ಆದೇಶದಲ್ಲಿ...

ಧರ್ಮ ಬದಲಾದರೆ ಸಾಮಾಜಿಕ ಹಿಂದುಳಿದಿರುವಿಕೆಯೂ ಅಳಿಸಿಹೋಗುತ್ತದೆಯೇ? ಮಂಡಲ್ ಆಯೋಗದ 11 ಮಾನದಂಡಗಳಲ್ಲಿ ಧರ್ಮಕ್ಕೆ ಸ್ಥಾನವಿಲ್ಲದಿದ್ದರೂ, ಮತಾಂತರವನ್ನು ಮೀಸಲಾತಿಯ ಅರ್ಹತೆಗೆ ಜೋಡಿಸಿರುವುದೇಕೆ? ಇಂದಿರಾ ಸಾಹ್ನಿ ತೀರ್ಪಿಗೆ ವಿರೋಧಾಭಾಸವಾಗಿದೆ ಸುಪ್ರೀಂ ಕೋರ್ಟ್‌ನ ಹೊಸ ತೀಪು! 1992ರಲ್ಲಿ ಸುಪ್ರೀಂ...

ಅದಾನಿ ಗ್ರೂಪ್-ಮೆರಿಡಿಯನ್ ಗ್ರೂಪ್‌ನ ಒಕ್ಕೂಟವು ಸದರ್ನ್ ಎನರ್ಜಿ ಎಫ್‌ಎಲ್‌ಎನ್‌ಜಿ ಯೋಜನೆಗೆ ಕಡಲ ಸೇವೆಗಳನ್ನು ಒದಗಿಸಲಿದ್ದು, ಇದಕ್ಕಾಗಿ ಅಂದಾಜು 7 ಕೋಟಿ ಡಾಲರ್ (650 ಕೋಟಿ ರೂ.) ಹೂಡಿಕೆ ಮಾಡಲು ಸಿದ್ಧವಾಗಿವೆ.

ಮೊದಲ ಹಂತದಲ್ಲಿ, ಈ ಯೋಜನೆಯು ವಾರ್ಷಿಕವಾಗಿ 24.5 ಲಕ್ಷ ಟನ್ (MT) ಎಲ್‌ಎನ್‌ಜಿ ಉತ್ಪಾದಿಸುವ ನಿರೀಕ್ಷೆಯಿದ್ದು, ಇದು ವರ್ಷಕ್ಕೆ ಸರಿಸುಮಾರು 28 ಕಾರ್ಗೋ ಶಿಪ್‌ಗಳಿಗೆ ಸಮಾನವಾಗಿದೆ.

“ಈ ಯೋಜನೆಯು ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಬೃಹತ್ ಪ್ರಮಾಣದ ಇಂಧನ ಮೂಲಸೌಕರ್ಯ ಯೋಜನೆಗಳನ್ನು ವಿಸ್ತರಿಸಲು ತಮ್ಮ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಈಗಾಗಲೇ 12 ದೇಶಗಳಲ್ಲಿ ಬಂದರುಗಳು, ಎಲ್‌ಎನ್‌ಜಿ ಟರ್ಮಿನಲ್‌ಗಳು, ರಾಷ್ಟ್ರೀಯ ತೈಲ ಕಂಪನಿಗಳು, ತೈಲ ಶುದ್ಧೀಕರಣ ಕೇಂದ್ರಗಳು ಹಾಗೂ ಕಡಲಾಚೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದೇವೆ. ಈ ಒಪ್ಪಂದವು ಇನ್ನಷ್ಟು ಕಾರ್ಯಾಚರಣೆಗೆ ಅವಕಾಶ ನೀಡಲಿದೆ” ಎಂದು APSEZನ ಸಿಇಒ ಅಶ್ವನಿ ಗುಪ್ತಾ ಹೇಳಿದ್ದಾರೆ.

ಒಪ್ಪಂದದ ಪ್ರಕಾರ, ಅದಾನಿ ಗ್ರೂಪ್ ಮತ್ತು ಮೆರಿಡಿಯನ್ ಗ್ರೂಪ್‌ನ ಒಕ್ಕೂಟವು ಎಲ್‌ಎನ್‌ಜಿ ವಾಹಕಗಳಿಗಾಗಿ ಟಗ್‌ಬೋಟ್ ಕಾರ್ಯಾಚರಣೆಗಳು, ಕಡಲಾಚೆಯ ಲಾಜಿಸ್ಟಿಕ್ಸ್, ಪೂರೈಕೆ ಮತ್ತು ಸಿಬ್ಬಂದಿ ವರ್ಗಾವಣೆ ಸೇವೆಗಳು ಸೇರಿದಂತೆ ಸಂಪೂರ್ಣ ಕಡಲ ಸೇವೆಗಳನ್ನು ಒದಗಿಸಲಿದೆ.

ಅರ್ಜೆಂಟೀನಾ ಪ್ರಮುಖ ಹೊಸ ಎಲ್‌ಎನ್‌ಜಿ ಪೂರೈಕೆದಾರ ದೇಶವಾಗಿ ಹೊರಹೊಮ್ಮುತ್ತಿದ್ದು, 2027ರಿಂದ ಭಾರತಕ್ಕೆ ವಾರ್ಷಿಕವಾಗಿ 1 ಕೋಟಿ ಟನ್‌ಗಳಷ್ಟು (MT) ಎಲ್‌ಎನ್‌ಜಿ ರಫ್ತು ಮಾಡುವ ಕುರಿತು ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.

ಈ ಲೇಖನ ಓದಿದ್ದೀರಾ?: ಒಡೆದ ಟಿಎಂಸಿ, ದೂರವಾದ ಡಿಎಂಕೆ: ವಿವಾದಿತ ಕಾಯ್ದೆಗಳ ಜಾರಿಗೆ ಬಿಜೆಪಿ ಪಡೆಯುವುದೇ ‘ಲೋಕ’ಬಲ?

ಭಾರತದಲ್ಲಿ ಮೋದಿ ಪ್ರಧಾನಿಯಾದ ಬಳಿಕ, 2014ರ ನಂತರ, ಅದಾನಿ ಗ್ರೂಪ್‌ ದೇಶೀಯವಾಗಿ ಬಂದರು, ವಿಮಾನ ನಿಲ್ದಾಣ, ವಿದ್ಯುತ್ ಮತ್ತು ರಕ್ಷಣಾ ವಲಯಗಳಲ್ಲಿ ಅತಿವೇಗದ ಬೆಳವಣಿಗೆಯನ್ನು ಕಂಡಿದೆ. ಈ ದೇಶೀಯ ಬಲವನ್ನು ಬಳಸಿಕೊಂಡು ಕಂಪನಿಯು ಇಸ್ರೇಲ್, ಶ್ರೀಲಂಕಾ ಹಾಗೂ ಈಗ ದಕ್ಷಿಣ ಅಮೆರಿಕಾದ ರಾಷ್ಟ್ರಗಳಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಮತ್ತು ಭಾರತದ ರಾಜತಾಂತ್ರಿಕ ಸಂಬಂಧಗಳು (ಜಿಯೋ-ಪೊಲಿಟಿಕ್ಸ್) ಅದಾನಿ ಗ್ರೂಪ್‌ನ ಜಾಗತಿಕ ವಿಸ್ತರಣೆಗೆ ಹೆಬ್ಬಾಗಿಲು ತೆರೆಯುತ್ತಿವೆ ಎಂಬುದು ಆರ್ಥಿಕ ತಜ್ಞರ ವಿಶ್ಲೇಷಣೆ.

ಅಂತೆಯೇ, ಅರ್ಜೆಂಟೀನಾದ ಒಪ್ಪಂದವೂ ದೊರೆತಿದೆ. ಈ ಒಪ್ಪಂದವು ಜಾಗತಿಕ ಟೆಂಡರ್ ಮೂಲಕವೇ ನಡೆದಿದ್ದರೂ, ಮೋದಿ ಸರ್ಕಾರದ ಕೈಚಳಕ ಇರುವುದೂ ಅಷ್ಟೇ ಸ್ಪಷ್ಟವಾಗಿದೆ.

ಅದಾನಿ ಗ್ರೂಪ್‌ನ ಈ ಬೆಳವಣಿಗೆಯು ಕೇವಲ ವಾಣಿಜ್ಯ ಯಶಸ್ಸಷ್ಟೇ ಅಲ್ಲದೆ, ಗಂಭೀರವಾದ ಆರ್ಥಿಕ ಆತಂಕಗಳನ್ನೂ ಸೃಷ್ಟಿಸಿದೆ. ಮೂಲಸೌಕರ್ಯ ಮತ್ತು ಇಂಧನದಂತಹ ಆಯಕಟ್ಟಿನ ವಲಯಗಳು ಕೇವಲ ಒಂದು ಅಥವಾ ಎರಡು ಬೃಹತ್ ಕಾರ್ಪೊರೇಟ್‌ ಸಂಸ್ಥೆಗಳ ಹಿಡಿತಕ್ಕೆ ಸಿಲುಕಿದಾಗ ಅದು ‘ಕಾರ್ಪೊರೇಟ್‌ ಏಕಸ್ವಾಮ್ಯ’ಕ್ಕೆ ದಾರಿ ಮಾಡಿಕೊಡುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆ ಇಲ್ಲದಿದ್ದರೆ, ದೀರ್ಘಾವಧಿಯಲ್ಲಿ ಗ್ರಾಹಕರು ಮತ್ತು ರಾಷ್ಟ್ರೀಯ ಇಂಧನ ಭದ್ರತೆಯು ಒಂದೇ ಸಂಸ್ಥೆಯ ಆರ್ಥಿಕ ಸ್ಥಿರತೆಯ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಇದು ಭಾರೀ ಹಣದುಬ್ಬರ ಮತ್ತು ಬೆಲೆ ಏರಿಕೆಗೂ ಕಾರಣವಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ.26ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಸಿಎಂ ಡಿ ಕೆ ಶಿವಕುಮಾರ್

ಇದೇ ಅಕ್ಟೋಬರ್ 26 ರಂದು ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ...

ಕೈಲೊಂದು ಕ್ಯಾಮೆರಾ, ಜೀವಂತ ಬದುಕಿಗೆ ಮುಖಾಮುಖಿ

ಸಿನೆಮಾದ ಶಕ್ತಿ ಅದರ ಹಿಂದೆ ನಿಂತಿರುವ ತಂತ್ರಜ್ಞರ ಸಂಖ್ಯೆಯಲ್ಲಾಗಲಿ, ದುಬಾರಿ ಉಪಕರಣಗಳಲ್ಲಾಗಲಿ...

ಗಾಜಾ ಯುದ್ಧದ ನೆರಳಲ್ಲಿ ನಿರ್ಣಾಯಕ ಸಮರ; ಹೇಗಿರಲಿದೆ ಗೊತ್ತೇ ಇಸ್ರೇಲ್ ಚುನಾವಣೆ?

ಇಸ್ರೇಲ್‌ನಲ್ಲಿ ಇದೇ ಅಕ್ಟೋಬರ್ 27ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ದೇಶದ 26ನೇ...

ರಾಜ್ಯದಲ್ಲಿ ಮಧ್ಯಾಹ್ನವೇ ಮಳೆ ಅಬ್ಬರ; 13 ಜಿಲ್ಲೆಗಳಲ್ಲಿ ಇನ್ನೂ 4 ದಿನ ಭರ್ಜರಿ ಮಳೆ: ಹವಾಮಾನ ಇಲಾಖೆ

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂಗಾರು ಮಳೆ...